Hubballi : ವಾಣಿಜ್ಯ ನಗರಿಯಲ್ಲೊಂದು ವಿಸ್ಮಯ:ರಸ್ತೆ ಗುಂಡಿಯಲ್ಲಿ ದೇವಿ ಪ್ರತ್ಯಕ್ಷ

ಹುಬ್ಬಳ್ಳಿ : ರಾಜ್ಯದ ಎಲ್ಲೆಡೆ ರಸ್ತೆಗಳು ಗುಂಡಿಮಯವಾಗಿದ್ದು, ವಾಹನ ಸವಾರರು ಗಾಡಿ ಓಡಿಸಲು, ಪಾದಾಚಾರಿಗಳು ಓಡಾಡಲು ಪರದಾಡುವ ಸ್ಥಿತಿ ಇದೆ. ಪ್ರತಿಭಟನೆ, ಹೋರಾಟಗಳಿಂದ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ (Hubballi)ಹುಬ್ಬಳ್ಳಿಯಲ್ಲಿ ದೇವಿಯೊಬ್ಬಳು ಪ್ರತ್ಯಕ್ಷವಾಗಿ ಗುಂಡಿ ಬಗ್ಗೆ ಅಸಮಧಾನ‌ ತೋಡಿಕೊಂಡಿದ್ದಾರೆ. ಇದೇನಿದು ಅಂದ್ರಾ ಈ ಸ್ಟೋರಿ ಓದಿ.

(Hubballi)ಹುಬ್ಬಳ್ಳಿಯ ರಸ್ತೆಗಳು ಗುಂಡಿಗಳಿಂದ ತುಂಬಿದೆ. ಹೀಗಂದ್ರೇ ಸರಿಯಲ್ಲ. ಗುಂಡಿ ಮಧ್ಯದಲ್ಲಿ ರಸ್ತೆ ಹುದುಗಿದೆ ಎಂಬ ಸ್ಥಿತಿಯಲ್ಲಿದೆ ಹುಬ್ಬಳ್ಳಿ ರಸ್ತೆಗಳ ಸ್ಥಿತಿ. ಹೀಗಾಗಿ ಇದರ ಬಗ್ಗೆ ರಾಜ್ಯದ ಜನಪ್ರತಿನಿಧಿಗಳ ಗಮನ ಸೆಳೆಯೋ ಉದ್ದೇಶದಿಂದ ಹುಬ್ಬಳ್ಳಿಯ ಬಾಲಕಿಯೊಬ್ಬಳು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ದಸರಾ ಅಂಗವಾಗಿ ಸೀರೆ ಉಟ್ಟು ಸಾಕ್ಷಾತ ದೇವಿಯ ಅವತಾರ ತಾಳಿದ ಹರ್ಷಿತಾ ಮೆಹರವಾಡೆ ಎಂಬ 9 ವರ್ಷದ ಬಾಲಕಿ, ಗುಂಡಿಮಯವಾದ ರಸ್ತೆಗಳಲ್ಲಿ ಸಂಚರಿಸಿ ಜನರಿಗೆ ಹಾಗೂ ಜಗತ್ತಿಗೆ ಹುಬ್ಬಳ್ಳಿಯ ರಸ್ತೆ ಗುಂಡಿಯನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ.

ಮಹಿಷಾಸುರ ಮರ್ದಿನಿಯಂತೆ ತ್ರಿಶೂಲ್ ಹಿಡಿದ ಬಾಲಕಿ ಹರ್ಷಿತಾ ನಗರದ ಪ್ರಮುಖ ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚರಿಸಿದರು. ಮುಂದಿನ ನವರಾತ್ರಿ ಗೆ ನಾನು ಮರಳಿ ಬರುತ್ತೇನೆ. ಅಷ್ಟರ ಒಳಗೆ ಈ ರಸ್ತೆಯನ್ನು ಸರಿಪಡಿಸಿ, ಅಲ್ಲದೇ ಹುಬ್ಬಳ್ಳಿ ನಗರಕ್ಕೆ ಸ್ವಚ್ಚತೆ,ವಿದ್ಯುತ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಿ ಎಂದು ದೇವಿ ಸಂದೇಶ ನೀಡುವಂತೆ ಬಾಲಕಿ ದೇವಿಯ ಅವತಾರದಲ್ಲಿ ಮಿಂಚಿದ್ದಾಳೆ.

ಈ ಬಗ್ಗೆ ಮಾತನಾಡಿದ ಬಾಲಕಿ ಹರ್ಷಿತಾ ಮೆಹರವಾಡೇ, ನಾನು ಪ್ರತಿನಿತ್ಯ ಶಾಲೆ ಸೇರಿದಂತೆ ಬೇರೆ ಬೇರೆ ಕಾರಣಕ್ಕಾಗಿ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದೇನೆ. ರಸ್ತೆ ಗುಂಡಿಯಿಂದಾಗಿ ವಾಹನ ಹಾಗೂ ಗಾಡಿಯಲ್ಲಿ ಪ್ರಯಾಣಿಸೋದು ಕಷ್ಟವಾಗುತ್ತಿದೆ. ಅದಕ್ಕಾಗಿ ನಮ್ಮ ಜನಪ್ರತಿನಿಧಿಗಳನ್ನು ಎಚ್ಚರಿಸುವ ಉದ್ದೇಶದಿಂದ ನಾನು ಇಂತಹ ಪ್ರಯತ್ನ ಮಾಡಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ : KS Eshwarappa :‘ಆರ್​ಎಸ್​ಎಸ್​​ಗೆ ಬುದ್ಧಿ ಕಲಿಸಲು ಯಾರಪ್ಪನಿಂದಲೂ ಸಾಧ್ಯವಿಲ್ಲ’ : ಕೆ.ಎಸ್​ ಈಶ್ವರಪ್ಪ ಗುಡುಗು

ಇದನ್ನೂ ಓದಿ : Yellow alert announced : ಕರ್ನಾಟಕದಲ್ಲಿ ಮಳೆ ಮುಂದುವರಿಕೆ : ಯೆಲ್ಲೋ ಅಲರ್ಟ್‌ ಘೋಷಣೆ

ಇದನ್ನೂ ಓದಿ : Mysore Dasara Jamboo Savari : ವಿಶ್ವವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ.. ಮೈಸೂರಲ್ಲಿ ಇಂದು ಏನೆಲ್ಲ ಕಾರ್ಯಕ್ರಮ ಇವೆ

ಅಲ್ಲದೇ ನಾನು ಪ್ರತಿ ವರ್ಷ ದೇವಿಯ ವೇಷ ಹಾಕುತ್ತೇನೆ.‌ ಆ ವೇಷವನ್ನೇ ಬಳಸಿಕೊಂಡು ಜನರನ್ನು ಎಚ್ಚರಿಸುವ ಕೆಲಸ ಮಾಡೋಣ ಎಂಬ ಕಾರಣಕ್ಕಾಗಿ ಈ ರೀತಿ ಪ್ರಯತ್ನ ಮಾಡಿದ್ದೇನೆ ಎಂದರು. ಕೆಲ ದಿನಗಳ ಹಿಂದೆ ಹುಬ್ಬಳ್ಳಿ ಧಾರವಾಡ ಮಹಾನಗರಕ್ಕೆ ದೇಶದ ಪ್ರಥಮ ಪ್ರಜೆ ದ್ರೌಪದಿ ಮುರ್ಮು ಆಗಮಿಸಿದ್ದರು. ಈ ವೇಳೆ ರಸ್ತೆಗಳಿಗೆ ತರಾತುರಿಯಲ್ಲಿ ಡಾಂಬರು ಭಾಗ್ಯ ಕಲ್ಪಿಸಲಾಗಿತ್ತು. ಆದರೆ ಈಗಲೂ ಹಲವು ಪ್ರದೇಶದ ರಸ್ತೆಗಳು ಓಡಾಡಲು ಯೋಗ್ಯವಾಗಿಲ್ಲ. ಹೀಗಾಗಿ ಗುಂಡಿಗಿಳಿದ ದೇವಿ ಪ್ರತಿಭಟನೆ ಸಖತ್ ವೈರಲ್ ಆಗಿದೆ.

A wonder in the commercial city: Devi apparition at the road junction

Comments are closed.