love jihad : ಕಾಫಿನಾಡಿನಲ್ಲಿ ಲವ್​ಜಿಹಾದ್​ ಆರೋಪ : ಠಾಣೆ ಮೆಟ್ಟಿಲೇರಿದ ಯುವತಿ

ಚಿಕ್ಕಮಗಳೂರು : love jihad : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಲವ್ ಜಿಹಾದ್ ನಡೆದಿರುವ ಆರೋಪ ಕೇಳಿ ಬಂದಿದೆ. ಹಿಂದೂ ಹುಡುಗಿ ಮತ್ತು ಮುಸ್ಲಿಂ ಧರ್ಮಕ್ಕೆ ಸೇರಿದ ಹುಡುಗ ಸಬ್ ರಿಜಿಸ್ಟ್ರಾರ್ ಕಚೇರಿಗೆ ಮದುವೆಯ ನೋಂದಣಿಗೆಂದು ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಹೀಗಾಗಿ ನೋಂದಣಿಗೆಂದು ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿದ್ದ ಈ ಜೋಡಿಯನ್ನು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಎಸ್.ಡಿ.ಪಿ.ಐ ಮತ್ತು‌ ದಲಿತ ಸಂಘಟನೆ ಮುಖಂಡರು ಪೊಲೀಸ್ ಠಾಣೆಗೆ ಆಗಮಿಸಿದರು. ವಿಚಾರ ತಿಳಿದು ಖುದ್ದು ಪೊಲೀಸ್ ಠಾಣೆಗೆ ಬಂದ ಚಿಕ್ಕಮಗಳೂರು ಎಸ್.ಪಿ ಉಮಾ ಪ್ರಶಾಂತ್ ಯುವಕ ಯುವತಿಯನ್ನು ಹೆಚ್ಚಿನ ವಿಚಾರಣೆ ನಡೆಸಿದರು. ಆದ್ರೆ ಬಳಿಕದ ಬೆಳವಣಿಗೆಯಲ್ಲಿ ಹಿಂದೂ ಪರ ಸಂಘಟನೆಯ ನಾಲ್ವರ ವಿರುದ್ದವೇ ಪ್ರಕರಣ ದಾಖಲಾಯಿತು. ನೈತಿಕ ಪೊಲೀಸ್ ಗಿರಿ ನಡೆಸಿದ ದೂರಿನ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಜೋಡಿ ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿ ಸಮೀಪದ ಲಕ್ಷ್ಮೀಪುರದವರಾಗಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು ವಿವಾಹವಾಗಲು ನಿರ್ಧರಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಯುವತಿಯ ತಾಯಿ ಪೊಲೀಸ್ ಠಾಣೆಗೆ ಆಗಮಿಸಿದರು. ಮಗಳು ಪೊಲೀಸ್ ಜೀಪ್ ಹತ್ತುವಾಗ ತಾಯಿ ಕಣ್ಣೀರಿಟ್ಟರು. ಚಿಕ್ಕಮಗಳೂರು ನಗರ ಮಹಿಳಾ ಠಾಣೆ ಮುಂದೆ ಯುವತಿ ತಾಯಿಯ ರೋಧನೆ ಎಲ್ಲರ ಹೃದಯ ಮನಕಲಕುವಂತಿತ್ತು. ನನ್ನ ಮಗಳನ್ನ ನೋಡಲು, ಮಾತನಾಡಲು ಬಿಡಿ ಎಂದು ತಾಯಿ ಗೋಗರೆದಳು. ಆದ್ರೆ ಪ್ರೀತಿಸಿದವನನ್ನೇ ಮದುವೆಯಾಗುತ್ತೇನೆಂದು ಯುವತಿ ಹೊರಟಿದ್ದಳು.

ಇದಾದ ಬಳಿಕ ಯುವತಿಯ ತಾಯಿ ಶೋಭಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ನನ್ನ‌ ಮಗಳು ನನಗೆ ಜೀವ. ಈ ಮದುವೆಗೆ ನನ್ನ ಒಪ್ಪಿಗೆ ಇದೆ. ಅವಳಿಗೆ ಮತ್ತು ನನ್ನ ಅಳಿಯನಿಗೆ ತೊಂದರೆ ಕೊಡಬಾರದು ಎಂದು ಕೇಳಿಕೊಂಡರು. ಅವರು ಮದುವೆಯಾಗಲಿ, ಮದುವೆಗೆ ನನ್ನ ಸಂಪೂರ್ಣ ಒಪ್ಪಿಗೆ ಇದೆ. ಅವರು ಸೀದಾ ಹೂವಿನ ಹಾರ ಹಾಕಿಕೊಂಡು ಲಕ್ಷ್ಮೀಪುರಕ್ಕೆ ಬರಬೇಕು ಎಂದು ಯುವತಿಯ ತಾಯಿ ಒತ್ತಾಯಿಸದರು.

ಸದ್ಯ ಈ ವಿಚಾರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದ ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧ ನೈತಿಕ ಪೊಲೀಸ್ ಗಿರಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಪ್ರೀತಿ ಪ್ರೇಮ ಎಂದು ಹೋಗುವ ಮೊದಲು ಮನೆಯವರು, ಹೆತ್ತವರ ಬಗ್ಗೆ ಯುವಜನತೆ ಯೋಚನೆ ಮಾಡುವುದು ಒಳಿತು.

ಇದನ್ನು ಓದಿ : man’s nose ear chopped off :ಮಗಳಿಗೆ ಮರು ಮದುವೆ ಮಾಡಿದ ತಂದೆಯ ಮೂಗು, ಕಿವಿಯನ್ನೇ ಕತ್ತರಿಸಿದ ದುಷ್ಕರ್ಮಿಗಳು

ಇದನ್ನೂ ಓದಿ : Mandya Ravi :ಅಕಾಲಿಕ ನಿಧನರಾದ ಮಂಡ್ಯ ರವಿಗೆ ಇತ್ತು ಅದೊಂದು ನನಸಾಗದ ಕನಸು

A case of love jihad has come to light in Chikkamagalur

Comments are closed.