ನಿತ್ಯಭವಿಷ್ಯ : 30-05-2020

0

ಮೇಷರಾಶಿ
ಆರ್ಥಿಕವಾಗಿ ಅನುಕೂಲವಾದ ದಿನ, ಶುಭ ಕಾರ್ಯಗಳಿಗೆ ಸಕಾಲ, ಲಾಭ ಪ್ರಮಾಣದ ಚೇತರಿಕೆ, ಕಾರ್ಯರಂಗದಲ್ಲಿ ಸಮಾಧಾನವಿಲ್ಲದಿದ್ದರೂ ನಿಮ್ಮ ಕಾರ್ಯಕ್ಕೆ ನೀವೇ ಸಮಾಧಾನಪಡಬೇಕಾದೀತು. ಆರ್ಥಿಕವಾಗಿ ನಾನಾ ರೀತಿಯಿಂದ ಕಷ್ಟನಷ್ಟಗಳು ಅಧಿಕವಾದೀತು. ಯೋಗ್ಯ ವಯಸ್ಕರ ವೈವಾಹಿಕ ಸಂಬಂಧ ತಂದೀತು. ಮಾತೃವಿನಿಂದ ಧನಾಗಮನ, ವಾಹನ ಖರೀದಿ ಯೋಗ, ಗೃಹ ನಿರ್ಮಾಣಕ್ಕೆ ಚಿಂತನೆ, ಸಂಗಾತಿಯಿಂದ ನೋವು, ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಲಂಕಾರಿಕ ವಸ್ತುಗಳಿಂದ ತೊಂದರೆ.

ವೃಷಭರಾಶಿ
ಉದ್ಯಮ-ವ್ಯಾಪಾರದಲ್ಲಿ ಚೇತರಿಕೆ, ಕೌಟುಂಬಿಕ ವ್ಯವಹಾರಗಳು ಸಮಾಧಾನಕರ ವಾಗಿ ತೋರಿಬರಲಿವೆ. ಸಾಂಸಾರಿಕವಾಗಿ ಮಹಿಳೆ ಯರು ತಮ್ಮ ಭಾವನೆಗಳ ಮೇಲೆ ಪೂರ್ತಿ ನಿಯಂತ್ರಣ ಸಾಧಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಶುಭ ಫ‌ಲವಿದೆ. ಉದ್ಯೋಗದಲ್ಲಿ ಒತ್ತಡ, ಸಂಗಾತಿ ಜೊತೆ ವಾಗ್ವಾದ, ಗರ್ಭ ದೋಷ, ಬಿ.ಪಿ-ಶುಗರ್‍ನಲ್ಲಿ ವ್ಯತ್ಯಾಸ, ಬಾಡಿಗೆದಾರರೊಂದಿಗೆ ಕಿರಿಕಿರಿ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.

ಮಿಥುನರಾಶಿ
ದುಶ್ಚಟಗಳಿಗೆ ದಾಸರಾಗುವಿರಿ, ಪ್ರೇಮಿಗಳ ಮಧ್ಯೆ ಅನಗತ್ಯ ಚರ್ಚೆ, ವೈಯಕ್ತಿಕವಾಗಿ ಕೆಲಸದ ವಿಚಾರದಲ್ಲಿ ನಿಮ್ಮ ಬದುಕನ್ನು ನಿರ್ಲಕ್ಷಿಸದಿರಿ. ಸಾಂಸಾರಿಕವಾಗಿ ಹಿರಿಯರ ಸಹಕಾರ ನಿಮಗೆ ಆಸರೆ ಆದೀತು. ವ್ಯಾಪಾರ, ವ್ಯವಹಾರಗಳು ನಿರೀಕ್ಷಿತ ಮಟ್ಟವನ್ನು ಕಾಯ್ದುಕೊಳ್ಳಲಿವೆ. ಜಾಗ್ರತೆ. ಜೀವನಕ್ಕೆ ಆತ್ಮೀಯರು ಪಾತ್ರವಹಿಸುವರು, ಹೆಣ್ಣು ಮಕ್ಕಳಿಂದ ಲಾಭ, ಗುಪ್ತ ಆಲೋಚನೆ, ಆರೋಗ್ಯದಲ್ಲಿ ಏರುಪೇರು, ಕಲ್ಪನೆಗಳಿಂದ ನಿದ್ರಾಭಂಗ.

