NASA :ಗುರುಗ್ರಹದ ಅದ್ಭುತ ಪೋಟೊ ಸೆರೆ ಹಿಡಿದ ನಾಸಾ

ನವದೆಹಲಿ :(NASA ) ಅಮೇರಿಕಾದ ಬಾಹ್ಯಕಾಶ ಸಂಸ್ಥೆ ನಾಸಾ ಸೌರವ್ಯೂಹದ ಅತಿದೊಡ್ಡ ಗ್ರಹ ಗುರುಗ್ರಹದ ಅದ್ಭುತ ಚಿತ್ರವನ್ನು ಸೆರೆ ಹಿಡಿದಿದ್ದು, ತನ್ನ ಇನ್‌ಸ್ಟಾಗ್ರಾಂ ಪೆಜ್‌ ನಲ್ಲಿ ಹಂಚಿಕೊಂಡಿದೆ. ನ್ಯಾಷನಲ್‌ ಎರೋನಾಟಿಕ್ಸ್‌ ಮತ್ತು ಬಾಹ್ಯಕಾಶ ಆಡಳಿತವು ಜುಲೈ 2022 ರಲ್ಲಿ ಗ್ರಹದ ಉತ್ತರ ಧ್ರುವದ ಮೇಲೆ ಗುರುಗ್ರಹ 43 ನೇ ಹಾರಾಟವನ್ನು ಪೂರ್ಣಗೊಳಿಸಿದಾಗ ಜುನೋ ಬಾಹ್ಯಕಾಶ ನೌಕೆ ಚಿತ್ರವನ್ನು ಸೆರೆ ಹಿಡಿದಿತ್ತು ಎಂದು ನಾಸಾ ಹೇಳಿಕೊಂಡಿದೆ.

ಜುನೋ ಕ್ಯಾಮ್‌ ಉಪಕರಣವು ಗುರುಗ್ರಹದ ಉತ್ತರ ಧ್ರುವದ ಬಳಿ ಚಂಡಮಾರುತದಂತಹ ಸುರುಳಿಯಾಕಾರದ ಗಾಳಿಯ ಮಾದರಿಗಳ ಅದ್ಭುತ ನೋಟವನ್ನು ಸೆರೆಹಿಡಿಯಿತು ಎಂದು ಬಾಹ್ಯಕಾಶ ಸಂಸ್ಥೆ ತಿಳಿಸಿದೆ. ಸುಳಿಯಾಕಾರದ ಗಾಳಿಯ ಮಾದರಿಗಳ ಸೆರೆ ಹಿಡಿದ ಪೋಟೋದಲ್ಲಿ ಗುರುಗ್ರಹದ ಮೇಲೆ ನೀಲಿ ಮತ್ತು ಬಿಳಿ ಛಾಯೆಗಳಲ್ಲಿ ಕಾಣಿಸಿಕೊಂಡಿದ್ದು. ವೃತ್ತಗಳ ನಡುವೆ ಹೊರಹೊಮ್ಮುವ ಅಲೆಗಳ ರೂಪದಂತೆ ಕಾಣುತ್ತದೆ.

ಈ ಚಿತ್ರವನ್ನು ಇನ್‌ಸ್ಟಾಗ್ರಾಂ ಪೇಜ್‌ ನಲ್ಲಿ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಒಂದು ಮೀಲಿಯನ್‌ ಲೈಕ್‌ ಗಳಿಸಿದೆ. ಚಿತ್ರವನ್ನು ನೋಡಿದ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರವು ಅದ್ಬುತವಾಗಿದೆ, ಸುಂದರವಾಗಿದೆ ಎಂದು ಕಮೆಂಟ್‌ ಮಾಡಿದ್ದಾರೆ.ಇನ್ನು ಕೆಲವರು ಈ ಚಿತ್ರವನ್ನ “ಸ್ಟಾರಿ ನೈಟ್‌ ” ಪ್ರಸಿದ್ಧವಾದ ಪೈಟಿಂಗ್‌ ಗೆ ಹೋಲಿಕೆಯನ್ನು ಮಾಡಿದ್ದಾರೆ. ಸ್ಟಾರಿ ನೈಟ್‌ ಪೈಟಿಂಗ್‌ ಚಿತ್ರಿಸಿದ ವ್ಯಾನ್‌ ಗಾಗ್‌ ಇದು ಕೂಡ ನೀವೆ ಅಲ್ಲವೆ ಎಂದು ಪ್ರಶ್ನಿಸಿ ,ಸಂಪೂರ್ಣವಾಗಿ ಅದ್ಬುತವಾಗಿದೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ನಾಸಾ ಪೋಸ್ಟ್ ಮಾಡಿದ ಪೋಟೋದ ಶೀರ್ಷಿಕೆಯಲ್ಲಿ ನಾಗರಿಕ ವಿಜ್ಞಾನಿ ಬ್ರಿಯಾನ್‌ ಸ್ಟಿಫ್ಟ್‌ ಕಚ್ಚಾ ಜುನೋಕ್ಯಾಮ್‌ ಇಮೇಜ್‌ ಡೇಟಾವನ್ನು ಬಳಸಿಕೊಂಡು ಸುಳಿಗಳ ಬಣ್ಣ ಮತ್ತು ನೋಟವನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಚಿತ್ರವನ್ನು ತೆಗೆಯುವ ಸಮಯದಲ್ಲಿ ಜುನೋ ಬಾಹ್ಯಕಾಶ ನೌಕೆಯು ಗುರುಗ್ರಹದ ಮೋಡದ ಮೇಲ್ಬಾಗದಿಂದ ಸುಮಾರು 25,100 ಕಿಲೋ ಮೀಟರ್‌ ಎತ್ತರದಲ್ಲಿದೆ ಮಾಹಿತಿ ನೀಡಿದೆ.

ಗುರುಗ್ರಹಗಳ ಮೇಲಿನ ಶಕ್ತಿಯುತ ಚಂಡಮಾರುತಗಳು 50 ಕಿಲೋಮೀಟರ್‌ಗಳಷ್ಟು ಎತ್ತರವಾಗಿದೆ. ಅವುಗಳನ್ನು ನಿಧಾನಗೊಳಿಸಲು ಯಾವುದೇ ಘನ ಮೇಲ್ಮೈ ಇಲ್ಲದ ಕಾರಣ ಬಿರುಗಾಳಿಗಳು ವರ್ಷಗಳವರೆಗೆ ಇರುತ್ತದೆ ಮತ್ತು ಗಂಟೆಗೆ 335 ಮೈಲುಗಳಷ್ಟು ಗಾಳಿಯನ್ನು ಹೊಂದಿರುತ್ತದೆ ಎಂದು ತಿಳಿಸಲಾಗಿದೆ.

NASA captured amazing photo of Jupiter

Comments are closed.