ಮೇಷರಾಶಿ
ಮನಸ್ಸಿನಲ್ಲಿ ಆತಂಕ, ಹಣಕಾಸಿನ ವಿಚಾರದಲ್ಲಿ ಅನಾವಶ್ಯಕ ಅಪವ್ಯಯಗಳಿಗೆ ಕಾರಣವಾಗಲಿದೆ. ಆತ್ಮೀಯರ ಸೂಕ್ತ ಸಲಹೆಗಳು ಉಪಯುಕ್ತವಾಗಲಿವೆ. ಕಿರು ಸಂಚಾರದಲ್ಲಿ ಕಾರ್ಯಸಿದ್ಧಿ. ತಾಯಿಗೆ ಬೇಸರ, ಮೊಂಡುತನದಿಂದ ತೊಂದರೆ, ಪ್ರಯಾಣದಲ್ಲಿ ಜಾಗ್ರತೆ, ಸ್ಥಿರಾಸ್ತಿ ವಿಚಾರದಲ್ಲಿ ಮೋಸ, ಸಂಬಂಧಗಳಲ್ಲಿ ಬಿರುಕು, ಪತ್ರ ವ್ಯವಹಾರಗಳಲ್ಲಿ ತೊಂದರೆ, ಗೃಹ-ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಹಣಕಾಸು ವ್ಯವಹಾರದಲ್ಲಿ ಎಚ್ಚರ.
ವೃಷಭರಾಶಿ
ಹೊಟೇಲ್ ಉದ್ಯಮಗಳಿಗೆ ಚೇತರಿಕೆಯಿಂದ ಸಮಾಧಾನ ತಂದೀತು. ಅವಿವಾಹಿತರ ವೈವಾಹಿಕ ಸಂಬಂಧಗಳಿಗೆ ಬಲ ಬರುತ್ತದೆ. ಸಾಂಸಾರಿಕವಾಗಿ ನೆಮ್ಮದಿ ಸಿಗುತ್ತದೆ. ನೀವಾಡುವ ಮಾತಿನಿಂದ ಕಲಹ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಆರೋಗ್ಯ ಸಮಸ್ಯೆ, ಕುಟುಂಬದ ಚಿಂತೆ, ವಸ್ತ್ರಾಭರಣ ಖರೀದಿಯಲ್ಲಿ ಮೋಸ, ನಿದ್ರೆಯಲ್ಲಿ ದುಸ್ವಪ್ನಗಳು, ಅಧಿಕ ಬಡ್ಡಿಗೆ ಸಾಲ ಪಡೆಯುವಿರಿ, ಚೀಟಿ ವ್ಯವಹಾರಗಳಲ್ಲಿ ತೊಂದರೆ, ಸೋಲು, ನಷ್ಟ, ನಿರಾಸೆ, ಆತಂಕ.
ಮಿಥುನರಾಶಿ
ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ, ಗೌರವಕ್ಕೆ ಚ್ಯುತಿ, ಸ್ಥಿರಾಸ್ತಿ ನಷ್ಟ, ಪ್ರೇಮಿಗಳಿಗೆ ಬಾಂಧವ್ಯ ಗಟ್ಟಿಯಾಗಲಿದೆ. ಆಗಾಗ ಸಂಚಾರಗಳು ದೇಹಾಯಾಸ ತರಲಿವೆ. ಕ್ರಯ ವಿಕ್ರಯಗಳು ಲಾಭಕರವಾಗಲಿವೆ. ಸಾಂಸಾರಿಕವಾಗಿ ಕಿರಿಕಿರಿ ಇರುತ್ತದೆ. ಶತ್ರುಗಳಿಂದ ತೊಂದರೆ, ಸಾಲಗಾರರಿಂದ ಮಾನಹಾನಿ, ತಂದೆಯ ನಡವಳಿಕೆಯಿಂದ ಬೇಸರ, ದಾಂಪತ್ಯದಲ್ಲಿ ವಿರಸ, ಗುಪ್ತ ವಿಚಾರಗಳಿಂದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ರೋಗ ಬಾಧೆ.

