ಮದ್ಯಪ್ರಿಯರಿಗೆ ಬಿಗ್ ಶಾಕ್ : ಬಾರ್ ಓಪನ್ ಆದ್ರೂ ಸಿಗಲ್ಲ ಮದ್ಯ !

0

ಬೆಂಗಳೂರು : ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿನಿಂದಲೂ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಿತ್ತು. ಲಾಕ್ ಡೌನ್ ವಿಸ್ತರಣೆಯ ನಡುವಲ್ಲೇ ಕೇಂದ್ರ ಸರಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಆದ್ರೀಗ ಬಾರ್ ಗಳು ಓಪನ್ ಆದ್ರೂ ಕೂಡ ಮದ್ಯ ಸಿಗೋದೇ ಡೌಟು.

ಮದ್ಯಪಾನ ಆರೋಗ್ಯಕ್ಕೆ ಹಾನಿಕರ

ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರೋ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ದೇಶದಾದ್ಯಂತ ಬಾರ್, ಪಬ್ ಗಳನ್ನು ಬಂದ್ ಮಾಡಿತ್ತು. ಅದ್ರಲ್ಲೂ ಲಾಕ್ ಡೌನ್ ಆದೇಶ ಜಾರಿಗೆ ಬರುತ್ತಿದ್ದಂತೆಯೇ ಮದ್ಯ ಮಾರಾಟಕ್ಕೆ ಸಂಪೂರ್ಣವಾಗಿ ಬ್ರೇಕ್ ಬಿದ್ದಿತ್ತು. ಹೀಗಾಗಿಯೇ ಕಳೆದೊಂದು ತಿಂಗಳ ಅವಧಿಯಲ್ಲಿ ಕರ್ನಾಟಕ ರಾಜ್ಯದ ಯಾವೊಂದು ಬಾರ್ ಗಳು ಓಪನ್ ಆಗಿಲ್ಲ. ಮದ್ಯಪ್ರಿಯರು ಮೊದಲ ಲಾಕ್ ಡೌನ್ ಅವಧಿ ಮುಕ್ತಾಯದ ಹೊತ್ತಲೇ ಮದ್ಯ ಮಾರಾಟಕ್ಕೆ ಅವಕಾಶ ನೀಡುವಂತೆ ಸರಕಾರವನ್ನು ಒತ್ತಾಯಿಸಿದ್ದರು. ಆದರೆ ಎರಡನೇ ಹಂತದ ಲಾಕ್ ಡೌನ್ ಅವಧಿಯಲ್ಲಿಯೂ ಮದ್ಯ ಮಾರಾಟದ ಮೇಲಿನ ನಿಷೇಧವನ್ನು ವಿಸ್ತರಿಸಲಾಗಿತ್ತು. ಕೊನೆಗೂ ಕೇಂದ್ರ ಸರಕಾರ ಮೂರನೇ ಹಂತದ ಲಾಕ್ ಡೌನ್ ವಿಸ್ತರಣೆಯ ಜೊತೆಗೆ ಮದ್ಯ ಮಾರಾಟಕ್ಕೂ ಷರತ್ತು ಬದ್ದ ಅವಕಾಶವನ್ನು ನೀಡಿದೆ. ಹೀಗಾಗಿ ಗ್ರೀನ್ ಝೋನ್ ಗಳಲ್ಲಿ ಮೇ 4ರಿಂದ ಮದ್ಯ ಮಾರಾಟಕ್ಕೆ ಕೇಂದ್ರ ಸರಕಾರ ಅವಕಾಶ ನೀಡುತ್ತಿದ್ದಂತೆಯೇ ಮದ್ಯಪ್ರಿಯರು ಸಖತ್ ಖುಷಿಯಾಗಿದ್ದಾರೆ. ಆದ್ರೀಗ ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್ ಎದುರಾಗಿದೆ.

ಮದ್ಯಪಾನ ಆರೋಗ್ಯಕ್ಕೆ ಹಾನಿಕರ

ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧವಿದ್ದರೂ ಕೂಡ ರಾಜ್ಯದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಎಗ್ಗಿಲ್ಲದೇ ಸಾಗಿದೆ. ಆನ್ ಲೈನ್ ಮೂಲಕವೂ ಮದ್ಯವನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರು, ಮಂಗಳೂರು, ಉಡುಪಿ, ಮೈಸೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿಯೂ ಮದ್ಯ ಲಭಿಸುತ್ತಿತ್ತು. ಮದ್ಯ ನಿಷೇಧವನ್ನೇ ಬಂಡವಾಳ ಮಾಡಿಕೊಂಡಿರೋ ಬಾರ್ ಗಳ ಮಾಲೀಕರು ದಾಸ್ತಾನಿದ್ದ ಮದ್ಯವನ್ನು ಕದ್ದು ಸಾಗಾಟ ಮಾಡಿದ್ದಾರೆ. ಹಲವು ಕಡೆಗಳಲ್ಲಿನ ಬಾರ್ ಗಳಲ್ಲಿ ಡ್ರಿಂಗ್ಸ್ ಕಳವು ಮಾಡಲಾಗಿದೆ. ಅಲ್ಲದೇ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ರಾಜ್ಯ ಸರಕಾರಕ್ಕೆ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ಅಬಕಾರಿ ಇಲಾಖೆಯ ಅಧಿಕಾರಿಗಳು ಮಾತ್ರ ಗೊತ್ತಿದ್ರೂ ಮೌನವಾಗಿದ್ದಾರೆ. ಇನ್ನು ಹಲವು ಕಡೆಗಳಲ್ಲಿ ಕಳ್ಳಬಟ್ಟಿ ದಂಧೆಯೂ ವ್ಯಾಪಕವಾಗಿ ನಡೆಯುತ್ತಿದೆ ಅನ್ನೋ ಆರೋಪವೂ ಇದೆ.

ಮದ್ಯಪಾನ ಆರೋಗ್ಯಕ್ಕೆ ಹಾನಿಕರ

ದಕ್ಷಿಣ ಕನ್ನಡ ಜಿಲ್ಲಾಡಳಿತ ಬಾರ್ ಗಳಲ್ಲಿನ ದಾಸ್ತಾನುಗಳನ್ನು ಅಕ್ರಮವಾಗಿ ಸಾಗಾಟ ಮಾಡಿರುವವರಿಗೆ ಬಿಸಿಮುಟ್ಟಿಸಿದ್ದಾರೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮದ್ಯದಂಗಡಿಗಳಲ್ಲಿನ ದಾಸ್ತಾನುಗಳನ್ನು ಸಾಗಾಟ ಮಾಡಿರುವ ಕುರಿತು ಜಿಲ್ಲಾಡಳಿತಕ್ಕೆ ದೂರು ಸಲ್ಲಿಕೆಯಾಗಿದೆ. ಮದ್ಯ ಹಾಗೂ ಬಿಯರ್ ದಾಸ್ತಾನಿನಲ್ಲಿ ವ್ಯತ್ಯಾಸಗಳಿವೆ ಅಂತಾ ಹಲವರು ದೂರಿದ್ದಾರೆ. ಜಿಲ್ಲೆಯಾದ್ಯಂತ ಅಕ್ರಮವಾಗಿ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ ಅನ್ನೋ ದೂರುಗಳು ಕೇಳಿಬಂದಿದೆ.

ಬಾರ್ ಗಳನ್ನು ಸೀಲ್ ಮಾಡಿದ್ದರೂ ಕೂಡ ದಾಸ್ತಾನು ಸಾಗಾಟ ಮಾಡಿರುವ ಕುರಿತು ತನಿಖೆ ನಡೆಸುವಂತೆ ಅಬಕಾರಿ ಆಯುಕ್ತರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ. ಬಾರ್ ಗಳನ್ನು ಸೀಲ್ ಮಾಡೋದಕ್ಕೆ ಮೊದಲು ಎಷ್ಟು ದಾಸ್ತಾನು ಇತ್ತೋ ಅಷ್ಟೇ ದಾಸ್ತಾನುಗಳನ್ನು ಬಾರ್ ಗಳು ಹೊಂದಿರಬೇಕು. ಒಂದೊಮ್ಮೆ ಬಾರ್ ಗಳಲ್ಲಿನ ದಾಸ್ತಾನುಗಳಲ್ಲಿ ವ್ಯತ್ಯಾಸ ಕಂಡುಬಂದ್ರೆ ಅಂತವರ ವಿರುದ್ದ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಗ್ರೀನ್ ಝೋನ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶವೇನೋ ಲಭ್ಯವಾಗಿದೆ. ಆದರೆ ದಾಸ್ತಾನು ಇಲ್ಲದೇ ಇದ್ರೆ ಎಣ್ಣೆ ಕೊಳ್ಳುವುದಾದ್ರೂ ಹೇಗೆ ಅನ್ನೋ ಚಿಂತೆ ಮದ್ಯಪ್ರಿಯರನ್ನು ಕಾಡುತ್ತಿದೆ. ಇನ್ನಾದ್ರೂ ಅಬಕಾರಿ ಇಲಾಖೆ ಎಚ್ಚೆತ್ತು ಈ ಕುರಿತು ತನಿಖೆ ನಡೆಸಬೇಕಾದ ಅಗತ್ಯವಿದೆ.

Leave A Reply

Your email address will not be published.