ಮೇಷರಾಶಿ
ವಿಪರೀತ ಖರ್ಚು, ಭವಿಷ್ಯದ ಆಲೋಚನೆ, ನೀವಾಡುವ ಮಾತಿನಲ್ಲಿ ಹಿಡಿತ ಅಗತ್ಯ, ಕುಟುಂಬಸ್ಥರಿಂದ ಉತ್ತಮ ಸಲಹೆ. ಹೆಚ್ಚಿನ ತಿರುಗಾಟ, ಸಂಚಾರವನ್ನು ಇಟ್ಟು ಕೊಳ್ಳುವುದು ಬೇಡ. ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಲಿದೆ. ಆದರೆ ಕೆಲಸ ಕಾರ್ಯಗಳು ಸರಾಗವಾಗಿ ನಡೆದು ಹೋಗಲಿವೆ. ಹಿರಿಯರಿಗೆ ಶುಶ್ರೂಷೆ ಅಗತ್ಯವಿದೆ.
ವೃಷಭರಾಶಿ
ಹಣಕಾಸು ಸದ್ವಿನಿಯೋಗವಾಗಿ ತೃಪ್ತಿ ತರಲಿದೆ. ಅನೇಕ ವಿಚಾರಗಳ ಬಗ್ಗೆ ಚರ್ಚೆ, ಹಣಕಾಸು ನಷ್ಟ, ಆಲಸ್ಯ ಮನೋಭಾವ, ಮಾನಸಿಕ ವೇದನೆ, ಗೊಂದಲದ ವಾತಾವರಣ. ವ್ಯಾಪಾರ ವ್ಯವಹಾರಗಳಿಗೆ,ಹೊಸ ಯೋಜನೆಗಳಿಗೆ ಅವಕಾಶಗಳು ಬಂದಾವು.ಆದಾಯ ನಿರೀಕ್ಷೆ ಮುಟ್ಟಲಾರದು. ಕಾರ್ಯ ರಂಗದಲ್ಲಿ ಮೌನವೇ ಲೇಸು .
ಮಿಥುನರಾಶಿ
ವಿದ್ಯಾರ್ಥಿಗಳಿಗೆ ತಮ್ಮ ಅಭ್ಯಾಸಬಲದಲ್ಲಿ ನಿರೀಕ್ಷಿತ ಅಭಿವೃದ್ಧಿ ಇರಲಾರದು. ವ್ಯಾಪಾರ, ವ್ಯವಹಾರ, ಅನ್ಯ ಜನರಲ್ಲಿ ಪ್ರೀತಿ, ನಂಬಿಕಸ್ಥರಿಂದ ದ್ರೋಹ, ವಾಹನ ರಿಪೇರಿ, ಹಣಕಾಸು ವೆಚ್ಚ, ಮನಸ್ಸಿನಲ್ಲಿ ಭಯ ಭೀತಿ. ಉದ್ದಿಮೆಗಳಲ್ಲಿ ಸೋಲನ್ನು ಅರಿಯದ ನಿಮಗೆ ಆತಂಕ ತಂದೀತು. ಸಂಚಾರವಿದೆ.

ಕಟಕರಾಶಿ
ದೂರ ಸಂಚಾರದಿಂದ ಬಂಧುಗಳ ಸಮಾಗಮದಿಂದ ಹರುಷ ತಂದೀತು. ಮಿತ್ರರಲ್ಲಿ ಸ್ನೇಹವೃದ್ಧಿ, ಅಲ್ಪ ಕಾರ್ಯ ಸಿದ್ಧಿ, ಶೀತ ಸಂಬಂಧಿತ ರೋಗ, ತಾಳ್ಮೆಯಿಂದ ವರ್ತಿಸುವುದು ಉತ್ತಮ, ಕೃಷಿಕರಿಗೆ ಅಲ್ಪ ಲಾಭ. ಕೃಷಿಕರಿಗೆ ತಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಬಹಳ ಪ್ರಗತಿ ತರಲಿದೆ.
