ಏಪ್ರಿಲ್ 30 ವರೆಗೆ ಲಾಕ್ ಡೌನ್ ವಿಸ್ತರಣೆ !?: ಹೇಗಿದೆ ಗೊತ್ತಾ ‘ನಮೋ’ ಪ್ಲ್ಯಾನ್ ?

0

ನವದೆಹಲಿ : ದೇಶದಾದ್ಯಂತ ಎಪ್ರಿಲ್ 14ರ ವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. 21 ದಿನಗಳ ಲಾಕ್ ಡೌನ್ ಆದೇಶ ಮುಗಿಯುತ್ತಾ ಇಲ್ಲಾ ಮುಂದುವರಿಯುತ್ತಾ ಅನ್ನೋ ಯೋಚನೆಯಲ್ಲಿದ್ದಾರೆ ಭಾರತೀಯರು. ಆದರೆ ಕೇಂದ್ರ ಸರಕಾರದ ಉನ್ನತ ಮೂಲಗಳ ಪ್ರಕಾರ ಕೊರೊನಾ ವೈರಸ್ ತಡೆಗಾಗಿ ವಿಧಿಸಲಾಗಿರುವ ಲಾಕ್ ಡೌನ್ ಎಪ್ರಿಲ್ 30ರ ವರೆಗೆ ವಿಸ್ತರಣೆಯಾಗೋದು ಬಹುಕೇತ ಪಕ್ಕಾ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಇಂದು ರಾತ್ರಿ ಅಧಿಕೃತವಾಗಿ ಘೋಷಣೆ ಮಾಡೋ ಸಾಧ್ಯತೆಯಿದೆ.

ಭಾರತದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡೋದಕ್ಕೆ ಆರಂಭವಾಗುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25 ರಿಂದ ಎಪ್ರಿಲ್ 14 ವರೆಗೆ ಲಾಕ್ ಡೌನ್ ಘೋಷಣೆ ಮಾಡಿದ್ದರು.

ಆದ್ರೆ ಇದೀಗ ಮಹಾರಾಷ್ಟ್ರ, ದೆಹಲಿ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಕಾಡ್ಗಿಚ್ಚಿನಂತೆ ಹರಡುತ್ತಿದೆ. ಈ ಹಿನ್ನೆಲೆಯಲ್ಲೀಗ ಕೇಂದ್ರ ಸರಕಾರ ಇನ್ನೂ ಎರಡು ವಾರಗಳ ಅಂದ್ರೆ ಎಪ್ರಿಲ್ 30ರ ವರೆಗೆ ವಿಸ್ತರಣೆ ಮಾಡಲಾಗುತ್ತದೆ.

ಹಾಗಾದ್ರೆ ಸರಕಾರ ಲಾಕ್ ಡೌನ್ ವಿಚಾರದಲ್ಲಿ ಯಾವೆಲ್ಲಾ ಪ್ಲ್ಯಾನ್ ರೂಪಿಸಿಕೊಂಡಿದೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.
ಎಪ್ರಿಲ್ 30ರ ನಂತರ ಲಾಕ್ ಡೌನ್ ಆದೇಶ ಮುಕ್ತಾಯಗೊಂಡರೂ ಸಾರ್ವಜನಿಕ ಜೀವನ ಸಹಜ ಸ್ಥಿತಿಗೆ ಮರಳುವುದು ಸಾಧ್ಯವಿಲ್ಲ. ಲಾಕ್ ಡೌನ್ ಆದೇಶ ಮುಕ್ತಾಯಗೊಂಡ ಒಂದು ವಾರಗಳ ಬಳಿಕ ಹಣ್ಣು, ತರಕಾರಿ ಮಾರುಕಟ್ಟೆಗಳು ಕಾರ್ಯನಿರ್ವಹಣೆ ಮಾಡಲಿವೆ.

ಧಾರ್ಮಿಕ ಸ್ಥಳಗಳನ್ನ ಪುನರಾರಂಭ ಮಾಡುವ ಪ್ಲ್ಯಾನ್ ರೂಪಿಸಿಕೊಂಡಿದೆ. ಇನ್ನು ಮೇ.15ರ ನಂತರವೇ ದೇಶೀಯ ವಿಮಾನಯಾನ ಸೇವೆ ಆರಂಭವಾಗಲಿದ್ದು, ಮೇ ಕೊನೆಯ ವಾರದಲ್ಲಿ ಥಿಯೇಟರ್, ಮಾಲ್ ಗಳು ತೆರೆಯಲಿವೆ.

ಇನ್ನು ಮೇ ಅಂತ್ಯಕ್ಕೆ ಶೈಕ್ಷಣಿಕ ಸಂಸ್ಥೆಗಳು ಪುನರಾರಂಭಗೊಳ್ಳಲಿವೆ. ದೇಶದಲ್ಲಿ ಸಂಪೂರ್ಣವಾಗಿ ಕೊರೊನಾ ನಿಯಂತ್ರಣಕ್ಕೆ ಬಾರದ ಹೊರತು ಕೇಂದ್ರ ಸರಕಾರ ಅಂತರಾಷ್ಟ್ರೀಯ ವಿಮಾನ ಸೇವೆಯನ್ನು ಆರಂಭಿಸೋ ಪ್ಲ್ಯಾನ್ ಇಲ್ಲ.

ಹೀಗಾಗಿ ಎಪ್ರಿಲ್ 30ರ ನಂತರ ಲಾಕ್ ಡೌನ್ ಆದೇಶ ಅಂತ್ಯಗೊಂಡರೂ ಕೂಡ, ಬರೋಬ್ಬರಿ 2 ತಿಂಗಳ ನಂತರವಷ್ಟೇ ಅಂತರಾಷ್ಟ್ರೀಯ ವಿಮಾನಯಾನ ಸೇವೆ ಆರಂಭವಾಗೋ ಸಾಧ್ಯತೆಯಿದೆ. ಲಾಕ್ ಡೌನ್ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

Leave A Reply

Your email address will not be published.