ಬೆಳ್ತಂಗಡಿ : ಮಧ್ಯ ರಾತ್ರಿ ವ್ಯಕ್ತಿಯೋರ್ವನಿಗೆ ವಿಷಜಂತು ಕಡಿದಿತ್ತು. ಆದರೆ ಆ ಊರಲ್ಲಿ ಯಾವುದೇ ಆಸ್ಪತ್ರೆಯಿರಲಿಲ್ಲ. ಆ ಹೊತ್ತಲ್ಲೇ ಯುವಕನೋರ್ವ ತನ್ನ ವಾಹದಲ್ಲಿ ವ್ಯಕ್ತಿಯನ್ನು ಕೂರಿಸಿಕೊಂಡು ಕೇವಲ 38 ನಿಮಿಷಗಳಲ್ಲಿ ಬರೋಬ್ಬರಿ 58 ಕಿ.ಮೀ ಚಲಿಸಿ ವ್ಯಕ್ತಿಯ ಪ್ರಾಣ ಉಳಿಸಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿರೋ ದಕ್ಷಿಣ ಕನ್ನಡ ಜಿಲ್ಲೆಯ ಮದ್ದಡ್ಕದಲ್ಲಿ.

ನಿನ್ನೆ ರಾತ್ರಿ 12 ಗಂಟೆಯ ಸುಮಾರಿಗೆ ವಿಷಜಂತು ಕಡಿದಿತ್ತು. ಕೂಡಲೇ ಬದ್ಯಾರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಹೆಚ್ಚಿನ ಚಿಕಿತ್ಸೆ ಬೇಕಾಗಿರೋದ್ರಿಂದ ವ್ಯಕ್ತಿಯನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಕೊಂಡೊಯ್ಯುವಂತೆ ವೈದ್ಯರು ಸೂಚನೆ ನೀಡಿದ್ರು. ಆದರೆ ಬದ್ಯಾರಿನಿಂದ ಮಂಗಳೂರಿಗೆ 58 ಕಿ.ಮೀ. ದೂರವಿತ್ತು. ಜೊತೆಗೆ ಕಿರಿದಾದ ರಸ್ತೆಯ ಕೆಲವು ಕಡೆಗಳಲ್ಲಿ ದುರಸ್ತಿ ಕಾರ್ಯವೂ ನಡೆಯುತ್ತಿತ್ತು. ಹೀಗಾಗಿ ಅಷ್ಟು ದೂರ ಸಾಗೋದು ಸವಾಲಿನ ಕೆಲಸವಾಗಿತ್ತು. ಆದ್ರೆ ಪ್ರಶಾಂತ್ ಎಂಬ ಯುವಕ ವ್ಯಕ್ತಿಯನ್ನು ತನ್ನ ಖಾಸಗಿ ವಾಹನದಲ್ಲಿ ಕೂರಿಸಿಕೊಂಡು ಮಂಗಳೂರಿನತ್ತ ಹೊರಟಿದ್ದಾನೆ. ತನ್ನ ಜೀವದ ಹಂಗು ತೊರೆದು ಕೇವಲ 38 ನಿಮಿಷಗಳಲ್ಲಿ 58 ಕಿ.ಮೀ. ದೂರವನ್ನು ಕ್ರಮಿಸೋ ಮೂಲಕ ಪ್ರಾಣ ಉಳಿಸಿದ್ದಾನೆ. ಪ್ರಶಾಂತ್ ಕಾರ್ಯಕ್ಕೆ ಇದೀಗ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.