ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ : ಇಲ್ಲಿದೆ ಗುಡ್‌ನ್ಯೂಸ್‌

ರಾಜ್ಯದಲ್ಲಿ ಹಳೆ ಪಿಂಚಣಿ ಯೋಜನೆ (Old pension scheme)ಜಾರಿಗೆ ತರುವಂತೆ ರಾಜ್ಯ ಸರ್ಕಾರಿ ನೌಕರರು (karnataka government)ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ವಿವಿಧ ರಾಜ್ಯಗಳಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿಯಾಗಿದ್ದರೂ ಕರ್ನಾಟಕದಲ್ಲಿ ಇನ್ನೂ ಜಾರಿಯಾಗಿಲ್ಲ.

ನವದೆಹಲಿ : ಕರ್ನಾಟಕ (Karnataka) ಸೇರಿ ಹಲವು ರಾಜ್ಯಗಳಲ್ಲಿ ರಾಷ್ಟ್ರೀಯ ಪಿಂಚಣಿ (NPS )ಯೋಜನೆಯನ್ನು ರದ್ದುಗೊಳಿಸಿ,  ಹಳೆಯ ಪಿಂಚಣಿ ಯೋಜನೆ (Old pension scheme) ಮರು ಜಾರಿಗೊಳಿಸುವಂತೆ ಒತ್ತಾಯಿಸಿ ನೌಕರರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಹಳೆಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ದೇಶಾದ್ಯಂತ ಹಲವು ಚರ್ಚೆಗಳು ನಡೆಯುತ್ತಿವೆ. ಈ ನಡುವಲ್ಲೇ ಶುಭ ಸುದ್ದಿಯೊಂದು ಹೊರಬಿದ್ದಿದೆ.

ಕೇಂದ್ರ ಸರ್ಕಾರಿ ನೌಕರರು ಹಾಗೂ ಹಲವು ರಾಜ್ಯ ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಲು ಹಲವು ವರ್ಷ ಗಳಿಂದಲೂ ಒತ್ತಾಯ ಮಾಡುತ್ತಿದ್ದಾರೆ. ಆದರೆ ಕೆಲವು ರಾಜ್ಯಗಳು ಈಗಾಗಲೇ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿವೆ. ಇದೀಗ ಮತ್ತೊಂದು ರಾಜ್ಯವೂ ತನ್ನ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಘೋಷಿಸಿದೆ.

ಇದನ್ನೂ ಓದಿ : ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ : ಸರಕಾರ ಈ ಯೋಜನೆಗೆ, ಸೆಪ್ಟೆಂಬರ್ 26ಕ್ಕೆ ಮೊದಲು ಅರ್ಜಿ ಸಲ್ಲಿಸಿ

ಸಿಕ್ಕಿಂನಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡುವಂತೆ ಹಲವು ವರ್ಷಗಳಿಂದಲೂ ಆಗ್ರಹಿಸಲಾಗುತ್ತಿತ್ತು. ಇದೀಗ ಸಿಕ್ಕಿಂ ಮುಖ್ಯಮಂತ್ರಿ ಬಿಎಸ್ ತಮಾಂಗ್ ಕೋಲೆ ನೌಕರರಿಗೆ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಸರಕಾರ ನೇಮಕ ಮಾಡಿದ್ದ ತಜ್ಞರ ಸಮಿತಿ ನೀಡಿರುವ ವರದಿಯನ್ನು ಆಧರಿಸಿ ಸಿಕ್ಕಿಂ ರಾಜ್ಯದಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಲು ಸರಕಾರ ನಿರ್ಧರಿಸಿದೆ.

