ಐತಿಹಾಸಿಕ ಏರ್’ಲಿಫ್ಟ್ ಆರಂಭ : ಯುಎಇಯಿಂದ ತವರಿಗೆ ಮರಳಿದ ಭಾರತೀಯರು

0

ನವದೆಹಲಿ: ಕೊರೋನಾ ನಿಗ್ರಹಕ್ಕಾಗಿ ಘೋಷಣೆ ಮಾಡಲಾಗಿರುವ ಲಾಕ್ಡೌನ್ ನಿಂದಾಗಿ ವಿಶ್ವದ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ತವರಿಗೆ ಕರೆತರುವ ದೇಶದ ಇತಿಹಾಸದ ಅತೀದೊಡ್ಡ ಕಾರ್ಯಾಚರಣೆ ವಂದೇ ಭಾರತ್ ಮಿಷನ್ ಗುರುವಾರದಿಂದ ಆರಂಭವಾಗಿದೆ.

ಅಬುಧಾಬಿ ಹಾಗೂ ದುಂಬೈನಿಂದ 354 ಪ್ರಯಾಣಿಕರನ್ನು ಹೊತ್ತ 2 ವಿಮಾನಗಳು ಕೇರಳ ರಾಜ್ಯಕ್ಕೆ ಕಳೆದ ರಾತ್ರಿ ಬಂದಿಳಿದಿವೆ.

177 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ಎಕ್ಸ್’ಪ್ರೆಸ್ ಮೊದಲ ವಿಮಾನ 10.9ಕ್ಕೆ ಕೊಚ್ಚಿಗೆ ಬಂದಿಳಿದಿದ್ದರೆ, ಏರ್ ಇಂಡಿಯಾದ ಇನ್ನೊಂದು ವಿಮಾನದಲ್ಲಿಯೂ 177 ಪ್ರಯಾಣಕರು ರಾತ್ರಿ 10.32ಕ್ಕೆ ಕಲ್ಲಿಕೋಟೆಗೆ ಬಂದಿಳಿದಿದ್ದಾರೆ.

ಭಾರತಕ್ಕೆ ಬಂದಿಳಿದ 354 ಮಂದಿಯ ಪೈಕಿ 9 ಹಸುಗೂಸುಗಳು, 49 ಗರ್ಭಿಣಿಯರು ಒಳಗೊಂಡಿದ್ದಾರೆ. ತವರಿಗೆ ಮರಳಿರುವ ಎಲ್ಲರನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಅನಿವಾರ್ಯವಿರುವವರಿಗೆ ಅಗತ್ಯ ತಪಾಸಣೆ ನಡೆಸಿ ಮನೆಗೆ ಕಳುಹಿಸಿ, ಉಳಿದವರನ್ನು 14 ದಿನಗಳ ಕಾಲ ಕ್ವಾರಂಟೈನ್’ಗೆ ಕಳುಹಿಸಲಾಯಿತು.

Leave A Reply

Your email address will not be published.