ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 02-05-2020

ನಿತ್ಯಭವಿಷ್ಯ : 02-05-2020

- Advertisement -

ಮೇಷರಾಶಿ
ಲಾಭದಾಯಕ ರಾಹು ಅನುಕೂಲ ಫ‌ಲವನ್ನು ನೀಡಲಿದ್ದಾನೆ. ದೂರ ಸಂಚಾರದಿಂದ ಕಾರ್ಯಸಿದ್ಧಿಯಾಗಲಿದೆ. ಹಮ್ಮಿಕೊಂಡ ಕಾರ್ಯಗಳು ಸುಲಲಿತವಾಗಿ ನಡೆಯುತ್ತವೆ. ಹಣದ ಉಳಿತಾಯದ ಬಗ್ಗೆ ಚರ್ಚೆ, ಬಂಧುಮಿತ್ರರಿಂದ ಕಾರ್ಯಸಾಧನೆಗೆ ಒತ್ತಡವಿರುತ್ತದೆ.

ವೃಷಭರಾಶಿ
ಕೆಲಸ ಕಾರ್ಯಗಳಲ್ಲಿ ತಾಳ್ಮೆ ಇಟ್ಟುಕೊಳ್ಳುವುದು ಒಳಿತು. ಆರ್ಥಿಕವಾಗಿ ಉತ್ತಮ ಅಭಿವೃದ್ಧಿ ಇದ್ದರೂ ಖರ್ಚುವೆಚ್ಚಗಳು ಅಧಿಕವಾಗಿರುತ್ತವೆ. ಕೃಷಿ ಬೇಸಾಯ ಕಾರ್ಯಗಳಲ್ಲಿ ಕಾಯುವಂತಹ ಪರಿಸ್ಥಿತಿ ಬಂದೀತು. ಹೆತ್ತವರ ಅನಾರೋಗ್ಯ ಆತಂಕಕ್ಕೆ ಕಾರಣವಾದೀತು. ಉದ್ಯೋಗದಲ್ಲಿ ಉತ್ತಮ ಅಭಿವೃದ್ಧಿ ಇರುತ್ತದೆ.

ಮಿಥುನರಾಶಿ
ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗಲಿದೆ. ಆರ್ಥಿಕ ಸಮಸ್ಯೆ ತಲೆದೋರಲಿದೆ. ಅಧಿಕಾರಿ ವರ್ಗದವರಿಗೆ ಸಮಸ್ಯೆಗಳು ತೋರಿಬಂದು ಕೋಪತಾಪಗಳು ಹೆಚ್ಚಾಗಲಿವೆ. ಕೆಲಸ ಕಾರ್ಯಗಳು ಸ್ಥಗಿತಗೊಳ್ಳಲಿವೆ. ಆಕಸ್ಮಿಕ ಪ್ರವಾಸದಿಂದ ಧನವ್ಯಯವಾಗುತ್ತದೆ. ಹಿರಿಯರಿಗೆ ದೇಹಾರೋಗ್ಯದ ಬಗ್ಗೆ ಜಾಗ್ರತೆ ಮಾಡಬೇಕಾಗುತ್ತದೆ.

ಕಟಕರಾಶಿ
ಕೆಲಸ ಕಾರ್ಯಗಳಲ್ಲಿ ಬದಲಾವಣೆ, ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಸುಖಶಾಂತಿ ಯನ್ನು ನೀಡಲಿದೆ. ನಿಂತುಹೋದ ಕೆಲಸಕಾರ್ಯಗಳು ಪುನಃ ಚಾಲನೆಗೆ ಬರಲಿವೆ.ಆರ್ಥಿಕ ಸಮಸ್ಯೆ ಪರಿಹಾರವಾಗಲಿದೆ. ನಿಮ್ಮಿಂದ ಉಪಕೃತರಾದವರೇ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಹೊಂದಲಿದ್ದಾರೆ.

ಸಿಂಹರಾಶಿ
ಹಿತಶತ್ರುಗಳು ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯವನ್ನು ಹೊಂದಲಿದ್ದಾರೆ. ಚಿಂತಿತ ಕೆಲಸಕಾರ್ಯಗಳು ನಿಮ್ಮಿಚ್ಛೆಯಂತೆ ನೆರವೇರಲಿವೆ. ಗೃಹ ನಿರ್ಮಾಣ ಕಾರ್ಯದ ಬಗ್ಗೆ ಯೋಜನೆ ರೂಪಿಸುವಿರಿ. ಸಹೋದರರಿಂದ ಸಹಾಯ. ಹಿರಿಯರೊಬ್ಬರ ಸಹಾಯದಿಂದ ನೆನೆಗುದಿಗೆ ಬಿದ್ದ ಕಾರ್ಯ ಪೂರ್ಣಗೊಳ್ಳುತ್ತದೆ. ಯೋಗ್ಯ ವಯಸ್ಕರಿಗೆ ಕಂಕಣಬಲಕ್ಕೆ ಅವಕಾಶಗಳು ಒದಗಿ ಬಂದಾವು.

ಕನ್ಯಾರಾಶಿ
ಉತ್ತಮ ಸಂಬಂಧಗಳನ್ನು ಕಳೆದುಕೊಳ್ಳುವ ಸಾಧ್ಯತೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ದೂರ ಸಂಚಾರದಲ್ಲಿ ಧನವ್ಯಯವಾದೀತು. ಮಾನಸಿಕ ಒತ್ತಡ ಕೋಪತಾಪಗಳಿಗೆ ಕಾರಣವಾಗಲಿದೆ. ಆರ್ಥಿಕವಾಗಿ ಹೆಚ್ಚಿನ ಜಾಗ್ರತೆ ಅತೀ ಅಗತ್ಯವಿದೆ. ವೃತ್ತಿರಂಗದಲ್ಲಿ ಅನಾವಶ್ಯಕ ಭಿನ್ನಾಭಿಪ್ರಾಯಗಳು ಮೂಡಲಿವೆ.

ತುಲಾರಾಶಿ
ಆರ್ಥಿಕವಾಗಿ ಸಾಧಾರಣ ದಿನ. ಆರೋಗ್ಯದ ಕಡೆಗೆ ಗಮನಹರಿಸಿ. ನಿಮ್ಮ ವರಟು ವರ್ತನೆ ಸ್ನೇಹಿತರಿಗೆ ಬೇಸರ ತರಿಸಬಹುದು. ವೃತ್ತಿ, ಉದ್ಯೋಗದಲ್ಲಿ ಬದಲಾವಣೆಯ ಅವಕಾಶಗಳು ಒದಗಿಬಂದಾವು. ಆಗಾಗ ಅಪವಾದಕ್ಕೆ ಬಲಿಯಾಗದಂತೆ ಜಾಗ್ರತೆ ವಹಿಸಿರಿ. ಅರ್ಥಿಕವಾಗಿ ಸಮತೋಲನವನ್ನು ಸಾಧಿಸಬಹುದಾಗಿದೆ. ಶುಭವಾರ್ತೆಯಿಂದ ಸಂತಸ.

ವೃಶ್ಚಿಕರಾಶಿ
ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರಕಾರ್ಯಶೀಲತೆಗೆ ಮುಂಭಡ್ತಿ ಸಿಗಲಿದೆ. ವೃತ್ತಿ ಜೀವನದಲ್ಲಿ ಸ್ವತಃ ನಿರ್ಧಾರವನ್ನು ತೆಗೆದುಕೊಳ್ಳಿ. ಸಂಗಾತಿಯಿಂದ ಸಹಕಾರ. ಹಿತಶತ್ರುಗಳು ನಿಮ್ಮ ಕೆಲಸಕಾರ್ಯಗಳಿಗೆ ಅಡ್ಡಿ ಮಾಡಲಿದ್ದಾರೆ. ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನಬಲದಲ್ಲಿ ಉತ್ತಮ ಫ‌ಲಿತಾಂಶವಿದೆ.

ಧನುರಾಶಿ
ಆರ್ಥಿಕವಾಗಿ ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ. ದಾನಧರ್ಮಗಳಿಗಾಗಿ ಧನವ್ಯಯವಾದರೂ ಮಾನಸಿಕ ಸಮಾಧಾನ ಸಿಗಲಿದೆ. ಆರೋಗ್ಯದ ಬಗ್ಗೆ ಗಮನ ಹರಿಸ ಬೇಕಾಗುತ್ತದೆ. ದುಡುಕು ನಿರ್ಧಾರದಿಂದ ಸಂಬಂಧ ಹಾಳಾಗಲಿದೆ. ನೀವು ಆಲೋಚಿಸಿದ ಕೆಲಸಕಾರ್ಯಗಳು ಮುನ್ನಡೆಗೆ ಸಾಧಕವಾಗಲಿವೆ. ಸಂಚಾರದಲ್ಲಿ ಜಾಗ್ರತೆ.

ಮಕರರಾಶಿ
ಸಾಲಗಾರರ ಕಾಟದಿಂದ ಜಿಗುಪ್ಸೆ. ಹಣಕಾಸಿನ ವಿಚಾರದಲ್ಲಿ ಸ್ನೇಹಿತರಿಂದ ಸಹಕಾರ. ವಿರೋಧಿಗಳನ್ನು ಸಮರ್ಥವಾಗಿ ಎದುರಿಸಲಿದ್ದೀರಿ. ಸಾಂಸಾರಿಕವಾಗಿ ಪತ್ನಿ, ಮಕ್ಕಳಿಂದ ಶುಭ ಫ‌ಲವು ಪ್ರಾಪ್ತಿಯಾಗಲಿದೆ. ಶ್ರೀ ದೇವರ ದರ್ಶನಭಾಗ್ಯದಿಂದ ಶಾಂತಿ, ಸಮಾಧಾನವು ಸಿಗಲಿದೆ. ಶ್ರಮಜೀವಿಗಳಿಗೆ ಉತ್ತಮ ಫ‌ಲ.

ಕುಂಭರಾಶಿ
ಧನವ್ಯಯವು ಕಂಡುಬಂದರೂ ಧನಾಗಮನವು ಉತ್ತಮ. ಕಠಿಣ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುವಿರಿ. ಕೋಪವನ್ನು ನಿಯಂತ್ರಿಸುವುದು ಉತ್ತಮ. ಕೋರ್ಟು ಕಚೇರಿ ವ್ಯವಹಾರದಲ್ಲಿ ಜಾಗ್ರತೆ ವಹಿಸಿರಿ. ವೈಯಕ್ತಿಕ ಆಗುಹೋಗುಗಳಲ್ಲಿ ಚಿಂತಿತರಾಗದೆ ದೃಢ ನಿರ್ಧಾರದಿಂದ ಮುನ್ನಡೆದಲ್ಲಿ ಕಾರ್ಯಸಾಧನೆ ಇದೆ.

ಮೀನರಾಶಿ
ನಿಮ್ಮ ಮನೋ ಕಾಮನೆಗಳು ಪೂರ್ಣಗೊಳ್ಳುವುದು. ವ್ಯಾಪಾರದಲ್ಲಿ ಲಾಭ. ಸಮಾಜದಲ್ಲಿ ಕೀರ್ತಿ ಗೌರವ ಹೆಚ್ಚಾಗಲಿದೆ. ಆಗಾಗ ತಾಪತ್ರಯಗಳು ತೋರಿಬಂದರೂ ಎಲ್ಲವನ್ನೂ ಸಮರ್ಥವಾಗಿ ಎದುರಿಸಬಹುದಾಗಿದೆ. ಅನಿರೀಕ್ಷಿತ ಕಾರ್ಯಸಾಧನೆಯಿಂದ ಅಚ್ಚರಿಯಾದೀತು ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫ‌ಲ ಇದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular