ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 04-06-2020

ನಿತ್ಯಭವಿಷ್ಯ : 04-06-2020

- Advertisement -

ಮೇಷರಾಶಿ
ಮಕ್ಕಳಲ್ಲಿ ಚಟುವಟಿಕೆ ಅಧಿಕ, ಅಹಂಭಾವ, ಕಾರ್ಯರಂಗದಲ್ಲಿ ಹಿತಶತ್ರುಗಳ ಉಪಟಳ ತೋರಿಬರುತ್ತದೆ. ಉದ್ಯೋಗಿಗಳಿಗೆ ವರ್ಗಾವಣೆಯ ಸೂಚನೆ ಗೋಚರಕ್ಕೆ ಬರಲಿದೆ. ಸಾಂಸಾರಿಕವಾಗಿ ಅಭಿವೃದ್ಧಿಯು ಗೋಚರಕ್ಕೆ ಬಂದು ಸಮಾಧಾನವಾದೀತು. ಒರಟುತನ ಪ್ರದರ್ಶನ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ತಲೆ ನೋವು, ಅಧಿಕ ಉಷ್ಣ, ನರದೌರ್ಬಲ್ಯ, ಪಿತ್ತ ಬಾಧೆ, ರಕ್ತದೊತ್ತಡ ಹೆಚ್ಚಾಗುವುದು, ತಾಳ್ಮೆಯಿಂದ ಕಾರ್ಯ ಯಶಸ್ಸು.

ವೃಷಭರಾಶಿ
ಪಿತ್ರಾರ್ಜಿತ ಆಸ್ತಿಗಾಗಿ ಖರ್ಚು, ಕೆಲಸ ಕಾರ್ಯ ಪ್ರಗತಿಗಾಗಿ ವೆಚ್ಚ, ಉದ್ಯೋಗ ನಿಮಿತ್ತ ಓಡಾಟ, ಎಡರು ತೊಡರುಗಳಿದ್ದರೂ ನವಚೈತನ್ಯ ಅನುಭವಕ್ಕೆ ಬರಲಿದೆ. ಧರ್ಮ ಕಾರ್ಯಗಳಲ್ಲಿ ಆಸಕ್ತಿ ಕಂಡು ಬರಲಿದೆ. ನಿಮ್ಮ ಸದಾ ಕ್ರಿಯಾಶೀಲತೆ ಮುನ್ನಡೆಗೆ ಸಾಧಕವಾದೀತು. ಆರ್ಥಿಕವಾಗಿ ಸುಧಾರಣೆ ಇದೆ. ಪುಣ್ಯಕ್ಷೇತ್ರ ದರ್ಶನ, ದೂರ ಪ್ರಯಾಣ, ಬಂಧುಗಳಿಂದ ಕಿರಿಕಿರಿ, ಮೇಲಾಧಿಕಾರಿಗಳಿಂದ ಒತ್ತಡ.

ಮಿಥುನರಾಶಿ
ಉದ್ಯಮ-ವ್ಯಾಪಾರಸ್ಥರಿಗೆ ಅಧಿಕ ಲಾಭ, ಮುಖ್ಯವಾಗಿ ಕಾರ್ಯಾನುಕೂಲಕ್ಕೆ ಅವಸರಿಸದಿರಿ. ಅವಿರತ ಚಟುವಟಿಕೆಗಳು ದೇಹಾರೋಗ್ಯದ ಮೇಲೆ ಪರಿಣಾಮ ಬೀರದಂತೆ ಜಾಗ್ರತೆ ವಹಿಸಬೇಕು. ನ್ಯಾಯಾ ಲಯದ ಕೆಲಸ ಕಾರ್ಯಗಳು ಸದ್ಯಕ್ಕೆ ಮುಕ್ತಾಯಗೊಳ್ಳದು. ಮಿತ್ರರು-ತಂದೆಯ ಬಂಧುಗಳಿಂದ ಸಾಲ, ಅರ್ಥಿಕ ಸಮಸ್ಯೆ ಬಗೆಹರಿಯುವುದು, ಕುಟುಂಬ ಸಮೇತ ದೂರ ಪ್ರಯಾಣ.

ಕಟಕರಾಶಿ
ಉದ್ಯೋಗದಲ್ಲಿ ಒತ್ತಡ, ನಾನಾ ಆಲೋಚನೆಗಳಿಂದ ನಿದ್ರಾಭಂಗ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಷ್ಟ, ರಾಜಕೀಯ ವ್ಯಕ್ತಿಗಳಿಂದ ತೊಂದರೆ, ಉದ್ಯೋಗ ಬದಲಾವಣೆಗೆ ಮನಸ್ಸು. ಕಾರ್ಯರಂಗದಲ್ಲಿ ದುಡಿಮೆ ಹೆಚ್ಚಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸ ಬೇಕಾಗುತ್ತದೆ. ದೈವಾನುಗ್ರಹ ಇರುವ ಕಾರಣ ಅನಿರೀಕ್ಷಿತ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆದು ಅಚ್ಚರಿ ತಂದಾವು. ದಿನಾಂತ್ಯಕ್ಕೆ ಶುಭವಿದೆ.

ಸಿಂಹರಾಶಿ
ಮಿತ್ರರೊಂದಿಗೆ ಪ್ರಯಾಣ, ಶನಿಯ ದೈವಾನುಗ್ರಹದಿಂದ ವ್ಯಾಪಾರ, ವ್ಯವಹಾರಗಳು ಸುಸ್ಥಿತಿಯಲ್ಲಿ ಮುಂದುವರಿದು ಆರ್ಥಿಕ ಸ್ಥಿತಿಯಲ್ಲಿ ಹೆಚ್ಚಿನ ಸಮಾಧಾನವಿರುತ್ತದೆ. ಇಷ್ಟಮಿತ್ರರ ಪ್ರೀತಿ, ವಿಶ್ವಾಸ, ಸಹಕಾರ ಮನೋಭಾವನೆಗಳಿಂದ ಸಂತಸವಿದೆ. ಅಧಿಕವಾದ ಖರ್ಚು, ಅಹಂಭಾವದ ಮಾತುಗಳನ್ನಾಡುವಿರಿ, ಮಧ್ಯಾಹ್ನ ನಂತರ ದಾಂಪತ್ಯದಲ್ಲಿ ವಿರಸ, ಅನಗತ್ಯ ಮನಃಸ್ತಾಪ.

ಕನ್ಯಾರಾಶಿ
ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಬೇಡಿಕೆ, ಈಡೇರಿಕೆಗಳ ತಾಕಲಾಟದಿಂದ ಮನಸ್ಸಿಗೆ ಕಿರಿಕಿರಿ ತೋರಿಬಂದೀತು. ಸತ್ಕಾರ ಆದಿಗಳಿಗೆ ಧನವ್ಯಯವಾದರೂ ಸಂತೃಪ್ತಿ ದೊರಕಲಿದೆ. ಗೃಹದಲ್ಲಿ ಶುಭಮಂಗಲ ಕಾರ್ಯದ ಚಿಂತೆಯು ಕಾಡಲಿದೆ. ಆತುರ ನಿರ್ಧಾರದಿಂದ ತೊಂದರೆ, ವ್ಯಾಪಾರ-ವ್ವಹಾರದಲ್ಲಿ ನಷ್ಟ, ಆಕಸ್ಮಿಕ ದುರ್ಘಟನೆ, ಅನಿರೀಕ್ಷಿತ ಕಾರಣಕ್ಕೆ ಪ್ರಯಾಣ, ಉದ್ಯೋಗ ಕಳೆದುಕೊಳ್ಳುವ ಭೀತಿ.

ತುಲಾರಾಶಿ
ಉದ್ಯೋಗದಲ್ಲಿ ಲಾಭ, ನಿರುದ್ಯೋಗಿಗಳಿಗೆ ಕೆಲಸ ಲಭಿಸುವುದು, ವ್ಯಾಪಾರ, ವ್ಯವಹಾರಗಳಲ್ಲಿ ಹೊಸ ಹೂಡಿಕೆ, ಅಲ್ಪಸ್ವಲ್ಪ ಆದಾಯವನ್ನು ಹೆಚ್ಚಿಸಲಿದೆ. ಪತ್ನಿಯ ಆರೋಗ್ಯದ ಬಗ್ಗೆ ಗಮನವಿರಲಿ. ಆಗಾಗ ತೋರಿಬರುವ ಅನಿಷ್ಟಗಳನ್ನೆದುರಿಸುವ ಎದೆಗಾರಿಕೆ ತೋರಿಸಿರಿ. ಅಹಂಭಾವ, ಒತ್ತಡದ ಜೀವನ, ದಾಂಪತ್ಯದ ಮೇಲೆ ದುಷ್ಪರಿಣಾಮ, ಪ್ರಯಾಣದಲ್ಲಿ ಕಿರಿಕಿರಿ, ಆತ್ಮಗೌರವಕ್ಕೆ ಧಕ್ಕೆ.

ವೃಶ್ಚಿಕರಾಶಿ
ಅನಿರೀಕ್ಷಿತ ಸೇವಾವೃತ್ತಿಯ ಉದ್ಯೋಗ ಪ್ರಾಪ್ತಿ, ಮುಖ್ಯವಾಗಿ ಸಾಂಸಾರಿಕವಾಗಿ ಹಿರಿಯರ ಸೂಕ್ತ ಸಲಹೆಗಳಿಗೆ ಕಿವಿಗೊಡಿರಿ. ಮನೆಯಲ್ಲಿ ಅತಿಥಿ ಅಭ್ಯಾಗತರ ಆಗಮನ ಸಂತಸ ತಂದೀತು. ನೂತನ ಬಾಂಧವ್ಯ ನೆಮ್ಮದಿ ತರಲಿದೆ. ಸಂಚಾರದಲ್ಲಿ ಜಾಗ್ರತೆ ಇರಲಿ.
ಸರ್ಕಾರಿ ಕೆಲಸದಲ್ಲಿ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ತಂದೆಯೊಂದಿಗೆ ಕಲಹ, ಪ್ರಯಾಣಕ್ಕೆ ಅಡೆತಡೆ, ಮಿಶ್ರ ಫಲ ಯೋಗ.

ಧನಸ್ಸುರಾಶಿ
ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಆಶಾದಾಯಕವಾಗಿ ಮುಂದುವರಿಯಲು ಸಾಧ್ಯವಾಗುತ್ತದೆ. ವೃತ್ತಿರಂಗದಲ್ಲಿ ಚೇತರಿಕೆಯ ದಿನ ಗಳಾಗಿ ನೆಮ್ಮದಿ ಕಂಡೀತು. ನಡೆ, ನುಡಿ ನೇರವಿದ್ದು ನಿಮ್ಮ ಗಮನದಲ್ಲಿರಿಸಿಕೊಳ್ಳಿರಿ. ಉದ್ಯೋಗಿಗಳಿಗೆ ವರ್ಗಾವಣೆ ಇದೆ. ಮಕ್ಕಳಿಗೆ ಉತ್ತಮ ಅವಕಾಶ, ಶುಭ ಫಲ ಯೋಗ ಸಾಧ್ಯತೆ, ದುಶ್ಚಟಗಳಿಂದ ತೊಂದರೆ.

ಮಕರರಾಶಿ
ಪಿತ್ರಾರ್ಜಿತ ಆಸ್ತಿ ತಗಾದೆ, ದಾಯಾದಿಗಳ ಕಲಹ, ನಿರುದ್ಯೋಗಿಗಳಿಗೆ, ಅವಿವಾಹಿತರಿಗೆ, ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಗೋಚರಕ್ಕೆ ಬರುವುದು. ಸಾಂಸಾರಿಕವಾಗಿ ಕೂಡ ನೆಮ್ಮದಿಯ ವಾತಾವರಣ ಸಂತಸ ತಂದೀತು. ಯೋಗ್ಯರಿಗೆ ಕಂಕಣಬಲವಿದೆ. ಸಾಲಗಾರರೊಂದಿಗೆ ಕಿರಿಕಿರಿ, ಕಾರ್ಮಿಕರೊಂದಿಗೆ ಮನಃಸ್ತಾಪ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ.

ಕುಂಭರಾಶಿ
ಉದ್ಯೋಗ ನಿಮಿತ್ತ ಪ್ರಯಾಣ, ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣ ರದ್ದಾಗುವ ಸಾಧ್ಯತೆ, ಕುಟುಂಬಸ್ಥರೊಂದಿಗೆ ಉತ್ತಮ ಬಾಂಧವ್ಯ, ಕೆಲಸಕಾರ್ಯಗಳು ಸರಿಯಾಗಿ ನಡೆಯದೆ ಕೋಪತಾಪ, ಉದ್ವೇಗಕ್ಕೆ ಕಾರಣವಾಗಲಿದೆ. ಕಳೆದುದನ್ನು ಗಳಿಸುವ ಸಮಯವಿದು. ಸದುಪಯೋಗಿಸಿಕೊಳ್ಳಿರಿ. ದೂರ ಸಂಚಾರದಲ್ಲಿ ಜಾಗ್ರತೆ ವಹಿಸುವುದು. ಪ್ರೇಮ ವಿಚಾರದಲ್ಲಿ ಜಯ.

ಮೀನರಾಶಿ
ಸ್ಥಿರಾಸ್ತಿ-ವಾಹನದ ಮೇಲ ಸಾಲ ಮಾಡುವ ಸಂದರ್ಭ, ಕಾರ್ಯರಂಗದಲ್ಲಿ ದುಡಿಮೆ ಹೆಚ್ಚಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ದುಂದುವೆಚ್ಚ ಒಮ್ಮೊಮ್ಮೆ ಆತಂಕಕ್ಕೆ ಕಾರಣವಾಗುತ್ತದೆ. ಅನಿರೀಕ್ಷಿತವಾಗಿ ವಾಹನ ಖರೀದಿ ಕಾರ್ಯಗತವಾದೀತು. ನೀವಾಡುವ ಮಾತುಗಳಲ್ಲಿ ಎಚ್ಚರಿಕೆ, ಶತ್ರುತ್ವ ಅಧಿಕವಾಗುವುದು, ದಾಂಪತ್ಯದಲ್ಲಿ ವಿರಸ,ಅನಗತ್ಯ ಖರ್ಚು ಮಾಡುವಿರಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular