ಭಾನುವಾರ, ಏಪ್ರಿಲ್ 27, 2025
Homedistrict Newsಅಶಕ್ತ ಕುಟುಂಬಗಳಿಗೆ ನೆರವಾದ ಅಘೋರೇಶ್ವರ ಕಲಾರಂಗ, ಕಿದಿಯೂರು ಉದಯ್ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್

ಅಶಕ್ತ ಕುಟುಂಬಗಳಿಗೆ ನೆರವಾದ ಅಘೋರೇಶ್ವರ ಕಲಾರಂಗ, ಕಿದಿಯೂರು ಉದಯ್ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್

- Advertisement -

ಕೋಟ : ಸದಾ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಅಘೋರೇಶ್ವರ ಕಲಾರಂಗ ಮತ್ತು ಕಿದಿಯೂರು ಉದಯಕುಮಾರ್ ಫ್ಯಾಮಿಲಿ ಟ್ರಸ್ಟ್ ಲಾಕ್ ಡೌನ್ ನಲ್ಲಿ ಸಿಲುಕಿರುವ ಅಶಕ್ತ ಕುಟುಂಬಗಳಿಗೆ ನೆರವಾಗಿವೆ. ಸಾಸ್ತಾನ, ಸಾಲಿಗ್ರಾಮ, ಕೋಟ ಪರಿಸರದ ಸುಮಾರು 50ಕ್ಕೂ ಅಧಿಕ ಅಶಕ್ತ ಕುಟುಂಬಗಳಿಗೆ ತಮ್ಮ ದೈನಂದಿನ ಜೀವನ ನಿರ್ವಹಣೆಗಾಗಿ ದಿನಸಿ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು.

ಕಿದಿಯೂರು ಉದಯಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ಮುಖ್ಯಸ್ಥರಾದ ಕಿದಿಯೂರು ಉದಯಕುಮಾರ್ ಶೆಟ್ಟಿ ಅವರು ದಿನಸಿ ಸಾಮಗ್ರಿಗಳ ಕಿಟ್‌ಗಳನ್ನು ಅಶಕ್ತ ಕುಟುಂಬಗಳಿಗೆ ಹಸ್ತಾಂತರಿಸಿದರು. ಶ್ರೀ ಅಘೋರೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಚಂದ್ರಶೇಖರ ಕಾರಂತ, ಕಲಾರಂಗದ ಅಧ್ಯಕ್ಷ ರಾಘವೇಂದ್ರ ನಾಯರಿ, ನಿವೃತ್ತ ಇಂಜಿನಿಯರ್ ಮಂಜುನಾಥ ನಾಯರಿ ಮತ್ತು ಕಲಾರಂಗದ ಸರ್ವಸದಸ್ಯರು ಉಪಸ್ಥಿತರಿದ್ದರು.

ಸಮಾಜಸೇವೆಯನ್ನ ಮೂಲಧ್ಯೇಯವಾಗಿಸಿರುವ ಕಿದಿಯೂರು ಉದಯಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ಲಾಕ್‌ಡೌನ್ ಸಂದರ್ಭದಲ್ಲಿ ಸತತವಾಗಿ ಅಶಕ್ತ ಕುಟುಂಬಗಳಿಗೆ ದಿನಸಿ ಕಿಟ್‌ನ್ನು ನೀಡಿರುವುದಲ್ಲದೇ ಉಡುಪಿ ಪರಿಸರದ ಆಟೋ ಚಾಲಕ ಕುಟುಂಬಗಳಿಗೆ ಸಹಾಯ ಹಸ್ತಚಾಚಿದೆ.

ಆಹಾರ ಸಾಮಗ್ರಿಗಳ ವಿತರಣೆಯ ಜೊತೆಗೆ ನಿರ್ಗತಿಕರಿಗೆ ಹಾಗೂ ವಲಸೆ ಕಾರ್ಮಿಕರಿಗೆ ಸತತ 28 ದಿನಗಳ ಕಾಲ ಅನ್ನದಾಸೋಹ ನಡೆಸುವ ಮೂಲಕ ಸಮಾಜಮುಖಿ ಕಾರ್ಯಕ್ರಮಗಳಿಂದ ಸೈ ಎನಿಸಿಕೊಂಡಿದ್ದಾರೆ.

ಕಾರ್ತಟ್ಟು-ಚಿತ್ರಪಾಡಿ ಅಘೋರೇಶ್ವರ ಕಲಾರಂಗ (ರಿ.) ಕ್ರೀಯಾಶೀಲ ಸಂಸ್ಥೆಯಾಗಿದ್ದು, ಪ್ರಸ್ತುತ ಸಂದರ್ಭದಲ್ಲಿ ಬಂಜರು ಭೂಮಿಯಲ್ಲಿ ತಾವೆ ಉತ್ತಿ-ಬಿತ್ತಿ ಬೆಳೆದ ಅಕ್ಕಿಯನ್ನು ಪ್ರತಿ ಬಾರಿಯಂತೆ ಈ ಬಾರಿಯು ಸುಮಾರು 3೦೦ಕೆ.ಜಿ. ಅಕ್ಕಿಯನ್ನು ಹೊಸಬೆಳಕು ಸೇವಾ ಟ್ರಸ್ಟ್ ಉಡುಪಿ ವೃದ್ಧಾಶ್ರಮಕ್ಕೆ ನೀಡಿದ್ದಾರೆ.

ಜೆ.ಸಿ. ದಿನೇಶ್ ಬಾಂಧ್ಯವ್ಯರವರ ವಲಸೆ ಕಾರ್ಮಿಕರಿಗೆ ಅನ್ನದಾನ ಕಾರ್ಯಕ್ರಮದಲ್ಲಿ ಆಹಾರ ಸಾಮಗ್ರಿಗಳನ್ನು ನೀಡಿರುವುದಲ್ಲದೇ, ಅಪ್ಪ-ಅಮ್ಮ ಅನಾಥಾಲಯ ಬ್ರಹ್ಮಾವರ ಇವರಿಗೂ ಅಕ್ಕಿ ಮತ್ತು ತರಕಾರಿ ವಿತರಿಸಿರುತ್ತಾರೆ. ಸ್ಥಳೀಯ ಬಡ ಕುಟುಂಬಗಳಿಗೆ ನೆರವಾಗಲು ತಮ್ಮ ಸದಸ್ಯರ ಸಹಾಯದಿಂದ ಪ್ರಥಮ ಹಂತದಲ್ಲಿ ಸುಮಾರು 45ಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ನೀಡಿ ಜನಮೆಚ್ಚುಗೆಯ ಸಂಸ್ಥೆಯಾಗಿ ಮೂಡಿಬಂದಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular