ಕೊರೊನಾ ಭೀತಿಯ ನಡುವಲ್ಲೇ ಗುಡ್ ನ್ಯೂಸ್ : 6 ದಿನಗಳಿಂದ ಉಡುಪಿ, ದ.ಕ.ದಲ್ಲಿಲ್ಲ ಹೊಸ ಕೊರೊನಾ ಕೇಸ್

0

ಮಂಗಳೂರು : ಕೊರೊನಾ ಮಹಾಮಾರಿ ಕರಾವಳಿ ಜನರಲ್ಲಿ ಭೀತಿಯನ್ನು ಹುಟ್ಟಿಸಿದೆ. ರಾಜ್ಯಕ್ಕೆ ಕೊರೊನಾ ಮಹಾಮಾರಿ ಅಬ್ಬರ ಶುರುವಾಗುತ್ತಲೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆಯ ಹೆಚ್ಚಳವಾಗಿತ್ತು. ಆದ್ರೀಗ ಕರಾವಳಿಗರು ನಿಟ್ಟುಸಿರು ಬಿಡುವ ಸುದ್ದಿ ಹೊರಬಿದ್ದಿದೆ. ಕಳೆದ 6 ದಿನಗಳಿಂದಲೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಕೇಸುಗಳು ಪತ್ತೆಯಾಗಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 12 ಮಂದಿ ಕೊರೊನಾ ಪೀಡಿತರಿದ್ದು, ಈ ಪೈಕಿ ಈಗಾಗಲೇ ನಾಲ್ಕು ಮಂದಿ ಕೊರೊನಾ ಸೋಂಕಿತರು ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆದ್ರಿಂದು 21 ವರ್ಷದ ಕೊರೊನಾ ಪೀಡಿತ ಕೂಡ ಗುಣಮುಖರಾಗಿ ಇಂದು ಡಿಸ್ಚಾರ್ಜ್ ಆಗಿದ್ದಾರೆ.

ದುಬೈನಿಂದ ಆಗಮಿಸಿದ್ದ 21 ವರ್ಷದ ಯುವಕನನ್ನು ಮಾರ್ಚ್ 21ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತದನಂತರದಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಐಸೋಲೇಶಷನ್ ವಾರ್ಡಿನಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಯುವಕ ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಹೀಗಾಗಿ ಇನ್ನು 7 ಮಂದಿ ಕೊರೊನಾ ಪೀಡಿತರು ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಉಡುಪಿ ಜಿಲ್ಲೆಯಲ್ಲಿ 3 ಮಂದಿ ಕೊರೊನಾ ಪೀಡಿತರಿದ್ದಾರೆ. ಮೂವರೂ ಕೂಡ ಗುಣಮುಖರಾಗಿದ್ದು, ಅತೀ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದ್ದಾರೆ ಅಂತಾ ಜಿಲ್ಲಾಡಳಿತ ಹೇಳಿದೆ. ಕಳೆದ 6 ದಿನಗಳಿಂದಲೂ ಎರಡೂ ಜಿಲ್ಲೆಗಳಲ್ಲಿಯೂ ಹೊಸ ಕೇಸುಗಳು ದಾಖಲಾಗದೇ ಇರೋದು ಕರಾವಳಿಯ ಜನರಿಗೆ ನೆಮ್ಮದಿಯನ್ನು ತರಿಸಿದೆ.

Leave A Reply

Your email address will not be published.