ಕಟಕರಾಶಿ
ನಿದ್ರೆಯಲ್ಲಿ ದುಸ್ವಪ್ನಗಳ ಕಾಟ, ಕೈತಪ್ಪಿದ ಅವಕಾಶಗಳು ಪುನಃ ಲಭಿಸಲಿವೆ. ನಿರುದ್ಯೋಗಿಗಳಿಗೆ ಸಮಾಧಾನವಿರದು. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಕಾರ್ಯಸಾಧನೆಯಾಗಲಿದೆ. ಉದ್ವೇಗ ಮಾಡದಿರಿ. ಅನಾವಶ್ಯಕ ತೊಂದರೆ, ಮಕ್ಕಳ ಜೀವನದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ಅಪವಾದ, ಹೊಸ ವ್ಯಾಪಾರ ವ್ಯವಹಾರದಿಂದ ನಷ್ಟ, ಸಂತಾನ ದೋಷ, ದುಶ್ಚಟಗಳಿಂದ ತೊಂದರೆ.
ಸಿಂಹರಾಶಿ
ಉದ್ಯೋಗದಲ್ಲಿ ಲಾಭ, ಮಿತ್ರರಿಂದ ಸಹಕಾರ, ಭೂ ವ್ಯವಹಾರಗಳಲ್ಲಿ ಮೋಸ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಯೋಗ್ಯ ವಯಸ್ಕರಿಗೆ ಯೋಗ್ಯ ಸಂಬಂಧ ಮಾಂಗಲ್ಯ ಭಾಗ್ಯಕ್ಕೆ ನಾಂದಿ ಹಾಡಲಿದೆ. ಆಪ್ತರ ಕಾರ್ಯಗಳಿಗಾಗಿ ಸಮಯ ವ್ಯರ್ಥವಾಗಲಿದೆ. ಸಂತಾನಾಪೇಕ್ಷಿಗಳಿಗೆ ದೈವಾನುಗ್ರಹವಾಗಿ ಲಾಭವಾಗಲಿದೆ. ಕೆಲಸ ಕಾರ್ಯದಲ್ಲಿ ಜಯ, ವಿದ್ಯಾಭ್ಯಾಸದಲ್ಲಿ ತೊಂದರೆ, ದುಶ್ಚಟಗಳಿಂದ ಸಮಸ್ಯೆ, ಪ್ರೇಮಿಗಳಲ್ಲಿ ಮನಃಸ್ತಾಪ.
ಕನ್ಯಾರಾಶಿ
ಅವಕಾಶಗಳು ಕೈತಪ್ಪುವ ಆತಂಕ, ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗಿ ತೋರಿಬಂದರೂ ಧನಾಗಮನಕ್ಕೆ ತೊಂದರೆ ಆಗದು. ಕಮಿಷನ್ ವ್ಯವಹಾರದಲ್ಲಿ ಲಾಭವಿದೆ. ಪಾಲುಗಾರಿಕೆಯಲ್ಲಿ ಹೆಚ್ಚಿನ ಜಾಗ್ರತೆ ವಹಿಸಿದರೆ ಉತ್ತಮ. ಬಡ್ತಿಯಲ್ಲಿ ಹಿನ್ನಡೆ, ಮೇಲಾಧಿಕಾರಿಗಳಿಂದ ಕಿರಿಕಿರಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಧರ್ಮ ವಿರೋಧಿ ಚಟುವಟಿಕೆ ಸಾಧ್ಯತೆ, ಹಣಕಾಸು ವಿಚಾರದಲ್ಲಿ ಜಾಗ್ರತೆ, ತಂದೆಯಿಂದ ಅನುಕೂಲ, ಗುಪ್ತ ವಿಚಾರಗಳಿಂದ ಮಾನಹಾನಿ, ಅದೃಷ್ಟ ಕೈಕೊಡುವುದು.

ತುಲಾರಾಶಿ
ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ತಂದೆಯ ನಡವಳಿಕೆಯಿಂದ ಮುಂಗೋಪ, ಧರ್ಮ ದ್ರೋಹ ಕೆಲಸಗಳಿಂದ ಆಪತ್ತು, ಚಿಂತಿತ ವಿಚಾರಗಳು ಹಂತ ಹಂತವಾಗಿ ನೆರವೇರಲಿವೆ. ಸಂಚಾರ, ವೃತ್ತಿ, ಕಮಿಷನ್ ಏಜೆಂಟರಿಗೆ ಒಳ್ಳೆಯ ಆದಾಯವಿರುತ್ತದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುವುದು ಒಳ್ಳೆಯದು. ಆತುರದ ಮಾತುಗಳನ್ನಾಡುವಿರಿ, ಗೌರವಕ್ಕೆ ಧಕ್ಕೆ, ಕೊಟ್ಟ ಹಣ ಮೋಸವಾಗುವುದು, ಸಂಗಾತಿಯಿಂದ ಬೇಸರ.
ವೃಶ್ಚಿಕರಾಶಿ
ಆಕಸ್ಮಿಕ ಅವಘಡ, ಕೆಲಸ ಕಾರ್ಯಗಳಲ್ಲಿ ಸಮಸ್ಯೆ, ವೃತ್ತಿರಂಗದಲ್ಲಿ ದೃಢ ನಿರ್ಧಾರಗಳು ಕಾರ್ಯಸಾಧನೆಗೆ ಅನುಕೂಲವಾದೀತು. ವಿದ್ಯಾರ್ಥಿ ಗಳು ನಿರುತ್ಸಾಹಿಗಳಾದಾರು. ಹಿರಿಯರು ಆಗಾಗ ಭಿನ್ನಾಭಿಪ್ರಾಯ ದಿಂದ ಕೋಪ ತಾಪಗಳಿಗೆ ಬಲಿಯಾದರು. ವ್ಯವಹಾರದಲ್ಲಿ ನಷ್ಟ, ಬಡ್ಡಿ ವ್ಯವಹಾರಸ್ಥರಿಗೆ ತೊಂದರೆ, ನಿದ್ರೆಯಲ್ಲಿ ಕೆಟ್ಟ ಕನಸು, ಆರ್ಥಿಕ ವ್ಯವಹಾರದಲ್ಲಿ ಮೋಸ, ಸಂಸಾರದಲ್ಲಿ ಸಂಶಯ, ದುಷ್ಟ ಆಲೋಚನೆ.
ಧನಸ್ಸುರಾಶಿ
ಕಾರ್ಯರಂಗದಲ್ಲಿ ಅಸ್ಥಿರತೆಯ ಭೀತಿ ಆಗಾಗ ಕಾಡಲಿದೆ. ದೈಹಿಕ ಆರೋಗ್ಯ ಸುಧಾರಿಸುತ್ತಾ ಹೋಗಲಿದೆ. ವೃತ್ತಿರಂಗದಲ್ಲಿ ಪ್ರಮುಖರ ಭೇಟಿ ಕಾರ್ಯಾನುಕೂಲಕ್ಕೆ ಸಾಧಕವಾದೀತು. ವಿದ್ಯಾರ್ಥಿಗಳಿಗೆ ಶುಭವಿದೆ. ಮಕ್ಕಳ ನಡವಳಿಕೆಯಿಂದ ಬೇಸರ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ದುಶ್ಚಟಗಳಿಂದ ತೊಂದರೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರಲ್ಲಿ ಸಂಶಯದ ನಡವಳಿಕೆ, ಸರ್ಪದೋಷ ಕಾಡುವುದು, ವೈವಾಹಿಕ ಜೀವನದಲ್ಲಿ ಸಮಸ್ಯೆ, ಕೋರ್ಟ್ ಕೇಸ್‍ಗಳಲ್ಲಿ ಅಲೆದಾಟ, ಆಕಸ್ಮಿಕ ಮಾನಸಿಕ ಸಂಕಷ್ಟ.

ಮಕರರಾಶಿ
ಶತ್ರು ದಮನ, ಸಾಲಗಾರರಿಂದ ಗೌರವಕ್ಕೆ ಧಕ್ಕೆ, ಮನಸ್ಸಿನಲ್ಲಿ ಆತಂಕ, ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ಯೋಗ್ಯ ವಯಸ್ಕರಿಗೆ ಹೊಂದಾಣಿಕೆಯ ಮನೋಭಾವ ಅತೀ ಅಗತ್ಯವಿದೆ. ಹಾಲು, ದಿನಸಿ, ತರಕಾರಿ ಹಣ್ಣು ವ್ಯಾಪಾರಿಗಳಿಗೆ ಲಾಭವಿದೆ. ಬಾಡಿಗೆದಾರರು- ಕಾರ್ಮಿಕರಿಂದ ಅನುಕೂಲ, ಉದ್ಯೋಗ ಸ್ಥಳದಲ್ಲಿ ಗೊಂದಲ, ಭೂ ವ್ಯವಹಾರದಲ್ಲಿ ತೊಂದರೆ, ದೈವ ಶಾಪಕ್ಕೆ ಗುರಿಯಾಗುವ ಸಾಧ್ಯತೆ.
ಕುಂಭರಾಶಿ
ಆರೋಗ್ಯದಲ್ಲಿ ಏರುಪೇರು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ದುಶ್ಚಟಗಳಿಗೆ ದಾಸರಾಗುವಿರಿ, ಗೃಹಿಣಿಗೆ ಆಗಾಗ ಅನಾರೋಗ್ಯ ಕಂಡುಬರಲಿದೆ. ರಾಜಕೀಯ ವರ್ಗದವರಿಗೆ ಅಪಮಾನ ಪ್ರಸಂಗ ತಂದೀತು. ಆರ್ಥಿಕ ಅಡಚಣೆಗಳು ಆಗಾಗ ಅನುಭವಕ್ಕೆ ಬರಲಿವೆ. ದೃಢ ನಿರ್ಧಾರಗಳು ಭಿನ್ನಾಭಿಪ್ರಾಯ ತಂದೀತು. ಮಕ್ಕಳ ಜೀವನದ ಚಿಂತೆ, ಭವಿಷ್ಯದಲ್ಲಿ ಕೆಟ್ಟಾದಾಗುವ ಆತಂಕ, ಮಿತ್ರರಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ, ನೆರೆಹೊರೆಯವರಿಂದ ತೊಂದರೆ, ಆರ್ಥಿಕ ವ್ಯವಹಾರ ಸುಧಾರಣೆ, ಉದ್ಯೋಗ ಸ್ಥಳದಲ್ಲಿ ಒತ್ತಡ.
ಮೀನರಾಶಿ
ನೆಮ್ಮದಿ ಇಲ್ಲದ ಜೀವನ, ಮಾನಸಿಕ ವ್ಯಥೆ, ನಿರುದ್ಯೋಗಿಗಳಿಗೆ, ಅವಿವಾಹಿತರಿಗೆ ಶುಭ ವಾರ್ತೆ ಇದೆ. ಕುಟುಂಬದ ಸದಸ್ಯರಲ್ಲಿ ಸಾಮರಸ್ಯ ಕಂಡುಬಂದೀತು. ಕ್ರಯ ವಿಕ್ರಯದಲ್ಲಿ ಲಾಭದಾಯಕ ಆದಾಯವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲವಿದೆ. ಸ್ಥಿರಾಸ್ತಿ ವ್ಯವಹಾರದಲ್ಲಿ ಜಾಗ್ರತೆ, ವ್ಯವಹಾರಗಳಿಗೆ ಪ್ರಯಾಣ, ವಾಹನ ಚಾಲನೆಯಲ್ಲಿ ತೊಂದರೆ, ಉದ್ಯೋಗದಲ್ಲಿ ನಿರಾಸಕ್ತಿ, ಪ್ರಯಾಣದಲ್ಲಿ ವಸ್ತು ಕಳವಾಗುವ ಸಾಧ್ಯತೆ.
