ರಾಯಚೂರು : Two students drowned : ಸೋಶಿಯಲ್ ಮೀಡಿಯಾ ಫೀವರ್ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಡುವೆ ಯುವ ಜನತೆಯಲ್ಲಿ ಸೆಲ್ಫೀ ಕ್ರೇಜ್ ಹೆಚ್ಚಾಗಿದೆ. ಇದೇ ರೀತಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ದಾರುಣ ಘಟನೆಯು ರಾಯಚೂರು ತಾಲೂಕಿನ ಕಲ್ಮಲ ಗ್ರಾಮದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಸಂಭವಿಸಿದೆ. ಎನ್ಆರ್ ಶೆಟ್ಟಿ ಮುಚ್ಚಿಸಿರುವ ಹೈಡಲ್ ಪ್ರಾಜೆಕ್ಟ್ ಬಳಿ ಈ ದುರಂತ ಸಂಭವಿಸಿದೆ.
ರಾಯಚೂರು ನಗರದ ವಿದ್ಯಾನಿಧಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಾದ ವೈಭವ್ (17) ಹಾಗೂ ಸುಜಿತ್ (17) ಕಾಲುವೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.. ನಾಲ್ವರು ಸ್ನೇಹಿತರು ಸೇರಿ ಕಾಲುವೆ ಬಳಿ ಪಿಕ್ನಿಕ್ಗೆಂದು ತೆರಳಿದ್ದರು .ಕಾಲುವೆ ಬಳಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ವಿದ್ಯಾರ್ಥಿಗಳ ಪತ್ತೆಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.
ದುರ್ಘಟನೆ ನಡೆದ ಸ್ಥಳದಿಂದ 200 ಮೀಟರ್ ದೂರದಲ್ಲಿ ವಿದ್ಯಾರ್ಥಿಗಳಾದ ವೈಭವ್ ಹಾಗೂ ಸುಜಿತ್ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ರಾಯಚೂರು ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೃತಪಟ್ಟ ವಿದ್ಯಾರ್ಥಿಗಳು ರಾಯಚೂರು ವಿದ್ಯಾನಿಧಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು .ನಿನ್ನೆ ಪಿಕ್ನಿಕ್ಗೆಂದು ನಾಲ್ವರು ವಿದ್ಯಾರ್ಥಿಗಳ ತಂಡ ಈ ಸ್ಥಳಕ್ಕೆ ಆಗಮಿಸಿತ್ತು. ಕಾಲುವೆಯಲ್ಲಿ ಸೆಲ್ಫಿ ತೆಗೆದುಕೊಳ್ಳುವ ದುಸ್ಸಾಹಸಕ್ಕೆ ಈ ನಾಲ್ವರು ಮುಂದಾಗಿದ್ದರು.
ಆದರೆ ಕಾಲುವೆಯಲ್ಲಿ ಕಾಲು ಜಾರಿದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ನೀರಿಗೆ ಬಿದ್ದಿದ್ದಾರೆ. ಆದರೆ ವಿದ್ಯಾರ್ಥಿಗಳಾದ ನಾಗೇಂದ್ರ ಹಾಗೂ ತರುಣ್ ಈಜಿ ದಡ ಸೇರಿದ್ದಾರೆ. ಆದರೆ ಕಾಲುವೆಯಲ್ಲಿ ಸುಜಿತ್ ಹಾಗೂ ವೈಭವ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ನೀರುಪಾಲಾಗಿದ್ದ ಸುಜಿತ್ ಹಾಗೂ ವೈಭವ್ ಪತ್ತೆಗೆ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಶೋಧ ಕಾರ್ಯದ ಸಂದರ್ಭದಲ್ಲಿ ಇಬ್ಬರ ಮೃತ ದೇಹ ಪತ್ತೆಯಾಗಿದೆ. ಈ ಸಂಬಂಧ ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಿ ಎಂದು ಪೋಷಕರು ವಿದ್ಯಾರ್ಥಿಗಳನ್ನು ಶಾಲೆಗೆ ಕಳಿಸುತ್ತಾರೆ. ಆದರೆ ಮಕ್ಕಳು ಈ ರೀತಿಯ ಹುಚ್ಚಾಟಗಳಿಂದಾಗಿ ಜೀವವನ್ನೇ ಕಳೆದುಕೊಂಡಿದ್ದು ಪೋಷಕರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ .
ಇದನ್ನು ಓದಿ : Prahlad Joshi :‘ಭಾರತ್ ಜೋಡೋ ಯಾತ್ರೆಯಿಂದ ಲಾಭವಿದೆ ಎಂಬ ಭ್ರಮರೆ ಕಾಂಗ್ರೆಸ್ನದ್ದು’ : ಪ್ರಹ್ಲಾದ್ ಜೋಶಿ ವ್ಯಂಗ್ಯ
ಇದನ್ನೂ ಓದಿ : lover commits suicide :ಪ್ರೀತಿಸಿ ಮದುವೆಯಾಗಲು ನಿರಾಕರಿಸಿದ ಪ್ರಿಯಕರ : ಮನನೊಂದ ಪ್ರಿಯತಮೆ ವಿಷಸೇವಿಸಿ ಆತ್ಮಹತ್ಯೆ
Accident while taking selfie: Two students drowned in water after slipping