ಉತ್ತರ ಕನ್ನಡ : Shirasi Marikamba Temple : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಎಂದರೆ ಸಾಕು ಮೊದಲು ನೆನಪಾಗುವುದೇ ಪುರಾಣ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಾಲಯ. ದೇವಾಲಯಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತಾದಿಗಳು ಪ್ರಸಾದವನ್ನು ಸ್ವೀಕರಿಸಿ ತೆರಳುತ್ತಾರೆ. ಇದೀಗ ಮಾರಿಕಾಂಬಾ ದೇವಸ್ಥಾನದಲ್ಲಿ ಭಕ್ತರಿಗೆ ನೀಡಲಾಗುವ ಪ್ರಸಾದಕ್ಕೆ ಬಿಎಚ್ಒಜಿ ಪ್ರಮಾಣ ದೊರಕಿದ್ದು ದೇಗುಲದ ಹಿರಿಮೆಗೆ ಮತ್ತೊಂದು ಗರಿ ಸಿಕ್ಕಂತಾಗಿದೆ.
ದೇವಸ್ಥಾನಗಳಲ್ಲಿ ನೀಡಲಾಗುವ ಪ್ರಸಾದದಲ್ಲಿ ಆಹಾರ ಸುರಕ್ಷತೆ ಹಾಗೂ ಮಾನದಂಡಗಳ ಕಾಯ್ದೆಯ ಅಡಿಯಲ್ಲಿ ದೇವಸ್ಥಾನಗಳಿಗೆ ನೀಡಲಾಗುವ ಆನಂದಮಯ ನೈರ್ಮಲ್ಯ ಕೊಡುಗೆ ದೇವರಿಗೆ ಪ್ರಮಾಣ ಪತ್ರವನ್ನು ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ನೀಡಲಾಗಿದೆ . ದೇವಸ್ಥಾನಗಳಲ್ಲಿ ಪ್ರಸಾದ ರೂಪದಲ್ಲಿ ನೀಡಲಾಗುವ ಆಹಾರದ ಗುಣಮಟ್ಟ, ದೇವರಿಗೆ ಅರ್ಪಿಸಲಾಗುವ ನೈವೇದ್ಯದ ಗುಣಮಟ್ಟ , ಪ್ರಸಾದ ತಯಾರು ಮಾಡುವ ವಿಧಾನ, ಅಡುಗೆ ಮನೆಯಲ್ಲಿನ ನೈರ್ಮಲ್ಯ ಹೀಗೆ ಅನೇಕ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.
ಎಫ್ಎಸ್ಎಸ್ಎಐ ಪ್ರಮಾಣ ಪತ್ರವನ್ನು ನೀಡುವ ಮುನ್ನ ಗಣನೆಗೆ ತೆಗೆದುಕೊಳ್ಳಲಾಗುವ ಮಾನದಂಡಗಳನ್ನು ಆಧರಿಸಿ ದೇವಸ್ಥಾನಗಳಿಗೆ 116 ಅಂಕಗಳಲ್ಲಿ ಎಷ್ಟು ಅಂಕ ನೀಡುವುದು ಎಂದು ನಿರ್ಧರಿಸಲಾಗುತ್ತದೆ. ಬಿಹೆಚ್್ಒಜಿ ಪ್ರಮಾಣ ಪತ್ರವನ್ನು ಪಡೆಯಬೇಕು ಅಂದರೆ ಗರಿಷ್ಟ 116 ಅಂಕಗಳಲ್ಲಿ ಕನಿಷ್ಟ 90 ಅಂಕಗಳನ್ನು ಪಡೆಯುವುದು ಅವಶ್ಯಕವಾಗಿದೆ. ಶಿರಸಿಯ ಶ್ರೀ ಮಾರಿಕಾಂಬಾ ದೇಗುಲಕ್ಕೆ 116ರಲ್ಲಿ 100 ಅಂಕಗಳು ದೊರಕಿರುವ ಹಿನ್ನೆಲೆಯಲ್ಲಿ ಈ ಪ್ರಮಾಣ ಪತ್ರವನ್ನು ನೀಡಲಾಗಿದೆ.
ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ದೇವಿಯ ಜಾತ್ರೆಯು ರಾಜ್ಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಈ ವರ್ಷ ಕೂಡ ಅತ್ಯಂತ ವಿಜೃಂಭಣೆಯಿಂದ ಮಾರಿಕಾಂಬಾ ದೇವಿಯ ಜಾತ್ರೆಯನ್ನು ನೆರವೇರಿಸಲಾಗಿದೆ. ಮಾರಿಕಾಂಬಾ ಜಾತ್ರೆ ನಡೆಯುವ ವರ್ಷದಲ್ಲಿ ಈ ಭಾಗದ ಜನತೆ ಹೋಳಿ ಹಬ್ಬವನ್ನು ಆಚರಿಸುವುದಿಲ್ಲ. ಅಲ್ಲದೇ ಈ ದೇವಸ್ಥಾನದಲ್ಲಿ ಕಳೆದ ಅನೇಕ ವರ್ಷಗಳಿಂದ ಪ್ರಾಣಿ ಬಲಿಯನ್ನು ಮಾಡದೇ ಮಾದರಿ ಎನಿಸಿಕೊಂಡಿದೆ.
ಇದನ್ನು ಓದಿ : KL Rahul to Lead India : ಘಾಟಿ ಸುಬ್ರಮಣ್ಯನ ಸನ್ನಿಧಿಗೆ ಹೋದ ಐದೇ ದಿನಗಳಲ್ಲಿ ಕ್ಯಾಪ್ಟನ್, ರಾಹುಲ್‌ಗೆ ಸಿಕ್ತು ದೈವಬಲ
BHOG Certificate for Prasad of Shirasi Marikamba Temple