ದಿನಭವಿಷ್ಯ ಸೆಪ್ಟೆಂಬರ್‌ 16 2023 : ಈ ರಾಶಿಗಳಿಗೆ ಬ್ರಹ್ಮಯೋಗದ ಶುಭಫಲ

ದ್ವಾದಶ ರಾಶಿಗಳ ಮೇಲೆ ಇಂದು ಪಾಲ್ಗುಣಿ ನಕ್ಷತ್ರದ ಪ್ರಭಾವ ಇರುತ್ತದೆ ಈದಿನ ಶುಕ್ರ, ಬ್ರಹ್ಮ ಯೋಗಳು ಹಲವು ರಾಶಿಗಳಿಗೆ ಶುಭಫಲವನ್ನು ತರಲಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಓಟ್ಟು 12 ದ್ವಾದಶ ರಾಶಿಗಳ ದಿನಭವಿಷ್ಯ ( Horoscope Today) ಹೇಗಿದೆ. Today Horoscope September 16 2023 Zodiac signs in Kannada

ದಿನಭವಿಷ್ಯ ಸೆಪ್ಟೆಂಬರ್‌ 16 2023 ಶನಿವಾರ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಂದ್ರನು ಕನ್ಯಾ ರಾಶಿಯಲ್ಲಿ ಸಂಚಾರ ಮಾಡುತ್ತಾನೆ. ಜೊತೆಗೆ ದ್ವಾದಶ ರಾಶಿಗಳ ಮೇಲೆ ಇಂದು ಪಾಲ್ಗುಣಿ ನಕ್ಷತ್ರದ ಪ್ರಭಾವ ಇರುತ್ತದೆ ಈದಿನ ಶುಕ್ರ, ಬ್ರಹ್ಮ ಯೋಗಳು ಹಲವು ರಾಶಿಗಳಿಗೆ ಶುಭಫಲವನ್ನು ತರಲಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಓಟ್ಟು 12 ದ್ವಾದಶ ರಾಶಿಗಳ ದಿನಭವಿಷ್ಯ ( Horoscope Today) ಹೇಗಿದೆ.

ಮೇಷರಾಶಿ
ಮಕ್ಕಳ ವಿಚಾರದಲ್ಲಿ ಸಂತೋಷದ ಸುದ್ದಿಯನ್ನು ಕೇಳುವಿರಿ. ಕುಟುಂಬ ಸದಸ್ಯರ ಜೊತೆಗೆ ಸಂತೋಷದಿಂದ ಇರುತ್ತೀರಿ. ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಬೆಂಬಲ ದೊರೆಯಲಿದೆ. ಹಣಕಾಸಿನ ನೆರವು ದೊರೆಯಲಿದೆ. ಸಾಲದಿಂದ ಮುಕ್ತರಾಗುತ್ತೀರಿ, ಆರ್ಥಿಕ ಸ್ಥಿತಿ ಚೇತರಿಕೆ ಕಾಣಲಿದೆ. ದೇವರ ದರ್ಶನದಿಂದ ನೆಮ್ಮದಿ.

ವೃಷಭ ರಾಶಿ
ವ್ಯಾಪಾರಿಗಳು ಮತ್ತು ಉದ್ಯೋಗಿಗಳು ಬಹಳ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಎದುರಾಳಿಗಳು ನಿಮಗೆ ತೊಂದರೆ ಕೊಡಬಹುದು. ಕುಟುಂಬದ ವಿಚಾರದಲ್ಲಿ ಕೋಪಗೊಳ್ಳಬೇಡಿ. ಕುಟುಂಬ ಸದಸ್ಯರ ಜೊತೆಗೆ ಶುಭ ಕಾರ್ಯದಲ್ಲಿ ಭಾಗಿಯಾಗುವಿರಿ. ಇಂದು ಬಾರಿ ಲಾಭವನ್ನು ಕಾಣಲಿದ್ದೀರಿ.

ಮಿಥುನ ರಾಶಿ
ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ನೀವು ಇಂದು ಕಠಿಣ ಪರಿಶ್ರಮ ಮತ್ತು ಪರೀಕ್ಷೆಗಳಲ್ಲಿ ಯಶಸ್ವಿಯಾಗುತ್ತೀರಿ. ವ್ಯಾಪಾರಿಗಳು ಲಾಭಕ್ಕಾಗಿ ಅನೇಕ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಇಂದು ಸೋಮಾರಿತನವನ್ನು ಹೋಗಲಾಡಿಸಬೇಕು. ಧಾರ್ಮಿಕ ಕಾರಣಗಳಿಗಾಗಿ ನಿಮ್ಮ ಕುಟುಂಬದೊಂದಿಗೆ ಪ್ರಯಾಣಿಸುವ ಸಾಧ್ಯತೆಯಿದೆ.  ಇಂದು ಮಾಡುವ ಹೂಡಿಕೆ ನಿಮಗೆ ಭವಿಷ್ಯದಲ್ಲಿ ಲಾಭವನ್ನು ತಂದುಕೊಡಲಿದೆ.

ಇದನ್ನೂ ಓದಿ : ಪಡಿತರ ಚೀಟಿ ತಿದ್ದುಪಡಿಗೆ ಇನ್ಮುಂದೆ ಅವಕಾಶವೇ ಇಲ್ಲ ! ಜಾರಿಯಾಯ್ತು ಸರಕಾರದ ಹೊಸ ಆದೇಶ

ಕರ್ಕಾಟಕ ರಾಶಿ
ಸಹೋದರ ಸಹೋದರಿಯರಿಂದ ಬೆಂಬಲವನ್ನು ಪಡೆಯುತ್ತದೆ. ವ್ಯಾಪಾರಿಗಳು ಇಂದು ಯಾವುದೇ ಅಪಾಯವನ್ನು ತೆಗೆದುಕೊಳ್ಳಬಾರದು. ಇಲ್ಲದಿದ್ದರೆ ನೀವು ಹೊಸ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂದು ನೀವು ಕೆಲವು ಹಳೆಯ ವಿಷಯಗಳ ಬಗ್ಗೆ ಯೋಚಿಸುವಿರಿ. ಉದ್ಯೋಗಿಗಳು ಇಂದು ಕೆಲಸಗಳನ್ನು ಸುಲಭವಾಗಿ ಮಾಡುತ್ತಾರೆ.

ಸಿಂಹ ರಾಶಿ
ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಮನಸ್ಸಿಗೆ ಸಂತೋಷವಾಗುತ್ತದೆ. ನಿಮ್ಮ ಪ್ರೇಮ ಜೀವನ ಸುಖಮಯವಾಗಿ ಇರುತ್ತದೆ. ರಾಜಕೀಯದಲ್ಲಿರುವವರಿಗೆ ಉತ್ತಮ ಲಾಭ ದೊರೆಯಲಿದೆ. ನೀವು ಕೆಲವು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು. ನಿಮ್ಮ ಬಾಕಿ ಕೆಲಸಗಳು ಇಂದು ಪೂರ್ಣಗೊಳ್ಳಲಿವೆ. ಇಂದು ನೀವು ಸಂಜೆ ವಾಹನವನ್ನು ಬಳಸುವಾಗ ಜಾಗರೂಕರಾಗಿರಬೇಕು.

Today Horoscope September 16 2023 Zodiac signs in Kannada
Image Credit To Original Source

ಕನ್ಯಾ ರಾಶಿ
ಜನರು ಇಂದು ಯಾರಿಂದಲೂ ಸಹಾಯವನ್ನು ನಿರೀಕ್ಷಿಸಬಾರದು. ಮತ್ತೊಂದೆಡೆ ಬಾಕಿ ಉಳಿದಿರುವ ಕಾಮಗಾರಿಗಳಲ್ಲಿ ಪ್ರಗತಿ ಸಾಧಿಸಲಾಗುವುದು. ಕುಟುಂಬದಲ್ಲಿನ ಭಿನ್ನಾಭಿಪ್ರಾಯ ಸಮಸ್ಯೆಯನ್ನು ತಂದೊಡ್ಡಲಿದೆ.  ನಿಮ್ಮ ಮಾತಿನ ಬಗ್ಗೆ ಜಾಗರೂಕರಾಗಿರಿ. ಇಲ್ಲದಿದ್ದರೆ ಅದು ನಿಮಗೆ ಹೆಚ್ಚಿನ ತೊಂದರೆಗಳನ್ನು ಉಂಟುಮಾಡುತ್ತದೆ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಇದನ್ನೂ ಓದಿ : ಕೇವಲ ರೂ.2999ಕ್ಕೆ ಐಪೋನ್‌ ಖರೀದಿಸಿ : ಐಪೋನ್‌ 15 ಲಾಂಚ್‌ ಬೆನ್ನಲ್ಲೇ ಐಪೋನ್‌ 11ರ ಮೇಲೆ…

ತುಲಾ ರಾಶಿ
ಕೆಲವು ಪ್ರಮುಖ ವಿಷಯಗಳನ್ನು ಕಳೆದುಕೊಳ್ಳಬಹುದು. ಪ್ರವಾಸಕ್ಕೆ ತೆರಳುವ ವೇಳೆಯಲ್ಲಿ ಎಚ್ಚರಿಕೆ ಇಂದ ಇರಬೇಕು. ಯಾವುದೇ ಕಾರ್ಯವನ್ನು ಸಂಜೆಯ ಒಳಗೆ ಪೂರ್ಣಗೊಳಿಸಿದ್ರೆ ಯಶಸ್ಸು ಪಡೆಯುತ್ತೀರಿ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ನೀವು ಧಾರ್ಮಿಕ ಸಭೆಯಲ್ಲಿ ಭಾಗವಹಿಸಬಹುದು. ಮತ್ತೊಂದೆಡೆ, ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ಕ್ಷೀಣಿಸಬಹುದು.

ವೃಶ್ಚಿಕ ರಾಶಿ
ಕುಟುಂಬ ಜೀವನದಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಅಗತ್ಯ ವಸ್ತುಗಳ ಖರೀದಿ. ಕುಟುಂಬ ಸದಸ್ಯರ ಜೊತೆ ನೀವು ಅವರತ್ತ ಗಮನ ಹರಿಸಬೇಕು. ಯಾವುದೇ ಶಿಕ್ಷಣವು ಕೆಲವು ಅಡೆತಡೆಗಳನ್ನು ಎದುರಿಸಬಹುದು. ಸಂಜೆ ನಿಮ್ಮ ಮನೆಗೆ ವಿಶೇಷ ಅತಿಥಿ ಬರುತ್ತಾರೆ. ಕೆಲವು ಕೆಲಸಗಳಿಗೆ ಒಂದಿಷ್ಟು ಹಣವೂ ಖರ್ಚು ಮಾಡಬೇಕಾಗುತ್ತದೆ.

ಧನಸ್ಸು ರಾಶಿ
ಬಾಕಿಯಿರುವ ಕೆಲಸಗಳನ್ನು ಇಂದು ಪೂರ್ಣಗೊಳಿಸಿ. ಹೊಸ ಒಪ್ಪಂದವನ್ನು ಅಂತಿಮಗೊಳಿಸಿ. ಕುಟುಂಬ ಸದಸ್ಯರ ಜೊತೆಗೆ ಸಮಯ ಕಳೆಯುವಿರಿ. ಮಕ್ಕಳ ಸಮಸ್ಯೆಯನ್ನು ಆಲಿಸುವುದು ಉತ್ತ. ಕುಟುಂಬದಲ್ಲಿ ಯಾವುದೇ ಸಮಸ್ಯೆಯಿದ್ದರೂ ಕೂಡ ಪರಿಹಾರವನ್ನು ಕಂಡುಕೊಳ್ಳಿ.

ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ : ಇಲ್ಲಿದೆ ಗುಡ್‌ನ್ಯೂಸ್‌

ಮಕರ ರಾಶಿ
ವ್ಯಾಪಾರಿಗಳು ಸಣ್ಣ ಅಪಾಯಗಳನ್ನು ತೆಗೆದುಕೊಳ್ಳಬಹುದು. ಹಿರಿಯ ಸದಸ್ಯರ ಸಹಾಯದಿಂದ ಮಾತ್ರ ದೊಡ್ಡ ಅಪಾಯವನ್ನು ತೆಗೆದುಕೊಳ್ಳ ಬಹುದು. ಕುಟುಂಬ ಸದಸ್ಯರಿಂದ ಕಟುವಾದ ಮಾತು ಕೇಳುವಿರಿ. ಮಹಿಳಾ ಉದ್ಯೋಗಿಗಳಿಗೆ ಭಡ್ತಿ ದೊರೆಯಲಿದೆ. ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಲು ತಂದೆಯ ಸಲಹೆ ಪಡೆಯುವುದು ಸೂಕ್ತ.

ಕುಂಭ ರಾಶಿ
ಹಿರಿಯರ ಸಲಹೆಯ ಮೇರೆಗೆ ಕೆಲಸ ಕಾರ್ಯಗಳನ್ನು ಮಾಡುವುದು ಉತ್ತಮ. ಇಲ್ಲದಿದ್ದರೆ, ಭವಿಷ್ಯದಲ್ಲಿ ನೀವು ಸಮಸ್ಯೆಗಳನ್ನು ಎದುರಿಸ ಬಹುದು. ವಿದೇಶದಲ್ಲಿ ಓದಲು ಬಯಸುವ ವಿದ್ಯಾರ್ಥಿಗಳಿಗೆ ಇಂದು ಅನುಕೂಲಕರವಾಗಿದೆ. ಇಂದು ನೀವು ನಿಮ್ಮ ಕೆಲಸದಲ್ಲಿ ಮೇಲಧಿಕಾರಿಗಳ ಕೋಪವನ್ನು ಎದುರಿಸಬೇಕಾಗಬಹುದು. ಆದ್ದರಿಂದ ನೀವು ಬಹಳ ಎಚ್ಚರಿಕೆಯಿಂದ ಇರಬೇಕು.

ಇದನ್ನೂ ಓದಿ  : ಗೃಹಲಕ್ಷ್ಮೀ ಯೋಜನೆ :  ಗೃಹಿಣಿಯರಿಗೆ ಗುಡ್ ನ್ಯೂಸ್ ಕೊಟ್ಟ ಸರಕಾರ , ಖಾತೆಗೆ 4000ರೂ. ಜಮೆ

ಮೀನರಾಶಿ
ಇತರರಿಗೆ ಸಹಾಯವನ್ನು ಮಾಡುವಿರಿ. ದಾನ, ಧರ್ಮಗಳಿಂದ ಮನಸಿಗೆ ನೆಮ್ಮದಿ. ಸಹೋದ್ಯೋಗಿಗಳಿಂದ ಸಹಕಾರ ದೊರೆಯಲಿದೆ. ಕುಟುಂಬದ ಸದಸ್ಯರಿಗೆ ಅನಾರೋಗ್ಯ ಕಾಡಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ. ಮನೆಯ ಕಡೆಯಿಂದ ಆರ್ಥಿಕ ಸಹಕಾರ ದೊರೆಯಲಿದೆ.

Today Horoscope September 16 2023 Zodiac signs in Kannada

Comments are closed.