ಖಾಲಿ ಹೊಟ್ಟೆಯಲ್ಲಿ ಪಪ್ಪಾಯ ತಿನ್ನೋ ಅಭ್ಯಾಸವಿದ್ಯಾ ? ಹಾಗಾದ್ರೆ ಈ ಸ್ಟೋರಿ ನೀವು ಓದಲೇ ಬೇಕು

0
  • ರಕ್ಷಾ ಬಡಾಮನೆ

ನಿತ್ಯದ ಜೀವದಲ್ಲಿ ಅನೇಕ ರೀತಿಯ ಆಹಾರಗಳನ್ನು ಸೇವನೆ ಮಾಡುತ್ತೇವೆ. ಅದ್ರಲ್ಲೂ ಹಣ್ಣುಗಳು ದೇಹದ ಆರೋಗ್ಯಕ್ಕೆ ಹೆಚ್ಚು ಸಹಕಾರಿಯಾಗಿವೆ. ಅದ್ರಲ್ಲೂ ಪಪ್ಪಾಯ ಹಣ್ಣು ಹಲವು ರೀತಿಯಲ್ಲಿ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತಿದೆ.

ಪಪ್ಪಾಯಿ ಹಣ್ಣು ಸೇವಿಸುವುದರಿಂದ ಮನುಷ್ಯನ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶ ದೊರೆಯುತ್ತದೆ, ಪಪ್ಪಾಯ ಹಣ್ಣಿನಲ್ಲಿರುವ ಆಂಟಿ ಆಕ್ಸಿಡೆಂಟ್‍ಗಳು ದೇಹದ ಮೇಧೋಜೀರಕ, ಯಕೃತ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ವಿರುದ್ಧ ಹೋರಾಡುವುದು ಮತ್ತು ದೇಹದಲ್ಲಿನ ಸಂಪೂರ್ಣ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಪಪ್ಪಾಯ ಹಣ್ಣು ಸೇವನೆ ಮಾಡುವುದರಿಂದ ಚರ್ಮದ ಸೌಂದರ್ಯ ಹೆಚ್ಚುತ್ತದೆ. ಅಲ್ಲದೇ ಪಪ್ಪಾಯ ಸೇವನೆಯಿಂದ ಹೆಚ್ಚಿನ ಜೀವಸತ್ವ ಮತ್ತು ಖನಿಜಾಂಶಗಳನ್ನು ಹೊಂದಬಹುದಾಗಿದೆ.

ಪಪ್ಪಾಯ ಹಣ್ಣಿನಲ್ಲಿರುವ ಪೋಟ್ಯಾಷಿಯಂ ಅಂಶ ಹಲವರನ್ನು ಕಾಡುವ ಸಂಧಿವಾತ ರೋಗ ನಿವಾರಣೆಯಾಗುತ್ತದೆ. ಮಾತ್ರವಲ್ಲ ಹೃದಯ ರೋಗಗಳನ್ನು ನಿವಾರಿಸುವಲ್ಲಿ ತುಂಬಾ ಸಹಕಾರಿಯಾಗಿದೆ.

ಪಪ್ಪಾಯ ಹಣ್ಣಿನಲ್ಲಿರುವ ವಿಟಮಿನ್ ಇ ಸೌಂದರ್ಯ ವರ್ಧಕ ಅಂಶವನ್ನು ಹೊಂದಿದ್ದು, ಚರ್ಮದ ಕಾಂತಿಗೆ ಮತ್ತು ಕೂದಲಿನ ಆರೋಗ್ಯಕ್ಕೂ ತುಂಬಾ ಸಹಕಾರಿಯಾಗಿದೆ.

ಹೆಚ್ಚಿನ ಫೇಸ್ ಮಾಸ್ಕ್ ಗಳಲ್ಲಿ ಪಪ್ಪಾಯಿ ಬಳಸಲಾಗುತ್ತದೆ. ಅಲ್ಲದೇ ಸತ್ತ ಚರ್ಮದ ಕೋಶಗಳನ್ನು ಕಿತ್ತು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಊಟವಾದ ನಂತರ ಪಪ್ಪಾಯಿ ಹಣ್ಣು ಸೇವನೆ ಮಾಡುವ ಅಭ್ಯಾಸ ರೂಢಿಸಿಕೊಂಡರೆ ಜೀರ್ಣಶಕ್ತಿ ವೃದ್ಧಿಸುತ್ತದೆ. ಪರಂಗಿ ಗಿಡದ ಎಲೆಗಳನ್ನು ಕಿತ್ತು ತೊಳೆದು ತಿನ್ನುವುದರಿಂದ ಕರುಳಿನಲ್ಲಿರುವ ಕ್ರಿಮಿಗಳು ನಾಶವಾಗುತ್ತವೆ. ಹೃದಯ ಹಾಗೂ ನರಗಳ ದೌರ್ಬಲ್ಯದಿಂದ ನರಳುವವರಲ್ಲಿ ಹೊಸ ಚೈತನ್ಯ ತುಂಬುತ್ತದೆ.

ಪಪ್ಪಾಯ ಹಣ್ಣನ್ನು ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ದೇಹದಲ್ಲಿನ ವಿಷಕಾರಿ ಅಂಶವನ್ನು ತೆಗೆದು ಹಾಕುವಲ್ಲಿಯೂ ಸಹಕಾರಿಯಾಗಿದೆ.

ಒಂದು ಮಧ್ಯಮ ಗಾತ್ರದ ಪಪ್ಪಾಯ ಹಣ್ಣಿನಲ್ಲಿ 68 ಕ್ಯಾಲೋರಿಗಳು ಇರುತ್ತದೆ. ಜಿಂಕ್ 0.13 ಮಿ.ಗ್ರಾಂ., ಕ್ಯಾಲ್ಸಿಯಂ 31 ಮಿ.ಗ್ರಾಂ., ಮ್ಯಾಗ್ನಿಷಿಯಂ 33 ಮಿ.ಗ್ರಾಂ., ಪೊಟ್ಯಾಷಿಯಂ 286 ಮಿ.ಗ್ರಾಂ., ಕಾರ್ಬೋಹೈಡ್ರೇಟ್ 50.1 ಗ್ರಾಂ., ನಾರು 2.7 ಗ್ರಾಂ., ಪ್ರೋಟಿನ್ 2.9 ಗ್ರಾಂ. ಹೊಂದಿದೆ.

ಇನ್ನು ಸಕ್ಕರೆ 8.30 ಗ್ರಾಂ., ಓಮೆಗಾ 3 ಕೊಬ್ಬಿನ ಆಮ್ಲಗಳು-35.0 ಮಿ.ಗ್ರಾಂ. ಪೋಷಕಾಂಶಗಳು ಲಭ್ಯವಿರುತ್ತವೆ. ಪಪ್ಪಾಯ ಹಣ್ಣು ಸೇವನೆಯಿಂದ ಮನುಷ್ಯನ ಶರೀರಕ್ಕೆ ಈ ಮೇಲಿನ ಎಲ್ಲಾ ಲಾಭಾಂಶಗಳು ದೊರೆಯುತ್ತವೆ.

ಇದನ್ನೂ ಓದಿ : ಸಣ್ಣಗಿರುವವರು ದಪ್ಪವಾಗಬೇಕಾ ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

ಇದನ್ನೂ ಓದಿ : ಗುಲಾಬಿ ಚಹಾ : ತೂಕ ಇಳಿಸುವುದರ ಜೊತೆಗೆ ಇದೆ ಹಲವು ಲಾಭಗಳು

(Is papaya eating on an empty stomach? So you must read this story )

Leave A Reply

Your email address will not be published.