MB Patil Question :ಬಿಜೆಪಿ ಯಾವ ಸಾಧನೆ ಮಾಡಿದೆ ಅಂತಾ ಜನಸ್ಪಂದನೆ ಕಾರ್ಯಕ್ರಮ ಮಾಡಿದೆ : ಎಂ.ಬಿ ಪಾಟೀಲ್​ ಪ್ರಶ್ನೆ

ಚಿಕ್ಕಮಗಳೂರು : MB Patil Question : ಸಾಕಷ್ಟು ವಿಘ್ನಗಳ ಬಳಿಕ ಬಿಜೆಪಿ ಕೊನೆಗೂ ಇಂದು ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಿದೆ. ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ಒಂದು ವರ್ಷವನ್ನು ಪೂರೈಸಿದ ಹಿನ್ನೆಲೆಯಲ್ಲಿ ಹಾಗೂ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಮೂರು ವರ್ಷಗಳ ಅಧಿಕಾರಾವಧಿಯನ್ನು ಮುಗಿಸಿರುವ ಹಿನ್ನೆಲೆಯಲ್ಲಿ ಜನೋತ್ಸವ ನಡೆಸಿದೆ. ಈ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಕಾಂಗ್ರೆಸ್​ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್​ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

ಬಿಜೆಪಿಯವರು ಏನು ಸಾಧನೆ ಮಾಡಿದ್ದಾರೆ ಅಂತಾ ಈ ಕಾರ್ಯಕ್ರಮ ಮಾಡ್ತಿದ್ದಾರೆ..? ಇಲ್ಲಿ ಬೆಂಗಳೂರು ಸ್ವಿಮ್ಮಿಂಗ್​ ಪೂಲ್​ ಆಗಿದೆ. ಆದರೆ ಮುಖ್ಯಮಂತ್ರಿಗಳು ಬೆಂಗಳೂರು ಪೂರ್ತಿ ಮುಳುಗಿಲ್ಲ ಎಂದು ಹೇಳ್ತಾರೆ . ಜನರಿಗೆ ಯಾವುದೇ ರೀತಿಯ ಸ್ಪಂದನೆ ಕೊಡದೇ ಇವರು ಅದೇನು ಅಂತಾ ಜನಸ್ಪಂದನಾ ಕಾರ್ಯಕ್ರಮ ಮಾಡ್ತಾರೆ ಎಂದು ಪ್ರಶ್ನೆ ಕೇಳಿದ್ದಾರೆ.

ಈ ಸರ್ಕಾರವು ಬಡ ಜನರಿಗೆ ಒಂದು ಮನೆ ಕಟ್ಟಿಕೊಡುವ ಕೆಲಸ ಮಾಡಿಲ್ಲ. ಮಳೆಯಿಂದ ಹಾನಿಗೊಳಗಾದವರಿಗೆ ಪರಿಹಾರವನ್ನು ನೀಡಿಲ್ಲ. 40 ಪರ್ಸೆಂಟ್​ ಭ್ರಷ್ಟಾಚಾರವಿದು. ಇದನ್ನು ಜನಸ್ಪಂದನೆ ಕಾರ್ಯಕ್ರಮ ಅನ್ನೋಕೆ ಆಗುತ್ತಾ..? ಬಿಬಿಎಂಪಿಯಲ್ಲಿ ಇನ್ನೂ 10 ಪರ್ಸೆಂಟ್​ ಭ್ರಷ್ಟಾಚಾರ ಜಾಸ್ತಿ ಇದೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಇದು 65 -70 ಪರ್ಸೆಂಟ್​ಗೂ ಹೋಗುತ್ತೆ. ಜನ ನಿಮ್ಮನ್ನು ನೋಡಿ ನಗ್ತಿದ್ದಾರೆ, ನೀವು ನೋಡಿದ್ರೆ ಕಾರ್ಯಕ್ರಮ ಮಾಡುತ್ತಿದ್ದೀರಿ. ಈ ರಾಜ್ಯದಲ್ಲಿ ಸರ್ಕಾರವಿಲ್ಲ. ಸುಮ್ಮನೆ ದೂಡಿಕೊಂಡು ಹೋಗುತ್ತಿದ್ದೇವೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಪ್ರತಿಕ್ರಯಿಸಿದ್ದಾರೆ.

ಇದನ್ನು ಓದಿ : janaspandana program :ಲಂಚದ ಹಣ ಬಳಸಿ ಬಿಜೆಪಿಯಿಂದ ಜನಸ್ಪಂದನ ಕಾರ್ಯಕ್ರಮ : ಸಿದ್ದರಾಮಯ್ಯ ಗಂಭೀರ ಆರೋಪ

ಇದನ್ನೂ ಓದಿ : Comeback Ajinkya Rahane: “ಆಯ್ಕೆಗಾರರೇ ಈಗೆನ್ನುತ್ತೀರಿ..” ನನ್ನನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲು ಈ ದ್ವಿಶತಕ ಸಾಕಲ್ಲವೇ?

BJP has done a public response program for what it has achieved: MB Patil Question

Comments are closed.