ಕಟಕರಾಶಿ
ಉದ್ಯೋಗ ಸ್ಥಳದಲ್ಲಿ ಅಶಾಂತಿ, ಸ್ತ್ರೀಯರಿಗೆ ಕಿರಿಕಿರಿ, ಆರ್ಥಿಕವಾಗಿ ಸಂಪತ್ತಿನ ಗಳಿಕೆ ಉತ್ತಮವಿದ್ದರೂ ಖರ್ಚು ವೆಚ್ಚಗಳು ಅದೇ ರೀತಿಯಲ್ಲಿ ಅಧಿಕವಾದಾವು. ವಿದ್ಯಾರ್ಥಿಗಳಿಗೆ ತಮ್ಮ ಅಭ್ಯಾಸವನ್ನು ಪರಿವರ್ತಿಸಿಕೊಳ್ಳಲು ಸಕಾಲವಿದು. ವಾಹನ ಸಂಚಾರ, ಚಾಲನೆಯಲ್ಲಿ ಗಮನವಿರಲಿ. ವಾಹನ ಖರೀದಿ, ಗೃಹ ನಿರ್ಮಾಣದ ಆಸೆ, ಮಕ್ಕಳಿಂದ ನೋವು, ಮಾತೃವಿನಿಂದ ಧನಾಗಮನ, ಸ್ಥಿರಾಸ್ತಿಯಿಂದ ಲಾಭ, ವ್ಯಾಪಾರಿಗಳಿಗೆ ಅನುಕೂಲ, ಮೋಜು-ಮಸ್ತಿಯಲ್ಲಿ ತೊಡಗುವಿರಿ.

ಸಿಂಹರಾಶಿ
ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಹೆಣ್ಣು ಮಕ್ಕಳ ನಡವಳಿಕೆಯಿಂದ ಬೇಸರ, ಸ್ಥಿರಾಸ್ತಿ ಪತ್ರ ವ್ಯವಹಾರದಲ್ಲಿ ಜಯ, ಕಾರ್ಯರಂಗದಲ್ಲಿ ಛಲಬಿಡದೆ ಪಟ್ಟುಹಿಡಿದು ದುಡಿಯಿರಿ. ನಿಶ್ಚಿತವಾಗಿ ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. ಕುಜಬಲದಿಂದ ವೈವಾಹಿಕ ಸಂಬಂಧಗಳು ತಪ್ಪಿಹೋದಾವು. ನೀವು ಗಳಿಸಿದ ಆರ್ಥಿಕತೆಗೆ ಜಾಗ್ರತೆ ಮಾಡಿರಿ. ನೆರೆಹೊರೆಯವರಿಂದ ಅನುಕೂಲ, ಉದ್ಯೋಗ ಬದಲಾವಣೆ ಚಿಂತೆ, ದೂರ ಪ್ರದೇಶದಲ್ಲಿ ಉದ್ಯೋಗ ಹುಡುಕಾಟ, ಶೀತ, ಕೆಮ್ಮು ಆರೋಗ್ಯದಲ್ಲಿ ವ್ಯತ್ಯಾಸ.

ಕನ್ಯಾರಾಶಿ
ಅವಿವಾಹಿತರಿಗೆ ನಿಂತುಹೋದ ಅವಕಾಶವು ಪುನಃ ದೊರಕಲಿದೆ. ನಿರುದ್ಯೋಗಿಗಳು ಬಂದ ಅವಕಾಶಗಳನ್ನು ಸರಿಯಾಗಿ ವಿಮರ್ಶಿಸಿ ಮುನ್ನಡೆಯಿರಿ. ಕಾರ್ಯಕ್ಷೇತ್ರದಲ್ಲಿ ಹೊಸ ಚಿಂತನೆಗಳು ಮೂಡಿಬರಲಿವೆ. ಅದೃಷ್ಟದ ದಿನ ನಿಮ್ಮದಾಗುವುದು, ಸ್ತ್ರೀಯರಿಂದ ಅನುಕೂಲ, ಮಿತ್ರರಿಂದ ಸಹಕಾರ, ತಂದೆ ಜೊತೆ ಮನಃಸ್ತಾಪ, ಪ್ರಯಾಣದಲ್ಲಿ ಅಡ್ಡಿ-ಆತಂಕ, ಆಕಸ್ಮಿಕ ಧನಾಗಮನ, ಪತ್ರ ವ್ಯವಹಾರಗಳಲ್ಲಿ ತೊಂದರೆ.

ತುಲಾರಾಶಿ
ಉದ್ಯಮ ವ್ಯಾಪಾರ ವ್ಯವಹಾರದಲ್ಲಿ ಲಾಭ, ಹಣಕಾಸಿನ ವಿಚಾರದಲ್ಲಿ ವಿವಾದಗಳು ಸಮಸ್ಯೆ ಯನ್ನು ಹುಟ್ಟುಹಾಕಲಿವೆ. ಕಾರ್ಯಕ್ಷೇತ್ರದಲ್ಲಿ ಮುನ್ನಡೆ ನಿಮ್ಮ ಬುದ್ಧಿವಂತಿಕೆಯಲ್ಲಿ ಅಡಗಿದೆ ಎಂಬುದನ್ನು ಮರೆಯದಿರಿ. ಖರ್ಚು ವೆಚ್ಚದ ಲೆಕ್ಕಾಚಾರವು ಸರಿಯಾಗಿಟ್ಟುಕೊಳ್ಳಿ. ಅನಿರೀಕ್ಷಿತ ಆರ್ಥಿಕ ನೆರವು, ಪಾಲುದಾರಿಕೆಯಲ್ಲಿ ಅನುಕೂಲ, ನಿರ್ಧಾರಗಳಲ್ಲಿ ಗೊಂದಲ, ಅಲಂಕಾರಿಕ ವಸ್ತುಗಳ ಮೇಲೆ ಒಲವು, ಆತ್ಮೀಯರಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ವಿದ್ಯಾಭ್ಯಾಸದ ಆಲೋಚನೆ, ಭವಿಷ್ಯದ ಚಿಂತೆ, ಆತುರ ಸ್ವಭಾವದಿಂದ ಸಮಸ್ಯೆಗೆ ಸಿಲುಕುವಿರಿ.

ವೃಶ್ಚಿಕರಾಶಿ
ವ್ಯಾಪಾರ-ವ್ಯವಹಾರದಲ್ಲಿ ಅಲ್ಪ ಅನುಕೂಲ, ನಿರುದ್ಯೋಗಿಗಳಿಗೆ ಅನಿರೀಕ್ಷಿತ ರೂಪದಲ್ಲಿ ಅನೇಕ ಅವಕಾಶಗಳು ದೊರಕಲಿವೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಪ್ರಯತ್ನಬಲಕ್ಕೆ ನಿಶ್ಚಿತ ರೂಪದಲ್ಲಿ ಫ‌ಲ ಸಿಗಲಿದೆ. ವ್ಯಾಪಾರ, ವ್ಯವಹಾರಗಳು ಆದಾಯ ವೃದ್ಧಿಗೆ ಸಾಧಕವಾಗಲಿವೆ. ಸಂಸಾರಿಕ ಜೀವನದಿಂದ ದೂರವಿರಲು ಯೋಚನೆ, ಸಂಗಾತಿ-ಸ್ನೇಹಿತರೇ ಶತ್ರುವಾಗುವರು, ಪಾಲುದಾರಿಕೆಯಲ್ಲಿ ಮೋಸ, ಆರೋಗ್ಯ ಸಮಸ್ಯೆ, ಅವಕಾಶ ಕೈತಪ್ಪುವುದು, ಮಾನಸಿಕ ಒತ್ತಡ, ನಾನಾ ಆಲೋಚನೆ, ಇಂದು ತಾಳ್ಮೆ ವಹಿಸುವುದು ಉತ್ತಮ.

ಧನಸ್ಸುರಾಶಿ
ಮಕ್ಕಳ ನಡವಳಿಕೆಯಲ್ಲಿ ಬೇಸರ, ಗೊಂದಲಗಳಿಂದ ಅವಕಾಶ ಕೈತಪ್ಪುವುದು, ಸಾಂಸಾರಿಕವಾಗಿ ತಾಯಿ ತಂದೆಯವರ ಸಹಕಾರ, ಪ್ರೀತಿ ವಿಶ್ವಾಸಗಳು ಮುನ್ನಡೆಗೆ ಪೂರಕವಾಗಲಿವೆ. ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನಬಲದಲ್ಲಿ ವಿಶ್ವಾಸವಿರಲಿ. ನಿರುದ್ಯೋಗಿಗಳಿಗೆ ತಾತ್ಕಾಲಿಕವಾಗಿ ಅವಕಾಶಗಳು ದೊರಕಲಿವೆ. ವಿದ್ಯಾಭ್ಯಾಸದಲ್ಲಿ ಸಮಸ್ಯೆ, ರೋಗ ಬಾಧೆ, ಭವಿಷ್ಯದ ಬಗ್ಗೆ ಆತಂಕ, ನೆರೆಹೊರೆಯವರ ಜೊತೆ ಶತ್ರುತ್ವ, ಬರಹದಲ್ಲಿ ವ್ಯತ್ಯಾಸ.

ಮಕರರಾಶಿ
ಪ್ರೇಮ ವಿಚಾರದಲ್ಲಿ ಯಶಸ್ಸು, ಸರಕಾರಿ ಅಧಿಕಾರಿಗಳಿಗೆ ತಮ್ಮ ಕೆಲಸ ಕಾರ್ಯ ಗಳಿಗಾಗಿ ಓಡಾಟವಿರುತ್ತದೆ. ಆರ್ಥಿಕವಾಗಿ ತುಸು ಸಮಾಧಾನ ಸಿಗಲಿದೆ. ಯೋಗ್ಯ ವಯಸ್ಕರು ವೈವಾಹಿಕ ಭಾಗ್ಯಕ್ಕಾಗಿ ಹೆಚ್ಚಿನ ಪ್ರಯತ್ನಪಡಬೇಕಾಗಬಹುದು. ಮುಂದಡಿ ಇಡಿರಿ. ಇಲ್ಲ ಸಲ್ಲದ ಅಪವಾದ, ಭಾವನೆಗಳಿಂದ ಧಕ್ಕೆ, ಸ್ಪರ್ಧಾತ್ಮಕ ವಿಚಾರದಲ್ಲಿ ಜಯ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮೋಜು-ಮಸ್ತಿಯಲ್ಲಿ ಭಾಗಿ, ಶಕ್ತಿದೇವತೆಯ ಆರಾಧನೆ, ಮಹಿಳೆಯರಿಗೆ ಅದೃಷ್ಟ, ಉದ್ಯೋಗದಲ್ಲಿ ಯಶಸ್ಸು.

ಕುಂಭರಾಶಿ
ಸ್ತಿರಾಸ್ತಿ-ವಾಹನದಿಂದ ಅನುಕೂಲ, ನ್ಯಾಯಾಲಯದ ಕೆಲಸ ಕಾರ್ಯಗಳು ವಿಳಂಬ ವಾದಾವು. ಮಾನಸಿಕ ಸಮಾಧಾನವನ್ನು ಸರಿಯಾಗಿಸಿ ಇಟ್ಟುಕೊಳ್ಳಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಿದೆ. ಸರಕಾರಿ ಅಧಿಕಾರಿಗಳಿಗೆ ಬದಲಾವಣೆ ತಂದೀತು. ಮಾತೃವಿನಿಂದ ಧನಾಗಮನ, ಆತ್ಮೀಯರೇ ಶತ್ರುವಾಗುವರು, ಭಾವನೆಗಳಿಗೆ ಮನ್ನಣೆ, ಇಷ್ಟಾರ್ಥ ಸಿದ್ಧಿಸುವುದು, ಪ್ರಯಾಣದಲ್ಲಿ ಅನುಕೂಲ, ಗುರು ಉಪದೇಶ ಆಲಿಸುವಿರಿ, ತಂದೆಯಿಂದ ಅದೃಷ್ಟ.

ಮೀನರಾಶಿ
ಸ್ವಂತ ಉದ್ಯಮದಲ್ಲಿ ಎಚ್ಚರ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ನಿಶ್ಚಿತ ರೂಪದಲ್ಲಿ ನಿಮ್ಮ ಮನೋಕಾಮನೆಗಳು ಹಂತ ಹಂತವಾಗಿ ಚೇತರಿಕೆ ಪಡೆಯಲಿವೆ. ಸಾಂಸಾರಿಕವಾಗಿ ಬಂಧುಬಳಗದವರ ಸಹಕಾರದಿಂದ ಕಾರ್ಯಸಿದ್ಧಿಯಾಗಲಿದೆ. ಪ್ರತಿಷ್ಠಿತರ ಸಂಪರ್ಕ ಮುನ್ನಡೆ ತಂದೀತು. ದೂರ ಪ್ರಯಾಣಕ್ಕೆ ಆಲೋಚನೆ, ಕುಟುಂಬದಲ್ಲಿ ಗೊಂದಲದ ವಾತಾವರಣ, ಮನಸ್ಸಿನಲ್ಲಿ ನಾನಾ ರೀತಿಯ ಯೋಚನೆ, ಉದ್ಯೋಗ ಬದಲಾವಣೆಗೆ ಮನಸ್ಸು, ತಂದೆಯ ನಡವಳಿಕೆಯಿಂದ ಬೇಸರ.

Leave A Reply

Your email address will not be published.