Horoscope : ದಿನಭವಿಷ್ಯ- ಆರ್ಥಿಕ ಸಮಸ್ಯೆಗೆ ಪರಿಹಾರ ದೊರೆಯಲಿದೆ

ಮೇಷರಾಶಿ
ವ್ಯವಹಾರದ ಕ್ಷೇತ್ರದಲ್ಲಿ ಹೆಚ್ಚು ಸಕ್ರೀಯರಾಗಿರಿ, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ, ವಾದ ವಿವಾದಕ್ಕೆ ಇಳಿಯ ಬೇಡಿ, ದೂರ ಪ್ರಯಾಣ ಇಂದು ಲಾಭವನ್ನು ತರುತ್ತದೆ, ಸ್ನೇಹಿತರ ಜೊತೆ ಕಾಲ ಕಳೆಯುವಿರಿ, ಹೊಂದಾಣಿಕೆಯಿಂದ ಕಾರ್ಯಾನುಕೂಲ, ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯ.

ವೃಷಭರಾಶಿ
ಪರಿಪೂರ್ಣ ಆರೋಗ್ಯ ನಿಮ್ಮದಾಗುತ್ತದೆ. ಅನಿರೀಕ್ಷಿತವಾಗಿ ಸಾಲಗಾರರು ನಿಮ್ಮ ಹಣವನ್ನು ಹಿಂದಿರುಗಿಸುತ್ತಾರೆ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ, ಹಿರಿಯರ ಆರೋಗ್ಯದ ಕಡೆಗೆ ಗಮನ ಹರಿಸಿ, ಬಿಡುವಿಲ್ಲದ ಕಾರ್ಯಗಳಲ್ಲಿ ಭಾಗಿಯಾಗುವಿರಿ, ಮೇಲಾಧಿಕಾರಿಗಳ ಸಹಕಾರ.

ಮಿಥುನರಾಶಿ
ಸ್ನೇಹಿತರಿಂದ ವಿರೋಧ ಕಟ್ಟಿಕೊಳ್ಳುವಿರಿ, ಹಣಕಾಸಿನ ವಿಚಾರದಲ್ಲಿ ಅಡತಡೆಗಳು ಎದುರಾಗಲಿದೆ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ಮೇಲಾಧಿಕಾರಿಗಳ ಜೊತೆ ಹೊಂದಾಣಿಕೆಯಿಂದಿರಿ, ಹೊಸ ಅವಕಾಶವೊಂದು ದೊರೆಯಲಿದೆ.

ಕರ್ಕಾಟಕರಾಶಿ
ಹಣಕಾಸಿನ ಸಮಸ್ಯೆಗೆ ಪರಿಹಾರ ದೊರೆಯಲಿದೆ, ಮಕ್ಕಳ ಅಧ್ಯಯನದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಸಾಮಾಜಿಕವಾಗಿ ಗೌರವ, ಮನ್ನಣೆ ದೊರೆಯಲಿದೆ, ವೈವಾಹಿಕ ಜೀವನದಲ್ಲಿ ರಾಜಿ ಮಾಡಿಕೊಳ್ಳಿ, ದಿನಾಂತ್ಯಕ್ಕೆ ಶುಭ ವಾರ್ತೆಯನ್ನು ಕೇಳುವಿರಿ.

ಸಿಂಹರಾಶಿ
ಸಣ್ಣ ವೈಮನಸ್ಸು ನಿಮ್ಮ ಮನಸಿಗೆ ಬೇಸರ ಮೂಡಿಸಲಿದೆ, ಅನಗತ್ಯ ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ವ್ಯವಹಾರ ಕ್ಷೇತ್ರದಲ್ಲಿ ಲಾಭ ದೊರೆಯಲಿದೆ, ಪರರಿಗೆ ಸಹಾಯ ಮಾಡುವಿರಿ, ಹಿರಿಯ ಮಾತನ್ನು ಆಲಿಸಿ.

ಕನ್ಯಾರಾಶಿ
ಅತೀಯಾದ ಚಿಂತೆ ಮಾನಸಿಕ ನೆಮ್ಮದಿಗೆ ಭಂಗ ತರಲಿದೆ, ಚಿಂತೆ ದೇಹದ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡಲಿದೆ, ಮನೆಗೆ ಅತಿಥಿಗಳ ಆಗಮನವಾಗಲಿದೆ, ಅದೃಷ್ಟ ಆರ್ಥಿಕ ಪ್ರಯೋಜನವನ್ನು ನೀಡಲಿದೆ, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ.ಕೋಪ ಕಡಿಮೆ ಮಾಡಿಕೊಂಡ್ರೆ ಯಶಸ್ಸು ಖಚಿತ.

