ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 08-05-2020

ನಿತ್ಯಭವಿಷ್ಯ : 08-05-2020

- Advertisement -

ಮೇಷರಾಶಿ
ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ, ಮನಸ್ಸಿಗೆ ನೋವು, ದೇಹಾಲಸ್ಯ, ತಾಯಿಯ ಆರೋಯದಲ್ಲಿ ವ್ಯತ್ಯಾಸ, ಈ ದಿನ ತಾಳ್ಮೆ ಅತ್ಯಗತ್ಯ. ಉತ್ಸಾಹದಿಂದ ದಿನವನ್ನು ಆರಂಭಿಸಿರಿ. ಸಾಂಸಾರಿಕವಾಗಿ ತೆಗೆದುಕೊಳ್ಳುವ ನಿರ್ಧಾರಗಳು ಉತ್ತಮ ಫ‌ಲವನ್ನು ನೀಡಲಿವೆ. ಆದರೆ ಕರ್ತವ್ಯವನ್ನು ಕಡೆಗಣಿಸದಿರಿ.

ವೃಷಭರಾಶಿ
ಸ್ವಯಂಕೃತ ಅಪರಾಧದಿಂದ ನಷ್ಟ, ಅನಾವಶ್ಯಕ ಖರ್ಚನ್ನು ನಿಯಂತ್ರಿಸ ಬೇಕಾಗುತ್ತದೆ. ವೃತ್ತಿರಂಗದಲ್ಲಿ ಕಾರ್ಯ ಬಾಹುಳ್ಯ ದಿಂದ ದೇಹಾಯಾಸವಾದೀತು. ದಾಂಪತ್ಯದಲ್ಲಿ ಸಾಮರಸ್ಯ ಕೊರತೆ ಕಾಣಿಸಲಿದೆ. ಸಂಬಂಧಿಕರಿಗೆ ಭಾಗ್ಯೋದಯ, ಬೃಹತ್ ಕೈಗಾರಿಕೋದ್ಯಮಿಗಳಿಗೆ ಅನುಕೂಲ, ಉದ್ಯೋಗ ಅವಕಾಶಗಳು ಪ್ರಾಪ್ತಿ.

ಮಿಥುನರಾಶಿ
ಹಣಕಾಸು ಸಮಸ್ಯೆ, ಸಾಲ ಮಾಡುವ ಪರಿಸ್ಥಿತಿ, ಕುಟುಂಬದ ಕೋರ್ಟ್ ಕೇಸ್‍ಗಳಲ್ಲಿ ಜಯ, ವ್ಯವಹಾರದಲ್ಲಿ ಆಗಾಗ ಸಮಸ್ಯೆಗಳು ತೋರಿಬಂದರೂ ಬಂಧುಮಿತ್ರರ ಸಹಕಾರದಿಂದ ಕಾರ್ಯಸಿದ್ಧಿಯಾಗಲಿದೆ. ಸಮಸ್ಯೆಗಳಿಂದ ದೂರ ಓಡದಿರಿ. ಅದನ್ನು ಧೈರ್ಯದಿಂದ ಎದುರಿಸಿರಿ. ತಂದೆ ಮಕ್ಕಳಲ್ಲಿ ಜಗಳ, ಮಾನಸಿಕ ವ್ಯಥೆ.

ಕಟಕರಾಶಿ
ಉದ್ಯೋಗದಲ್ಲಿ ಉತ್ತಮ ಗೌರವ, ಕೆಲಸ ಕಾರ್ಯಗಳಲ್ಲಿ ಶ್ರದ್ಧೆ, ಅಕ್ರಮ ಚಟುವಟಿಕೆಗಳಿಂದ ತೊಂದರೆ, ಯೋಗ್ಯ ವಯಸ್ಕರು ಉತ್ತಮ ವೈವಾಹಿಕ ಸಂಬಂಧವನ್ನು ಹೊಂದಲಿದ್ದಾರೆ. ಆಗಾಗ ಧನಾಗಮನ ದಿಂದ ಕಾರ್ಯಸಿದ್ಧಿಯಾಗಲಿದೆ. ಆಹಾರದ ವ್ಯತ್ಯಾಸದಿಂದ ದೇಹಾರೋಗ್ಯದಲ್ಲಿ ಸಮಸ್ಯೆಗಳು ಕಂಡು ಬರಲಿವೆ. ಮಕ್ಕಳಲ್ಲಿ ವೈಮನಸ್ಸು, ಆಲಸ್ಯತನದಿಂದ ಸಮಸ್ಯೆ.

