ನಿತ್ಯಭವಿಷ್ಯ : 26-05-2020

0

ಮೇಷರಾಶಿ
ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಲಾಭ, ಕಾರ್ಯಕ್ಷೇತ್ರದಲ್ಲಿ ಸ್ವಯಂಪ್ರಜ್ಞೆ ಅಥವಾ ಎಚ್ಚರಿಕೆ ಈಗ ನಿಮಗೆ ಅಗತ್ಯವಿರುತ್ತದೆ. ವೈಯಕ್ತಿಕವಾಗಿ, ದೈಹಿಕ, ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳ ಬೇಕಾದೀತು. ಹೆಚ್ಚಿನ ಉದ್ವೇಗ ಬೇಡ. ಹಣಕಾಸು ನಷ್ಟ, ಶತ್ರುಗಳ ಬಾಧೆ, ವಿದ್ಯಾಭ್ಯಾಸದಲ್ಲಿ ಗೊಂದಲ ಆತ್ಮೀಯರಲ್ಲಿ ಮನಃಸ್ತಾಪ.

ವೃಷಭರಾಶಿ
ಅಧಿಕವಾದ ಖರ್ಚು, ಆರೋಗ್ಯದ ಕಡೆ ಗಮನಹರಿಸಿ, ವೈಯಕ್ತಿಕವಾಗಿ ನಿಮ್ಮ ಆರೋಗ್ಯಭಾಗ್ಯ ಸುಧಾರಿಸಲಿದೆ. ಆದಾಯವು ಸಂತಸ ತಂದರೂ ಅನಿರೀಕ್ಷಿತ ಖರ್ಚುವೆಚ್ಚಗಳ ಲೆಕ್ಕಾಚಾರ ಆತಂಕಕ್ಕೆ ಕಾರಣವಾದೀತು. ಸಾಂಸಾರಿಕವಾಗಿ ಪತ್ನಿಯ ಸಹಕಾರ ನಿಮಗೆ ಆಸರೆ. ದಾಂಪತ್ಯದಲ್ಲಿ ಪ್ರೀತಿ, ಮಾತಿನ ಮೇಲೆ ನಿಗಾವಿರಲಿ, ಅಧಿಕವಾದ ಕೋಪ.

ಮಿಥುನರಾಶಿ
ಮಧ್ಯಸ್ಥಿಕೆ ವ್ಯವಹಾರಗಳಿಂದ ಲಾಭ, ಮಾತೃವಿನಿಗೆ ಅನಾರೋಗ್ಯ, ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಅಲೆದಾಟ ಮಾಡಬೇಕಾದೀತು. ಮಾನಸಿಕವಾಗಿ ಭಯ ಭೀತಿ, ಉದ್ವೇಗ ಕಾಡಲಿದೆ. ನಿರುದ್ಯೋಗಿಗಳ ಉದ್ಯೋಗದ ಆಯ್ಕೆ ಅವರದ್ದೇ ಆಗಲಿದೆ. ಸಂಚಾರದಲ್ಲಿ ಜಾಗ್ರತೆ. ಮಿತ್ರರಿಂದ ಅಪವಾದ, ಪರರ ಕಷ್ಟಕ್ಕೆ ಸ್ಪಂದಿಸುವಿರಿ.

ಕಟಕರಾಶಿ
ಅವಿವಾಹಿತರ ಕನಸು ನನಸಾಗಲಿದೆ. ವಿದ್ಯಾರ್ಥಿಗಳಿಗೆ ಬುದ್ಧಿ ವಿಕಾಸಕ್ಕೆ ಬೇಕಾದ ವಾತಾವರಣ ಉತ್ತಮ ಫ‌ಲ ನೀಡಲಿದೆ. ಕಾರ್ಮಿಕ ವರ್ಗಕ್ಕೆ ಶ್ರಮ ರಹಿತ ಯಾಂತ್ರಿಕ ಬದುಕು ಅನಿವಾರ್ಯವಾದೀತು. ತಾಳ್ಮೆ ಕಳೆದುಕೊಳ್ಳುವಿರಿ, ಚಂಚಲ ಮನಸ್ಸು, ಅಧಿಕಾರ ಪ್ರಾಪ್ತಿ, ಸ್ತ್ರೀಯರಿಗೆ ಲಾಭ, ಕಾರ್ಯ ಕ್ಷೇತ್ರದಲ್ಲಿ ಸಾಧನೆ.

ಸಿಂಹರಾಶಿ
ಸ್ನೇಹಿತರ ಮಾತಿಗೆ ಗೌರವ, ದಂಪತಿಗಳಿಗೆ ಸಂತಾನಭಾಗ್ಯದ ಸೂಚನೆ ತೋರಿ ಬರಲಿದೆ. ಯೋಗ್ಯ ಜನರ ಸಹವಾಸದ ಸದುಪಯೋಗದಿಂದ ಕಾರ್ಯಾನುಕೂಲಕ್ಕೆ ಸಾಧ್ಯತೆ ತಂದೀತು. ಆರ್ಥಿಕವಾಗಿ ಧನಾಗಮನವು ಉತ್ತಮವಿರುತ್ತದೆ. ಅನಿರೀಕ್ಷಿತ ಜವಾಬ್ದಾರಿ ಹೆಚ್ಚಾಗುವುದು, ಆದಾಯ ಉತ್ತಮ, ಭಾಗ್ಯ ವೃದ್ಧಿ, ಸಾಲ ಮರುಪಾವತಿ.

ಕನ್ಯಾರಾಶಿ
ಆತುರದ ತೀರ್ಮಾನದಿಂದ ತೊಂದರೆ, ಆರ್ಥಿಕವಾಗಿ ಧನಾಗಮನವು ಉತ್ತಮವಿದ್ದರೂ ಅನಿರೀಕ್ಷಿತ ಖರ್ಚುವೆಚ್ಚಗಳು ಆತಂಕಕ್ಕೆ ಕಾರಣವಾದೀತು. ಕೆಲವೊಮ್ಮೆ ಇಷ್ಟವಿರೋಧಿ ಕಾರ್ಯನಿರ್ವಹಣೆಯ ಸಾಧ್ಯತೆ ಇರುತ್ತದೆ. ಮಿತ್ರರೊಡನೆ ನಿಷ್ಠುರ. ಯೋಚಿಸಿ ನಿರ್ಧಾರ ಕೈಗೊಳ್ಳಿ, ವ್ಯಾಪಾರದಲ್ಲಿ ನಷ್ಟ, ಮಕ್ಕಳಿಂದ ಸಹಕಾರ, ಮಾನಸಿಕ ನೆಮ್ಮದಿ, ಮಹಿಳೆಯರಿಗೆ ಶುಭ.

ತುಲಾರಾಶಿ
ಅನ್ಯ ಜನರಲ್ಲಿ ದ್ವೇಷ, ಹಣಕಾಸು ತೊಂದರೆ, ಕಾರ್ಯರಂಗದಲ್ಲಿ ಛಲಬಿಡದೆ ಪಟ್ಟು ಹಿಡಿದು ದುಡಿಯಿರಿ. ನೀವು ಬೆಳೆಸಿಕೊಂಡು ಬಂದ ದ್ವಂದ್ವ ಚಿಂತನೆಯನ್ನು ಬಿಟ್ಟುಬಿಡಿರಿ. ರಾಜಕೀಯದವರಿಗೆ ಮುನ್ನಡೆಯ ದಿನಗಳಿವು. ಶುಭವಿದೆ. ವಾಹನದಿಂದ ಕಂಟಕ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ಮಾತೃವಿನಿಂದ ಸಹಾಯ.

ವೃಶ್ಚಿಕರಾಶಿ
ಯತ್ನ ಕಾರ್ಯದಲ್ಲಿ ಜಯ, ಮಾನಸಿಕ ಒತ್ತಡ, ಶ್ರಮಕ್ಕೆ ತಕ್ಕ ಫಲ, ಆರ್ಥಿಕವಾಗಿ ಪರಿಸ್ಥಿತಿಯು ಸುಧಾರಣೆಯಾಗುತ್ತಾ ಹೋಗಲಿದೆ. ಸಾಂಸಾರಿಕವಾಗಿ ನೆಮ್ಮದಿ ಇದ್ದರೂ ಕುಟುಂಬಿಕವಾಗಿ ಕಿರಿಕಿರಿ ತಪ್ಪದು. ಯಾವುದೇ ವಿಚಾರದಲ್ಲಿ ನಿರಾಸೆಗೊಳ್ಳದೆ ದೃಢತೆ ಕಾಯ್ದುಕೊಳ್ಳಿರಿ. ಉತ್ತಮ ಪ್ರಗತಿ, ಆಲಸ್ಯ ಮನೋಭಾವ.

ಧನಸ್ಸುರಾಶಿ
ನಾನಾ ರೀತಿಯ ಯೋಚನೆ, ಕುಟುಂಬದಲ್ಲಿ ಪ್ರೀತಿ, ಮನೋವಿಕಾಸಕ್ಕೆ ಪೂರಕವಾದ ವಾತಾವರಣವಿರುತ್ತದೆ. ಖರ್ಚುವೆಚ್ಚಗಳ ಬಗ್ಗೆ ಲೆಕ್ಕಾಚಾರ ಸರಿಯಾಗಿ ಇರಲಿ. ವೈಯಕ್ತಿಕವಾಗಿ ಕೆಲಸದ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಗೃಹ ಸಾಮಗ್ರಿಗಳಿಗಾಗಿ ಧನವ್ಯಯವಿದೆ. ಹಣಕಾಸು ಲಾಭ, ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ, ಹಿತ ಶತ್ರುಗಳ ಬಾಧೆ.

ಮಕರರಾಶಿ
ಮಿತ್ರರ ಭೇಟಿ, ಕುಟುಂಬ ಸೌಖ್ಯ, ಸುಖ ಬೋಜನ ಪ್ರಾಪ್ತಿ, ವ್ಯಾಪಾರ, ವ್ಯವಹಾರಗಳಲ್ಲಿ ನಿಮ್ಮ ಕುಶಲತೆ ಪ್ರಕಟವಾದೀತು. ಆಗಾಗ ಸಂಚಾರದಿಂದ ಕಾರ್ಯಸಿದ್ಧಿ ಇದೆ. ಸಾಂಸಾರಿಕ ನೆಮ್ಮದಿಯ ವಾತಾವರಣ. ಆದರೂ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಅಧಿಕವಾದ ಖರ್ಚು, ಗುರು ಹಿರಿಯರಿಂದ ಆಶೀರ್ವಾದ.

ಕುಂಭರಾಶಿ
ಹೆಚ್ಚು ಪರಿಶ್ರಮ ಪಡುವಿರಿ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಪತ್ನಿಯ ಆರೋಗ್ಯದ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಳ್ಳದಿರಿ. ಏರುಪೇರು ಕಾಣುತ್ತಲೇ ಇರುತ್ತದೆ. ಆರ್ಥಿಕವಾಗಿ ಧನಾಗಮನವಿದ್ದರೂ ಖರ್ಚುವೆಚ್ಚಗಳು ಅದೇ ರೀತಿಯಲ್ಲಿ ಕಂಡು ಬರಲಿವೆ. ಜಾಗ್ರತೆ ಇರಲಿ. ನಾನಾ ರೀತಿಯ ಆದಾಯ ಪ್ರಾಪ್ತಿ, ಮನೋಭಾವನೆ ಈಡೇರುವುದು, ಮಿಶ್ರ ಫಲ ಯೋಗ.

ಮೀನರಾಶಿ
ಸ್ನೇಹಿತರಿಗೆ ಸಾಂತ್ವನ ಹೇಳುವಿರಿ, ಕಾರ್ಯರಂಗದಲ್ಲಿ ಒತ್ತಡವಿದ್ದರೂ ಕಾರ್ಯಸಾಧನೆಯಾಗಲಿದೆ. ಯೋಗ್ಯ ಸಂಬಂಧಗಳು ಕಂಕಣಬಲಕ್ಕೆ ಪೂರಕವಾಗಲಿವೆ. ಅವಕಾಶವನ್ನು ಸದುಪ ಯೋಗಿಸಿರಿ. ವಿದ್ಯಾರ್ಥಿಗಳಿಗೆ ಶುಭವಿದೆ. ವಿರೋಧಿಗಳಿಂದ ಕುತಂತ್ರ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಸ್ತ್ರೀಯರಿಗೆ ಜವಾಬ್ದಾರಿ, ದಾಂಪತ್ಯದಲ್ಲಿ ಪ್ರೀತಿ.

Leave A Reply

Your email address will not be published.