ಮೇಷರಾಶಿ
ಬಂಧು ಮಿತ್ರರಿಂದ ನೆರವು, ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ, ಬಡ್ಡಿ ವ್ಯವಹಾರದಲ್ಲಿ ತೊಂದರೆ, ಉತ್ತಮ ಅವಕಾಶಗಳು ವೃತ್ತಿರಂಗದಲ್ಲಿ ಒದಗಿ ಬರುತ್ತವೆ.ಅನಾರೋಗ್ಯ ಆಗಾಗ ಕಿರಿಕಿರಿ ತರಲಿದೆ. ಹೆಂಗಸರಿಗೆ ನಕಾರಾತ್ಮಕ ಮನೋಸ್ಥಿತಿಯಿಂದ ಶಾಂತಿ ಸಿಗದು. ವ್ಯಾಪಾರದಲ್ಲಿ ನಷ್ಟ, ಪಿತ್ರಾರ್ಜಿತ ಆಸ್ತಿ ತಗಾದೆ ಶಮನ ಸಾಧ್ಯತೆ, ಕೋರ್ಟ್ ಕೇಸ್‍ಗಳಲ್ಲಿ ಜಯದ ಸೂಚನೆ.
ವೃಷಭರಾಶಿ
ಸ್ಥಿರಾಸ್ತಿಯ ಮೇಲೆ ಸಾಲ ಮಾಡುವ ಸಾಧ್ಯತೆ, ಆರ್ಥಿಕ ಪರಿಸ್ಥಿತಿಯು ಉತ್ತಮಗೊಳ್ಳುತ್ತಲೆ ಹೋಗಲಿದೆ.ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡು ಬರಲಿದೆ.ಹಿರಿಯರಿಂದ ಸಾಮಾಜಿಕವಾಗಿ ಗೌರವ ಪ್ರತಿಷ್ಠೆ ವೃದ್ಧಿಯಾಗಲಿದೆ.ವಿದ್ಯಾರ್ಥಿಗಳು ಸುದೈವಿಗಳಾದರು. ಉದ್ಯೋಗ-ವ್ಯಾಪಾರದಲ್ಲಿ ಅನುಕೂಲ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಆಸೆ ಆಕಾಂಕ್ಷೆಗಳು ಈಡೇರುವುದಿಲ್ಲ, ನಿರಾಸೆಯ ದಿನ ನಿಮ್ಮದಾಗುವುದು.
ಮಿಥುನರಾಶಿ
ಉದ್ಯೋಗ ಬದಲಾವಣೆಗೆ ಅವಕಾಶ, ಆರ್ಥಿಕ ವಿಚಾರದಲ್ಲಿ ಇತರರಿಂದ ವಂಚನೆ ತಾಪತ್ರಯಗಳು ಕೂಡಾ ಕಂಡು ಬಂದಾವು.ಸದ್ಯದ ಪರಿಸ್ಥಿತಿಯಲ್ಲಿ ಎಲ್ಲವನ್ನು ಎದುರಿಸುವಂತಾದೀತು. ನಿಮ್ಮ ಪ್ರಯತ್ನ ಬಲಕ್ಕೆ ಆತ್ಮವಿಶ್ವಾಸಕ್ಕೆ ಹೆಚ್ಚಿನ ಒತ್ತು ಕೊಡಿರಿ.ಸಾಧನೆ ಆದೀತು. ಉತ್ತಮ ಹೆಸರು ಗೌರವ ಪ್ರಾಪ್ತಿ, ಸ್ಥಿರಾಸ್ತಿ ವ್ಯವಹಾರದಲ್ಲಿ ಅನುಕೂಲ, ಗೃಹ, ಸ್ಥಳ ಬದಲಾವಣೆಗೆ ಶುಭ ಕಾಲ, ಮಕ್ಕಳಿಂದ ಆರ್ಥಿಕ ನೆರವು, ಆಹಾರ-ವಾತಾವರಣ ವ್ಯತ್ಯಾಸದಿಂದ ಅನಾರೋಗ್ಯ.

ಕಟಕರಾಶಿ
ಕೃಷಿ ಭೂಮಿಯಿಂದ ಅನುಕೂಲ, ವಾಹನ ಚಾಲಕರಿಗೆ ಲಾಭ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಉತ್ತಮ ದೈವಾನುಗ್ರಹವಿದ್ದು ಉದ್ಯೋಗ, ವ್ಯವಹಾರಗಳಲ್ಲಿ ಉತ್ತಮ ಅವಕಾಶಗಳು ಸಿಗಲಿವೆ. ಅದ್ಯಾಪನ ವೃತ್ತಿಯಲ್ಲಿ ಉತ್ತಮ ಯಶಸ್ಸು ಪ್ರಾಪ್ತಿಯಾಗಲಿದೆ.ಸಾಂಸಾರಿಕವಾಗಿ ವಾದ, ವಿವಾದಗಳಿಂದ ದೂರವಿದ್ದಷ್ಟು ಉತ್ತಮ. ಉದ್ಯೋಗ-ವ್ಯಾಪಾರದಲ್ಲಿ ನಷ್ಟ, ದುಶ್ಚಟಗಳು ಹೆಚ್ಚಾಗುವುದು, ಮನಸ್ಸಿನಲ್ಲಿ ಕೆಟ್ಟಾಲೋಚನೆ.
ಸಿಂಹರಾಶಿ
ಆರೋಗ್ಯಕ್ಕಾಗಿ ಅಧಿಕ ಖರ್ಚು, ಆರ್ಥಿಕವಾಗಿ ಪರಿಸ್ಥಿತಿಯು ಉತ್ತಮಗೊಳ್ಳುತ್ತಾ ಹೊಗಲಿದೆ. ಆದರೆ ಹಿಡಿತ ಗಟ್ಟಿಯಾಗಿರಲಿ. ಸಾಂಸಾರಿಕವಾಗಿ ಸಮಾಧಾನ ಸಿಗಲಿದೆ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ವೃತ್ತಿರಂಗದಲ್ಲಿ ಮುಂಭಡ್ತಿ ತರಲಿದೆ. ಬಂಧು-ಮಿತ್ರರಿಂದ ಸಹಾಯ ಕೇಳುವಿರಿ, ಹಣಕಾಸು ಸಂಕಷ್ಟ, ಮಕ್ಕಳ ಭವಿಷ್ಯದ ಚಿಂತೆ, ಶುಭ ಕಾರ್ಯಕ್ಕಾಗಿ ಓಡಾಟ-ಯೋಚನೆ, ಮಾನಸಿಕ ಕಿರಿಕಿರಿ, ಅಧಿಕವಾದ ಚಿಂತೆ.
ಕನ್ಯಾರಾಶಿ
ಕುಟುಂಬ ವರ್ಗದವರಿಂದ ಸಹಕಾರ ಸಿಗಲಿದೆ. ಆಗಾಗ ಆರ್ಥಿಕ ತಾಪತ್ರಯಗಳು ಕಾರ್ಯಚರಣೆಗೆ ಅಡ್ಡಿಯಾದಾವು. ವೃತ್ತಿರಂಗದಲ್ಲಿ ಮೇಲಧಿಕಾರಿಗಳಿಂದ ಅನಗತ್ಯವಾಗಿ ಸಮಸ್ಯೆ ತೋರಿ ಬಂದೀತು. ಜಾಗ್ರತೆ ಮಾಡಿರಿ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಧಾರ್ಮಿಕ ಗುರುಗಳ ಭೇಟಿ, ಪುಣ್ಯಕ್ಷೇತ್ರಗಳಿಗೆ ಪ್ರಯಾಣ, ಅಧಿಕವಾದ ಖರ್ಚು, ವ್ಯಾಪಾರ ಆರಂಭಕ್ಕೆ ಶುಭ ದಿನ, ಕೆಲಸ ಕಾರ್ಯಗಳಲ್ಲಿ ಜಯ.

ತುಲಾರಾಶಿ
ಹಣ, ಉದ್ಯೋಗ ನಿಮಿತ್ತ ಪ್ರಯಾಣ, ಕಾರ್ಯರಂಗದಲ್ಲಿ ಮಿಶ್ರಫಲಗಳಿಂದ ತಾತ್ಕಾಲಿಕವಾಗಿ ಮಾನಸಿಕ ನೆಮ್ಮದಿ ದೊರೆತರೂ ಸಮಾಧಾನ ವಿರಲಾರದು. ಶುಭಕಾರ್ಯಗಳ ಸಿದ್ಧಿಗಾಗಿ ಆಗಾಗ ಸಂಚಾರ ಕೈಗೊಳ್ಳಬೇಕಾದೀತು. ಗೃಹದಲ್ಲಿ ಪತ್ನಿಯಿಂದ ಕಿರಿಕಿರಿ ಕಂಡು ಬರಲಿದೆ. ಕೃಷಿ ಉತ್ಪನ್ನ ಖರೀದಿಗಾಗಿ ಖರ್ಚು, ಉದ್ಯೋಗ ವ್ಯಾಪಾರಕ್ಕಾಗಿ ವೆಚ್ಚ, ಸ್ಥಿರಾಸ್ತಿ ತಗಾದೆ, ಅನಗತ್ಯ ಮಾತುಗಳಿಂದ ವಾಗ್ವಾದ.
ವೃಶ್ಚಿಕರಾಶಿ
ದೂರ ಪ್ರದೇಶದಲ್ಲಿ ಉತ್ತಮ ಹೆಸರು, ಉದ್ಯೋಗ ಲಭಿಸುವ ಸಾಧ್ಯತೆ, ನಾನಾ ಮೂಲಗಳಿಂದ ವ್ಯಾಪಾರ, ವ್ಯವಹಾರ ಗಳಲ್ಲಿ ದಾರಾಳವಾಗಿ ಹಣ ಕೈ ಸೇರಿದರೂ ಹೆಚ್ಚಿನ ಜಾಗ್ರತೆ ಅಗತ್ಯವಿದೆ.ಕೆಲಸಕಾರ್ಯಗಳಲ್ಲಿ ನಿರೀಕ್ಷೆಯ ರೀತಿಯಿಂದ ಯಶಸ್ಸು ಅನುಭವಕ್ಕೆ ಬರಲಿದೆ.ಯಾವುದಕ್ಕೂ ಅತುರತೆ ಸಲ್ಲದು. ಕೆಲಸದಲ್ಲಿ ಕಿರಿಕಿರಿ, ಅಧಿಕವಾದ ಖರ್ಚು, ಸ್ವಯಂಕೃತ ಅಪರಾಧದಿಂದ ಸಂಕಷ್ಟ, ಪ್ರಯಾಣಕ್ಕೆ ಅಡೆತಡೆ, ಕೆಲಸ ಕಾರ್ಯಗಳಲ್ಲಿ ವಿಘ್ನ.
ಧನಸ್ಸುರಾಶಿ
ಉದ್ಯೋಗಾವಕಾಶಗಳು ಪ್ರಾಪ್ತಿ, ದೂರ ಪ್ರದೇಶಕ್ಕೆ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ವೃತ್ತಿರಂಗದಲ್ಲಿ ಸಮಸ್ಯೆಗಳ ಮೇಲೆ ಹತೋಟಿ ಸಾಧಿಸುವ ಅವಕಾಶ ವಿರುತ್ತದೆ. ಕೆಲಸಕಾರ್ಯಗಳನ್ನು ಸುತ್ತು ಬಳಸಿಯೇ ಕಾರ್ಯಸಾಧಿಸುವ ಅವಕಾಶ ವಿರುತ್ತದೆ. ಸ್ನೇಹಿತರಿಂದ ಸಲುಗೆಯ ದುರುಪಯೋಗವಾಗದಂತೆ ಜಾಗ್ರತೆ ಮಾಡಿರಿ. ಮಿತ್ರರಿಂದ ಅನುಕೂಲ, ಪ್ರಯಾಣದಲ್ಲಿ ಸುಖಕರ ವಾತಾವರಣ.

ಮಕರರಾಶಿ
ಸಂಗಾತಿಯಿಂದ ಲಾಭ, ಆಕಸ್ಮಿಕ ಉದ್ಯೋಗ ಪ್ರಾಪ್ತಿ, ಅಧಿಕ ಆಯಾಸ, ಆರ್ಥಿಕಸ್ಥಿತಿಯಲ್ಲಿ ಹೆಚ್ಚಿನ ಏರಿಳಿತಗಳಿಲ್ಲ. ಅದರೂ ಕೆಲಸದಲ್ಲಿ ಅನಿರೀಕ್ಷಿತ ಅವಕಾಶಗಳು ಒದಗಿ ಬರಲಿವೆ. ಸಂಚಾರದಿಂದ ಕಾರ್ಯದಲ್ಲಿ ಸಿದ್ದಿಯಾಗಲಿದೆ. ದಾಂಪತ್ಯದಲ್ಲಿ ಪತ್ನಿ ಮಕ್ಕಳಿಂದ ಪ್ರೀತಿ ವಿಶ್ವಾಸ ದೊರಕಲಿದೆ. ಗ್ಯಾಸ್ಟ್ರಿಕ್, ನರದೌರ್ಬಲ್ಯ, ತಲೆ ನೋವು, ಆರೋಗ್ಯದಲ್ಲಿ ವ್ಯತ್ಯಾಸ, ಯೋಚಿಸಿ ನಿರ್ಧಾರ ಕೈಗೊಳ್ಳಿ.
ಕುಂಭರಾಶಿ
ಉದ್ಯೋಗ ಸ್ಥಳದಲ್ಲಿ ಮಿತ್ರರಿಂದ ಅವಮಾನ, ಸಾಲದಿಂದ ಸಂಕಷ್ಟ-ನಿಂದನೆ, ಪ್ರೇಮ ವಿಚಾರದಲ್ಲಿ ಯಶಸ್ಸು, ಕುಟುಂಬದಲ್ಲಿ ಸಹಕಾರ ಲಭಿಸುವುದು, ಕೆಲವೊಂದು ಖರ್ಚುವೆಚ್ಚಗಳಿಂದ ಆರ್ಥಿಕ ಪರಿಸ್ಥಿತಿಯು ಕೆಡಲಿದೆ. ಸರಕಾರಿ ಕೆಲಸಕಾರ್ಯಗಳಲ್ಲಿ ವಿಳಂಬ ತೋರಿ ಬಂದು ಮಾನಸಿಕ ಶಾಂತಿ ಕದಡಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಕಂಡು ಬರುವುದು. ಶುಭವಿದೆ. ಮೇಲಾಧಿಕಾರಿಗಳಿಂದ ಪ್ರಶಂಸೆ.
ಮೀನರಾಶಿ
ವ್ಯವಹಾರಿಕವಾಗಿ ಹಿತಶತ್ರುಗಳ ಕಾಟವಿದ್ದರೂ ಜಾಣ್ಮೆಯಿಂದ ನಡೆದಲ್ಲಿ ಮುನ್ನಡೆ ತೋರಿ ಬರಲಿದೆ. ಕಾರ್ಯಕ್ಷೇತ್ರದಲ್ಲಿ ಮುಖ್ಯವಾಗಿ ಸರಕಾರಿ ಕೆಲಸಕಾರ್ಯಗಳಲ್ಲಿ ಅನಾವಶ್ಯಕವಾಗಿ ಸಮಸ್ಯೆಗಳು ಕಾಡಲಿವೆ ವಿಚ್ಛೇದನ ಕೇಸ್‍ಗಳಲ್ಲಿ ಜಯ, ದಾಂಪತ್ಯದಲ್ಲಿ ಕಲಹ ಶಮನ, ಮೇಲಾಧಿಕಾರಿಗಳಿಂದ ಕಿರಿಕಿರಿ, ಉದ್ಯೋಗ ಕಳೆದುಕೊಳ್ಳುವ ಆತಂಕ, ಸ್ಥಿರಾಸ್ತಿ ತಗಾದೆ, ಕೋರ್ಟ್ ಕೇಸ್‍ಗಳಲ್ಲಿ ಓಡಾಟ, ಹಿರಿಯರಿಂದ ಗೊಂದಲ ನಿವಾರಣೆ.