ತುಲಾರಾಶಿ
ದೈಹಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವಿರಿ, ಬರಬೇಕಾದ ಹಣ ಸಕಾಲದಲ್ಲಿ ದೊರಕದೆ ಚಿಂತೆಯಲ್ಲಿ ಬೀಳುವಿರಿ, ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ದೊರೆಯಲಿದೆ, ವೈವಾಹಿಕ ಜೀವನವು ಹಂತ ಹಂತವಾಗಿ ಅಭಿವೃದ್ದಿಯಾಗಲಿದೆ, ಸಂಗಾತಿಯ ಜೊತೆಗೆ ಕಾಲ ಕಳೆಯುವಿರಿ.

ವೃಶ್ಚಿಕರಾಶಿ
ಹೊಸ ಯೋಜನೆ ಆರಂಭಕ್ಕೆ ಮೊದಲು ತಜ್ಞರ ಸಹಾಯ ಪಡೆಯಿರಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಯತ್ನಬಲ ಅಗತ್ಯ, ದೇವಿ ದೇವಾಲಯಗಳ ಭೇಟಿಯಿಂದ ಮನಸಿಗೆ ಸಂತಸ, ಮನೆಯಲ್ಲಿ ಹೊಂದಾಣಿಕೆಯಿಂದ ನೆಮ್ಮದಿ, ಸಾಲಗಾರರ ಕಾಟ ಹೆಚ್ಚಲಿದೆ, ಅವಿವಾಹಿತರಿಗೆ ವಿವಾಹ ಭಾಗ್ಯ.

ಧನಸ್ಸುರಾಶಿ
ಇಂದು ನೀವು ಹೆಚ್ಚು ಕ್ರಿಯಾಶೀಲರಾಗಿರುವಿರಿ, ಅಧಿಕ ಖರ್ಚು ನಿಮ್ಮನ್ನು ಕಂಗೆಡಿಸಲಿದೆ, ಕೆಲಸದ ಒತ್ತಡ ಮಾನಸಿಕ ಚಿಂತೆಗೆ ಕಾರಣವಾಗಲಿದೆ, ವ್ಯವಹಾರ ಕ್ಷೇತ್ರದಲ್ಲಿ ಸ್ನೇಹಿತರ ಸಹಕಾರ ದೊರೆಯಲಿದೆ, ಸಮಸ್ಯೆ ಪರಿಹಾರದ ಕಡೆಗೆ ಗಮನ ಹರಿಸಿ.

ಮಕರರಾಶಿ
ಕೆಲಸಕ್ಕೆ ಅಡ್ಡಿಪಡಿಸುವ ಜನರಿಂದ ದೂರವಿರಿ, ಹಳೆ ವಿಚಾರಗಳು ವೈಮನಸ್ಸಿಗೆ ಕಾರಣವಾಗಲಿದೆ, ಪ್ರಗತಿಯತ್ತ ಸಾಗಲು ಅಡೆತಡೆಗಳು ಎದುರಾಗಲಿದೆ, ಹಣಕಾಸಿನ ವಿಚಾರದಲ್ಲಿ ನಷ್ಟವನ್ನು ಅನುಭವಿಸುವಿರಿ, ದೂರದ ಬಂದುಗಳ ಭೇಟಿ, ಸಂಗಾತಿಯ ಆರೋಗ್ಯ ಹದಗೆಡಲಿದೆ.

ಕುಂಭರಾಶಿ
ಕೆಲವು ನಿರ್ಧಾರಗಳನ್ನು ಕೈಗೊಳ್ಳುವಿರಿ, ಉದ್ವೇಗ ನಿಮ್ಮನ್ನು ಆತಂಕಕ್ಕೆ ದೂಡಲಿದೆ, ಬಾಕಿ ಕಾರ್ಯಗಳನ್ನು ಮುಗಿಸಲು ಅನುಕೂಲಕರ ದಿನ, ಕೆಲಸದ ಹುಡುಕಾಟದವರಿಗೆ ಯಶಸ್ಸು, ಕೆಲಸದ ನಿಮ್ಮಿತ್ತ ದೂರದೂರುಗಳಿಗೆ ಪ್ರಯಾಣ, ಬಹುದಿನದ ಬಯಕೆ ಈಡೇರಿಕೆಯಾಗುವ ಸಾಧ್ಯತೆ.

ಮೀನರಾಶಿ
ಹೊಸ ಒಪ್ಪಂದಗಳಿಗೆ ಸಹಿಹಾಕುವಿರಿ, ಉದ್ಯೋಗ ಕ್ಷೇತ್ರದಲ್ಲಿ ಹೊಸ ಬದಲಾವಣೆ ಕಂಡು ಬರಲಿದೆ, ಹಣಕಾಸಿನ ಸಮಸ್ಯೆಯ ಪರಿಹಾರಕ್ಕೆ ಮಾರ್ಗವೊಂದು ಗೋಚರಿಸಲಿದೆ, ಹಳೆಯ ಬಾಕಿ ಹಿಂದಿರುಗಿಸುವಂತೆ ಸ್ನೇಹಿತರಿಂದ ಒತ್ತಡ, ಹೊಸ ಸ್ನೇಹಿತರ ಭೇಟಿಯಿಂದ ಸಂತಸ.

(Horoscope today astrological prediction for September 12)

Comments are closed.