ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 15-03-2020

ನಿತ್ಯಭವಿಷ್ಯ : 15-03-2020

- Advertisement -

ಮೇಷರಾಶಿ
ಹೊಸ ಜವಾಬ್ದಾರಿ ಹೆಗಲೇರಲಿದೆ. ವೃತ್ತಿರಂಗದಲ್ಲಿ ಕಾರ್ಯದಕ್ಷತೆಯಿಂದ ಅಧಿಕಾರ ಪ್ರಾಪ್ತಿಯಾದೀತು. ಕುಟುಂಬದೊಡನೆ ದೂರ ಪ್ರಯಾಣ, ರಾಜಕೀಯದಲ್ಲಿ ರಾಜಕಾರಣಿಗಳಿಗೆ ಯಶಸ್ಸು ದೊರಕಲಿದೆ. ನೆಮ್ಮದಿ ಜೀವನ, ಸಮಾರಂಭಗಳಿಗೆ ಭೇಟಿ, ಕೆಟ್ಟ ಆಲೋಚನೆ, ಆರೋಗ್ಯದಲ್ಲಿ ತೊಂದರೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲದ ಉತ್ತಮ ಫ‌ಲವನ್ನು ಪಡೆಯಲಿದ್ದಾರೆ. ಪುಣ್ಯಕ್ಷೇತ್ರಗಳ ದರ್ಶನ.

ವೃಷಭರಾಶಿ
ಮಂಗಲಕಾರ್ಯದ ಅವಕಾಶಗಳು ಕಾರ್ಯಗತವಾಗಲಿವೆ. ಅನ್ಯ ಜನರಲ್ಲಿ ವೈಮನಸ್ಸು, ಅಲ್ಪಲಾಭ ಅಧಿಕ ಖರ್ಚು, ಗೃಹ ಸೌಖ್ಯ ಉತ್ತಮವಾಗಿದ್ದು ಆರ್ಥಿಕವಾಗಿ ಮುನ್ನಡೆ ಇರುತ್ತದೆ. ವ್ಯಾಪಾರದಲ್ಲಿ ಸಾಧಾರಣ ಲಾಭ, ವಿವಾಹ ಯೋಗ, ದುಖಃ ಪ್ರಸಂಗಗಳು, ಪಾಪಬುದ್ಧಿ. ವಾಯು ಪ್ರಕೋಪದಿಂದ ಅನಾರೋಗ್ಯ ತೋರಿ ಬಂದೀತು. ಜಾಗ್ರತೆ ಇರಲಿ.

ಮಿಥುನರಾಶಿ
ವೃತ್ತಿರಂಗದಲ್ಲಿ ಶತ್ರುಬಾಧೆ ಇರುತ್ತದೆ. ಕೀರ್ತಿಲಾಭ, ಗುರು ಹಿರಿಯರಲ್ಲಿ ಭಕ್ತಿ, ಕಾರ್ಯ ವಿಕಲ್ಪ, ದುಡುಕು, ಸ್ಥಳ ಬದಲಾವಣೆ, ನೂತನ ಕೆಲಸ ಕಾರ್ಯಗಳು ಅಡೆತಡೆಗಳಿಂದ ನಡೆಯಲಿವೆ. ಪರರಿಗೆ ವಂಚನೆ, ದ್ರವ್ಯನಾಶ. ಸುಖದುಃಖಗಳು ಮಿಶ್ರಫ‌ಲ ದಾಯಕವಾಗಲಿವೆ. ಹಿರಿಯರ ಶುಶ್ರೂಷೆಗಾಗಿ ವಿಶೇಷ ಖರ್ಚು.

ಕಟಕರಾಶಿ
ಆಗಾಗ ಸಂಚಾರಗಳು ಆರ್ಥಿಕ ವ್ಯಯಕ್ಕೆ ಕಾರಣವಾದೀತು. ಯತ್ನ ಕಾರ್ಯಗಳಲ್ಲಿ ವಿಳಂಬ, ರಾಜಕೀಯದಲ್ಲಿ ಏರುಪೇರಾಗಿ ಆತಂಕಕ್ಕೆ ಕಾರಣವಾಗುತ್ತದೆ. ದೇವರ ಮೊರೆ ಹೋಗಿರಿ.ಕುಟುಂಬ ಸೌಖ್ಯ, ಹಿತ ಶತೃಗಳಿಂದ ಭೋದನೆ, ಅಪವಾದಗಳಿಂದ ಎಚ್ಚರ, ಮಾತೃ ಪಿತೃಗಳಲ್ಲಿ ವಾತ್ಸಲ್ಯ.ನಿಮ್ಮ ಬೇಕುಗಳ ಪೂರೈಕೆಗಾಗಿ ಹೆಣಗುತ್ತಾ ಸೋಲುವ ಕಾಲವಿದು.

ಸಿಂಹರಾಶಿ
ವೃತ್ತಿರಂಗದಲ್ಲಿ ಅವಶ್ಯಕ ನಿರ್ಧಾರಕೈಗೊಳ್ಳುವಿರಿ. ಸ್ತ್ರೀ ಲಾಭ, ಪುಷ್ಪಹಾರದಿಂದ ಸನ್ಮಾನ, ಆಗಾಗ ವಿರೋಧಿಗಳ ಕಾಟವಿದ್ದರೂ ಎದುರಿಸುವ ಭೀತಿ ನಿಮಗಿರುತ್ತದೆ. ಅಧಿಕಾರಿಗಳೊಂದಿಗೆ ಕಲಹ. ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕ ಲಾಭ ಹೂಡಿಕೆಗಳಿಗೆ ಸಾಧಕವಾಗುತ್ತದೆ. ಇಷ್ಟಾರ್ಥ ಸಿದ್ಧಿ, ಯಾರನ್ನೂ ನಂಬಬೇಡಿ, ಅಲ್ಪ ಲಾಭ ಅಧಿಕ ಖರ್ಚು, ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶವನ್ನು ಪಡೆಯಲಿದ್ದಾರೆ.

ಕನ್ಯಾರಾಶಿ
ಉದ್ಯೋಗರಂಗದಲ್ಲಿ ಅನಾವಶ್ಯಕ ನಿಷ್ಠುರವಿರುತ್ತದೆ. ವೃಥಾ ತಿರುಗಾಟ, ಕೈಹಾಕಿದ ಕೆಲಸದಲ್ಲಿ ಪ್ರಗತಿ, ಗುರುವಿನ ಪ್ರತಿಕೂಲತೆಯಿಂದ ಸಿಡುಕು ವಿಫ‌ಲ ಮನೋರಥಗಳಿದ್ದರೂ ಕ್ರಮೇಣ ಅನುಗ್ರಹವಾಗುತ್ತದೆ. ಅನಾರೋಗ್ಯ, ನಂಬಿದವರಿಂದ ಮೋಸ, ಧನನಷ್ಟ, ವಾಹನ ಸಂಚಾರದಿಂದ ತೊಂದರೆ. ಸಂಚಾರ ಕ್ಲೇಶ ತೋರಿ ಬಂದು ಧನವ್ಯಯವಾದೀತು.

ತುಲಾರಾಶಿ
ಸ್ತ್ರೀ ಸಮಾನ ವ್ಯಕ್ತಿಗಳಿಂದ ಶುಭ, ಲಾಟರಿ, ಕಮಿಶನ್‌ ವ್ಯವಹಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಭೋಗವಸ್ತು ಪ್ರಾಪ್ತಿ, ಧನಲಾಭ, ಬಾಕಿ ವಸೂಲಿ, ವಾಹನ ಖರೀದಿ, ಉದ್ಯೋಗದಲ್ಲಿ ಕಿರಿಕಿರಿ. ವಾಹನದಲ್ಲಿ ಕಾರ್ಯಸಿದ್ಧಿಯಾದರೂ ಸಮಾಧಾನ ಸಿಗದು. ಶೇರು, ಸಟ್ಟಾ, ಬುದ್ಧಿ ಜೀವಿಗಳಿಗೆ ಅಪಮಾನ, ಅಪವಾದ ಭೀತಿ ಇರುತ್ತದೆ.

ವೃಶ್ವಿಕರಾಶಿ
ಉದ್ಯೋಗಿಗಳಿಗೆ ನೂತನ ಉದ್ಯೋಗದ ಲಾಭದಿಂದ ಸಂತಸ. ಮನೆಯಲ್ಲಿ ಮಂಗಲ ಕಾರ್ಯಗಳ ಸಿದ್ಧತೆ ನಡೆಯಲಿದೆ. ಯತ್ನ ಕಾರ್ಯದಲ್ಲಿ ವಿಘ್ನ, ಅನಾರೋಗ್ಯ, ಋಣಭಾದೆ, ಮಾತಿನಲ್ಲಿ ಚಕಮಕಿ, ಸುತ್ತಾಟ, ವಾಹನ ಅಪಘಾತ ಸಾಧ್ಯತೆ. ಉನ್ನತ ವ್ಯಾಸಂಗಕ್ಕೆ ಸಕಾಲ. ವ್ಯಾಪಾರ, ವ್ಯವಹಾರಿಗಳಿಗೆ ಇಷ್ಟಾರ್ಥ ಸಿದ್ಧಿಯಾಗಲಿದೆ.

ಧನಸ್ಸುರಾಶಿ
ಎಣಿಕೆಯಂತೆ ಕೆಲಸಗಳು ಸಾಗಲಿವೆ. ಆತ್ಮೀಯರ ಆಗಮನದಿಂದ ಮನಃಶಾಂತಿ. ಉದ್ಯಅಮದಲ್ಲಿ ಶತ್ರುಪೀಡೆಯಿಂದ ಕಿರಿಕಿರಿ ಇರುತ್ತದೆ. ಮಾನಸಿಕ ನೆಮ್ಮದಿ, ಆಧ್ಯಾತ್ಮದ ವಿಚಾರದಲ್ಲಿ ಹಿರಿಯರ ಬೆಂಬಲ, ಪ್ರತಿಭೆಗೆ ತಕ್ಕ ಫಲ, ದೇಹಾರೋಗ್ಯದಲ್ಲಿ ಹೆಚ್ಚಿನ ಗಮನ ಹರಿಸಿರಿ. ನೌಕರರ ಸಹಕಾರದಿಂದ ಕಾರ್ಯಸಿದ್ಧಿಯಾಗುವುದು.

ಮಕರರಾಶಿ
ಉದ್ಯೋಗದಲ್ಲಿ ಕಿರಿಕಿರಿ, ಸಣ್ಣ ವಿಷಯಗಳಿಂದ ಕಲಹ. ದೂರ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಗೃಹ ನಿರ್ಮಾಣ ಕಾರ್ಯದಂತಹ ಕೆಲಸಗಳಿಗೆ ಅಧಿಕ ರೀತಿಯಲ್ಲಿ ಧನವ್ಯಯವಾದೀತು. ಮಾತೃವಿನಿಂದ ನೆರವು, ಹಣ ಬಂದರೂ ಉಳಿಯುವುದಿಲ್ಲ, ತೀರ್ಥಯಾತ್ರೆ, ಶಕ್ತಿ ಮೀರಿ ದುಡಿಯಿರಿ. ಕಾರ್ಯಸಾಧನೆಯು ನಿಶ್ಚಿತ. ಆರ್ಥಿಕ ಸ್ಥಿತಿಯು ಉತ್ತಮ.

ಕುಂಭರಾಶಿ
ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಮಾನಸಿಕ ನೆಮ್ಮದಿ, ಹೊಸ ವಾಹನದ ಖರೀದಿಯ ಸಾಧ್ಯತೆ ಇರುತ್ತದೆ. ದೂರ ಸಂಚಾರವಿದೆ.ಅಮೂಲ್ಯ ವಸ್ತು ಖರೀದಿ, ಸ್ಥಳ ಬದಲಾವಣೆ, ಅಧಿಕ ಧನವ್ಯಯ, ಅಕಾಲ ಭೋಜನ. ಅನೇಕ ಬಗೆಯ ಖರ್ಚುವೆಚ್ಚಗಳನ್ನು ಅನುಭವಿಸಲಿದ್ದೀರಿ. ಪತ್ನಿಯ ಪ್ರೀತಿ, ಸಂಯೋಗದೊಡನೆ ತೊಡಕು, ತೊಂದರೆಗಳು ಮನಸ್ಸಿಗೆಬಾರದು.

ಮೀನರಾಶಿ
ಅವಿವೇಕದ ವರ್ತನೆಗಳಿಂದ ಮನೋವ್ಯಾಕುಲತೆ ಹೆಚ್ಚಲಿದೆ. ವ್ಯಾಪಾರ, ವ್ಯವಹಾರವು ಹೋಟೆಲ್‌ ಮುಂತಾದ ಉದ್ಯಮಕ್ಕೆ ಹೆಚ್ಚಿನ ಲಾಭವಿದೆ. ಪದೇ ಪದೇ ಅನಾರೋಗ್ಯವು ಮನಸ್ಸಿಗೆ ಕಿರಿಕಿರಿ ತರಲಿದೆ. ರಾಜಕೀಯ ವ್ಯಕ್ತಿಗಳಿಂದ ಸಹಾಯ, ಷೇರು ವ್ಯವಹಾರದಲ್ಲಿ ನಷ್ಟ, ದೈವಿಕ ಚಿಂತನೆ, ಗೆಳೆಯರಿಂದ ಅನರ್ಥ, ಮನಸಿನಲ್ಲಿ ಗೊಂದಲ, ಮೃತ್ಯುಭಯ. ಮಕ್ಕಳಿಗೆ ಆಪತ್ತು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular