ಕೊರೊನಾ ಶಂಕಿತರ ಟೆಸ್ಟ್ ಸ್ಯಾಂಪಲ್ಸ್ ಹೊತ್ತೊಯ್ದ ಮಂಗಗಳು !

0

ಮೀರತ್ : ಕೊರೋನಾ ವೈರಸ್ ಸೋಂಕು ದೇಶದಾದ್ಯಂತ ತಲ್ಲಣ ಮೂಡಿಸಿದೆ. ಆರೋಗ್ಯ ಸಿಬ್ಬಂಧಿ ಕೊರೊನಾ ನಿಯಂತ್ರಣಕ್ಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದರ ನಡುವಲ್ಲೇ ಕೊರೊನಾ ಶಂಕಿತರ ಟೆಸ್ಟ್ ಸ್ಯಾಂಪಲ್ಸ್ ಗಳನ್ನು ಮಂಗಗಳು ಹೊತ್ತೊಯ್ದ ವಿಚಿತ್ರ ಘಟನೆ ಮೀರತ್ ನಲ್ಲಿ ನಡೆದಿದೆ.

ಉತ್ತರ ಪ್ರದೇಶದ ಮೀರತ್ ಮೆಡಿಕಲ್ ಕಾಲೇಜಿನ ಟೆಕ್ನಿಷಿಯನ್​ಗಳು ಗಂಟಲುದ್ರವದ ಪರೀಕ್ಷೆ ಹಾಗೂ ಇತರೆ ಸ್ಯಾಂಪಲ್​ಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಮಂಗಗಳ ಗುಂಪು ಸಿಬ್ಬಂಧಿಗಳ ಮೇಲೆ ದಾಳಿ ನಡೆಸಿದೆ. ಘಟನೆಯಿಂದ ಭಯಗೊಂಡ ಸಿಬ್ಬಂಧಿಗಳು ಮಂಗಗಳ ಕೈಯಿಂದ ತಪ್ಪಿಸಿಕೊಳ್ಳಲು ಪರದಾಟ ನಡೆಸಿದ್ದಾರೆ. ಈ ವೇಳೆ ಸಿಬ್ಬಂಧಿಗಳ ಕೈಯಲ್ಲಿದ್ದ ಕೊರೊನಾ ಗಂಟಲು ದ್ರವದ ಸ್ಯಾಂಪಲ್ಸ್ ಗಳನ್ನು ಮಂಗಗಳು ಹೊತ್ತೊಯ್ದಿವೆ. ಅಲ್ಲದೇ ಮರದ ಮೇಲೆ ಕುಳಿತು ಕೊರೊನಾ ತಪಾಸಣೆಯ ಸ್ಯಾಂಪಲ್ಸ್ ಕಿಟ್ ಗಳನ್ನು ಕಚ್ಚಿತಿಂದಿವೆ. 

ವಿಚಿತ್ರ ಘಟನೆಯಿಂದಾಗಿ ಜನರು ಬೆಚ್ಚಿಬಿದ್ದಿದ್ದಾರೆ. ಮಂಗಗಳಿಂದ ಸೋಂಕು ಜನರಿಗೂ ವ್ಯಾಪಿಸಬಹುದು ಅನ್ನೋ ಆತಂಕ ಎದುರಾಗಿದೆ. ಈ ನಡುವಲ್ಲೇ ಮಂಗಗಳು ಮರವೇರಿ ಕುಳಿತು ಕೊರೋನಾ ಸ್ಯಾಂಪಲ್​ ಕಿಟ್​ ಹರಿದು ತಿನ್ನುತ್ತಿರುವ ವಿಡಿಯೋವನ್ನು ಪತ್ರಕರ್ತರೊಬ್ಬರು ಟ್ವಿಟ್ಟರ್​ನಲ್ಲಿ ಶೇರ್ ಮಾಡಿದ್ದಾರೆ.

Leave A Reply

Your email address will not be published.