ಪತ್ರಕರ್ತ ಬದ್ರುದ್ದೀನ್ ಮಾಣಿ, ಚಿದಾನಂದ ಪಟೇಲ್ ಗೆ ಪ್ರಶಸ್ತಿ

0


ಮಂಗಳೂರು : ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನ ನಡೆದಿದೆ. ಎರಡು ದಿನಗಳ ಕಾಲ ನಡೆದ ಸಮ್ಮೇಳನದ ಸಮಾರೋಪದಲ್ಲಿ ನ್ಯೂಸ್18 ಕನ್ನಡ ವಾಹಿನಿಯ ಪೊಲಿಟಿಕಲ್ ಹೆಡ್  ಚಿದಾನಂದ ಪಟೇಲ್ ಗೆ ಅತ್ಯುತ್ತಮ ತನಿಖಾ ವರದಿಗಾಗಿ ಪ್ರಶಸ್ತಿ ಲಭಿಸಿದೆ..

Media award
ಪತ್ರಕರ್ತ ಬದ್ರುದ್ದೀನ್ ಮಾಣಿ, ಚಿದಾನಂದ ಪಟೇಲ್ ಗೆ ಪ್ರಶಸ್ತಿ 3

ಫೋನ್ ಕದ್ದಾಲಿಕೆ ಬಗ್ಗೆ ಮೊದಲು ಬೆಳಕು ಚೆಲ್ಲಿದ್ದ ನ್ಯೂಸ್18 ಕನ್ನಡ ಈ ಬಗ್ಗೆ ವಿಸ್ತೃತ ವರದಿ ಮಾಡಿತ್ತು..ಆನಂತರ ರಾಷ್ಟ್ರಾದ್ಯಂತ ಈ ಬಗ್ಗೆ ಚರ್ಚೆ ಆಗಿತ್ತು. ಪಬ್ಲಿಕ್ ಟಿವಿಯ ಪೊಲಿಟಿಕಲ್ ಹೆಡ್  ಬದ್ರುದ್ದೀನ್ ಕೆ.ಮಾಣಿ ಅವರಿಗೆ ನಾಡ ಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ ಲಭಿಸಿದೆ.

Media award 1
ಪತ್ರಕರ್ತ ಬದ್ರುದ್ದೀನ್ ಮಾಣಿ, ಚಿದಾನಂದ ಪಟೇಲ್ ಗೆ ಪ್ರಶಸ್ತಿ 4

ಎರಡು ದಿನಗಳ ಕಾಲ ನಡೆದ ಸಮ್ಮೇಳನದ ಸಮಾರೋಪದಲ್ಲಿ ಕಳೆದ ಎರಡೂವರೆ ದಶಕಗಳ ಸೇವೆಯನ್ನು ಗುರುತಿಸಿ ಕರ್ನಾಟಕ  ಪತ್ರಕರ್ತರ ಸಂಘ ಪ್ರಶಸ್ತಿ ನೀಡಿದೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ..ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಕಾರ್ಯಕ್ರಮ ನಡೆದಿದ್ದು,ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್,ಮಾಜಿ ಸಚಿವ ರಮನಾಥ ರೈ, ಐವನ್ ಡಿ ಸೋಜಾ, ಸೇರಿದಂತೆ ಪ್ರಮುಖ ಗಣ್ಯರು ಉಪಸ್ಥಿತರಿದ್ದರು

Leave A Reply

Your email address will not be published.