ಚಿಕ್ಕಬಳ್ಳಾಪುರ : STUDENTS STOLEN BULLETS : ಹೈಫೈ ಜೀವನವನ್ನು ನಡೆಸಬೇಕೆಂಬ ಆಸೆ ಎಲ್ಲರಿಗೂ ಇರುತ್ತೆ. ಅನೇಕರು ತಮ್ಮಲ್ಲಿರುವ ಹಣದಿಂದಲೇ ಐಷಾರಾಮಿ ಜೀವನವನ್ನು ನಡೆಸಿದರೆ ಇನ್ನು ಕೆಲವರು ಶ್ರೀಮಂತಿಕೆಯ ಆಸೆಗೆ ಅಡ್ಡದಾರಿ ಹಿಡಿಯುತ್ತಾರೆ. ಅದೇ ರೀತಿ ಬೆಂಗಳೂರಿನಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಬೈಕ್ ಕಳ್ಳತನಕ್ಕೆ ಇಳಿದಿದ್ದು ಇದೀಗ ಪೊಲೀಸ್ ಠಾಣೆಯ ಅತಿಥಿಗಳಾಗಿದ್ದಾರೆ.
ಬಂಧಿತ ಇಬ್ಬರು ಯುವಕರಲ್ಲಿ ಓರ್ವ ಚಿಕ್ಕ ಬಳ್ಳಾಪುರ ಮೂಲದವನಾಗಿದ್ದರೆ ಮತ್ತೊಬ್ಬ ಆಂಧ್ರ ಪ್ರದೇಶ ಮೂಲದವನಾಗಿದ್ದಾನೆ. ಇಬ್ಬರು ಚಿಕ್ಕಬಳ್ಳಾಪುರದ ಬಾಗೆಪಲ್ಲಿ ಪಟ್ಟಣದ ಹೊರ ವಲಯದಲ್ಲಿ ಟೋಲ್ಪ್ಲಾಜಾ ಬಳಿಯಲ್ಲಿ ಬುಲೆಟ್ ಬೈಕ್ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದು ಪೊಲೀಸರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಪೊಲೀಸರು 12 ಬುಲೆಟ್ ಬೈಕ್ಗಳು ಸೇರಿದಂತೆ ಒಟ್ಟ 15 ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಈ ಇಬ್ಬರು ಯುವಕರು ಬೆಂಗಳೂರಿನ ಬಿ.ಟೆಕ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು. ಆದರೆ ಓರ್ವ ವಿದ್ಯಾರ್ಥಿಯು ಅರ್ಧದಲ್ಲಿಯೇ ತನ್ನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದು ಐಷಾರಾಮಿ ಜೀವನ ನಡೆಸಬೇಕೆಂದು ಬೈಕ್ ಕಳ್ಳತನಕ್ಕೆ ಇಳಿದಿದ್ದ ಎನ್ನಲಾಗಿದೆ. ಬೆಂಗಳೂರು ಹಾಗೂ ಚಿಕ್ಕಬಳ್ಳಾಪುರದ ವಿವಿಧೆಡೆಗಳಲ್ಲಿ ಬೈಕ್ ಕದಿಯುತ್ತಿದ್ದ ಕಳ್ಳರು ಕದ್ದ ಬೈಕುಗಳನ್ನು ಆಂಧ್ರ ಪ್ರದೇಶದಲ್ಲಿ ಮಾರಾಟ ಮಾಡಿ ಬಂದ ಹಣದಲ್ಲಿ ಮಜಾ ಮಾಡುತ್ತಿದ್ದರು ಎಂಬ ವಿಚಾರ ತನಿಖೆಯಲ್ಲಿ ತಿಳಿದು ಬಂದಿದೆ.
ಇಬ್ಬರು ಯುವಕರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದು ಗಮನಕ್ಕೆ ಬಂದ ಬಳಿಕ ಪಟ್ಟಣದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಯು್ತಿದ್ದಂತೆಯೆ ಈ ಬೈಕ್ ಕಳ್ಳತನದ ವಿಚಾರದ ಬೆಳಕಿಗೆ ಬಂದಿದೆ. ಇಬ್ಬರಿಂದ ಒಟ್ಟು 15 ವಾಹನಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನು ಓದಿ : Aradhana mahotsava in mantralaya : ಮಂತ್ರಾಲಯದಲ್ಲಿ ರಾಯರ ಅದ್ಧೂರಿ 351ನೇ ಆರಾಧನಾ ಮಹೋತ್ಸವ
ಇದನ್ನೂ ಓದಿ : First Child Via IVF : ಮದುವೆಗಾಗಿ 54 ವರ್ಷಗಳ ಬಳಿಕ ಮೊದಲ ಮಗುವನ್ನು ಬರಮಾಡಿಕೊಂಡ ವೃದ್ಧ ದಂಪತಿ
ಇದನ್ನೂ ಓದಿ : woman commits suicide : ಅವಳಿ ಮಕ್ಕಳೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ಇದನ್ನೂ ಓದಿ : illicit relationship :ಸೋದರತ್ತೆಯೊಂದಿಗೆ ಅಳಿಯನ ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ
BTECH STUDENTS STOLEN BULLETS FOR LUXURY LIFE