store room : ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದ ನಿಯಮಗಳನ್ನು ನಿರ್ಲಕ್ಷಿಸುವುದು ಜೀವನದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಆದಷ್ಟು ನೀವಿರುವ ವಾತಾವರಣದಲ್ಲಿ ಯಾವುದೇ ಕಾರಣಕ್ಕೂ ವಾಸ್ತುದೋಷ ಉಂಟಾಗದಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಸಿಗೋದು ಸಾಧ್ಯ.
ವಾಸ್ತು ದೋಷವು ನಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿ, ಅದು ನಮ್ಮ ಮೇಲೆ ದೀರ್ಘಕಾಲದವರೆಗೆ ಪರಿಣಾಮ ಬೀರುವಂತೆ ಮಾಡುತ್ತದೆ. ಮನೆಯಲ್ಲಿ ವಾಸ್ತು ಪ್ರಕಾರ ಪೂಜಾ ಗೃಹ, ಮಲಗುವ ಕೋಣೆ, ಸ್ಟಡಿ ರೂಂ, ಅಡುಗೆ ಕೋಣೆ, ಸ್ನಾನ ಗೃಹ ಹೀಗೆ ಪ್ರತಿಯೊಂದನ್ನು ನಿರ್ಮಿಸಬೇಕು. ಆಗ ಮಾತ್ರ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಅಂಶಗಳು ಇರಲಿವೆ.
ಆದರೆ ಮನೆ ನಿರ್ಮಾಣ ಮಾಡುವ ವೇಳೆಯಲ್ಲಿ ಪೂಜಾ ಗೃಹ, ಮಲಗುವ ಕೋಣೆ, ಸ್ಟಡಿ ರೂಂ, ಅಡುಗೆ ಕೋಣೆ, ಸ್ನಾನ ಗೃಹ ಹೀಗೆ ಪ್ರತಿಯೊಂದು ವಿಚಾರದಲ್ಲಿಯೂ ವಾಸ್ತು ನಿಯಮಗಳನ್ನು ಪಾಲಿಸುವವರು ಸ್ಟೋರ್ ವಿಚಾರದಲ್ಲಿ ವಾಸ್ತು ನಿಯಮವನ್ನು ಪಾಲಿಸಬೇಕು ಎಂಬುದನ್ನು ಮರೆತುಬಿಡ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು.
ಮನೆಗಳಲ್ಲಿ ಅನವಶ್ಯಕ ವಸ್ತುಗಳು, ಹಾಳಾದಂತಹ ವಸ್ತುಗಳನ್ನು ಸ್ಟೋರ್ ರೂಂಗಳಲ್ಲಿ ಇಡಲಾಗುತ್ತದೆ. ಸ್ಟೋರ್ ರೂಮ್ಗಳಲ್ಲಿ ನೀವು ಸ್ವಚ್ಛತೆ ಹಾಗೂ ಸರಿಯಾದ ದಿಕ್ಕುಗಳನ್ನು ಆಯ್ಕೆ ಮಾಡಕೊಂಡರೆ ಮಾತ್ರ ನಿಮಗೆ ಒಳಿತಾಗಲಿದೆ.
ಸ್ಟೋರ್ ರೂಮ್ ಪೂರ್ವದಲ್ಲಿ ಇರಬಾರದು
ನೀವು ಹೊಸ ಮನೆಯನ್ನು ನಿರ್ಮಿಸಲು ಹೋದರೆ ಮತ್ತು ಅದರಲ್ಲಿ ಸ್ಟೋರ್ ರೂಮ್ ಮಾಡಲು ಬಯಸಿದರೆ, ಇದಕ್ಕಾಗಿ ಸರಿಯಾದ ದಿಕ್ಕನ್ನು ಆಯ್ಕೆ ಮಾಡುವಾಗ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಿ. ವಾಸ್ತು ಪ್ರಕಾರ ಸ್ಟೋರ್ ರೂಮ್ ಅನ್ನು ಪೂರ್ವ ದಿಕ್ಕಿನಲ್ಲಿ ಮಾಡಬಾರದು. ಇದು ನಕಾರಾತ್ಮಕತೆಯನ್ನು ತರುತ್ತದೆ ಮತ್ತು ಸಮಸ್ಯೆಗಳು ಉಂಟು ಮಾಡುತ್ತದೆ.
ಈಶಾನ್ಯದಲ್ಲಿಯೂ ಇರಬಾರದು ಸ್ಟೋರ್ ರೂಮ್
ಈಶಾನ್ಯ ದಿಕ್ಕಿನಲ್ಲಿಯೂ ಸ್ಟೋರ್ ರೂಮ್ಗಳನ್ನು ಇಡಬಾರದು. ಒಂದು ವೇಳೆ ನಿಮ್ಮ ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಸ್ಓರ್ ರೂಮ್ ಇದ್ದಲ್ಲಿ ಮೊದಲು ಅದನ್ನು ಸರಿಪಡಿಸಿ. ಇದು ಮನೆಯಲ್ಲಿ ಮಕ್ಕಳ ವಿದ್ಯಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ.
ಸ್ಟೋರ್ ರೂಂ ನಿರ್ಮಾಣಕ್ಕೆ ಇದು ಸೂಕ್ತ ದಿಕ್ಕು
ಸ್ಟೋರ್ ರೂಂ ನಿರ್ಮಾಣ ಮಾಡುವಾಗ ಆದಷ್ಟು ಪಶ್ಚಿಮ ದಿಕ್ಕನ್ನೇ ಆಯ್ಕೆ ಮಾಡಿಕೊಳ್ಳಿ. ಅದರಲ್ಲು ಸ್ಟೋರ್ ರೂಂ ಪಶ್ಚಿಮ ಹಾಗೂ ದಕ್ಷಿಣ ದಿಕ್ಕುಗಳಲ್ಲಿ ವ್ಯಾಪಿಸಿದ್ದರಂತೂ ಮನೆಯ ಸದಸ್ಯರಿಗೆ ಅನುಕೂಲ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ .
ಇದನ್ನು ಓದಿ : Vastu Tips : ಮನೆಯ ಈ ದಿಕ್ಕಿನಲ್ಲಿ ಹಣವನ್ನು ಇಟ್ಟರೆ ಇರಲಿದೆ ಲಕ್ಷ್ಮೀಯ ಕೃಪೆ
ಇದನ್ನೂ ಓದಿ : Bedroom Vastu Tips : ದಾಂಪತ್ಯ ಜೀವನದ ವಿರಸ ದೂರ ಮಾಡುತ್ತದೆ ಈ ವಾಸ್ತು ಟಿಪ್ಸ್
vastu tips know about house store room vastu rules