ಸೋಮವಾರ, ಏಪ್ರಿಲ್ 28, 2025
Homehoroscope2022 Horoscope: ನಿಮ್ಮ 2022ರ ಭವಿಷ್ಯ ತಿಳಿದುಕೊಳ್ಳಿ, ಹೊಸವರ್ಷಕ್ಕೆ ಹೊಸ ಹುಮ್ಮಸ್ಸಿನಿಂದ ಪದಾರ್ಪಣೆ ಮಾಡಿ

2022 Horoscope: ನಿಮ್ಮ 2022ರ ಭವಿಷ್ಯ ತಿಳಿದುಕೊಳ್ಳಿ, ಹೊಸವರ್ಷಕ್ಕೆ ಹೊಸ ಹುಮ್ಮಸ್ಸಿನಿಂದ ಪದಾರ್ಪಣೆ ಮಾಡಿ

- Advertisement -

2022ರಲ್ಲಿ ಏನೇನು ಆಗಲಿದೆ ಎಂಬ ಭವಿಷ್ಯವಾಣಿಯನ್ನು (2022 Horoscope) ಓದಿ, ಹೊಸ ಹುಮ್ಮಸ್ಸಿನಿಂದ ಈವರ್ಷವನ್ನು ಕಳೆಯಿರಿ. (New year 2022 horoscope predictions Things likely to happen in your life)
ಮೇಷ ರಾಶಿ (Aries): ಜನವರಿ 16ರಂದು ಧನಸ್ಸು ರಾಶಿಗೆ ಬರುವ ಮಂಗಳನು ಉತ್ತಮ ಆರ್ಥಿಕ ಸ್ಥಿತಿಗೆ ಕಾರಣನಾಗುತ್ತಾನೆ, ಈ ಗೋಚಾರವು ನಿಮಗೆ ಅತ್ಯಂತ ಶುಭವಾಗಿರಲಿದೆ. ತನ್ನದೇ ರಾಶಿಯಾದ ಮೀನದಲ್ಲಿ ಸಂಚರಿಸುವ ಗುರು ವಿದ್ಯಾರ್ಥಿಗಳಿಗೆ ಶುಭ ಫಲ ತರಲಿದ್ದಾನೆ.  ವರ್ಷದ ಬಹುಭಾಗ ನಿಮ್ಮ 10ನೇ ರಾಶಿಯಲ್ಲಿ ಸಂಚರಿಸುವ ಶನಿ ಯಶಸ್ಸಿಗೆ ಹೆಚ್ಚು ಶ್ರಮ ಪಡುವಂತೆ ಮಾಡುತ್ತಾನೆ. ಹೊಸವರ್ಷದ ಆರಂಭದಲ್ಲಿ ಪ್ರೇಮಿಗಳಿಗೆ ಅನೇಕ ಸವಾಲುಗಳು ಎದುರಾಗಲಿವೆ. ಶನಿ ಮತ್ತು ಬುಧರ ಯುತಿಯ ಸಮಯದಲ್ಲಿ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳನ್ನು ನೀಡಲಿದ್ದಾರೆ. ಆಗಸ್ಟ್‌ ಮಧ್ಯಭಾಗದಲ್ಲಿ ಮೀನರಾಶಿಯಲ್ಲಿ ಸಂಚರಿಸುವ ಮಂಗಳನು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನೀಡಲಿದ್ದಾನೆ, ವಿಶೇಷ ಮುನ್ನೆಚ್ಚರಿಕೆ ಹಾಗೂ ತಿನ್ನುವ ಆಹಾರದ ಮೇಲೆ ಗಮನ ಬೇಕು. ಮಂಗಳನು ನಿಮ್ಮ ರಾಶಿಯಲ್ಲೇ 10ರ ತನಕ ಸಂಚರಿಸುತ್ತಾ ನಾಲ್ಕನೆಯ ಮನೆಯನ್ನು ನೋಡುವುದರಿಂದ ಹಾಗೂ ನಂತರ ನಿಮ್ಮ ರಾಶಿಯಿಂದ ದ್ವಿತೀಯಕ್ಕೆ ಬರುವುದರಿಂದ ಈ ಸಮಯದಲ್ಲಿ ನಿಮ್ಮ ಕೌಟುಂಬಿಕ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರಲಿದ್ದಾನೆ. ವಿದ್ಯೆ, ವೃತ್ತಿ, ಹಾಗೂ ವ್ಯಾಪಾರ ರಂಗಗಳಲ್ಲಿ ಉತ್ತಮ ಫಲಗಳಿವೆ. ಅವಿವಾಹಿತರಿಗೆ ಆಸಕ್ತಿಕರ ಸಂಬಂಧಗಳ ಸಾಧ್ಯತೆ. ಪ್ರೇಮ-ಪ್ರಣಯ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಇರಲಿದೆ. ವರ್ಷದ ಕಡೆಯಲ್ಲಿ ಬುಧನು ವಕ್ರಿಯಾಗುವುದರಿಂದ ಸಂವಹನ ತಂತ್ರಜ್ಞಾನ/ಉಪಕರಣಗಳಲ್ಲಿ ಏರು-ಪೇರಾಗಲಿದೆ. ನಿಮ್ಮ ಹಳೆಯ ಸಂಬಂಧಗಳ ಜನರನ್ನು ಭೇಟಿ ಮಾಡುವ ಸಂಭವವಿದೆ.

