ನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ (25-10-2020)

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಶುಕ್ಲ ಪಕ್ಷದ ನವಮಿ ತಿಥಿ, ಶ್ರವಣ ನಕ್ಷತ್ರ, ಗಂಡ ಯೋಗ, ಕೌಲವ ಕರಣ, ಅಕ್ಟೋಬರ್ 25 , ಭಾನುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.

ಇಂದು ಬಹು ವಿಶೇಷವಾಗಿ ಮಹಾನವಮಿ. ಇಂದು ಒಂಭತ್ತನೇಯ ದಿನ. ಸಿದ್ಧಿದಾತ್ರಿಯ ಸ್ವರೂಪದಲ್ಲಿ ಜಗನ್ಮಾತೆಯನ್ನು ಪೂಜೆ ಮಾಡುವ ದಿನ . ನಾವು ಏನೇ ಮಾಡಬೇಕು ಎಂದರು ಸಿದ್ಧಿ ಇಲ್ಲದೆ ಸಾಧನೆಯಿಲ್ಲ. ಸಿದ್ಧಿದಾತ್ರಿ ದೇವಿಯನ್ನು ಪೂಜೆ ಮಾಡುವುದರಿಂದ ನಿಮಗೆ ಗೊತ್ತೋ ಗೊತ್ತಿಲ್ಲದೆಯೋ ನಮ್ಮಲ್ಲಿರುವ ಅಜ್ಞಾನವನ್ನು ತೆಗೆದು ಜ್ಞಾನವನ್ನು ತುಂಬುವ ಸಲುವಾಗಿ ಮಾಡುವುದೇ ಸಿದ್ಧಿದಾತ್ರಿ ಪೂಜೆ. ಜಗನ್ಮಾತೆಯು ಸಿದ್ಧಿ ಸ್ವರೂಪದಲ್ಲಿ ಕುಳಿತಿದ್ದಾಗ ಯಕ್ಷ ಕಿನ್ನರ ಗಂಧರ್ವರು ಮಹರ್ಷಿಗಳು ತಪಸ್ವಿಗಳು ಅವಧೂತರು ಎಲ್ಲರೂ ಬಂದು ಸುದ್ದಿಗೋಸ್ಕರ ಎಲ್ಲರೂ ಬಂದು ಉಪಾಸನೆ ಮಾಡುವಂತಹ ಅದ್ಭುತವಾದ ದಿನ.

ಸಿದ್ದಿಯೆಂದರೆ ಸಾಧನೆ. ಜೀವನದಲ್ಲಿ ಏನಾದರೂ ಸಾಧಿಸ ಬೇಕು ಎಂದಾದರೆ ಸಿದ್ಧಿಧಾತ್ರಿಯ ಪೂಜೆಯನ್ನು ಮಾಡಬೇಕು .ಸಿದ್ಧಿ ಪಡೆಯಲು ಒಂದೇ ಕಡೆ ಏಕಾಗ್ರತೆ ಮುಖ್ಯ. ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಸಿದ್ಧಿದಾತ್ರಿ ದೇವಿಯನ್ನು ಪೂಜಿಸಿ. ನಿಮ್ಮ ಶಕ್ತಿ ಸಾಮರ್ಥ್ಯ ಗಳನ್ನು ಸರಿಯಾದ ರೀತಿಯಲ್ಲಿ ಸರಿಯಾದ ಜಾಗದಲ್ಲಿ ಸರಿಯಾದ ಸಮಯದಲ್ಲಿ ಎಬ್ಬಿಸಿ ನಿಲ್ಲಿಸಿ ಕೊಳ್ಳುವಂತಹುದೇ ಸಿದ್ಧತೆ. ಕೇಳು ಮನನ ಚಿಂನತನ ಅಭ್ಯಾಸ ಪ್ರಯತ್ನದಿಂದ ಏನಾದರೂ ಸಾಧಿಸಿಕೊಳ್ಳುವಂತಹ ಸಿದ್ಧಿದಾತ್ರಿಯ ದಿನ.

ಕನಸೇನಾದರು ಇದ್ದರೆ ಅದಕ್ಕೊಂದು ರೂಪ ಆಕಿ, ರಕ್ಷಣೆ ಮಾಡಿ, ಸಿದ್ಧತೆ ಮಾಡಿಕೊಂಡು ಅನಂತರ ಸಿದ್ಧಿಧಾತ್ರಿಯ ಪೂಜೆ ಮಾಡಿ. ನೀನು ಸಿದ್ಧತೆ ಇಲ್ಲದೆ ಪೂಜೆ ಮಾಡುವುದರಿಂದ ಏನು ಫಲ ದೊರೆಯುವುದಿಲ್ಲ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ. ನಿಮ್ಮ ರಾಶಿ ಫಲದ ಬಗ್ಗೆ ಮಾಹಿತಿ ಹೀಗಿದೆ :

ಮೇಷರಾಶಿ
ಖರ್ಚು ವೆಚ್ಚಗಳ ದಿನ, ಪೂಜೆ, ಪುನಸ್ಕಾರ, ಓಡಾಟ ಸುತ್ತಾಟ ಇರುತ್ತದೆ. ವೃತ್ತಿಪರವಾಗಿ ಶುಭ ಸುದ್ದಿಯೊಂದನ್ನು ಕೇಳುತ್ತೀರಾ.

ವೃಷಭರಾಶಿ
ತಂದೆಯ ಆರೋಗ್ಯದ ಕಡೆ ಗಮನಕೊಡಿ ಚಂದ್ರನಿಗೆ ಮೂಲ ತ್ರಿಕೋನದಲ್ಲಿ ರಾಹು ಇರುವುದರಿಂದ ಜಾಗ್ರತೆ. ಶಂಕರಾಮೃತವನ್ನು ಸೇವಿಸಿ.

ಮಿಥುನರಾಶಿ
ಚೆನ್ನಾಗಿದೆ ಆದರೆ ಬೇರೆಯವರ ಮಾತನ್ನು ಕೇಳಿ ತುಂಬಾ ತಲೆಕೆಡಿಸಿಕೊಳ್ಳುತ್ತೀರ. ಇಗ್ನೋರ್ ಮಾಡಿ ತಲೆ ಕೆಡಿಸಿಕೊಳ್ಳಬೇಡಿ.

ಕರ್ಕಾಟಕರಾಶಿ
ಕೆಲಸ ಕಾರ್ಯಗಳಲ್ಲಿ ಪ್ರಗತಿ ಆದರೆ ಧೈರ್ಯದಲ್ಲಿ ಸಣ್ಣ ಕದಲಿಕೆ ಯಾಗುತ್ತದೆ. ರಾಹು ಹನ್ನೊಂದನೇ ಮನೆಯಲ್ಲಿ ಇರುವುದರಿಂದ ಏನೂ ಆಗೋದಿಲ್ಲ ಧೈರ್ಯವಾಗಿ ಮುಂದಕ್ಕೆ ಹೆಜ್ಜೆ ಇಡಿ.

ಸಿಂಹರಾಶಿ
ತಂದೆಯ ಕಡೆ ಗಮನಕೊಡಿ,ಅಕ್ಕಾ, ತಂಗಿ, ಹೆಂಡತಿಯ ಸೋದರಿಯ ವಿಚಾರದಲ್ಲಿ ಸಣ್ಣ ಎಳೆದಾಟ ಅವರ ಆರೋಗ್ಯದ ಕಡೆ ಗಮನ ಕೊಡಿ. ವಿಪರೀತ ಸೊಂಟ ನೋವಿನಿಂದ ಬಳಲುತ್ತಾರೆ ವೀಡಿಯೊದಲ್ಲಿ ತೋರಿಸಿರುವ ಮುದ್ರೆಯನ್ನು ಮಾಡಿ ನೋವು ಕಡಿಮೆಯಾಗುತ್ತದೆ.

ಕನ್ಯಾರಾಶಿ
ಶುಕ್ರ ಭಾಗ್ಯ ಕಾರಕ ನಿಮಗೆ ನೀಚ, ಚಂದ್ರ ಪ್ರಬಲವಾಗಿರುವುದರಿಂದ ಎಚ್ಚರಿಕೆ.ತುಂಬಾ ಬೆಲೆಬಾಳುವ ವಸ್ತುಗಳನ್ನು ಎಚ್ಚರಿಕೆಯಿಂದ ಇಡಿ. ಯಾರೊ ಸ್ತ್ರೀ ಓರ್ವರ ವಿಚಾರದಲ್ಲಿ 1ಸಣ್ಣ ಕಂಪನ ತೊಳಲಾಟ ಆದರೂ ಖುಷಿಯ ವಿಚಾರವನ್ನ ಕೇಳುತ್ತೀರಾ.

ತುಲಾರಾಶಿ
ರಾಶಿಯಾಧಿಪತಿಯೆ ನೀಚನಾಗಿರುವುದರಿಂದ, ಎಲ್ಲವೂ ಇದೆ ಆದರೆ ಅನುಭವಿಸಲಾಗದ ತೊಳಲಾಟ. ಇಂದು 9ವರ್ಷದ 9 ಹೆಣ್ಣು ಮಕ್ಕಳಿಗೆ ಪೂಜೆ, ಪ್ರಸಾದ , ಸ್ನಾನ ಅಲಂಕಾರ ಒಪ್ಪ ಓರಣ , ಇವುಗಳಲ್ಲಿ ಯಾವುದಾದರೂ ಒಂದನ್ನಾದರೂ ಮಾಡಿ ಇರುವ ತೊಂದರೆಯಿಂದ ಹೊರಗಡೆ ಬರುತ್ತೀರ.

ವೃಶ್ಚಿಕರಾಶಿ
ಚೆನ್ನಾಗಿದೆ ಹೆಂಡತಿಯ ಮುಖೇನ, ಅಕ್ಕಾ ತಂಗಿಯರ ಮುಖೇನ, ಹೆಂಡತಿ ಅಕ್ಕ ತಂಗಿಯರ ಮುಖೇನ ಸ್ವಲ್ಪ ಖರ್ಚು ವೆಚ್ಚದ ಎಳೆದಾಟ ಒದ್ದಾಟವಿರುತ್ತದೆ. ತೊಂದರೆಗಳೇನು ತ ನಿಭಾಯಿಸಿ ಕೊಲ್ಲುತ್ತೀರಾ.

ಧನಸ್ಸುರಾಶಿ
ಚಂದ್ರನಿಗೆ ಶುಕ್ರ ಮೂಲತ್ರಿಕೋಣ ದಲ್ಲಿದ್ದು ಶುಕ್ರನಿಗೆ ಆ ಮೂಲ ತ್ರಿಕೋನದಲ್ಲಿ ರಾಹು ಇರುವುದರಿಂದ ಕಲಾವಿದರು ಸ್ವಲ್ಪ ಎಚ್ಚರಿಕೆಯಿಂದಿರಬೇಕು. ಕಲಾವಿದರಿಗೆ ಅವಮಾನ ಅಪವಾದಗಳು ಹುಡುಕಿಕೊಂಡು ಬರುತ್ತವೆ ಎಚ್ಚರಿಕೆಯಿಂದಿರಿ.

ಮಕರರಾಶಿ
ಹೂವು ಹಣ್ಣು ತರಕಾರಿ ಜ್ಯೂಸ್ ಅಂಗಡಿ ಬೇಕರಿ ಸ್ವೀಟ್ ಅಂಗಡಿ ಇಟ್ಟುಕೊಂಡಿರುವವರಿಗೆ ಪರಿಶ್ರಮದಿಂದ ಸ್ವಲ್ಪ ಲಾಭ. ಹಾಲು ಬೆಣ್ಣೆ ತುಪ್ಪ ಮೊಸರು ಸ್ವಲ್ಪ ಹುಳಿಯಾಗಬಹುದು ಎಚ್ಚರಿಕೆ.

ಕುಂಭರಾಶಿ
ಭಾಗ್ಯಾಧಿಪತಿ ಅಷ್ಟಮದಲ್ಲಿದ್ದು, ಅಷ್ಟಮಾಧಿಪತಿಗೆ ಮೂಲ ತ್ರಿಕೋನದಲ್ಲಿ ಚಂದ್ರ ಇರುವುದರಿಂದ ಪ್ರಯಾಣ ಪೂಜೆ ಸಂಕಲ್ಪ, ಒಪ್ಪ ಓರಣ, ಅಲಂಕಾರ, ದಾನ ಧರ್ಮ ಧರ್ಮದ ಸೇವೆಯನ್ನ ಕೊಡುತ್ತಾನೆ. ಆದರೆ ಸ್ವಲ್ಪ ಖರ್ಚು ವೆಚ್ಚದ ವೆಚ್ಚದ ದಿನ.

ಮೀನರಾಶಿ
ಚೆನ್ನಾಗಿದೆ ಆರೋಗ್ಯದ ಕಡೆ ಗಮನ ಕೊಡಿ. ಯಾರೋ ಸ್ತ್ರೀಯೋರ್ವರ ವಿಚಾರದಲ್ಲಿ ಮಾನಸಿಕ ತೊಳಲಾಟ ಪಡುತ್ತೀರಾ.

Comments are closed.