India Post Recruitment 2022 : ಪೋಸ್ಟ್‌ ಆಫೀಸ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ : ಒಟ್ಟೂ 98,000 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಪೋಸ್ಟ್‌ ಆಫೀಸ್‌ (India Post Recruitment 2022) ಪೋಸ್ಟ್‌ ಮ್ಯಾನ್‌, ಪೋಸ್ಟ್‌ ಗಾರ್ಡ್‌ ಸೇರಿದಿಂತೆ ಒಟ್ಟೂ 98,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್‌ ವೆಬ್‌ಸೈಟ್‌ ನಿಂದ ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ದೇಶಾದ್ಯಂತ ಖಾಲಿ ಇರುವ ಒಟ್ಟು 23 ವೃತ್ತಗಳಲ್ಲಿ ಹುದ್ದೆಗಳನ್ನು ತೆರೆಯಲಿದೆ ಎಂದು ಸರ್ಕಾರವು ಹೇಳಿದೆ.

ಇದರ ಜೊತೆಗೆ ಸ್ಟೆನೋಗ್ರಾಫರ್‌ ಸಂಬಂಧಿತ ಹುದ್ದೆಗಳನ್ನು ಸಹ ವೃತ್ತವಾರು ಅನುಮೋದಿಸಲಾಗಿದೆ. ಆಂದ್ರ ಪ್ರದೇಶದಲ್ಲಿ 108 ಮೇಲ್‌ ಗಾರ್ಡ್‌, 1166 MTS, ಮತ್ತು 2289 ಪೋಸ್ಟ್‌ಮೆನ್‌ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ತೆಲಂಗಾಣ ವೃತ್ತದಲ್ಲಿ 82 ಮೇಲ್‌ ಗಾರ್ಡ್‌ಗಳು, 878 MTS ಮತ್ತು 1553 ಪೋಸ್ಟ್‌ಮ್ಯಾನ್‌ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ.

ಇಂಡಿಯಾ ಪೋಸ್ಟ್‌ನಲ್ಲಿ ಖಾಲಿ ಇರುವ ಹುದ್ದೆಗಳ ವಿವಿರ :
ಪೋಸ್ಟ್‌ಮ್ಯಾನ್‌ : 59,099 ಹುದ್ದೆಗಳು
ಮಲ್ಟಿ–ಟಾಸ್ಕಿಂಗ್‌ : 37,539 ಹುದ್ದೆಗಳು
ಮೇಲ್‌ಗಾರ್ಡ್‌ : 1445 ಹುದ್ದೆಗಳು

ಇದನ್ನೂ ಓದಿ : Hyundai Venue N-Line : ಹುಂಡೈ ವೆನ್ಯೂ Vs ಹುಂಡೈ ವೆನ್ಯೂ ಎನ್‌–ಲೈನ್‌ : ಏನಿದರ ವಿಶೇಷತೆ?

ಅರ್ಹತೆ :
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 10 ನೇ ತರಗತಿ ಪಾಸಾಗಿರಬೇಕು ಮತ್ತು ಕಂಪ್ಯೂಟರ್‌ ಬೇಸಿಕ್‌ ತಿಳಿದರಿರಬೇಕು. ಕೆಲವು ಹುದ್ದೆಗಳಿಗೆ 12 ನೇತರಗತಿ ಅಥವಾ ಪಿಯುಸಿ ಪಾಸಾಗಿರಬೇಕು. ಹೆಚ್ಚಿನ ಮಾಹಿತಿಗೆ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಚೆಕ್‌ ಮಾಡಿ.

ವಯಸ್ಸಿನ ಮಿತಿ :
ಪೊಸ್ಟ್‌ ಆಫೀಸ್‌ ಉದ್ಯೋಗಕ್ಕೆ ಅರ್ಜಿ ಸಲ್ಲಿಸು ಅಭ್ಯರ್ಥಿಗಳು 18 ರಿಂದ 32 ವರ್ಷದೊಳಗಿನವರಾಗಿರಬೇಕು.

ಅರ್ಜಿ ಪ್ರಕ್ರಿಯೆ ಹೇಗೆ?

  • ಮೊದಲು ಇಲಾಖೆಯ ಅಧಿಕೃತ ವೆಬ್‌ಸೈಟ್ indiapost.gov.in ಗೆ ಭೇಟಿ ನೀಡಿ.
  • ಅಲ್ಲಿ ಹೋಮ್‌ಪೇಜ್‌ಗೆ ಹೋಗಿ ಮತ್ತು ನೇಮಕಾತಿ ಲಿಂಕ್ ಆಯ್ಕೆಮಾಡಿ.
  • ನೀವು ಅರ್ಜಿ ಸಲ್ಲಿಸಲು ಬಯಸುವ ಸ್ಥಾನವನ್ನು ಹುಡುಕಿ ಮತ್ತು ಅವಶ್ಯಕತೆಗಳನ್ನು ಪರಿಶೀಲಿಸಿಕೊಳ್ಳಿ.
  • ಖಾತೆಗೆ ಸೈನ್ ಅಪ್ ಮಾಡಿ.
  • ಫಾರ್ಮ್‌ನಲ್ಲಿರುವ ಮಾಹಿತಿಗಳನ್ನು ಪೂರ್ಣಗೊಳಿಸಿ.
  • ಶುಲ್ಕವನ್ನು ಸಲ್ಲಿಸಿ ಮತ್ತು ಪಾವತಿಸಿ
  • ಸ್ವೀಕರಿಸಿದ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ, ಮುಂದಿನ ಬಳಕೆಗಾಗಿ ಅದರ ಪ್ರಿಂಟ್ಔಟ್‌ ತೆಗೆದುಕೊಳ್ಳಿ

ಇದನ್ನೂ ಓದಿ : NASA :ಗುರುಗ್ರಹದ ಅದ್ಭುತ ಪೋಟೊ ಸೆರೆ ಹಿಡಿದ ನಾಸಾ

(Indian Post Recruitment 2022 98,000 posts at India post)

Comments are closed.