ದಿನಭವಿಷ್ಯ: ವೃಶ್ಚಿಕ ರಾಶಿಗೆ ಸೂರ್ಯ, ಯಾರಿಗೆ ಶುಭ, ಯಾರಿಗೆ ಅಶುಭ

Today Kannada Horoscope : ದಿನಭವಿಷ್ಯ ಇಂದು ಭಾನುವಾರ ನವೆಂಬರ್ 16, 2025. ವೃಶ್ಚಿಕ ರಾಶಿಗೆ ಇಂದು ಸೂರ್ಯ ಪ್ರವೇಶ ಮಾಡಲಿದ್ದು, ದ್ವಾದಶರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಹಾಗಾದ್ರೆ ಇಂದು ಯಾವ ರಾಶಿಗೆ ಶುಭ, ಯಾರಿಗೆ ಅಶುಭ ಫಲದೊರೆಯಲಿದೆ. ತಿಳಿಯೋಣಾ
ಮೇಷರಾಶಿ (Aries)
ಶುಭ ದಿನ, ನಿಮ್ಮ ಕಾರ್ಯಗಳಿಗೆ ಹಿರಿಯರಿಂದ ಬೆಂಬಲ ದೊರೆಯಲಿದೆ. ಹಣಕಾಸಿನ ವಿಚಾರದಲ್ಲಿ ಉತ್ತಮ ಪ್ರಗತಿ ಕಾಣುವಿರಿ. ಆರೋಗ್ಯ ಉತ್ತಮ. ಕೌಟುಂಬಿಕ ವಿಷಯಗಳು ಸಂತೋಷ ತರುತ್ತವೆ.
ವೃಷಭರಾಶಿ (Taurus)
ಗೊಂದಲದ ದಿನ, ಮಾನಸಿಕ ಗೊಂದಲಗಳು ಕಾಡಬಹುದು. ಹೂಡಿಕೆ ನಿರ್ಧಾರಗಳನ್ನು ಮುಂದೂಡುವುದು ಉತ್ತಮ. ಆರೋಗ್ಯದ ಬಗ್ಗೆ ಗಮನವಿರಲಿ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ.
ಮಿಥುನರಾಶಿ (Gemini)
ಲಾಭದ ದಿನ, ವ್ಯಾಪಾರದಲ್ಲಿ ಹೊಸ ಅವಕಾಶಗಳು ಒದಗಿ ಬರಲಿವೆ. ಆರ್ಥಿಕ ಲಾಭದ ಸಾಧ್ಯತೆ ಇದೆ. ಸಹೋದರರೊಂದಿಗೆ ಬಾಂಧವ್ಯ ಸುಧಾರಿಸಲಿದೆ. ಪ್ರಯಾಣದ ಸಾಧ್ಯತೆ.
ಕರ್ಕಾಟಕರಾಶಿ (Cancer)
ಯಶಸ್ಸಿನ ದಿನ ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ಸಿಗಲಿದೆ. ಅಧಿಕಾರಿಗಳ ಬೆಂಬಲ ದೊರೆಯುತ್ತದೆ. ಉದ್ಯೋಗದಲ್ಲಿ ಪ್ರಗತಿ. ಆದರೆ ಮಾತಿನಲ್ಲಿ ಹಿಡಿತವಿರಲಿ.
ಸಿಂಹರಾಶಿ (Leo)
ಭಾಗ್ಯೋದಯದ ದಿನ ದೈವಾನುಗ್ರಹದಿಂದ ನಿಮ್ಮ ಹಲವು ಕೆಲಸಗಳು ಸುಗಮವಾಗಿ ನಡೆಯಲಿವೆ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ದೂರ ಪ್ರಯಾಣದ ಯೋಗ.
ಇದನ್ನೂ ಓದಿ : ಸಂಕ್ರಾಂತಿ ಬಳಿಕ ಸಂಪುಟ ಪುನರಚನೆ : ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಷರತ್ತು
ಕನ್ಯಾರಾಶಿ (Virgo)
ಸವಾಲಿನ ದಿನ, ಅನಾರೋಗ್ಯದಿಂದಾಗಿ ಆರ್ಥಿಕ ವೆಚ್ಚ ಹೆಚ್ಚಬಹುದು. ವಾದ ವಿವಾದಗಳಿಂದ ದೂರವಿರಿ. ಗುಪ್ತ ವಿಷಯಗಳ ಬಗ್ಗೆ ಜಾಗರೂಕರಾಗಿರಿ. ತಾಳ್ಮೆ ಅಗತ್ಯ.
