ಪ್ರೊಬೆಷನರಿ ಅಬಕಾರಿ ಪಿಐಎಸ್ ಆತ್ಮಹತ್ಯೆ !

0

ಬೀದರ್ : ಅಬಕಾರಿ ಮಹಿಳಾ ಪ್ರೊಬೆಷನರಿ ಪಿಎಸ್ ಐ ಅಧಿಕಾರಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ರೇಖಾ ಕರಣಕುಮಾರ್ ಕೋರಿ ಎಂಬವರೇ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳಾ ಪಿಎಸ್ಐ.

ಕಳೆದ ಎಂಟು ತಿಂಗಳಿನಿಂದಲೂ ಪಿಎಸ್ ಐ ರೇಖಾ ಅವರು ಅಬಕಾರಿ ಪಿಎಸ್ ಐ ಆಗಿ ಕಾರ್ಯನಿರ್ವಹಿಸುತ್ತಿದ್ದು, ಪತಿ ಹಾಗೂ ಮಗನೊಂದಿಗೆ ಬಸವ ಕಲ್ಯಾಣದ ಶಿವಪುರ ಕಾಲೋನಿಯಲ್ಲಿ ವಾಸವಾಗಿದ್ದರು. ಇಂದು ಪತಿ ಮನೆಯಿಂದ ಹೊರ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಸ್ಥಳೀಯರು ರೇಖಾ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದ್ರೂ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ.

ಈ ಕುರಿತು ಬಸವ ಕಲ್ಯಾಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣವೆನ್ನಲಾಗುತ್ತಿದೆ. ಆದರೆ ಪೊಲೀಸರ ತನಿಖೆಯಿಂದಷ್ಟೇ ಸತ್ಯಾಂಶ ಹೊರಬರೋದಕ್ಕೆ ಸಾಧ್ಯ.

Leave A Reply

Your email address will not be published.