ವೃಷಭ ರಾಶಿ (Taurus): ಹೊಸವರ್ಷ ನಿಮಗೆ ಸಾಧಾರಣ ಫಲಗಳನ್ನು ನೀಡಲಿದೆ. ಜನವರಿ 16ರಿಂದ ಮಂಗಳನು ನಿಮಗೆ ಜೀವನದ ಅನೇಕ ವಿಷಯಗಳಲ್ಲಿ ಭಾಗ್ಯವನ್ನು ತರಲಿದ್ದಾನೆ. ಉದ್ಯೋಗ ರಂಗದಲ್ಲಿ ಉತ್ತಮ ಫಲಿತಾಂಶಗಳು ದೊರಕಿ ವೃತ್ತಿಜೀವನ ಆನಂದ ತರಲಿದೆ.  ನಿಮ್ಮ ರಾಶಿಯಿಂದ 9ನೇ ಮನೆಯಲ್ಲಿರುವ ಶನಿಯು ವಿವಿಧ ಮೂಲಗಳಿಂದ ನಿಮಗೆ ಆದಾಯವನ್ನು ನೀಡಲಿದ್ದಾನೆ. ಏಪ್ರಿಲ್‌ ತಿಂಗಳಲ್ಲಿ ಉಂಟಾಗುವ ವಿವಿಧ ಗ್ರಹಗಳ ಸ್ಥಾನಬದಲಾವಣೆಗಳು ಹೆಚ್ಚಿನ ಆದಾಯಕ್ಕೆ ದಾರಿಮಾಡಿಕೊಡಲಿವೆ. ಆದರೂ, ಈ ವರ್ಷದ ಆಗಸ್ಟ್‌ ಮತ್ತು ಅಕ್ಟೋಬರ್‌ ತಿಂಗಳುಗಳ ನಡುವೆ ಹಣಕಾಸಿನ ಸ್ಥಿತಿಯಲ್ಲಿ ಕೆಲ ಆತಂಗಳಿರಲಿವೆ. ಗುರುವು ಏಪ್ರಿಲ್‌ನಿಂದ ನಿಮ್ಮ ರಾಶಿಯಿಂದ 11ನೇ ಮನೆಯಲ್ಲಿ ಸಂಚರಿಸುವುದರಿಂದ ವೈಭವಯುತ ಜೀವನಕ್ಕಾಗಿ ಹೆಚ್ಚು ಹಣ ಖರ್ಚು ಮಾಡುತ್ತೀರಿ. ನಿಮ್ಮ ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಇರಲಿದೆ. ವರ್ಷದ ಕೊನೆಯ 3 ತಿಂಗಳು ನಿಮ್ಮ ಮಕ್ಕಳು ಒಳ್ಳೆಯ ಫಲಗಳನ್ನು ಪಡೆಯತ್ತಾರೆ.

ಮಿಥುನ ರಾಶಿ (Gemini): ಹೊಸ ವರ್ಷದಲ್ಲಿ ಸವಾಲುಗಳೂ ಇರಲಿವೆ, ಅವಕಾಶಗಳೂ ಇರಲಿವೆ. ನಿಮ್ಮ ರಾಶಿಯಿಂದ 8ನೇ ಮನೆಯಲ್ಲಿ ತನ್ನದೇ ರಾಶಿಯಲ್ಲಿರುವ ಶನಿಯು ಜನವರಿಯಿಂದ ಮಾರ್ಚ್‌ ತಿಂಗಳವರೆಗೆ ಧನ ನಷ್ಟ ಹಾಗೂ ಆರೋಗ್ಯ ಸಮಸ್ಯೆಗಳನ್ನು ನೀಡುವ ಸಾಧ್ಯತೆಯಿದೆ. ಇದು ನಿಮಗೆ ಸವಾಲಿನ ಸಮಯವಾಗಬಹುದು. ಫೆಬ್ರವರಿ 17ರಿಂದ ಏಪ್ರಿಲ್‌ವರೆಗೆ ಹೊಟ್ಟೆಯ ಸಮಸ್ಯೆಗಳೂ, ಕೀಲುಗಳಲ್ಲಿ ನೋವು, ಹಾಗೂ ಶೀತ-ಕೆಮ್ಮುಗಳಂಥ ಕೆಲ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದರೂ, ಏಪ್ರಿಲ್‌ ಮಧ್ಯಭಾಗದಲ್ಲಿ ಸ್ಥಾನ ಬದಲಾಯಿಸುವ ರಾಹು ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತರಲಿದ್ದಾನೆ. ಗುರು ನಿಮ್ಮ ರಾಶಿಯಿಂದ ಹತ್ತನೇ ಸ್ಥಾನದಲ್ಲಿರುವುದರಿಂದ ವಿದ್ಯಾರ್ಥಿಗಳಿಗೆ ಏಪ್ರಿಲ್‌ನಿಂದ ಜುಲೈವರೆಗೆ ಶುಭ ಫಲವಿದ್ದು ಉತ್ತಮ ಫಲಿತಾಂಶ ಬರಬಹುದಾದರೂ  ಏಪ್ರಿಲ್‌ 27ರ ನಂತರ ಶನಿಯು 9ನೇ ಮನೆಗೆ ಬರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರವ ವಿದ್ಯಾರ್ಥಿಗಳು ಯಶಸ್ಸನ್ನು ನೋಡಲು ಹೆಚ್ಚು ಕಾಲ ಕಾಯಬೇಕಾಗುತ್ತದೆ. ಮಂಗಳನು ಮೇ ಮತ್ತು ಆಗಸ್ಟ್‌ ತಿಂಗಳುಗಳ ನಡುವೆ ನಿಮ್ಮ ರಾಶಿಯಿಂದ 10ನೇ, 11ನೇ, ಹಾಗೂ 12ನೇ ರಾಶಿಗಳಲ್ಲಿ ಸಂಚರಿಸುತ್ತಿರುವುದರಿಂದ ಉದ್ಯೋಗಾರ್ಥಿಗಳು ಹಾಗೂ ವೃತ್ತಿನಿರತರು ಬಯಸಿದ ಅವಕಾಶಗಳನ್ನು ಪಡೆಯುವರು.

ಕರ್ಕ ರಾಶಿ (Cancer): ವರ್ಷಾರಂಭದಲ್ಲಿ ಶನಿಯು ನಿಮ್ಮ ರಾಶಿಯಿಂದ 7ನೇ ರಾಶಿಯಲ್ಲಿ ಸಂಚರಿಸುತ್ತಾ ಕೆಲ ಸಮಸ್ಯೆಗಳನ್ನು ತರುವ ಸಂಭವವಿದೆ. ಆದರೆ, ಜನವರಿ 16ರಿಂದ ಧನಸ್ಸು ರಾಶಿಯಲ್ಲಿ ಸಂಚರಿಸುವ ಮಂಗಳನು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿ ನಿಮ್ಮ ಸಮಸ್ಯೆಗಳು ತಕ್ಷಣವೇ ಪರಿಹಾರವಾಗಲಿವೆ. ಆದರೆ, ಮಂಗಳನು ನಿಮ್ಮ ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆಗಳನ್ನು ಕೊಡಬಹುದು, ಎಚ್ಚರವಹಿಸಿ, ಅವರ ಆಹಾರ-ಪಾನೀಯಗಳ ಮೇಲೆ ಗಮನವಿಡಿ. ಏಪ್ರಿಲ್‌ನಲ್ಲಿ ಅನೇಕ ಗ್ರಹಸಂಚಾರಗಳು ನಡೆಯಲಿವೆ. ಏಪ್ರಿಲ್‌ ಕಡೆಯಿಂದ ಜುಲೈ ಮಧ್ಯದವರೆಗೆ ಕುಂಭರಾಶಿಯಲ್ಲಿ ಸಂಚರಿಸುವ ಶನಿಯು ನಿಮ್ಮ ಆರ್ಥಿಕ ಜೀವನದ ಮೇಲೆ ಪ್ರಭಾವ ಬೀರಲಿದ್ದು ನಂತರದ ದಿನಗಳಲ್ಲಿ ಆಗಸ್ಟ್‌ವರೆಗೆ ಸಮಯ ಚೆನ್ನಾಗಿರಲಿದೆ. ರಾಹು ಮೇಷರಾಶಿಗೆ ಬಂದಾಗ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿದ್ದು ಸೆಪ್ಟೆಂಬರ್‌ ತಿಂಗಳವರೆಗೆ ಉತ್ತಮ ಫಲಗಳು ಇರಲಿವೆ. ಮಂಗಳನು ಜೂನ್‌ ಮತ್ತು ಜುಲೈ ತಿಂಗಳುಗಳ ನಡುವೆ ಮೇಷರಾಶಿಯನ್ನು ಪ್ರವೇಶಿಸಲಿದ್ದು ನಿಮ್ಮ ರಾಶಿಯನ್ನು ಪೂರ್ಣದೃಷ್ಟಿಯಿಂದ ನೋಡುವುದರಿಂದ ನಿಮ್ಮ ವೈವಾಹಿಕ ಜೀವನದ ಸಮಸ್ಯೆಗಳಿಂದ ಹೊರಬರಲು ದಾರಿಯಾಗುತ್ತದೆ.

ಸಿಂಹ ರಾಶಿ (Leo): ವರ್ಷಾರಂಭದಲ್ಲಿ ನಿಮ್ಮ ರಾಶಿಯ ಅಧಿಪತಿ ರವಿಯು ನಿಮ್ಮ ರಾಶಿಯಿಂದ 5ನೇ ಮನೆಯಲ್ಲಿ ಸಂಚರಿಸುವುದರಿಂದ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಜನವರಿ ಅಂತ್ಯಭಾಗದಿಂದ ಮಾರ್ಚ್‌ ತಿಂಗಳವರೆಗಿನ ಮಂಗಳನ ಸಂಚಾರ ನಿಮ್ಮ ಮಗುವಿನ ಆರೋಗ್ಯವನ್ನು ಬಹುಪಾಲು ಸುಧಾರಿಸುತ್ತದೆ. ನಿಮ್ಮ ರಾಶಿಯಿಂದ 6ನೇ ರಾಶಿಯಲ್ಲಿ ಸಂಚರಿಸುವ ಮಂಗಳನು ಫೆಬ್ರವರಿ 26ರಿಂದ ನಿಮ್ಮ ಭಾಗ್ಯಸ್ಥಾನವನ್ನು ನೋಡುವುದರಿಂದ ವೃತ್ತಿಯಲ್ಲಿ ದೊಡ್ಡ ಯಶಸ್ಸು ನಿಮ್ಮದಾಗಲಿದೆ. ಆದರೂ, ಫೆಬ್ರವರಿ ಮತ್ತು ಏಪ್ರಿಲ್‌ ತಿಂಗಳುಗಳಲ್ಲಿ ಹೆಚ್ಚಿನ ಗ್ರಹಗಳ ಯುತಿ ಹಾಗೂ ಸಂಚಾರಗಳಿರುವುದರಿಂದ ವಿಷಮ ಪರಿಸ್ಥಿತಿಗಳು ಏರ್ಪಡುವ ಸಾಧ್ಯತೆಗಳಿದ್ದು ನೀವು ಎಚ್ಚರದಿಂದಿರಬೇಕು. ಏಪ್ರಿಲ್‌ ತಿಂಗಳು ಸಿಂಹರಾಶಿಯವರಿಗೆ ಅನೀರೀಕ್ಷಿತ ಸಂಗತಿಗಳಿಂದ ತುಂಬಿರಲಿದೆ. ಏಪ್ರಿಲ್‌ 12ರಂದು ರಾಹು ಮೇಷರಾಶಿಗೆ ಬರಲಿದ್ದು 9ನೇ ಮನೆಗೆ ಬರುವುದರಿಂದ ಕೆಲ ಆರೋಗ್ಯ ಸಮಸ್ಯೆಗಳನ್ನು ಕೊಡಬಹುದು, ಹೆಚ್ಚಿನ ಎಚ್ಚರಿಕೆ ಬೇಕಾಗುತ್ತದೆ.  ಏಪ್ರಿಲ್‌ 13ರಿಂದ ಆಗಸ್ಟ್‌ವರೆಗೆ ಮೀನರಾಶಿಯಲ್ಲಿದ್ದು ನಿಮ್ಮ ರಾಶಿಯಿಂದ 5ನೇ ಮನೆಯನ್ನು ಪೂರ್ಣದೃಷ್ಟಿಯಿಂದ ನೋಡುವುದರಿಂದ ಶುಭಪ್ರದವಾಗಲಿದೆ, ಶಾಲಾ ವಿದ್ಯಾರ್ಥಿಗಳಿಗೆ ಯಶಸ್ಸು. ಏಪ್ರಿಲ್‌ 12ರ ನಂತರ ಮೇಷರಾಶಿಗೆ ಬರಲಿರುವ ರಾಹು ನಿಮ್ಮ ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧ ನೀಡುತ್ತಾನೆ. ಇದರಿಂದ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ ಹಾಗೂ ಬಡ್ತಿ/ವೇತನ ಹೆಚ್ಚಳದ ಸಾಧ್ಯತೆಯಿದೆ. ಏಪ್ರಿಲ್‌ ಮತ್ತು ಸೆಪ್ಟೆಂಬರ್‌ ತಿಂಗಳುಗಳ ನಡುವೆ ವಿವಾಹಿತ ದಂಪತಿಗಳ ನಡುವಿನ ವಿವಾದಗಳು ಪರಿಹಾರವಾಗಲಿವೆ. ಆಗಸ್ಟ್‌ 10ರಿಂದ ಅಕ್ಟೋಬರ್‌ವರೆಗೆ ವೃಷಭರಾಶಿಯಲ್ಲಿ ಸಂಚರಿಸುವ ಮಂಗಳನು ಭಾಗ್ಯದ ಬಾಗಿಲನ್ನು ತೆರೆಯಲಿದ್ದಾನೆ.

ಕನ್ಯಾ ರಾಶಿ (Virgo): ವರ್ಷಾರಂಭದಲ್ಲಿ ಮಂಗಳನು ಧನಸ್ಸು ರಾಶಿಯಲ್ಲಿ ಸಂಚರಿಸುತ್ತಿದ್ದು ಹೆಚ್ಚಿನ ಸಂಪತ್ತು ಹಾಗೂ ಸಮೃದ್ಧಿ ತರಲಿದ್ದಾನೆ. ಆದರೂ, ಕೆಲ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆರೋಗ್ಯದ ದೃಷ್ಟಿಯಿಂದ ಏಪ್ರಿಲ್, ಜೂನ್, ಮತ್ತು ಸೆಪ್ಟೆಂಬರ್ ತಿಂಗಳುಗಳು ಚಿಂತೆಗೆ ಕಾರಣವಾಗಬಹುದು. ಫೆಬ್ರವರಿ 26ರಿಂದ ಮಂಗಳನು ನಿಮ್ಮ ರಾಶಿಯಿಂದ 5ನೇ ರಾಶಿಯಲ್ಲಿ ಸಂಚರಿಸುವುದರಿಂದ ಶೈಕ್ಷಣಿಕವಾಗಿ ಶುಭಫಲಗಳು ಉಂಟಾಗಲಿವೆ. ಮಾರ್ಚ್ ತಿಂಗಳ ಆರಂಭದಲ್ಲಿ ಮಂಗಳ, ಬುಧ, ಶುಕ್ರ, ಹಾಗೂ ಶನಿಯ ಯುತಿ ನಿಮ್ಮ ರಾಶಿಯಿಂದ 5ನೇ ಮನೆಯಲ್ಲಿ ಉಂಟಾಗಿ ಹೊಸ ಆದಾಯದ ಮೂಲಗಳಿಂದ ಆರ್ಥಿಕ ಅಭಿವೃದ್ಧಿ ಆಗಲಿದೆ. ಏಪ್ರಿಲ್‌ ಅಂತ್ಯಭಾಗದಿಂದ ಜುಲೈ ಮಧ್ಯಭಾಗದವರೆಗೆ ಶನಿಯು 6ನೇ ಮನೆಯಲ್ಲಿರುವುದರಿಂದ ಕುಟುಂಬ ಸದಸ್ಯರೊಡನೆ ಆಭಿಪ್ರಾಯಭೇದಗಳು ಇರಲಿವೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಬಯಸುವವರಿಗೆ ಸೆಪ್ಟೆಂಬರ್ ಹಾಗೂ ಡಿಸೆಂಬರ್‌ ತಿಂಗಳುಗಳ ಅವಧಿಯಲ್ಲಿ ಆಸೆ ಈಡೇರಲಿದೆ. ಅಕ್ಟೋಬರ್ ತಿಂಗಳಿಂದ ನವೆಂಬರ್ ಮಧ್ಯಭಾಗದವರೆಗೆ ಬುಧನು ನಿಮ್ಮ ರಾಶಿಯಿಂದ 2ನೇ ರಾಶಿ ತುಲಾದಲ್ಲಿ ಸಂಚರಿಸುವುದರಿಂದ ನೀವು ಹಾಗೂ ನಿಮ್ಮ ಪ್ರೀತಿಪಾತ್ರರ ನಡುವಿನ ಸಂಬಂಧ ಗಟ್ಟಿಯಾಗಲಿದೆ.

ತುಲಾ ರಾಶಿ (Libra):  ಹೊಸ ವರ್ಷಾರಂಭವು ನಿಮ್ಮ ದೈಹಿಕ, ಮಾನಸಿಕ, ಹಾಗೂ ವೃತ್ತಿಜೀವನದಲ್ಲಿ ಶುಭ ಫಲಗಳನ್ನು ತರಲಿದೆ, ಆದರೆ ವ್ಯಾಪಾರ ಹಾಗೂ ಕುಟುಂಬದ ವಿಷಯಗಳಲ್ಲಿ ಸಮಸ್ಯೆಗಳು ಬರಬಹುದು. ಜನವರಿ ಮಧ್ಯಭಾಗದಲ್ಲಿ ಧನಸ್ಸು ರಾಶಿಯಲ್ಲಿ ಸಂಚರಿಸುವ ಮಂಗಳನು ಉತ್ತಮ ಆರ್ಥಿಕ ಫಲಿತಾಂಶಗಳನ್ನು ಹಾಗೂ ಧನಲಾಭವನ್ನು ಕೊಡಲಿದ್ದಾನೆ. ಮಂಗಳ, ಬುಧ, ಶುಕ್ರ, ಹಾಗೂ ಶನಿ ಗ್ರಹರು ಮಾರ್ಚ್‌ ಪ್ರಾರಂಭದಲ್ಲಿ ಚತುರ್‌ಗ್ರಹ ಯೋಗವನ್ನು ಉಂಟುಮಾಡುತ್ತಿದ್ದು ಆರ್ಥಿಕ ಯಶಸ್ಸು ಹಾಗೂ ಉತ್ತಮ ಹಣಕಾಸಿನ ಪರಿಸ್ಥಿತಿ ಇರಲಿದೆ. ಗುರುಗ್ರಹವು ಏಪ್ರಿಲ್‌ ತಿಂಗಳಲ್ಲಿ ಮೀನರಾಶಿಯಲ್ಲಿ ಸಂಚರಿಸುತ್ತಿದ್ದು ವಿದ್ಯಾಭ್ಯಾಸದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಮೇ ಹಾಗೂ ನವೆಂಬರ್ ತಿಂಗಳುಗಳ ನಡವಿನ ಅವಧಿಯಲ್ಲಿ ವಿದೇಶಕ್ಕೆ ಸಂಬಂಧಿಸಿದ ವಿದ್ಯಾಭ್ಯಾಸ ಹಾಗೂ ಉದ್ಯೋಗ ವಿಷಯಗಳಲ್ಲಿ ನಿರೀಕ್ಷೆಗಳು ಈಡೇರಲಿವೆ. ಫೆಬ್ರವರಿ 26ರಂದು ಮಂಗಳನು ನಿಮ್ಮ ರಾಶಿಯಿಂದ ನಾಲ್ಕನೇ ರಾಶಿಗೆ ಬರಲಿದ್ದು ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡಲಿದ್ದಾನೆ.  ಏಪ್ರಿಲ್‌ ತಿಂಗಳಲ್ಲಿ ನಿಮ್ಮ ರಾಶಿಯಿಂದ 7ನೇ ರಾಶಿಯಾದ ಮೇಷರಾಶಿಯಲ್ಲಿ ಸಂಚರಿಸುವ ರಾಹು ವಿವಾಹಿತ ದಂಪತಿಗಳ ಹಾಗೂ ಪ್ರೇಮಿಗಳ ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಿದ್ದಾನೆ. ಏಕಾಂತ ಜೀವನ ನಡೆಸುತ್ತಿರುವವರಿಗೆ ಅಕ್ಟೋಬರ್ ಹಾಗೂ ನವೆಂಬರ್‌ ತಿಂಗಳುಗಳ ನಡುವಿನ ಅವಧಿಯಲ್ಲಿ ವಿವಾಹ ಕೈಗೂಡುವ ಸಾಧ್ಯತೆಗಳಿವೆ.

ವೃಶ್ಚಿಕ ರಾಶಿ (Scorpio): ಈ ರಾಶಿಯಲ್ಲಿ ಜನಿಸಿದವರಿಗೆ ಹೊಸ ವರ್ಷವು ಮಿಶ್ರಫಲಗಳನ್ನು ನೀಡಲಿದೆ. ವರ್ಷಾರಂಭದಿಂದ ಏಪ್ರಿಲ್‌ವರೆಗೆ ಅನಗತ್ಯ ಖರ್ಚು-ವೆಚ್ಚಗಳು ಉಂಟಾಗಲಿವೆ. ಏಪ್ರಿಲ್ ಅಂತ್ಯಭಾಗದಲ್ಲಿ ಶನಿಯ ಕುಂಭ ರಾಶಿ ಸಂಚಾರವು ವೃತ್ತಿಯಲ್ಲಿ, ಆರ್ಥಿಕವಾಗಿ, ಹಾಗೂ ಕೌಟುಂಬಿಕ ಜೀವನದಲ್ಲಿ ಮಿಶ್ರಫಲಗಳನ್ನು ಕೊಡಲಿದೆ. ಏಪ್ರಿಲ್‌ ಮಧ್ಯಭಾಗದ ಗುರು ಗ್ರಹದ ಮೀನರಾಶಿ ಸಂಚಾರವು ನಿಮ್ಮ ರಾಶಿಯಿಂದ 5ನೇ ರಾಶಿಯಲ್ಲಿ ಉಂಟಾಗಲಿದ್ದು ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಮುಖ ಸುಧಾರಣೆ ಉಂಟುಮಾಡಲಿದೆ. ಏಪ್ರಿಲ್‌ 12ರಂದು ರಾಹು ತನ್ನ ಸ್ಥಾನವನ್ನು ಬದಲಿಸುವುದರಿಂದ ಆರೋಗ್ಯದಲ್ಲಿದ ಸುಧಾರಣೆಯಾಗಲಿದೆ. ಮಾನಸಿಕ ಒತ್ತಡ ಇರಲಿದ್ದು ಅದು ನಿಮ್ಮ ಜೀವನದ ಇತರ ವಿಷಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಉತ್ತಮ ಗ್ರಹಸ್ಥಿತಿಗಳಿಂದಾಗಿ ನೀವು ಮೇ ಮತ್ತು ಸೆಪ್ಟೆಂಬರ್‌ ತಿಂಗಳುಗಳ ನಡುವೆ ಅಧಿಕ ಧನ ಸಂಪಾದನೆಯಿದೆ. ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ನೀವು ನಿಮ್ಮ ತಾಯಿಯ ಹಾಗೂ ಸಂಗಾತಿಯ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಶನಿಯು ನಿಮ್ಮ ರಾಶಿಯಿಂದ 4ನೇ ಮನೆಯಾದ ಕುಂಭರಾಶಿಯಲ್ಲಿ ಸಂಚರಿಸುವುದರಿಂದ ನಿಮ್ಮ ಪ್ರೇಮಸಂಬಂಧದಲ್ಲಿ ಸಣ್ಣ-ಪುಟ್ಟ ವಿಷಯಗಳಿಗೆ ವಾದ-ವಿವಾದಗಳು ಹಾಗೂ ಹೊಡೆದಾಟದ ಪರಿಸ್ಥಿತಿಯೂ ಉದ್ಭವಿಸಬಹುದು. ನೀವು ನಿಮ್ಮ ಸಂಬಂಧ ಹಾಗೂ ಸಂಗಾತಿಯ ಮೇಲೆ ನಂಬಿಕೆ ಇಟ್ಟು ಮುನ್ನಡೆದರೆ ಇವನ್ನು ನಿವಾರಿಸಿಕೊಳ್ಳಬಹುದು. ಸೆಪ್ಟೆಂಬರ್‌ ಹಾಗೂ ನವೆಂಬರ್‌ ನಡುವಿನ ಶುಕ್ರನ ಕನ್ಯಾರಾಶಿಯ ನೀಚಸ್ಥಿತಿಯ ಹಾಗೂ 11ನೇ ಸ್ಥಾನದ ಸಂಚಾರವು ನೀವು ಹಾಗೂ ನಿಮ್ಮ ಸಂಗಾತಿಯು ಪರಸ್ಪರರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ.

ಧನಸ್ಸು ರಾಶಿ (Sagittarius): ಹೊಸವರ್ಷವು ನಿಮಗೆ ಆರ್ಥಿಕವಾಗಿ ಉತ್ತಮ ಫಲಗಳನ್ನು ತರಲಿದೆ. ವರ್ಷಾರಂಭದಲ್ಲಿ ಮಂಗಳನು ನಿಮ್ಮ ರಾಶಿಯಲ್ಲೇ ಸಂಚರಿಸುತ್ತಿದ್ದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನ ಒಂದು ಹಂತದವರೆಗೆ ಸುಧಾರಿಸುತ್ತಾನೆ. ವರ್ಷಾರಂಭವು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರಲಿದೆ. ಫೆಬ್ರವರಿಯಿಂದ ಜೂನ್‌ವರೆಗೆ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಲಿದ್ದೀರಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುತ್ತಿರುವವರು ನಿಮ್ಮ ನಿರೀಕ್ಷೆಗೂ ಮೀರಿ ಸಾಧನೆ ಮಾಡುವ ಆತ್ಮವಿಶ್ವಾಸ ಹೊಂದಿರುತ್ತೀರಿ. ಮಂಗಳನ ಧನಸ್ಸುರಾಶಿಯ ಸಂಚಾರವು ವರ್ಷಾರಂಭದಲ್ಲಿ ಮಾನಸಿಕ ಚಿಂತೆಗಳಿಗೆ ಹಾಗೂ ಒತ್ತಡಗಳಿಗೆ ಕಾರಣವಾಗಬಹುದು ಹಾಗೂ ಮಂಗಳನ 7ನೇ ಮನೆಯ ಮೇಲಿನ ದೃಷ್ಟಿ ಕೌಟುಂಬಿಕ ಜೀವನದಲ್ಲಿ ವಾದವಿವಾದಗಳನ್ನು ಹುಟ್ಟುಹಾಕಬಹುದು. ಜನವರಿಯಲ್ಲಿ ರವಿಯ ಮಕರ ರಾಶಿಯಲ್ಲಿ ಸಂಚಾರ ಹಾಗೂ ಶನಿಯೊಂದಿಗಿನ ಯುತಿ ನಿಮ್ಮ ಪ್ರೇಮ/ವೈವಾಹಿಕ ಜೀವನದಲ್ಲಿ ತಪ್ಪುತಿಳುವಳಿಕೆ ಹಾಗೂ ಸಮಸ್ಯೆಗಳನ್ನು ತಂದೊಡ್ಡಬಹುದು, ಮಾತಿನ ಮೇಲೆ ಹಿಡಿತವಿರಲಿ. ಏಪ್ರಿಲ್ ಮತ್ತು ಜೂನ್‌ ತಿಂಗಳ ನಡುವೆ ಗುರುವು ಮೀನರಾಶಿಯಲ್ಲಿ ಇರುವಾಗ ಪರಿಸ್ಥಿತಿಯಲ್ಲಿ ಸಂಪೂರ್ಣ ಬದಲಾವಣೆ ತರಬಹುದು. ಜೂನ್‌ ತಿಂಗಳಿಂದ ಜುಲೈ 20ರವರೆಗೆ ನಿಮ್ಮ ದಾಂಪತ್ಯ ಜೀವನದಲ್ಲಿ ಪ್ರಮುಖ ಸುಧಾರಣೆ ತಂದು ವರ್ಷಾಂತ್ಯದಲ್ಲಿ ಗುರು ನಿಮ್ಮ ರಾಶಿಯಿಂದ 4ನೇ ಸ್ಥಾನದಲ್ಲಿ ಸಂಚರಿಸುವ ಸಮಯದಲ್ಲಿ ನೀವು ಸುಖಮಯ ದಾಂಪತ್ಯ ಜೀವನವನ್ನು ಹೊಂದಲಿದ್ದೀರಿ. ನಿಮ್ಮ ವೃತ್ತಿಜೀವನದಲ್ಲಿ  ನವೆಂಬರ್‌ ತಿಂಗಳಿನಿಂದ ಉತ್ತಮ ಉದ್ಯೋಗಾವಕಾಶಗಳು ಸಿಗಲಿವೆ. ಆರೋಗ್ಯಕ್ಕೆ ಸಂಬಂಧಪಟ್ಟಂತೆ ಶುಕ್ರನು ಜೂನ್‌ ತಿಂಗಳಲ್ಲಿ ನಿಮ್ಮ ರಾಶಿಯಿಂದ 6ನೇ ರಾಶಿಯಲ್ಲಿ ಸಂಚರಿಸುವುದರಿಂದ ಯಾವುದಾದರೂ ಪ್ರಮುಖ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆಯಿದ್ದು ಅಕ್ಟೋಬರ್‌ ವರೆಗೆ ಎಚ್ಚರಿಕೆಯಿಂದ ಇರುವುದು ಅವಶ್ಯಕ.

ಮಕರ ರಾಶಿ (Capricorn): ಹೊಸವರ್ಷವು ಈ ರಾಶಿಯವರಿಗೆ ಏರಿಳಿತಗಳಿಂದ ಕೂಡಿರಲಿದೆ. ರಾಶ್ಯಾಧಿಪತಿ ಶನಿಯು ತನ್ನ ಸ್ವರಾಶಿಯಲ್ಲೇ ಇರುವುದು ವೃತ್ತಿ, ಆರ್ಥಿಕತೆ, ಹಾಗೂ ಶೈಕ್ಷಣಿಕರಂಗದಲ್ಲಿ ಶುಭಫಲಗಳನ್ನು ನೀಡಲಿದೆ. ಆದರೂ, ಶನಿಯ ಏಪ್ರಿಲ್‌ ತಿಂಗಳ ಗೋಚಾರದಿಂದ ಜೀವನದ ಅನೇಕ ವಲಯಗಳಲ್ಲಿ ಸವಾಲುಗಳು ಬರಲಿವೆ. ಮಂಗಳನ 12ನೇ ರಾಶಿಯ ಸಂಚಾರವು ಹಣವನ್ನು ಒಟ್ಟುಗೂಡಿಸಲು ತಡೆ ಉಂಟುಮಾಡಲಿದೆ. ಆದರೆ, ವ್ಯಾಪಾರಿಗಳಿಗೆ ಸೆಪ್ಟೆಂಬರ್ ತಿಂಗಳಿಂದ ವರ್ಷಾಂತ್ಯದವರೆಗೆ ಶುಭ ಫಲಗಳು ಸಿಗಲಿವೆ. ಶನಿಯ ಕುಂಭ ರಾಶಿ ಸಂಚಾರವು ಏಪ್ರಿಲ್‌ ತಿಂಗಳಲ್ಲಿ ಕೆಲ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ, ಆಹಾರದ ಕಡೆ ಗಮನ ಅತ್ಯವಶ್ಯಕ. ಜನವರಿಯಲ್ಲಿ ಮಂಗಳನ ಸಂಚಾರವು ವಿದ್ಯಾರ್ಥಿಗಳಲ್ಲಿ ಯಶಸ್ಸಿಗೆ ಹೆಚ್ಚಿನ ಶ್ರಮ ಹಾಕಬೇಕಾತ್ತದೆ. ಕೇತುವಿನ ವೃಶ್ಚಿಕರಾಶಿ ಸಂಚಾರವು ಕೌಟುಂಬಿಕ ಸಮಸ್ಯೆಗಳನ್ನು ತರುವ ಸಾಧ್ಯತೆಯಿದೆ. ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಂಬಂಧ ಅವಶ್ಯಕ, ಹಾಗೂ ವಾದವಿವಾದಗಳಿಂದ ದೂರ ಇರುವುದು ಉತ್ತಮ. ಪ್ರೇಮಿಗಳಿಗೆ ಹಾಗೂ ದಂಪತಿಗಳಿಗೆ ಮಿಶ್ರಫಲವಿರಲಿದೆ. ಪ್ರೇಮಿಗಳಿಗೆ ಏಪ್ರಿಲ್‌ ತಿಂಗಳ ಗುರುವಿನ ನಿಮ್ಮ ರಾಶಿಯಿಂದ 3ನೇ ಮನೆಯ ಸಂಚಾರ ಶುಭಫಲಗಳನ್ನು ತರಲಿದೆ. ವರ್ಷಾರಂಭದಲ್ಲಿ ವಿವಾಹಿತರಿಗೆ ದಾಂಪತ್ಯ ಜೀವನದಲ್ಲಿ ಕೆಲ ಸಣ್ಣ-ಪುಟ್ಟ ಸಮಸ್ಯೆಗಳಿದ್ದರೂ ಆಗಸ್ಟ್‌ ನಂತರ ಉತ್ತಮ ದಾಂಪತ್ಯ ಜೀವನವಿರಲಿದ್ದು ವರ್ಷಾಂತ್ಯವು ಅದ್ಭುತವಾಗಿರಲಿದೆ.

ಕುಂಭ ರಾಶಿ (Aquarius): ಹೊಸವರ್ಷವು ಈ ರಾಶಿಯವರಿಗೆ ಬಹುತೇಕ ಶುಭವಾಗಿರಲಿದೆ, ಆರ್ಥಿಕವಾಗಿಯೂ ಉತ್ತಮವಾಗಿದೆ. ಜನವರಿಯಲ್ಲಿ ಮಂಗಳನ ಗೋಚರವು ಇದಕ್ಕೆ ಸಹಾಯಕವಾಗಲಿದೆ. ನಾಲ್ಕು ಮುಖ್ಯ ಗ್ರಹಗಳಾದ ಶನಿ, ಮಂಗಳ, ಬುಧ, ಹಾಗೂ ಶುಕ್ರರ ಯುತಿಯು ಮಾರ್ಚ್‌ ತಿಂಗಳ ಆರಂಭದಲ್ಲಿ ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಹಾಗೂ ಸಂಪತ್ತನ್ನು ತರಲಿದೆ. ಆದರೆ, ಏಪ್ರಿಲ್‌ 12ರ ರಾಹು ಗ್ರಹದ ಗೋಚಾರವು ನಿಮ್ಮ ರಾಶಿಯಿಂದ 3ನೇ ಮನೆಯಲ್ಲಿ ಆಗುತ್ತಿದ್ದು ನೀವು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಬಹುದು, ಎಚ್ಚರವಿರಲಿ. ಜನವರಿ ತಿಂಗಳಲ್ಲಿ ಹಾಗೂ ಫೆಬ್ರವರಿಯಿಂದ ಮೇ ತಿಂಗಳವರೆಗೆ ಗ್ರಹಗಳ ಗೋಚಾರ ಪ್ರಭಾವದಿಂದ ಬಾಹ್ಯ ಸಮಸ್ಯೆಗಳು ಬರಬಹುದು. ರಾಹುವಿನ 3ನೇ ಮನೆಯ ಸಂಚಾರದಿಂದ ನಿಮ್ಮ ಸಹೋದರರಿಗೆ ಸಮಸ್ಯೆಗಳು ಎದುರಾಗಬಹುದು. ಮಂಗಳನ ಧನಸ್ಸು ರಾಶಿ ಸಂಚಾರದಿಂದ ಜನವರಿ ತಿಂಗಳಲ್ಲಿ ಉದ್ಯೋಗ-ವ್ಯಾಪಾರಗಳಲ್ಲಿ ದೊಡ್ಡ ಯಶಸ್ಸು ಸಿಗಲಿದೆ. ವಿವಾಹಿತರಿಗೆ ಹೊಸವರ್ಷವು ಮಿಶ್ರಫಲಗಳನ್ನು ತರಲಿದೆ. ಸಂಗಾತಿಯೊಡನೆ ಹಾಗೂ ಹಾಗೂ ಅತ್ತೆ-ಮಾವಂದಿರೊಂದಿಗೆ ವಾದ-ವಿವಾದಗಳು ತಲೆದೋರಲಿದ್ದು ಏಪ್ರಿಲ್‌ ತಿಂಗಳವರೆಗೂ ಮುಂದುವರೆಯಬಹುದು. ಏಪ್ರಿಲ್‌ ತಿಂಗಳಲ್ಲಿ ಗುರು ನಿಮ್ಮ ರಾಶಿಯಿಂದ 2ನೇ ಮನೆಯಲ್ಲಿ ಸಂಚರಿಸುವುದರಿಂದ ಅವಿವಾಹಿತರಿಗೆ ಕಂಕಣಭಾಗ್ಯ ಒದಗುವ ಸಾಧ್ಯತೆಯಿದೆ.

ಮೀನ ರಾಶಿ (Pisces): ಹೊಸವರ್ಷವು ಈ ರಾಶಿಯವರಿಗೆ ಬಹುತೇಕ ಅತ್ಯಂತ ಶುಭಫಲ ನೀಡಲಿದೆ. ವರ್ಷದ ಹೆಚ್ಚಿನ ಸಮಯ ನೀವು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರಲಿದ್ದೀರಿ. ಶನಿಯ ಏಪ್ರಿಲ್‌ ಗೋಚಾರವು ಹೊಸ ಆದಾಯದ ಮೂಲಗಳನ್ನು ತರಲಿದೆ. ಆಗಸ್ಟ್‌ನಿಂದ ಅಕ್ಟೋಬರ್‌ವರೆಗಿನ ಸತತ ಗ್ರಹಗಳ ಸ್ಥಾನಪಲ್ಲಟಗಳಿಂದ ಆರ್ಥಿಕ ಏಳು-ಬೀಳುಗಳನ್ನು ಕಾಣಲಿದ್ದೀರಿ. ಉದ್ಯೋಗದಲ್ಲಿ ನಿರೀಕ್ಷಿತ ಫಲಗಳು ದೊರೆಯಲಿವೆ. ನಿಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಇರಲಿದೆ. ಬಡ್ತಿ ಹಾಗೂ ವೇತನದಲ್ಲಿ ಹೆಚ್ಚಳದ ಸಾಧ್ಯತೆಯೂ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಮೇ ಮತ್ತು ಆಗಸ್ಟ್‌ ತಿಂಗಳ ನಡುವೆ ನಿಮ್ಮ ತಾಯಿಯ ಆರೋಗ್ಯ ಸುಧಾರಿಸಲಿದೆ. ಮೇ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ಶನಿಯ ನಿಮ್ಮ ರೋಗಸ್ಥಾನವನ್ನು ಪೂರ್ಣದೃಷ್ಟಿಯಿಂದ ನೋಡುವುದರಿಂದ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಮಂಗಳ, ಶುಕ್ರ, ಹಾಗೂ ಗುರುಗ್ರಹರ ಯುತಿಯು ಮೇ ತಿಂಗಳಲ್ಲಿ ಉಂಟಾಗುವುದರಿಂದ ನಿಮ್ಮ ಕುಟುಂಬದ ಹಾಗೂ ಹಿರಿಯರ ಸದಾಶಯ ಹಾಗೂ ಆಶೀರ್ವಾದಗಳು ಲಭಿಸಲಿವೆ. ವಿವಾಹಿತರಿಗೆ ಈ ವರ್ಷ ಶುಭದಾಯಕವಾಗಿದೆ, ವರ್ಷಾರಂಭವು ಅತ್ಯಂತ ಶುಭವಾಗಿದೆ. ಏಪ್ರಿಲ್‌ 21ರ ನಂತರ ವಿವಾಹಿತರಲ್ಲಿ ಹೊಸತನ ಕಾಣಲಿದೆ. ಪ್ರೇಮಿಗಳಿಗೆ ಈ ವರ್ಷ ಮಿಶ್ರಫಲ ನೀಡಲಿದೆ. ಬುಧನ ಗೋಚಾರ ಹಾಗೂ ದೃಷ್ಟಿಗಳಿಂದಾಗಿ ಪ್ರೇಮ ಸಂಬಂಧಗಳಲ್ಲಿ ಅನಿರೀಕ್ಷಿತವಾಗಿ 3ನೇ ವ್ಯಕ್ತಿಯ ಪ್ರವೇಶದ ಸಾಧ್ಯತೆಯಿದೆ. ಸೆಪ್ಟೆಂಬರ್‌ ಹಾಗೂ ನವೆಂಬರ್‌ ತಿಂಗಳುಗಳ ನಡುವೆ ಸಣ್ಣ-ಪುಟ್ಟ ವಿಷಯಗಳಿಗೆ ವಾದ-ವಿವಾದ ಮಾಡಿಕೊಳ್ಳಬೇಡಿ, ಮಾತಿನ ಮೇಲೆ ಗಮನವಿರಲಿ. 

ಇದನ್ನೂ ಓದಿ: IPL 2022 Retained Players : ಯಾರು ಇನ್‌, ಯಾರು ಔಟ್‌ : ಇಲ್ಲಿದೇ ರಿಟೈನ್ಡ್‌ ಆಟಗಾರರ ಕಂಪ್ಲೀಟ್‌ ಡಿಟೈಲ್ಸ್‌

ಇದನ್ನೂ ಓದಿ: Sonu Sood : ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸೋನುಸೂದ್‌ ಸಹೋದರಿ ಮಾಳವಿಕಾ ಸೂದ್

(New year 2022 horoscope predictions Things likely to happen in your life)

RELATED ARTICLES

Most Popular