ಬುಧವಾರ, ಏಪ್ರಿಲ್ 30, 2025
Homehoroscopeನಿತ್ಯಭವಿಷ್ಯ : 11-04-2020

ನಿತ್ಯಭವಿಷ್ಯ : 11-04-2020

- Advertisement -

ಮೇಷರಾಶಿ
ವೃತ್ತಿರಂಗದಲ್ಲಿ ದೃಢ ನಿರ್ಧಾರಗಳು ಮುನ್ನಡೆಗೆ ಸಾಧಕವಾಗಲಿದೆ. ಉದ್ಯೋಗಿಗಳಿಗೆ ಸ್ಥಾನ ಬದಲಾವಣೆ ಕಂಡುಬಂದೀತು. ವಿದ್ಯಾರ್ಥಿಗಳಿಗೆ ಅಚ್ಚರಿಯ ರೀತಿಯಲ್ಲಿ ಅಭಿವೃದ್ಧಿ ಇರುತ್ತದೆ. ಆಕಸ್ಮಿಕ ದುರ್ಘಟನೆ, ಮನಸ್ಸಿಗೆ ನೋವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ.

ವೃಷಭರಾಶಿ
ದಾಂಪತ್ಯದಲ್ಲಿ ನಿರಾಸಕ್ತಿ, ಪರಿಚಯಸ್ಥರಿಂದ ಉದ್ಯೋಗದ ಭರವಸೆ, ವಾಹನ ಖರೀದಿ ಯಾ ನಿವೇಶನ ಖರೀದಿಗೆ ಅನುಕೂಲವಾದೀತು. ವಿದ್ಯಾರ್ಥಿಗಳಿಗೆ ಸುವಾರ್ತಾ ಶ್ರವಣ ಭಾಗ್ಯವಿದೆ. ಹಳೆಯ ಮಿತ್ರತ್ವ ಪುನಃಹ ಚಿಗುರಲಿದೆ. ಸಂಗಾತಿಯಿಂದ ಅದೃಷ್ಟ ಒಲಿಯುವುದು, ನೆಮ್ಮದಿಯ ದಿನ ನಿಮ್ಮದಾಗುವುದು.

ಮಿಥುನರಾಶಿ
ವ್ಯಾಪಾರ, ವ್ಯವಹಾರಗಳು ಸಾಧಾರಣ ರೀತಿಯಲ್ಲಿ ಅನುಕೂಲವಾಗಲಿದೆ. ಅನಿರೀಕ್ಷಿತವಾಗಿ ಸಾಲ ಮಾಡುವ ಪರಿಸ್ಥಿತಿ, ಕುಟುಂಬ ಸಮೇತ ಪ್ರಯಾಣ ಸಾಧ್ಯತೆ, ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಒದಗಿ ಬಂದಾವು. ಚರ್ಮಬಾಧೆ, ಅಲರ್ಜಿಯಂತಹ ಪೀಡೆ ಕಂಡುಬಂದಾವು. ನೀವಾಡುವ ಮಾತಿನಿಂದ ಅನರ್ಥ, ಶತ್ರುತ್ವ ಹೆಚ್ಚಾಗುವುದು.

ಕಟಕರಾಶಿ
ಪ್ರೇಮ ವಿಚಾರದಲ್ಲಿ ಅಡೆತಡೆ, ಧನಾಗಮನವಿಲ್ಲದ ಕಾರಣ ಖರ್ಚು ವೆಚ್ಚಗಳಲ್ಲಿ ಮಿತಿ ಇರಲಿ. ವೈಯಕ್ತಿಕ ತಪ್ಪುಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ವ್ಯಾಪಾರ, ವ್ಯವಹಾರಗಳನ್ನು ಜಾಗ್ರತೆಯಿಂದ ನಡೆಸಿಕೊಂಡು ಹೋದರೆ ಉತ್ತಮ. ಕೀಲು ನೋವು, ಗ್ಯಾಸ್ಟ್ರಿಕ್ ಸಮಸ್ಯೆ, ಮಕ್ಕಳಿಂದ ಬೇಸರ, ಸ್ನೇಹಿತರಿಂದ ಭಾವನೆಗಳಗೆ ಧಕ್ಕೆ.

ಸಿಂಹರಾಶಿ
ಶತ್ರುಗಳಿಂದ ತೊಂದರೆ, ಮನೆ ವಾತಾವರಣದಲ್ಲಿ ಅಶಾಂತಿ, ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿನ ರೀತಿಯಲ್ಲಿ ವೃದ್ಧಿಸಿಕೊಂಡಲ್ಲಿ ನಿಮ್ಮ ಮನೋಕಾಮನೆಗಳು ನೆರವೇರಲಿದೆ. ವಾಹನ ಖರೀದಿಯ ಚಿಂತನೆ ಸದ್ಯದಲ್ಲೇ ಕಾರ್ಯಗತವಾದೀತು. ಆರೋಗ್ಯದಲ್ಲಿ ಜಾಗ್ರತೆ. ದಾಂಪತ್ಯದಲ್ಲಿ ಕಿರಿಕಿರಿ, ಸ್ನೇಹಿತರಿಂದ ದೂರವಾಗಲು ಚಿಂತನೆ, ವಿಕೃತ ಆಸೆ ಆಕಾಂಕ್ಷೆಗಳಿಂದ ತೊಂದರೆ.

ಕನ್ಯಾರಾಶಿ
ನೆರೆಹೊರೆಯವರಿಂದ ಅನುಕೂಲ, ಕೋರ್ಟು ಕಚೇರಿಯ ಕಾರ್ಯಭಾಗದಲ್ಲಿ ಆಗಾಗ ಹಿನ್ನಡೆ ಇರುತ್ತದೆ. ಮನಸ್ಸು ಉದ್ವೇಗ ಹಾಗೂ ಅಸಮಾಧಾನದಿಂದ ತೊಳಲಾಡಲಿದೆ. ಶಾಂತಿಚಿತ್ತದಿಂದ ಆಲೋಚಿಸಿದ್ದಲ್ಲಿ ತಿಳುವಳಿಕೆ ಬಂದೀತು. ಬಂಧುಗಳಲ್ಲಿ ವೈರತ್ವ, ಮಕ್ಕಳಿಗೆ ಅನುಕೂಲ, ಉನ್ನತ ಸ್ಥಾನಮಾನದ ಯೋಗ.

ತುಲಾರಾಶಿ
ದೀರ್ಘಕಾಲದ ಸಮಸ್ಯೆಗೆ ಮುಕ್ತಿ, ವೃತ್ತಿರಂಗದಲ್ಲಿ ಅಡಚಣೆಗಳು ತೋರಿಬಂದು ಮುನ್ನಡೆಗೆ ಭಾದಕವಾಗುತ್ತದೆ. ಆಪ್ತರ ಸಲಹೆಗಳಿಗೆ ಕಿವಿಗೊಡಿರಿ. ಸಾಂಸಾರಿಕ ವಿಷಯದತ್ತ ಹೆಚ್ಚಿನ ಗಮನಹರಿಸುವುದು ಮುಖ್ಯವಾಗಿದೆ. ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಸ್ಥಿರಾಸ್ತಿ ಖರೀದಿಗೆ ಸಹಕಾರ, ಸೈಟ್ ಮಾರಾಟದಿಂದ ಧನಾಗಮನ, ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ.

ವೃಶ್ಚಿಕರಾಶಿ
ನಿಮಗೆ ಹೆಚ್ಚಿನ ಸಮಸ್ಯೆಗಳನ್ನು ಒಡ್ಡಲು ವಿರೋಧಿಗಳು ಯತ್ನಿಸಲಿದ್ದಾರೆ. ಯಾವುದೇ ಕೆಲಸವನ್ನು ಅರ್ಧಕ್ಕೆ ನಿಲ್ಲಿಸದೆ ಧೈರ್ಯದಿಂದ ಮುನ್ನಡೆಸಿಕೊಂಡು ಹೋಗಿರಿ. ಜಯವು ನಿಮ್ಮದಾದೀತು. ವಾಹನದಿಂದ ತೊಂದರೆ, ಪೆಟ್ಟಾಗುವ ಸಾಧ್ಯತೆ, ಸ್ವಯಂಕೃತ ಅಪರಾಧದಿಂದ ಅವಕಾಶ ಕೈತಪ್ಪುವುದು, ಬಂಧುಗಳ ಏಳಿಗೆಗೆ ಅಸೂಯೆ, ಮನಸ್ಸಿನಲ್ಲಿ ಅಶಾಂತಿ-ಆತಂಕ.

ಧನಸ್ಸುರಾಶಿ
ಅಧಿಕವಾದ ನಿದ್ರೆ, ಆತ್ಮೀಯರು ದೂರವಾಗುವ ಸಾಧ್ಯತೆ, ವಿಶ್ರಾಂತಿಗೆ ದೇಹವು ಬಯಸಿದರೂ ಅದು ಸಾಧ್ಯವಾಗದೆ ಹೆಚ್ಚುವರಿ ಕೆಲಸ ಮಾಡಬೇಕಾಗುತ್ತದೆ. ಕುಟುಂಬಿಕ ಒತ್ತಡಗಳು ಆಗಾಗ ಭಾದಿಸಲಿದೆ. ಮನಸ್ಸಿಗೆ ಬೇಸರ ಮಾಡುವ ಸಂದರ್ಭ ಬಂದೀತು. ಕುಟುಂಬದಲ್ಲಿ ಸಂಕಷ್ಟ, ಆಕಸ್ಮಿಕ ದುರ್ಘಟನೆ, ಮಾನಸಿಕ ವ್ಯಥೆ.

ಮಕರರಾಶಿ
ನಿಮ್ಮ ಒಳ್ಳೆಯತನವನ್ನು ದುರುಪಯೋಗ ಮಾಡುವ ಪ್ರಸಂಗ ಬಂದೀತು. ವೃತ್ತಿರಂಗದಲ್ಲಿ ಹೆಚ್ಚಿನ ಕಷ್ಟವನ್ನು ಅನುಭವಿಸುವಿರಿ. ಆರ್ಥಿಕ ಅಡಚಣೆಗಳು ಆಗಾಗ ಕಂಡುಬರುವುದು. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಆಸೆಗಳು ಈಡೇರುವ ಸಾಧ್ಯತೆ, ಮಕ್ಕಳಿಂದ ಅನುಕೂಲ, ನೆಮ್ಮದಿ-ಶುಭಕರವಾದ ದಿನ.

ಕುಂಭರಾಶಿ
ಅಧಿಕವಾದ ಉಷ್ಣ, ರೋಗ ಬಾಧೆ, ನೂರಾರು ವಿಚಾರಗಳು ತಾಕಲಾಟವನ್ನು ಸೃಷ್ಟಿಸಲಿದೆ. ಇವು ಆತಂಕ, ಕೋಪ ತಾಪಗಳಿಗೆ ಕಾರಣವಾದೀತು. ಮನಸ್ಸು ಕೂಡಾ ನಿಯಂತ್ರಣಕ್ಕೆ ಸಿಕ್ಕದ ಕುದುರೆಯಾದೀತು. ತಾಳ್ಮೆ ಇರಲಿ. ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ತೊಂದರೆ, ಈ ದಿನ ನಷ್ಟ ಪ್ರಮಾಣ ಹೆಚ್ಚಾಗುವುದು.

ಮೀನರಾಶಿ
ಸಂತಾನ ದೋಷ, ತಂದೆ-ಮಕ್ಕಳಲ್ಲಿ ಶತ್ರುತ್ವ, ಬಂಧುಗಳಿಂದ ಅವಕಾಶ ವಂಚನೆ, ನಿಮ್ಮ ಸುತ್ತಮುತ್ತ ಇರುವ ನೆರೆಹೊರೆಯವರು ನಿಮ್ಮನ್ನು ಸಂಶಯ ದೃಷ್ಟಿಯಿಂದ ಕಾಣಬಹುದು. ಎಲ್ಲರೊಂದಿಗೆ ಬೆರೆತು ವರ್ತಿಸಬೇಕಾದ ಸಮಯವಿದು. ಏಕಾಂಗಿತನ ಕಾಡಲಿದೆ. ಗೌರವಕ್ಕೆ ಧಕ್ಕೆಯಾಗುವ ಪರಿಸ್ಥಿತಿ ನಿರ್ಮಾಣ, ಮಾನಸಿಕ ಚಿಂತೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular