ರಾಜ್ಯ ಸರಕಾರದ ಆದೇಶ ಪ್ರವಾಸಿ ತಾಣಗಳಿಗಿಲ್ಲವೇ ಅನ್ವಯ ?

0

ಬೆಂಗಳೂರು : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಪ್ರವಾಸಿ ತಾಣ, ಮಾಲ್, ಸಿನಿಮಾ ಮಂದಿರ, ಶಾಲೆ, ವಿಶ್ವವಿದ್ಯಾನಿಲಯ ಕಾಲೇಜುಗಳನ್ನು ಬಂದ್ ಮಾಡಲು ಆದೇಶ ಹೊರಡಿಸಿದೆ. ಆದ್ರೀಗ ಸರಕಾರದ ನಿಯಮವನ್ನು ಸರಕಾರದ ಅಧೀನದಲ್ಲಿರೋ ಸಂಸ್ಥೆಗಳೇ ಧಿಕ್ಕರಿಸಿವೆ.

ಮೈಸೂರು ಮೃಗಾಲಯ, ಪಿಲಿಕುಳ ನಿಸರ್ಗಧಾಮ, ಪಣಂಬೂರು ಬೀಚ್, ಕುಶಾಲನಗರದ ಕಾವೇರಿ ನಿಸರ್ಗಧಾಮ, ಮೈಸೂರು ಅರಮನೆ, ಉಡುಪಿಯ ಸೈಂಟ್ ಮೇರಿಸ್, ಮಲ್ಪೆ ಬೀಚ್ ಸೇರಿದಂತೆ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳು ಎಂದಿನಂತಿಯೇ ಕಾರ್ಯನಿರ್ವಹಿಸುತ್ತಿವೆ.

ವಿದೇಶಗಳಲ್ಲಿ ಕೊರೊನಾ ಅತೀ ಹೆಚ್ಚು ಪ್ರಮಾಣದಲ್ಲಿ ಹಬ್ಬಿದ್ದು ಪ್ರವಾಸಿ ತಾಣಗಳಿಂದಾಗಿ. ಇಟಲಿಯಲ್ಲಿ ಕೊರೊನಾ ಭೀಕರವಾಗಿರೊದು ಚೀನಾದ ಪ್ರವಾಸಿಗರಿಂದ. ಪ್ರಾನ್ಸ್, ನೆದರಲ್ ಲ್ಯಾಂಡ್ ನಲ್ಲೂ ಕೊರೊನಾ ಹಬ್ಬಲು ಪ್ರವಾಸಿಗರೇ ಕಾರಣ ಅನ್ನೋದು ಬಯಲಾಗಿದೆ.

ಪ್ರವಾಸಿ ತಾಣಗಳಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಜನಸಂದಣಿಯಿರೋದ್ರಿಂದಾಗಿ ಕೊರೊನಾ ವೈರಸ್ ಬಹುಬೇಗನೇ ಹರಡೋ ಸಾಧ್ಯತೆ ಹೆಚ್ಚಳವಾಗಿದೆ. ಆದರೆ ಸರಕಾರ ಈ ಬಗ್ಗೆ ನಿರ್ಲಕ್ಷ್ಯವಹಿಸಿದೆ ಅನ್ನೋದು ಸಾರ್ವಜನಿಕರ ಅಭಿಪ್ರಾಯ.

ಸರಕಾರ ಪ್ರವಾಸಿ ತಾಣಗಳನ್ನು ನಿರ್ಬಂಧಿಸದೆ ಹೋದರೆ ಮುಂದಿನ ದಿನಗಳಲ್ಲಿ ಭೀರಕ ಪರಿಣಾಮ ಎದುರಿಸಬೇಕಾಗುತ್ತದೆ. ಅದ್ರಲ್ಲೂ ಸರಕಾರದ ಆದೇಶ ನಮಗೆ ಅನ್ವಯವಾಗುವುದಿಲ್ಲವೆಂಬಂತೆ ಸರಕಾರದ ಅಧೀನದಲ್ಲಿರುವ ಸಂಸ್ಥೆಗಳ ವರ್ತಿಸುತ್ತಿರೋದು ನಿಜಕ್ಕೂ ಶೂಚನೀಯ.

Leave A Reply

Your email address will not be published.