ಸಿಂಹರಾಶಿ
ಶುಭ ಮಂಗಲ ಕಾರ್ಯಗಳಿಗೆ ವಿಘ್ನ ಭಯ ತೋರಿ ಬಂದರೂ ಹಿರಿಯರ ಶುಭಾಶೀರ್ವಾದದಿಂದ ನೆರವೇರಲಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ, ಮಾನಸಿಕ ನೆಮ್ಮದಿ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಹಣಕಾಸು ಸಮಸ್ಯೆ, ವ್ಯವಹಾರದಲ್ಲಿ ಎಚ್ಚರಿಕೆ. ಸಾಂಸಾರಿಕವಾಗಿ ಮಕ್ಕಳಿಗೂ, ಗೃಹಿಣಿ ವರ್ಗಕ್ಕೂ ಇಷ್ಟವು ಪೂರ್ತಿಯಾಗಲಿದೆ.
ಕನ್ಯಾರಾಶಿ
ಧನ ಅಭಿವೃದ್ಧಿಯು ವಿಳಂಬ ಗತಿಯಲ್ಲಿ ಕಂಡು ಬಂದೀತು. ಗೆಳೆಯರಿಂದ ಸಹಾಯ ಹಸ್ತ ತೋರಿ ಬರಲಿದೆ. ಮನಸ್ಸಿನ ಉದ್ವೇಗ ಹಾಗೂ ನೆಮ್ಮದಿಯನ್ನು ಕಾಪಾಡಿಕೊಳ್ಳಿರಿ. ಹಣಕಾಸು ಸಮಸ್ಯೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಮಾತೃವಿನಿಂದ ಪ್ರಶಂಸೆ, ಆತ್ಮೀಯರೊಂದಿಗೆ ಪ್ರೀತಿ ವಿಶ್ವಾಸ, ದಿನಾಂತ್ಯದಲ್ಲಿ ನೆಮ್ಮದಿಗೆ ಭಂಗ. ಗೃಹ ಕಲಹವು ಮನಸ್ಸು ಕೆಡಿಸೀತು.

ತುಲಾರಾಶಿ
ಉದ್ಯೋಗಿಗಳಿಗೆ ಸ್ಥಾನಪಲ್ಲಟ ಯೋಗ ಕಂಡು ಬರಲಿದೆ. ಕೆಲಸ ಕಾರ್ಯಗಳಲ್ಲಿ ವಿಘ್ನ, ಆಸ್ತಿ ವಿಚಾರದಲ್ಲಿ ಕಲಹ, ಹಿತ ಶತ್ರುಗಳ ಬಾಧೆ, ಪರರಿಂದ ಮೋಸ ಸಾಧ್ಯತೆ, ವಿದ್ಯಾರ್ಥಿಗಳಿಗೆ ಬೇಸರ, ಈ ದಿನ ಅಶುಭ ಫಲ ಯೋಗ. ತೊಡಕಿರದು. ಆಕಸ್ಮಿಕವಾಗಿ ದೂರ ಸಂಚಾರವು ಕಂಡು ಬರಲಿದೆ ಗೃಹದಲ್ಲಿ ಶುಭ ಕಾರ್ಯದ ನಿರೀಕ್ಷೆಯು ಫಲಪ್ರದವಾಗಿ ಕಂಡೀತು.
ವೃಶ್ಚಿಕರಾಶಿ
ವಿದ್ಯಾರ್ಥಿಗಳು ಹೆಚ್ಚಿನ ಅಭ್ಯಾಸ ಬಲದಿಂದ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಹೊಸ ಸಮಸ್ಯೆಗಳು ಉದ್ಭವ, ಕೋಪಗೊಳ್ಳದೇ ಮೌನವಾಗಿರುವುದು ಉತ್ತಮ, ತಾಳ್ಮೆಯಿಂದ ಅನುಕೂಲ, ಶತ್ರುಗಳ ಕುತಂತ್ರಕ್ಕೆ ಸಿಲುಕುವಿರಿ. ಹಿರಿಯರಿಗೆ ಶುಭ ಮಂಗಲ ಕಾರ್ಯಕ್ಕಾಗಿ ವಿಶೇಷ ಪ್ರಯಾಣದ ಅಗತ್ಯವಿರುತ್ತದೆ. ರಾಜಕೀಯದವರಿಗೆ ಸ್ಥಾನಮಾನ ಸಿಗಲಿದೆ.
ಧನುರಾಶಿ
ಕಷ್ಟದಿಂದ ಯಶಸ್ಸು ಸಿಗಲಿದೆ ಎಂಬುದು ನಿಮ್ಮ ಅನುಭವಕ್ಕೆ ಬರಲಿದೆ. ಪರರಿಂದ ಸಹಾಯ, ಕೆಲಸ ಕಾರ್ಯಗಳಲ್ಲಿ ವಿಳಂಬ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಸಾಲ ಮಾಡುವ ಪರಿಸ್ಥಿತಿ, ದೈವ ದರ್ಶನ, ಪ್ರಯಾಣಕ್ಕೆ ಆಸಕ್ತಿ. ರಾಜಕೀಯದವರಿಗೆ ತಟಸ್ಥ ಧೋರಣೆ ಅತೀ ಅಗತ್ಯವಿದೆ. ಹಣಕಾಸಿನ ಬಗ್ಗೆ ಹಂತ ಹಂತವಾಗಿ ಅಭಿವೃದ್ಧಿ ತೋರಿ ಬಂದೀತು.

ಮಕರರಾಶಿ
ಸರಕಾರಿ ಅಧಿಕಾರಿಗಳಿಗೆ ಅನಾವಶ್ಯಕವಾಗಿ ಅಪಮಾನದ ಪ್ರಸಂಗ ಬರಬಹುದು. ವಾಹನ ಖರೀದಿಯ ಚಿಂತನೆ ಕಾರ್ಯಗತವಾಗಲಿದೆ. ಕುಟುಂಬಸ್ಥರ ಜೊತೆ ಕಾಲ ಕಳೆಯುವಿರಿ, ಅಪರಿಚಿತರಿಂದ ದೂರವಿರಿ, ತಂದೆ-ತಾಯಿಯೊಂದಿಗೆ ಪ್ರೀತಿ, ನೆಮ್ಮದಿಯ ವಾತಾವರಣ, ಈ ದಿನ ಮಿಶ್ರ ಫಲ ಯೋಗ. ಹೊಸ ಮಿತ್ರರ ಸ್ನೇಹ ಭಾವದಿಂದ ಕಾರ್ಯಸಾಧನೆಯಾದೀತು.
ಕುಂಭರಾಶಿ
ದುಡುಕಿನ ನಿರ್ಧಾರಗಳಿಂದ ಹೆಚ್ಚಿನ ಸಮಸ್ಯೆಯನ್ನು ತಂದೊಡ್ಡದಿರಿ. ಸಾಂಸಾರಿಕವಾಗಿ ತಾಳ್ಮೆ ಸಮಾಧಾನದಿಂದ ಮುನ್ನಡೆಯಿರಿ. ಚಂಚಲ ಮನಸ್ಸು, ತಾಳ್ಮೆ ಕಳೆದುಕೊಳ್ಳುವಿರಿ, ಅನ್ಯರ ಮಾತುಗಳಿಂದ ಸಂಕಷ್ಟ, ನೆಮ್ಮದಿಗೆ ಭಂಗ, ಹೊಗಳಿಗೆ ಮಾತಿಗೆ ಮರುಳಾಗಬೇಡಿ. ಬಂಧುಮಿತ್ರರ ಸಹಕಾರ ತೋರಿ ಬಂದರೂ ನಂಬಿಕೆಗೆ ಅರ್ಹವಲ್ಲ.
ಮೀನರಾಶಿ
ಸಾಂಸಾರಿಕವಾಗಿ ಚೇತರಿಕೆಯ ದಿನಗಳಿವು. ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಸಹೋದರರಿಂದ ಪ್ರೀತಿ, ಸುಖ ಭೋಜನ ಪ್ರಾಪ್ತಿ, ಶುಭ ಫಲ ಯೋಗ. ಇದರ ಸದುಪಯೋಗ ಮಾಡಿಕೊಳ್ಳಿರಿ. ಬಂಧು -ಮಿತ್ರರ ಪ್ರೀತಿ, ಸಹಕಾರಗಳು ತೋರಿ ಬರಲಿವೆ. ವ್ಯಾಪಾರ ವ್ಯವಹಾರಗಳು ಸರಾಗವಾಗಿ ನಡೆಯಲಿವೆ.