Praveen Nettaru’s murder case : ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ಅಸಲಿ ಕಾರಣ ಬಿಚ್ಚಿಟ್ಟ ಹಂತಕರು

ಮಂಗಳೂರು : Praveen Nettaru’s murder case : ಹಿಂದೂ ಕಾರ್ಯಕರ್ತ ಹಾಗೂ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸಿದ ಬಳಿಕ ತನಿಖೆ ಹಲವು ತಿರುವುಗಳನ್ನು ಪಡೆದುಕೊಳ್ತಿದೆ. ಮೂವರು ಆರೋಪಿಗಳಿಗೆ ಪೊಲೀಸರು ಸರಿಯಾಗಿಗೇ ಡ್ರಿಲ್​ ಮಾಡಿದ್ದು ತನಿಖೆಯ ಸಂದರ್ಭದಲ್ಲಿ ಹಂತಕರು ಪ್ರವೀಣ್​ ಕೊಲೆಯ ಹಿಂದಿನ ಸಂಪೂರ್ಣ ಕತೆಯನ್ನು ಬಿಚ್ಚಿಟ್ಟಿದ್ದಾರೆ.


ಪ್ರವೀಣ್​ ನೆಟ್ಟಾರು ಕೊಲೆ ನಡೆಸಿ ಪರಾರಿಯಾಗಿದ್ದ ಆರೋಪಿಗಳಾದ ಶಿಹಾಬುದ್ದೀನ್​, ಬಶೀರ್​ ಹಾಗೂ ರಿಯಾಜ್​ನನ್ನು ನಿನ್ನೆ ಪೊಲೀಸರು ಬಂಧಿಸಿದ್ದು ಅಪರಾಧ ಕೃತ್ಯ ನಡೆದ ಸ್ಥಳದ ಮಹಜರು ಕಾರ್ಯ ಕೂಡ ನಡೆಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದ ಬಳಿಕ ಸುಳ್ಯ ಕೋರ್ಟ್​ಗೆ ಹಾಜರು ಪಡಿಸಿದ ಪೊಲೀಸರು ಆರೋಪಿಗಳನ್ನು ಆಗಸ್ಟ್​ 16ರವರೆಗೆ ವಶಕ್ಕೆ ಪಡೆದಿದ್ದಾರೆ.


ಪ್ರಕರಣದ ತನಿಖೆಯ ಸಂದರ್ಭದಲ್ಲಿ ಆರೋಪಿಗಳು ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಬೆಳ್ಳಾರೆಯಲ್ಲಿ ಜುಲೈ 21ರಂದು ಮಸೂದ್​ ಎಂಬ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಯುವಕನೊಬ್ಬ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದ, ಈತನ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳುವ ಸಲುವಾಗಿಯೇಈ ಕೊಲೆ ನಡೆದಿದೆ ಎಂದು ಹೇಳಲಾಗ್ತಿದೆ.


ಸಧ್ಯಕ್ಕಿರುವ ಮಾಹಿತಿಯ ಪ್ರಕಾರ ಮಸೂದ್​ ಕೊಲೆಯಾದ ಬಳಿಕನೌಫಲ್, ಕಬೀರ್, ಅಬೀದ್, ರಿಯಾಜ್​, ಶಿಯಾಬುದ್ದೀನ್​ ಹಾಗೂ ಬಶೀರ್ ಸೇರಿದಂತೆ ಇನ್ನೂ ಕೆಲವರು​ ಸುಳ್ಯದ ಕಚೇರಿಯೊಂದರಲ್ಲಿ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಮಸೂದ್​ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆದಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಬೆಳ್ಳಾರೆಯ ಶಫೀಕ್​ ಎಂಬಾತನದಿಂದ ಪ್ರವೀನ್​ ನೆಟ್ಟಾರು ಬಗ್ಗೆ ಹಂತಕರು ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿದ್ದರು ಎನ್ನಲಾಗಿದೆ.


ಶಫೀಕ್​ನಿಂದ ಪ್ರವೀಣ್​ ದಿನಚರಿ ಬಗ್ಗೆ ಪಿನ್​ ಟು ಪಿನ್​ ಮಾಹಿತಿ ಪಡೆದಿದ್ದ ಹಂತಕರು ಕೊಲೆ ಸಂಪೂರ್ಣ ಪ್ಲಾನ್​ ರೂಪಿಸಿದ್ದರು. ಹತ್ಯೆ ನಡೆಯುವ ದಿನದಂದು ರಿಯಾಜ್​ ಬೈಕ್​ ಚಲಾಯಿಸಿದ್ದರೆ, ಶಿಹಾಬುದ್ದೀನ್​ ಹಾಗೂ ಬಶೀರ್​ ಹಿಂಬದಿ ಸವಾರರಾಗಿ ಕುಳಿತಿದ್ದರು, ಕೊಲೆಯಾದ ಬಳಿಕ ಐದು ಬೈಕ್​ ಹಾಗೂ ಒಂದು ಕಾರನ್ನು ಬಳಸಿ ಮೂವರು ಪರ್ಯಾಯ ಮಾರ್ಗಗಳ ಮೂಲಕ ಕೇರಳದ ಕಾಸರಗೋಡಿಗೆ ತೆರಳಿದ್ದರು ಎನ್ನಲಾಗಿದೆ. ಕಾಸರಗೋಡಿನಿಂದ ಕುಶಾಲನಗರಕ್ಕೆ ತೆರಳಿದ್ದ ಹಂತಕರು ಅಲ್ಲಿ ನಾಲ್ಕು ದಿನ ವಾಸ್ತವ್ಯ ಹೂಡಿದ್ದರು ಎನ್ನಲಾಗಿದೆ.


ಕುಶಾಲನಗರದ ಬಳಿಕ ಆರೋಪಿಗಳ ಸವಾರಿ ಇರುಟ್ಟಿ ಕಡೆ ಮುಖ ಮಾಡಿತ್ತು, ಇದಾದ ಬಳಿಕ ಪಾಲಕ್ಕಾಡ್​ನಲ್ಲಿಯೂ ಹಂತಕರು ಆಶ್ರಯ ಪಡೆದಿದ್ದರು ಎನ್ನಲಾಗಿದೆ. ಈ ಮೂವರಿಗೆ ಆಶ್ರಯ ನೀಡಿದ ಆರೋಪದ ಅಡಿಯಲ್ಲಿ ಪೊಲೀಸರು ಮೂವರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.


ಮೇಲ್ನೋಟಕ್ಕೆ ಇದು ಧರ್ಮ ಸಂಘರ್ಷಕ್ಕೆ ನಡೆದ ಕೊಲೆಯೆಂಬುದು ಸ್ಪಷ್ಟವಾಗಿದೆ. ಇದನ್ನೂ ಮೀರಿ ಈ ಕೊಲೆಯ ಹಿಂದೆ ಇನ್ಯಾವುದಾದರೂ ಕಾರಣವಿತ್ತೇ..? ಪ್ರವೀಣ್​ ನೆಟ್ಟಾರು ಅದ್ಹೇಗೆ ಕೊಲೆಗಾರರ ಟಾರ್ಗೆಟ್​ ಆಗಿದ್ದರು..? ಪ್ರವೀಣ್​ ನೆಟ್ಟಾರು ಬರ್ಬರ ಕೊಲೆ ಹಿಂದೆ ಮತ್ತೆನಾದರೂ ಕಾರಣವಿತ್ತೆ ಎಂಬುದು ಸೂಕ್ತ ತನಿಖೆ ಬಳಿಕವಷ್ಟೇ ಹೊರಬರಬೇಕಿದೆ.

ಇದನ್ನು ಓದಿ : Goddess Parvati Idol : 50 ವರ್ಷಗಳ ಹಿಂದೆ ಭಾರತದಿಂದ ಕಳುವಾಗಿದ್ದ ಪಾರ್ವತಿ ವಿಗ್ರಹ ನ್ಯೂಯಾರ್ಕ್​ನಲ್ಲಿ ಪತ್ತೆ : ₹1.6 ಕೋಟಿ ಮೌಲ್ಯ ಹೊಂದಿದೆ ಈ ಮೂರ್ತಿ

ಇದನ್ನೂ ಓದಿ : Shirasi Marikamba Temple : ಶಿರಸಿಯ ಸುಪ್ರಸಿದ್ಧ ಶ್ರೀ ಮಾರಿಕಾಂಬಾ ದೇಗುಲದ ಪ್ರಸಾದಕ್ಕೆ ಬಿಹೆಚ್​ಒಜಿ ಪ್ರಮಾಣ ಪತ್ರ

Praveen Nettaru’s murder case: Police has intensified the investigation for the accused

Comments are closed.