Pramod Muthalik : ಪ್ರವೀಣ್ ನೆಟ್ಟಾರ್ ಪತ್ನಿಗೆ ಸರ್ಕಾರಿ ಉದ್ಯೋಗ ನೀಡದಿದ್ದರೆ ಸಿಎಂ ಮನೆ ಮುಂದೆ ಧರಣಿ:ಪ್ರಮೋದ್ ಮುತಾಲಿಕ್

ಮಂಗಳೂರು : Pramod Muthalik : ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರ್ ಮನೆಗೆ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಭೇಟಿ ನೀಡಿದ್ರು. ಪ್ರವೀಣ್ ನೆಟ್ಟಾರ್ ಮನೆಯವರಿಗೆ ಪ್ರಮೋದ್ ಮುತಾಲಿಕ್ ಸಾಂತ್ವನ ಹೇಳಿದರು. ಬಳಿಕ ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಪ್ರವೀಣ್ ಹತ್ಯೆಯ ಬಳಿಕ ಜಿಲ್ಲೆಗೆ ಬರದಂತೆ ಸರ್ಕಾರ ಬ್ಯಾನ್ ಮಾಡಿತು. ಹೈಕೋರ್ಟ್ ಮೆಟ್ಟಿಲೇರಿ ಇದಕ್ಕೆ ಸ್ಟೇ ತಂದು ಇವತ್ತು ಪ್ರವೀಣ್ ಮನೆಗೆ ಭೇಟಿ ನೀಡಿದ್ದೇನೆ ಎಂದರು. ಇಂದಿಗೂ ಪ್ರವೀಣ್ ಮನೆಯವರು ನೋವು,ಸಿಟ್ಟಿನಲ್ಲಿದ್ದಾರೆ. ಕೊಲೆಗಟುಕರಿಗೆ ಗಲ್ಲುಶಿಕ್ಷೆ ಆಗುವವರೆಗೆ ದುಃಖ ಶಮನ ಆಗಲ್ಲ ಎಂದಿದ್ದಾರೆ ಎಂದರು.

ಪ್ರವೀಣ್ ಪತ್ನಿಗೆ ನೌಕರಿ ನೀಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಆದ್ರೆ ಈ ರೀತಿಯ ಹೇಳಿಕೆ ಹಿಂದೆಯೂ ಕೊಟ್ಟಿದ್ದಾರೆ. ಇದು ಯಾವುದು ಕಾರ್ಯ ರೂಪಕ್ಕೆ ಬಂದಿಲ್ಲ. ಹೀಗಾಗಿ ಈ ಕೂಡಲೇ ನೌಕರಿ ನೀಡುವ ಆದೇಶ ಮಾಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ಮಾಡಬೇಕಾಗುತ್ತೆ. ನಿಮ್ಮ‌‌ ಹೇಳಿಕೆ ಕೇವಲ ಬೊಗಳೆ ಎಂದು ರಾಜ್ಯದ ಜನರಿಗೆ ತಿಳಿಸಬೇಕಾಗುತ್ತದೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ರು.
ಇಸ್ಲಾಂ ಹುಟ್ಟಿದಾಗಿನಿಂದ ಈ ರೀತಿಯ ಕೊಲೆ,ಹಿಂಸೆಯ ಮಾನಸಿಕತೆಯನ್ನು ಹೊಂದಿದೆ. ನಾವು ನೀವು ಇನ್ನು ಸೌಹಾರ್ದತೆಯಿಂದ ಇರುವ ಕಾಲ‌ ಮುಗಿದಿದೆ. ಅತಿಯಾದ ದುರ್ವತನೆಯಿಂದ ಇನ್ನು ನಿಮ್ಮ ಜೊತೆ ಸೌಹಾರ್ದತೆಯಿಲ್ಲ. ಇನ್ನೇನಿದ್ದರು ನಮ್ಮ ನಿಮ್ಮ‌ನಡುವೆ ಸಂಘರ್ಷ ಅಷ್ಟೇ ಇರುತ್ತದೆ ಎಂದು ಮುತಾಲಿಕ್ ಕಿಡಿ ಕಾರಿದರು.

ಇದೇ ಸಂದರ್ಭ ಅಝಾನ್ ವಿಚಾರವಾಗಿ ಮಾತನಾಡಿದ ಮುತಾಲಿಕ್ ಅಝಾನ್ ನಿಂದಾಗಿ ಇಡೀ ದೇಶದಲ್ಲಿ ಕಿರಿ ಕಿರಿಯಾಗುತ್ತಿದೆ. ಮುಸ್ಲಿಂರು ಸುಪ್ರೀಂ ಕೋರ್ಟ್‌ಗು ನಮಗೂ ಸಂಬಂಧಿವಿಲ್ಲ ಎಂಬ ನೀಚ ನಿರ್ಲಜ್ಜ ವಾತವಾರಣ ನಿರ್ಮಾಣ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನ ಮಾತು ಕೇಳಲ್ಲ ಅಂದ್ರೆ ಪಾಕಿಸ್ತಾನಕ್ಕೆ ಹೋಗಿ ಎಂದು ಮುತಾಲಿಕ್ ಕಿಡಿಕಾರಿದ್ರು. ಈ‌ ನಿರ್ಲಜ್ಜ ಸರ್ಕಾರಕ್ಕೂ ಈ ಆದೇಶ ಜಾರಿಗೊಳಿಸುವ ಮನಸ್ಸಿಲ್ಲ ಎಂದು ಹೇಳಿದ ಮುತಾಲಿಕ್ ಕುರಾನ್ ನೆ ನಮ್ಮ‌ ಕಾನೂನು ಎಂಬ ಸೊಕ್ಕನ್ನು ನಾವು ಒಪ್ಪಲ್ಲ. ಈಗಾಗಲೇ 25% ಬೆಳಗ್ಗಿನ ಶಬ್ಧ ನಿಂತಿದೆ. ಇಡೀ ದೇಶದಲ್ಲೇ ಮೊದಲ ಬಾರಿಗೆ ಶ್ರೀರಾಮ ಸೇನೆ ಸಂಘಟನೆ ಇದನ್ನು ನಿಲ್ಲಿಸಿದೆ ಎಂದರು.

ಇನ್ನು ವಕ್ಫ್ ಬೋರ್ಡ್ ಕುರಿತು ಆಕ್ರೋಶ ವ್ಯಕ್ತಪಡಿಸಿದ ಮುತಾಲಿಕ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವುದು ವಕ್ಫ್ ಬೋರ್ಡ್ ಅಲ್ಲ ಅದು ಬೋಗಸ್ ಬೋರ್ಡ್ ಎಂದರು. ತಮಿಳುನಾಡಿನ ಒಂದು ಗ್ರಾಮವನ್ನೇ ವಕ್ಪ್ ಬೋರ್ಡ್ ತನ್ನದೆಂದು ಹೇಳಿಕೊಂಡಿರುವುದು ಇಡೀ ದೇಶದ ಕಣ್ಣು ತೆರೆಸಿದೆ. ವಕ್ಫ್ ಬೋರ್ಡ್ ಸಂಪೂರ್ಣವಾಗಿ ಇಡೀ ದೇಶದಲ್ಲಿ ರದ್ದಾಗಬೇಕು. ಇದೊಂದು ಡೇಂಜರಸ್ ಬೋರ್ಡ್. ಇಡೀ ಸಮಾಜದ ದೇಶದ ಆಸ್ತಿಯನ್ನು ನುಂಗುತ್ತಿರುವ ಈ ವಕ್ಫ್ ಬೋರ್ಡನ್ನು ಕೂಡಲೇ ರದ್ದು ಮಾಡಬೇಕು. ಕೇಂದ್ರ ಸರಕಾರಕ್ಕೆ ಈ ಬಗ್ಗೆ ಒತ್ತಾಯವನ್ನು ಮಾಡಲಾಗುವುದು ಎಂದರು.

ಇದನ್ನು ಓದಿ : Kumar Bangarappa :ಸೊರಬ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ: ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ವಿರುದ್ದ ಅಸಮಾಧಾನ

ಇದನ್ನೂ ಓದಿ : wool fever :ಕೊರೊನಾ ವೈರಸ್​ ಬಳಿಕ ರಾಜ್ಯದಲ್ಲಿ ಮತ್ತೊಂದು ಆತಂಕ : ಉಣ್ಣೆ ಜ್ವರದಿಂದ ಬಳಲಿದ ಮಕ್ಕಳು

If Praveen Nettar’s wife is not given a government job, sit in front of the Chief Minister’s house: Pramod Muthalik

Comments are closed.