Kitchen Tips : ಉದುರು ಉದುರಾದ ಅನ್ನವನ್ನು ತಯಾರಿಸಲು ಅಕ್ಕಿಯೊಂದಿಗೆ ಬೆರೆಸಿ ಈ ವಿಶೇಷ ಪದಾರ್ಥ

Kitchen Tips :ರೊಟ್ಟಿ ಹಾಗೂ ಅನ್ನ ಭಾರತೀಯ ಆಹಾರದಲ್ಲಿ ಬರುವ ಪ್ರಮುಖ ಎರಡು ತಿನಿಸುಗಳಾಗಿವೆ. ದಕ್ಷಿಣ ಭಾರತದ ಜನರು ಹೆಚ್ಚಾಗಿ ಅನ್ನವನ್ನು ಆಯ್ಕೆಯಾದರೆ ಉತ್ತರ ಕರ್ನಾಟಕದವರು ರೊಟ್ಟಿಗೆ ಹೆಚ್ಚು ಮಹತ್ವವನ್ನು ನೀಡುತ್ತಾರೆ. ಆದರೆ ಪ್ರತಿ ಮನೆಗಳಲ್ಲಿ ಸಾಮಾನ್ಯವಾಗಿ ಒಂದೊತ್ತಿನ ಊಟಕ್ಕಾದರೂ ಅನ್ನ ಇದ್ದೇ ಇರುತ್ತದೆ. ಎಲ್ಲರಿಗೂ ಉದುರು ಉದುರಾದ ಅನ್ನವನ್ನು ತಯಾರಿಸಬೇಕು ಎಂಬ ಆಸೆ ಇರುತ್ತದೆ. ಆದರೆ ಹೆಚ್ಚಿನವರ ಮನೆಯಲ್ಲಿ ಅನ್ನವು ಅಂಟು ಅಂಟಾಗಿ ಇರುತ್ತದೆ. ಇದರಿಂದ ಅನ್ನದ ರುಚಿ ಕೆಡುವುದು ಒಂದೆಡೆಯಾದರೆ ಅದು ನೋಡಲು ಕೂಡ ಚೆನ್ನಾಗಿ ಕಾಣಿಸುವುದಿಲ್ಲ. ಆದರೆ ನೀವು ತಣ್ಣಗಾದ ಬಳಿಕವೂ ಅನ್ನವು ಉದುರು ಉದುರಾಗಿ ಇರಬೇಕು ಅಂದರೆ ಈ ಒಂದು ವಿಶೇಷ ಪದಾರ್ಥವನ್ನು ನೀವು ಅನ್ನ ತಯಾರಿಸುವ ವೇಳೆಯಲ್ಲಿ ಬಳಕೆ ಮಾಡಬೇಕು.


ಅನ್ನವನ್ನು ತಯಾರಿಸುವ ಮುನ್ನ ಅಕ್ಕಿಯನ್ನು ತೊಳೆಯುವುದು ಅತ್ಯಂತ ಪ್ರಮುಖ ಹಂತವಾಗಿದೆ. ಹೀಗಾಗಿ ಅಕ್ಕಿಯನ್ನು ಕನಿಷ್ಟ ಮೂರರಿಂದ ನಾಲ್ಕು ಬಾರಿ ಚೆನ್ನಾಗಿ ತೊಳೆಯಿರಿ. ಅಕ್ಕಿಯು ಸ್ವಚ್ಛವಾಗಿ ಇದ್ದಲ್ಲಿ ಮಾತ್ರ ಉದುರು ಉದುರಾದ ಅನ್ನವನ್ನು ತಯಾರಿಸಲು ಸಾಧ್ಯ.


ನೀವು ಅಕ್ಕಿಯನ್ನು ಅನ್ನವಾಗಿ ತಯಾರಿಸುವ ಮುನ್ನ ಕನಿಷ್ಟ 20 ನಿಮಿಷಗಳ ಕಾಲ ಅಕ್ಕಿಯನ್ನು ನೀರಿನಲ್ಲಿ ನೆನೆಸಿಡಿ. ಈ ರೀತಿ ಮಾಡಿದರೆ ಅಕ್ಕಿಯು ಬೇಯಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಹಾಗೂ ಅನ್ನವು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ.


ಇದಾದ ಬಳಿಕ ಅನ್ನ ಬೇಯಿಸುವ ಮುನ್ನ ಎಷ್ಟು ಪ್ರಮಾಣದ ನೀರು ಬೇಕು ಎಂದು ತಿಳಿದುಕೊಳ್ಳುವುದು ಕೂಡ ಅತ್ಯಂತ ಮುಖ್ಯವಾದ ಹಂತವಾಗಿದೆ. ನೀವು ಎಷ್ಟು ಅಕ್ಕಿಯನ್ನು ತೆಗೆದುಕೊಂಡಿದ್ದಿರೋ ಅದರ ದುಪ್ಪಟ್ಟು ನೀರನ್ನು ಹಾಕಿ ಬೇಯಿಸಲು ಬಿಡಿ. ಉದಾಹರಣೆಗೆ 1 ಲೋಟ ಅಕ್ಕಿಗೆ ನೀವು 2 ಲೋಟ ನೀರು ಹಾಕಿ ಬೇಯಿಸಬೇಕು.


ಇನ್ನೊಂದು ಮುಖ್ಯ ಅಂಶ ಅಂದರೆ ನೀವು ಅಕ್ಕಿಯನ್ನು ಬೇಯಿಸಲು ಇಡುವ ಮುನ್ನ ಅಂದರೆ ಅಕ್ಕಿಗೆ ಸಮ ಪ್ರಮಾಣ ನೀರು ಹಾಕಿದ ಬಳಿಕ 1 ಚಮಚ ತುಪ್ಪವನ್ನು ಹಾಕಿ. ಈ ರೀತಿ ಮಾಡೋದ್ರಿಂದ ಅನ್ನವು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ.

kitchen tips how to make perfect fluffy rice know best tips

ಇದನ್ನು ಓದಿ : Bedroom Vastu Tips : ದಾಂಪತ್ಯ ಜೀವನದ ವಿರಸ ದೂರ ಮಾಡುತ್ತದೆ ಈ ವಾಸ್ತು ಟಿಪ್ಸ್​

ಇದನ್ನೂ ಓದಿ : Vastu Tips : ಮನೆಯ ಈ ದಿಕ್ಕಿನಲ್ಲಿ ಹಣವನ್ನು ಇಟ್ಟರೆ ಇರಲಿದೆ ಲಕ್ಷ್ಮೀಯ ಕೃಪೆ

Comments are closed.