Moonlighting : 300 ನೌಕರರನ್ನು ವಜಾಗೊಳಿಸಿದ ವಿಪ್ರೋ ಕಂಪೆನಿ

ನವದೆಹಲಿ : ಮೂನ್‌ಲೈಟಿಂಗ್‌ (Moonlighting) ಕುರಿತು ಐಟಿ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ವೇಳೆಯಲ್ಲಿ ಮತ್ತೊಂದು ಕಂಪೆನಿಯಲ್ಲಿ ಕೆಲಸ ಮಾಡುವುದಕ್ಕೆ ಐಟಿ ಕಂಪೆನಿಗಳು ವಿರೋಧ ವ್ಯಕ್ತಪಡಿಸಿವೆ. ಈ ಬೆಳವಣಿಗೆಯ ನಡುವಲ್ಲೇ ಐಟಿ ದಿಗ್ಗಜ ಕಂಪೆನಿ ವಿಪ್ರೋ (Wipro) ತನ್ನ 300 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ ಎಂದು ವಿಪ್ರೋ ಕಂಪೆನಿಯ ಕಾರ್ಯನಿರ್ವಾಹಕ ಅಧ್ಯಕ್ಷ ರಿಷದ್ ಪ್ರೇಮ್‌ಜಿ(Rishad Premji) ಘೋಷಿಸಿದ್ದಾರೆ.

(Moonlighting)ಐಟಿ ಕಂಪೆನಿ(IT Company)ಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ನೌಕರರ ನೀತಿಯಲ್ಲಿ ಉಲ್ಲಂಘನೆ ಮಾಡಿವೆ. ತಮ್ಮ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ನಿಯಮ ಉಲ್ಲಂಘನೆ ಮಾಡಿರುವ ಕುರಿತು ಈ ಮೇಲ್‌ ಮೂಲಕ ಸೂಚನೆಯನ್ನು ನೀಡಲಾಗಿತ್ತು. ಆದರೂ ಕೂಡ ತಮ್ಮ ಕಂಪೆನಿಯಲ್ಲಿ ಕೆಲಸ ಮಾಡುವ ವೇಳೆಯಲ್ಲಿ ಪ್ರತಿಸ್ಪರ್ಧಿ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅವರ ತಮ್ಮ ಸಂಸ್ಥೆಯಿಂದ ಮುಕ್ತಗೊಳಿಸಿದೆ ಎಂದು ತಿಳಿಸಿದ್ದಾರೆ.

ವಿಪ್ರೊ(Wipro) ಕಂಪನಿಗಾಗಿ ಕೆಲಸ ಮಾಡುತ್ತಿರುವ ನೌಕರರು ತಮ್ಮ ಪ್ರತಿಸ್ಪರ್ಧಿ ಕಂಪೆನಿಗಾಗಿ ಕಳೆದ ಹಲವು ತಿಂಗಳಿಂದ ನೇರವಾಗಿ 300 ಜನರು ಕೆಲಸ ಮಾಡುತ್ತಿರುವುದನ್ನು ಕಂಪೆನಿ ನಿಖರ ಪಡಿಸಿದೆ ಎಂದು ಅಖಿಲ ಭಾರತ ನಿರ್ವಹಣಾ ಸಂಘದ ರಾಷ್ಟ್ರೀಯ ನಿರ್ವಹಣೆ ಸಮಾವೇಶದಲ್ಲಿ ಮಾತನಾಡಿದ ವಿಪ್ರೊ (Wipro)ಕಂಪೆನಿ ಕಾರ್ಯನಿರ್ವಾಹಕ ಅಧ್ಯಕ್ಷ ರಿಷದ್‌ ಪ್ರೇಮ್‌ಜಿ(Rishad Premji)ಯವರು ಹೇಳಿದ್ದಾರೆ. ಮೂನ್‌ಲೈಟಿಂಗ್‌ ನೀತಿ ಹೇಳುವುದೆನೆಂದರೆ ಉದ್ಯೋಗಿಗೆ ತನ್ನ ಕಂಪೆನಿಯ ಜೊತೆಯಲ್ಲಿ ಪೂರ್ಣ ಸಮಯದ ಕೆಲಸ ಮಾಡಲು ಅನುಮತಿ ನೀಡುತ್ತದೆ. ಹಾಗೆ ರಿಮೋಟ್‌ ವರ್ಕಿಂಗ್‌ ಉದ್ಯೋಗಿಗಳಗೆ ಈ ಆಯ್ಕೆಯನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಭಾರತದಲ್ಲಿನ ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್‌ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ತಮ್ಮ ವೇತನದಾರರ ಪಟ್ಟಿಯಲ್ಲಿರುವಾಗ ಬೇರೆ ಕಂಪೆನಿಗಳಿಗೆ ಮೂನ್‌ಲೈಟ್‌ಗೆ ಅವಕಾಶವನ್ನು ಕೊಡಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಚರ್ಚಿಸಲಾಗಿದೆ.

ಇದನ್ನೂ ಓದಿ : ಫ್ಲಿಪ್‌ಕಾರ್ಟ್‌ ಸೇಲ್‌, ಆಫರ್‌ ಬೆಲೆಯಲ್ಲಿ ನಥಿಂಗ್ ಫೋನ್ ಹಾಗೂ ಗೂಗಲ್ ಪಿಕ್ಸೆಲ್

ಇದನ್ನೂ ಓದಿ : ನಿಮ್ಮ ಫೋನ್‌ನಲ್ಲೂ ಇರಬಹುದು ಭಯಾನಕ ‘ಸೋವಾ ವೈರಸ್’

ಇದನ್ನೂ ಓದಿ : 64 ಮೆಗಾಪಿಕ್ಸೆಲ್‌ ನೈಟ್‌ ಕ್ಯಾಮೆರಾದೊಂದಿಗೆ ಬಿಡುಗಡೆಗೆ ಸಿದ್ಧವಾದ ವಿವೊ V25 ಸ್ಮಾರ್ಟ್‌ಫೋನ್‌

ಮೂನ್‌ಲೈಟ್‌ ನೌಕರರು ಪ್ರತಿಸ್ಫರ್ಧಿಗಳಿಗಾಗಿ ಗುಪ್ತವಾಗಿ ಕೆಲಸ ಮಾಡುತ್ತಿದ್ದರೆ ಅಂತಹ ನೌಕರರನ್ನು ಕೆಲಸದಿಂದ ಕೊನೆಗೊಳಿಸಲಾಗುತ್ತದೆ. ” ವಿಪ್ರೋ ಮತ್ತು ಪ್ರತಿಸ್ಪರ್ಧಿಗಾಗಿ ಕೆಲಸ ಮಾಡುವ ಯಾವುದೇ ನೌಕರರಿಗೆ ಇಲ್ಲಿ ಅವಕಾಶವಿರುವುದಿಲ್ಲ. ಹಾಗೆ ಅಂತಹ ಸನ್ನಿವೇಶವನ್ನು ಕಂಪೆನಿ ಕಂಡುಹಿಡಿದರೆ ಅವರನ್ನು ಕಂಪೆನಿ ಉದ್ಯೋಗದಿಂದ ಕೊನೆಗೊಳಿಸಬೇಕಾಗುತ್ತದೆ ಎಂದು ಹೇಳಿದರು. “ಅದನ್ನು ನಾನು ಈಗಾಗಲೇ ಅರ್ಥೈಸಿದೆ.. ಹಾಗಾಗಿ ನಾನು ಹೇಳಿದ್ದಕ್ಕೆ ನಾನು ಬದ್ಧನಾಗಿರುತ್ತೇನೆ. ನೀವು ಯಾವುದೇ ಮೂನ್‌ಲೈಟ್‌ ಅಡಿ ಕೆಲಸ ಮಾಡುತ್ತಿದ್ದರೆ ಅದು ಸಮಗ್ರತೆಯ ಉಲ್ಲಂಘನೆ ಎಂದು ಭಾವಿಸುವುದಾಗಿ ಅವರು ಹೇಳಿದ್ದಾರೆ.

Wipro company laid off 300 employees

Comments are closed.