ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರಕಾರ : ಮೇ 4ರಿಂದಲೇ ಮದ್ಯ ಮಾರಾಟಕ್ಕೆ ಅನುಮತಿ

0

ನವದೆಹಲಿ : ಕೇಂದ್ರ ಸರಕಾರ ದೇಶದಾದ್ಯಂತ ಮೇ 17ರ ವರೆಗೆ ಲಾಕ್ ಡೌನ್ 3.0 ಜಾರಿ ಮಾಡಿದೆ. ಆದರೆ ಗ್ರೀಜ್ ಝೋನ್ ಜಿಲ್ಲೆಗಳಲ್ಲಿ ಮದ್ಯಮಾರಾಟಕ್ಕೆ ಅನುಮತಿಯನ್ನು ನೀಡಿದ್ದು, ಮದ್ಯಪ್ರಿಯರು ಪುಲ್ ಖುಷ್ ಆಗಿದ್ದಾರೆ.

ಮದ್ಯಪಾನ ಆರೋಗ್ಯಕ್ಕೆ ಹಾನಿಕರ

ಮೇ3 ರಂದು ಎರಡನೇ ಹಂತದ ಲಾಕ್ ಡೌನ್ ಆದೇಶ ಮುಕ್ತಾಯವಾಗಲಿದ್ದು, ಮೇ 4 ರಿಂದಲೇ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಾರ್ ಗಳಲ್ಲಿ ಕೇವಲ ಪಾರ್ಸೆಲ್ ನೀಡೋದಕ್ಕೆ ಮಾತ್ರವೇ ಅವಕಾಶವನ್ನು ಕಲ್ಪಿಸಲಾಗಿದ್ದು, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಲೇ ಬೇಕು.

ಪಾರ್ಸೆಲ್ ಪಡೆಯುವಾಗ ಸಾಲಿನಲ್ಲಿ ಕೇವಲ 5 ಮಂದಿಯಷ್ಟೇ ಇರಲು ಅವಕಾಶವನ್ನು ಕಲ್ಪಿಸಲಾಗಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದ ಬಾರ್ ಗಳ ವಿರುದ್ದ ಕ್ರಮಕೈಗೊಳ್ಳುವುದಾಗಿ ಕೇಂದ್ರ ಸರಕಾರ ಹೇಳಿದೆ.

Leave A Reply

Your email address will not be published.