Old Pension Scheme For Government Employee CM Siddaramaiah Given Good News
Image Credit To Original Source

ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಕ್ಕಿಂ ಸರಕಾರವು ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಪರಿಷ್ಕರಿಸುವ ಸಲುವಾಗಿ ತಜ್ಞರ ಸಮಿತಿಯನ್ನು ರಚಿಸಿತ್ತು. ಸಿಕ್ಕಿಂ ಸಿಬ್ಬಂದಿ ಇಲಾಖೆ ಕಾರ್ಯದರ್ಶಿ ರಿನ್ಸಿಂಗ್ ಚೆವಾಂಗ್ ಭುಟಿಯಾ ಈ ಸಮಿತಿಯ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಗೆ ವರ್ಷದಲ್ಲಿ 3 ಬಾರಿ ಪರೀಕ್ಷೆ : ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ

ತಜ್ಞರ ಸಮಿತಿಯು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದರಿಂದ ಎದುರಾಗುವ ಸಾಧಕ, ಬಾಧಕಗಳ ಕುರಿತು ಪರಾಮರ್ಷೆ ನಡೆಸಿತ್ತು. ಅಲ್ಲದೇ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುವ ರಾಜ್ಯದಲ್ಲಿನ ವರದಿಗಳ ಬಗ್ಗೆಯೂ ವಿವರಣೆಯನ್ನು ಪಡೆದ ನಂತರದಲ್ಲಿ ಸಿಕ್ಕಿಂ ರಾಜ್ಯದಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಲು ಅನುಮೋದನೆ ನೀಡಿದೆ.

ಕರ್ನಾಟಕದಲ್ಲಿ ಹಳೆಯ ಪಿಂಚಣಿ ಯೋಜನೆ (OPS ) ? :

ಇನ್ನು ಹಳೆಯ ಪಿಂಚಣಿ ಯೋಜನೆಗಾಗಿ ಕರ್ನಾಟಕದಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರುವಂತೆ ರಾಜ್ಯ ಸರ್ಕಾರಿ ನೌಕರರು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷ ಚುನಾವಣಾ ಪ್ರನಾಳಿಕೆಯಲ್ಲಿಯೂ ಈ ವಿಚಾರವನ್ನು ಘೋಷಿಸಿತ್ತು.

ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರುವುದಾಗಿ ಘೋಷಿಸಿತ್ತು. ಇದೀಗ ಕಾಂಗ್ರೆಸ್‌ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಸರಕಾರಿ ನೌಕರರು ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.

Old Pension Scheme For Government Employee CM Siddaramaiah Given Good News
Image Credit To Original Source

ಇದನ್ನೂ ಓದಿ : ಶಾಲೆಗಳಿಗೆ 15 ದಿನಗಳ ಮಧ್ಯಂತರ ರಜೆ ರದ್ದು : ರಾಜ್ಯ ಸರಕಾರದ ಮಹತ್ವದ ಆದೇಶ

ಈ ವೇಳೆಯಲ್ಲಿ ಶೀಘ್ರದಲ್ಲಿಯೇ ಎನ್‌ಪಿಎಸ್‌ ರದ್ದು ಮಾಡಿ, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರುವುದಾಗಿಯೂ ಭರವಸೆಯನ್ನು ನೀಡಿದ್ದಾರೆ. ಈಗಾಗಲೇ ಸಮಿತಿಯನ್ನು ರಚನೆ ಮಾಡಲಾಗಿದ್ದು, ಸದ್ಯದಲ್ಲಿಯೇ ಹಳೆ ಪಿಂಚಣಿ ಜಾರಿಗೆ ಸಂಬಂಧಿಸಿದಂತೆ ಸಮಿತಿ ತನ್ನ ವರದಿಯನ್ನು ಪ್ರಕಟಿಸಲಿದೆ.

ಈಗಾಗಲೇ ಹಲವು ರಾಜ್ಯಗಳು ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿವೆ. ಆದರೆ ಕರ್ನಾಟಕದಲ್ಲಿ ಯಾಕೆ ಈ ಯೋಜನೆ ಜಾರಿ ಆಗುತ್ತಿಲ್ಲ ಎಂದು ಸರಕಾರಿ ನೌಕರರು ರಾಜ್ಯ ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ.

ರಾಷ್ಟ್ರೀಯ ಪಿಂಚಣಿ ಯೋಜನೆ ( NPS ) Vs ಹಳೆ ಪಿಂಚಣಿ ಯೋಜನೆ (OPS) :

ರಾಷ್ಟ್ರೀಯ ಪಿಂಚಣಿ ಯೋಜನೆ (NPS) :

  • NPS ನಲ್ಲಿ, ಉದ್ಯೋಗಿಯ ಮೂಲ ವೇತನ ಮತ್ತು ಭತ್ಯೆಗಳಿಂದ 10 ಪ್ರತಿಶತವನ್ನು ಕಡಿತಗೊಳಿಸಲಾಗುತ್ತದೆ.
  • ರಾಷ್ಟ್ರೀಯ ಪಿಂಚಣಿ ಯೋಜನೆಯು ಷೇರು ಮಾರುಕಟ್ಟೆ ಆಧಾರಿತವಾಗಿದೆ. ಆದ್ದರಿಂದ ಇದು ತುಲನಾತ್ಮಕವಾಗಿ ಕಡಿಮೆ ಸುರಕ್ಷಿತವೆಂದು ಪರಿಗಣಿಸಲಾಗಿದೆ.
  • ಇದರ ಅಡಿಯಲ್ಲಿ, ನಿವೃತ್ತಿಯ ನಂತರ ಪಿಂಚಣಿ ಪಡೆಯಲು 40% NPS ನಿಧಿಯಲ್ಲಿ ಹೂಡಿಕೆ ಮಾಡಬೇಕು.
  • ಈ ಯೋಜನೆಯು ನಿವೃತ್ತಿಯ ನಂತರ ಸ್ಥಿರ ಪಿಂಚಣಿಯನ್ನು ಖಾತರಿಪಡಿಸುವುದಿಲ್ಲ.
  • ಹೊಸ ಪಿಂಚಣಿ ಯೋಜನೆಯಲ್ಲಿ, ಪ್ರತಿ ಆರು ತಿಂಗಳಿಗೊಮ್ಮೆ ಗ್ರಾಚ್ಯುಟಿ ಪಾವತಿಸಲಾಗುವುದಿಲ್ಲ.

ಹಳೆಯ ಪಿಂಚಣಿ ಯೋಜನೆ (OPS):

  • ಇದರ ಅಡಿಯಲ್ಲಿ, ಕೊನೆಯದಾಗಿ ಪಡೆದ ಸಂಬಳದ 50 ಪ್ರತಿಶತವನ್ನು ನಿವೃತ್ತಿಯ ನಂತರ ಒಟ್ಟು ಮೊತ್ತದೊಂದಿಗೆ ಮಾಸಿಕ ಪಿಂಚಣಿಯಾಗಿ ಪಾವತಿಸಲಾಗುತ್ತದೆ.
  • 80 ವರ್ಷಗಳ ನಂತರ ಪಿಂಚಣಿ ಹೆಚ್ಚಿಸುವ ನಿಬಂಧನೆಯೂ ಇದೆ. ಜಿಪಿಎಫ್ ಕೂಡ ಲಭ್ಯವಿದೆ.
  • ಇದರ ಅಡಿಯಲ್ಲಿ, 20 ಲಕ್ಷ ರೂಪಾಯಿಗಳವರೆಗೆ ಗ್ರಾಚ್ಯುಟಿ ನೀಡಲಾಗುತ್ತದೆ.
  • ಇದನ್ನು ರಾಜ್ಯದ ಖಜಾನೆಯಿಂದ ಪಾವತಿಸಲಾಗುತ್ತದೆ. ಉದ್ಯೋಗಿಯ ಸಂಬಳದಿಂದ ಹಣವನ್ನು ಕಡಿತಗೊಳಿಸಲಾಗುವುದಿಲ್ಲ.
  • ನಿವೃತ್ತ ನೌಕರನ ಮರಣದ ನಂತರ ಹೆಂಡತಿಗೆ ಪಿಂಚಣಿ ನೀಡಲಾಗುತ್ತದೆ. ಇದರ ಅಡಿಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಡಿಎ ಕೂಡ ನೀಡಲಾಗುತ್ತದೆ. ಹೀಗಾಗಿ, ಪಿಂಚಣಿ ಮೊತ್ತವು ಹೆಚ್ಚಾಗುತ್ತಲೇ ಇರುತ್ತದೆ.

Old Pension Scheme For Government Employee CM Siddaramaiah Given Good News

Comments are closed.