ದಿನಭವಿಷ್ಯ : ಹರ್ಷಣ, ವಜ್ರ ಯೋಗದ ಫಲ

annada Astrology : ದಿನಭವಿಷ್ಯ ಇಂದು ಶನಿವಾರ ನವೆಂಬರ್ 29 2025. ದ್ವಾದಶ ರಾಶಿಗಳ ಮೇಲೆ ಪೂರ್ವಾಭಾದ್ರ ನಕ್ಷತ್ರ ಪ್ರಭಾವ ಬೀರಲಿದೆ. ಹರ್ಷಣ ಯೋಗ ಮತ್ತು ವಜ್ರ ಯೋಗವು ಕೆಲವು ರಾಶಿಗಳಿಗೆ ಅಚ್ಚರಿಯ ಫಲಿತಾಂಶವನ್ನು ನೀಡಲಿದೆ. ಹೇಗಿದೆ ಇಂದಿನ ರಾಶಿಭವಿಷ್ಯ ತಿಳಿಯೋಣಾ.
ಮೇಷ (Aries)
ಇಂದು ನಿಮಗೆ ಮಾನಸಿಕ ಒತ್ತಡದಿಂದ ಮುಕ್ತಿ ಸಿಗುತ್ತದೆ. ಹಣಕಾಸಿನ ವಿಷಯಗಳಲ್ಲಿ ಅದೃಷ್ಟವಿರುತ್ತದೆ. ಎಲ್ಲಾ ಕೆಲಸಗಳು ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಆದರೂ, ಆಸ್ತಿ ವಿಚಾರದಲ್ಲಿ ವಿವಾದ ಉಂಟಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಿ.
ವೃಷಭ (Taurus)
ಪ್ರಯಾಣದಲ್ಲಿ ಎಚ್ಚರಿಕೆ ಇರಲಿ. ನಿಮ್ಮ ಆತುರದ ನಿರ್ಧಾರಗಳು ಅಥವಾ ಸ್ವಯಂಕೃತ ಅಪರಾಧಗಳಿಂದ ನಷ್ಟವಾಗುವ ಸಾಧ್ಯತೆ ಇದೆ. ಮೋಜು ಮಸ್ತಿಯಿಂದ ದೂರವಿರಿ. ದಾಂಪತ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು.
ಮಿಥುನ (Gemini)
ಪ್ರೀತಿ-ಪ್ರೇಮದ ವಿಚಾರದಲ್ಲಿ ಯಶಸ್ಸು ಕಾಣುವಿರಿ. ನಿಮ್ಮ ಸ್ನೇಹಿತರೊಂದಿಗೆ ಉತ್ತಮ ಕಾಲ ಕಳೆಯುವಿರಿ. ಪುಣ್ಯಕ್ಷೇತ್ರಗಳ ದರ್ಶನ ಮಾಡುವ ಕುರಿತು ಆಲೋಚನೆ ಮಾಡುವಿರಿ. ದುಃಸ್ವಪ್ನಗಳು ಕಾಡಬಹುದು.
ಕಟಕ (Cancer)
ಆರ್ಥಿಕ ಸಂಕಷ್ಟಗಳು ಎದುರಾಗಬಹುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಆತುರ ಬೇಡ. ಸ್ನೇಹಿತರ ಸಹಕಾರವನ್ನು ನಿರೀಕ್ಷೆ ಮಾಡುವಿರಿ. ಸಂಗಾತಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು, ಕಾಳಜಿ ವಹಿಸಿ.
ಸಿಂಹ (Leo)
ಪ್ರಮುಖ ಒಪ್ಪಂದಗಳನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ಯಶಸ್ವಿಯಾಗುವಿರಿ. ಚರ್ಚೆ ಮತ್ತು ಸಂವಾದಗಳನ್ನು ಮುಂದುವರಿಸಿ. ಇಂದು ತಂಡದ ಮನೋಭಾವಕ್ಕೆ ಒತ್ತು ನೀಡುವುದು ಬಹಳ ಒಳ್ಳೆಯದು. ಸಹೋದ್ಯೋಗಿಗಳು ಮತ್ತು ಸ್ನೇಹಿತರ ಮೇಲೆ ವಿಶ್ವಾಸವಿಡಿ.
ಕನ್ಯಾ (Virgo)
ನಿಮ್ಮ ಪ್ರಾಪಂಚಿಕ ವಿಷಯಗಳ ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು ಶುಭ ದಿನವಾಗಿದೆ. ನಿರುದ್ಯೋಗಿಗಳು ಹೊಸ ಉದ್ಯೋಗದ ನಿರೀಕ್ಷೆಯಲ್ಲಿರಬಹುದು. ಕುಟುಂಬದ ಜವಾಬ್ದಾರಿಗಳತ್ತ ಗಮನ ನೀಡಿ.
ತುಲಾ (Libra)
ವಿವಾಹಕ್ಕೆ ಸಂಬಂಧಿಸಿದಂತೆ ಶುಭ ವಾರ್ತೆ ಕೇಳಿಬರಲಿದೆ. ಆರ್ಥಿಕತೆಯನ್ನು ವೃದ್ಧಿಸಲು ಹೊಸ ತಂತ್ರಗಳನ್ನು ರೂಪಿಸುವಿರಿ. ಪ್ರಭಾವಿ ವ್ಯಕ್ತಿಗಳನ್ನು ಮೆಚ್ಚಿಸಿ ಅಧಿಕಾರವನ್ನು ಪಡೆಯುವಿರಿ. ಸಂಗಾತಿಯಿಂದ ಧನಸಹಾಯವಾಗಲಿದೆ.
ವೃಶ್ಚಿಕ (Scorpio)
ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ ಸಾಧಿಸುವಿರಿ. ಮಕ್ಕಳಿಂದ ಅನುಕೂಲ ಇರುತ್ತದೆ. ನಿಮ್ಮ ಅದೃಷ್ಟದ ಮೇಲೆ ನಿರೀಕ್ಷೆ ಇರುತ್ತದೆ ಮತ್ತು ಭವಿಷ್ಯದಲ್ಲಿ ಗೆಲ್ಲುವ ಕನಸು ಕಾಣುವಿರಿ.
ಧನು (Sagittarius)
ಸಾಲಗಾರರ ಮತ್ತು ಶತ್ರುಗಳ ಚಿಂತೆ ಕಾಡಬಹುದು. ಅನಿರೀಕ್ಷಿತ ದುರ್ಘಟನೆಗಳು ಅಥವಾ ಆಕಸ್ಮಿಕ ಪ್ರಯಾಣಗಳು ಎದುರಾಗಬಹುದು. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು, ಎಚ್ಚರಿಕೆ ಇರಲಿ.
ಮಕರ (Capricorn)
ಪ್ರೀತಿ-ಪ್ರೇಮದ ವಿಷಯಗಳಲ್ಲಿ ಎಚ್ಚರ ಇರಲಿ. ಸಂಗಾತಿಯಿಂದ ಧನಾಗಮನವಾಗುವ ಸಾಧ್ಯತೆ ಇದೆ. ವ್ಯವಹಾರದ ಬಗ್ಗೆ ಚಿಂತಿಸುತ್ತೀರಿ ಮತ್ತು ಭವಿಷ್ಯದ ಯೋಜನೆಗಳ ಕಡೆಗೆ ಗಮನ ಹರಿಸುವಿರಿ.
ಕುಂಭ (Aquarius)
ನಿಮ್ಮ ವೃತ್ತಿಪರ ಪ್ರಯತ್ನಗಳಿಗೆ ಹೊಸ ವೇಗ ಸಿಗಲಿದೆ. ವೈಯಕ್ತಿಕ ಸಂಬಂಧಗಳಲ್ಲಿ ವಿಶ್ವಾಸ ಹೆಚ್ಚಾಗುತ್ತದೆ. ಧಾರ್ಮಿಕ ಸ್ಥಳಕ್ಕೆ ಪ್ರಯಾಣಿಸುವ ಸಾಧ್ಯತೆ ಇದೆ. ಸಾರ್ವಜನಿಕ ಕಲ್ಯಾಣ ಕಾರ್ಯಗಳಿಗೆ ಸಮಯ ನೀಡುವಿರಿ.
ಮೀನ (Pisces)
ನಿಮ್ಮ ಸಾಮಾಜಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ವಾಣಿಜ್ಯ ಕೆಲಸಗಳ ಮೇಲೆ ನಿಮ್ಮ ಗಮನ ಇರುತ್ತದೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಸಮೀಪದವರಿಂದ ಸಹಕಾರ ಹೆಚ್ಚಿ ಬಾಂಧವ್ಯ ಸುಧಾರಿಸುತ್ತದೆ.