ತುಲಾರಾಶಿ (Libra)
ಸಂತೋಷದ ದಿನ, ವೈವಾಹಿಕ ಜೀವನದಲ್ಲಿ ಸಾಮರಸ್ಯವಿರುತ್ತದೆ. ವ್ಯಾಪಾರದಲ್ಲಿ ಪಾಲುದಾರಿಕೆಯಿಂದ ಲಾಭ. ಹೊಸ ಸಂಬಂಧಗಳು ಬೆಳೆಯಲಿವೆ. ವೃತ್ತಿಪರ ಕ್ಷೇತ್ರದಲ್ಲಿ ಉತ್ತಮ ಪ್ರಗತಿ.
ವೃಶ್ಚಿಕರಾಶಿ (Scorpio)
ಶ್ರಮದ ದಿನ, ಕೆಲಸದ ಸ್ಥಳದಲ್ಲಿ ಹೆಚ್ಚು ಶ್ರಮ ಪಡಬೇಕಾಗಬಹುದು. ನಿಮ್ಮ ವಿರೋಧಿಗಳು ಸಕ್ರಿಯರಾಗಬಹುದು, ಎಚ್ಚರ ವಹಿಸಿ. ಆರೋಗ್ಯದ ಕಡೆ ಗಮನ ಕೊಡಿ.
ಧನಸ್ಸುರಾಶಿ (Sagittarius)
ಪ್ರೇಮದ ದಿನ, ಪ್ರೇಮ ಸಂಬಂಧಗಳು ಗಟ್ಟಿಯಾಗಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಮಕ್ಕಳಿಂದ ಸಂತೋಷದ ಸುದ್ದಿ ಕೇಳುವಿರಿ. ಹೂಡಿಕೆಗಳಿಂದ ಉತ್ತಮ ಲಾಭ
ಮಕರರಾಶಿ (Capricorn)
ಕೌಟುಂಬಿಕ ದಿನ, ಮನೆಯ ನಿರ್ವಹಣೆ ಅಥವಾ ವಾಹನ ಖರೀದಿ ಬಗ್ಗೆ ಆಲೋಚಿಸುವಿರಿ. ತಾಯಿಯ ಆರೋಗ್ಯದಲ್ಲಿ ಸುಧಾರಣೆ. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಾಗಲಿವೆ.
ಇದನ್ನೂ ಓದಿ : ರೈತರಿಗೆ ಬಂಪರ್ ಸುದ್ದಿ, ನವೆಂಬರ್ 19ಕ್ಕೆ ರೈತರ ಖಾತೆಗೆ ಹಣ ಜಮೆ
ಕುಂಭರಾಶಿ (Aquarius)
ಸಾಮಾಜಿಕ ದಿನ, ನಿಮ್ಮ ಶಕ್ತಿ ಮತ್ತು ಧೈರ್ಯ ಹೆಚ್ಚಾಗುತ್ತದೆ. ಸಣ್ಣ ಪ್ರಯಾಣ ಸಾಧ್ಯತೆ. ಅಕ್ಕಪಕ್ಕದವರೊಂದಿಗೆ ಸಂಬಂಧ ಸುಧಾರಣೆ. ಸಾಮಾಜಿಕವಾಗಿ ಗೌರವ ಹೆಚ್ಚಲಿದೆ.
ಮೀನರಾಶಿ (Pisces)
ಆರ್ಥಿಕ ದಿನ, ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಮಾತಿನ ಮೇಲೆ ಹಿಡಿತ ಸಾಧಿಸಿದರೆ ದೊಡ್ಡ ಸಮಸ್ಯೆಗಳಿಂದ ಪಾರಾಗಬಹುದು. ಕುಟುಂಬದ ಬೆಂಬಲವಿದೆ.
Today Kannada Horoscope November 16 2025