ಸಿಂಹರಾಶಿ
ವಾಹನ ಭೂಮಿ ನಷ್ಟ, ಸಾಲ ಬಾಧೆ, ಮಕ್ಕಳ ವಿಚಾರದಲ್ಲಿ ಮನಸ್ಸು ನೆಮ್ಮದಿ ಕಳೆದುಕೊಳ್ಳಲಿದೆ. ಆರೋಗ್ಯದಲ್ಲಿ ಸುಧಾರಣೆ ತೋರಿ ಬಂದರೂ ಉದಾಸೀನತೆ ತೋರದಿರಿ. ವಿವಿಧ ಮೂಲಗಳಿಂದ ಧನಾದಾಯವಿದ್ದು ಕಾರ್ಯಸಾಧನೆಯಾಗಲಿದೆ. ಅಧಿಕವಾದ ಚಿಂತೆ, ಆತುರ ಸ್ವಭಾವದಿಂದ ನಷ್ಟ, ಸ್ನೇಹಿತರನ್ನು ದೂರಮಾಡಿಕೊಳ್ಳುವಿರಿ.

ಕನ್ಯಾರಾಶಿ
ನೆರೆಹೊರೆಯವರಿಂದ ಅನುಕೂಲ, ಅಪೇಕ್ಷಿತ ಜನಸಹಾಯದಿಂದ ಕುಟುಂಬ ವರ್ಗದಲ್ಲಿ ಕಾರ್ಯಸಾಧನೆಯಾಗಲಿದೆ. ಸ್ಥಿರಾಸ್ತಿ ವ್ಯವಹಾರದಲ್ಲಿ ಧನಹಾನಿ ಎದುರಾಗಲಿದೆ. ದಾಂಪತ್ಯದಲ್ಲಿ ಏರುಪೇರು ಆಗಲಿದೆ. ಆರೋಗ್ಯದಲ್ಲಿ ಜಾಗ್ರತೆ. ಕುಟುಂಬಸ್ಥರ ಆರೋಗ್ಯದಲ್ಲಿ ವ್ಯತ್ಯಾಸ, ದಾಯಾದಿಗಳ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಜಯ, ಈ ದಿನ ಮಿಶ್ರ ಫಲ ಯೋಗ.

ತುಲಾರಾಶಿ
ಉದ್ಯೋಗದಲ್ಲಿ ಕೀರ್ತಿ ವೃದ್ಧಿ, ಆರೋಗ್ಯದಲ್ಲಿ ನರದ ತೊಂದರೆ, ಸೊಂಟದ ಕೆಳಭಾಗದಲ್ಲಿ ನೋವನ್ನು ಅನುಭವಿಸುವಂತಾದೀತು. ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಅಸಹಕಾರ ಕಂಡುಬರಲಿದೆ. ಮನೆಯಲ್ಲಿ ಅತಿಥಿಗಳ ಆಗಮನವಿದೆ. ಸಹೋದ್ಯೋಗಿಗಳಿಂದ ಆರ್ಥಿಕ ಸಹಾಯ, ಸಂಗಾತಿಯಿಂದ ಲಾಭ, ಸ್ನೇಹಿತರಿಂದ ಅನುಕೂಲ.

ವೃಶ್ಚಿಕರಾಶಿ
ಗ್ಯಾಸ್ಟ್ರಿಕ್ ಸಮಸ್ಯೆ, ಕಾಲು ನೋವು, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಆರೋಗ್ಯದಲ್ಲಿ ಏರುಪೇರು, ಸೈಟ್-ವಾಹ ಖರೀದಿಗೆ ಮನಸ್ಸು, ಸಾಲದ ಬೇಡಿಕೆಯನ್ನಿಡುವಿರಿ, ಆತ್ಮೀಯರೊಂದಿಗೆ ಮಾನಸಿಕ ಕಿರಿಕಿರಿ.

ಧನಸ್ಸುರಾಶಿ
ಆಕಸ್ಮಿಕ ಧನ ನಷ್ಟ, ಕಿರಿಯ ಸಹೋದರನಿಂದ ನಷ್ಟ, ಅಧಿಕವಾದ ನಿದ್ರೆ, ದಾಂಪತ್ಯ ಜೀವನದಲ್ಲಿ ಏರುಪೇರು ಕಂಡು ಬಂದೀತು. ವ್ಯಾಪಾರ, ವ್ಯವಹಾರದಲ್ಲಿ ತೊಂದರೆಗಳು ಕಡಿಮೆಯಾಗಲಿವೆ. ಸರಕಾರಿ ಕೆಲಸಕಾರ್ಯಗಳು ನಿರ್ವಿಘ್ನವಾಗಿ ನಡಿದೀತು. ಪ್ರಯಾಣದಿಂದ ನಷ್ಟ. ದೇಹದಲ್ಲಿ ಆಲಸ್ಯ, ಕುಟುಂಬದಲ್ಲಿ ಸಮಸ್ಯೆ, ಆರ್ಥಿಕ ಸಂಕಷ್ಟ.

ಮಕರರಾಶಿ
ಮನೆ ಖರೀದಿಗೆ ಪ್ರಯತ್ನ ಮಾಡುವಿರಿ, ಕೋಪದಿಂದ ಮಾತನಾಡುವಿರಿ, ಮಿತ್ರರಿಂದ ಅನುಕೂಲ, ಅಶುಭ ಫ‌ಲಗಳ ತೀವ್ರತೆ ಕಡಿಮೆಯಾಗಲಿದೆ. ಹಾಗೇ ಕೆಲವೊಂದು ಶುಭಫ‌ಲಗಳು ಗೋಚರಕ್ಕೆ ಬರಲಿವೆ. ಆರೋಗ್ಯಭಾಗ್ಯ ಆಶಾದಾಯಕವಾಗಿರುತ್ತದೆ. ನೂತನ ಕಾರ್ಯಗಳಿಗೆ ಅನುಕೂಲವಾಗಲಿದೆ. ಅಕ್ರಮ ಸಂಬಂಧಿಗಳಿಂದ ತೊಂದರೆಗೆ ಸಿಲುಕುವಿರಿ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.

ಕುಂಭರಾಶಿ
ಸಹೋದ್ಯೋಗಿ ಜೊತೆ ಶತ್ರುತ್ವ ವೃದ್ಧಿ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಸಂಚಾರದಲ್ಲಿ ಜಾಗ್ರತೆ ವಹಿಸಿರಿ. ಶುಭಮಂಗಲ ಕಾರ್ಯದಲ್ಲಿ ಭಾಗವಹಿಸುವಂತಾದೀತು. ಆರ್ಥಿಕವಾಗಿ ಸಮಸ್ಯೆಗಳು ಕಂಡಬರದಂತೆ ಜಾಗ್ರತೆ ವಹಿಸಿರಿ. ಉದ್ಯೋಗದಲ್ಲಿ ಬದಲಾವಣೆ ಇದೆ. ಲಾಭ-ನಷ್ಟ ಸಮ ಪ್ರಮಾಣ, ವಿದ್ಯಾರ್ಥಿಗಳಿಗೆ ಅನುಕೂಲ, ಮಾನಸಿಕ ನೆಮ್ಮದಿಗೆ ಭಂಗ.

ಮೀನರಾಶಿ
ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಸಾಂಸಾರಿಕವಾಗಿ ಹೊಂದಾಣಿಕೆಯಿಂದ ಕಾರ್ಯಸಿದ್ಧಿಯಾಗಲಿದೆ. ನಾನಾ ರೀತಿಯಲ್ಲಿ ಧನಾಗಮನವಿರುತ್ತದೆ. ಅನಿರೀಕ್ಷಿತ ಕಾರ್ಯಸಿದ್ಧಿಯಿಂದ ಮನಸ್ಸಿಗೆ ಸಮಾಧಾನವಾದೀತು. ದಿನಾಂತ್ಯ ಶುಭವಿದೆ. ಹೆಣ್ಣು ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕವಾದ ಒತ್ತಡ, ನಾನಾ ಆಲೋಚನೆಗಳಿಂದ ನಿದ್ರಾಭಂಗ, ಈ ದಿನ ಮಿಶ್ರ ಫಲ ಯೋಗ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular