First Child Via IVF : ಮದುವೆಯಾಗಿ 54 ವರ್ಷಗಳ ಬಳಿಕ ಮೊದಲ ಮಗುವನ್ನು ಬರಮಾಡಿಕೊಂಡ ವೃದ್ಧ ದಂಪತಿ

ರಾಜಸ್ಥಾನ : First Child Via IVF : ಭಾರತೀಯ ಕುಟುಂಬಗಳಲ್ಲಿ ಮದುವೆಯಾದ ಬಳಿಕ ಮಕ್ಕಳಾಗಿಲ್ಲವೆಂದರೆ ದಂಪತಿ ಕೇಳಬಾರದ ಮಾತುಗಳನ್ನೆಲ್ಲ ಕೇಳಬೇಕಾಗುತ್ತದೆ. ದೇವರಲ್ಲಿ ಹರಕೆ, ಆಸ್ಪತ್ರೆ ಅಲೆದಾಟ ಹೀಗೆ ಮಕ್ಕಳಾಗಬೇಕೆಂಬ ಸಾಹಸದಲ್ಲಿ ಇಡೀ ಜೀವನವನ್ನೇ ಕಳೆದು ಬಿಡ್ತಾರೆ. ಆದರೆ ಕೆಲವೊಂದು ಪ್ರಕರಣಗಳಲ್ಲಿ ವೈದ್ಯಕೀಯ ವಿಜ್ಞಾನವು ಎಂತವರ ಜೀವನವನ್ನೂ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ಮದುವೆಯಾಗಿ ಬರೋಬ್ಬರಿ 54 ವರ್ಷಗಳ ಬಳಿಕ ರಾಜಸ್ಥಾನದ ಅಲ್ವಾರ್​ ಎಂಬಲ್ಲಿ 75 ವರ್ಷದ ವೃದ್ಧ ಹಾಗೂ 70 ವರ್ಷದ ವೃದ್ಧೆ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ.

ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ ಇದು ರಾಜಸ್ಥಾನದ ಇತಿಹಾಸದಲ್ಲಿಯಢ ಮೊಟ್ಟ ಮೊದಲ ಪ್ರಕರಣವಾಗಿದೆ. ಆದರೆ ಐವಿಎಫ್​ ತಂತ್ರಜ್ಞಾನವು ಬರೋಬ್ಬರಿ 54 ವರ್ಷದ ದಾಂಪತ್ಯದ ಬಳಿಕ ಈ ದಂಪತಿಯ ಜೀವನದಲ್ಲಿ ಖುಷಿಯನ್ನು ತಂದುಕೊಟ್ಟಿದೆ. ಐವಿಎಫ್​ ತಂತ್ರಜ್ಞಾನದ ಮೂಲಕ ಜಗತ್ತಿನ ಬಹುತೇಕ ಕಡೆಗಳಲ್ಲಿ 70 ರಿಂದ 80ರ ಇಳಿ ವಯಸ್ಸಿನಲ್ಲಿಯೂ ಅನೇಕರು ಪೋಷಕರಾಗಿದ್ದಾರೆ.


75 ವರ್ಷದ ಗೋಪಿಚಂದ್​ ಮಾಜಿ ಸೈನಿಕರಾಗಿದ್ದು ಬಾಂಗ್ಲಾದೇಶದ ವಿರುದ್ಧ ನಡೆದ ಯುದ್ಧದ ಸಂದರ್ಭದಲ್ಲಿ ಜುಂಜುನುವಿನ ನುಹಾನಿಯಾ ಎಂಬಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದರು.


ಹೆರಿಗೆ ಮಾಡಿಸಿದ ವೈದ್ಯರಾದ ಡಾ. ಪಂಕಜ್​​ ಗುಪ್ತಾ ತಾಯಿ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ತಾಯಿ ಹಾಗೂ ಮಗುವಿನ ಆರೋಗ್ಯ ಕ್ಷೇಮವಾಗಿದೆ. ಮಗುವು 3.5 ಕೆಜಿ ತೂಕವನ್ನು ಹೊಂದಿದೆ ಎಂದು ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಈ ರೀತಿಯ ಇಳಿ ವಯಸ್ಸಿನಲ್ಲಿ ಮಕ್ಕಳು ಜನಿಸಿವುದು ಅತ್ಯಂತ ಅಪರೂಪದ ಪ್ರಕರಣವಾಗಿದೆ. ನನಗೆ ತಿಳಿದ ಮಟ್ಟಿಗೆ ರಾಜಸ್ಥಾನದಲ್ಲಿ 75ರ ಪತಿ ಹಾಗೂ 70ರ ವಯಸ್ಸಿನ ಪತ್ನಿಗೆ ಮಗು ಜನಿಸಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ಹೇಳಿದ್ದಾರೆ.


ಮಗು ಜನಿಸಿದ ಖುಷಿಯನ್ನು ಹಂಚಿಕೊಂಡ ವೃದ್ಧ ಗೋಪಿಚಂದ್​, ನಮ್ಮ ವಂಶವನ್ನು ನಾವು ಮುಂದುವರಿಸಿದ್ದೇವೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತಿದೆ. ನಾನು ನನ್ನ ತಂದೆ ನೈನು ಸಿಂಗ್​​ರಿಗೆ ಏಕೈಕ ಪುತ್ರನಾಗಿದ್ದೆ. ನಮಗೆ ಮಕ್ಕಳಿಲ್ಲವಲ್ಲ ಎಂಬ ಕೊರಗು ಕಳೆದ 54 ವರ್ಷಗಳಿಂದ ನಮ್ಮನ್ನು ಕಾಡಿತ್ತು. ಆದರೆ ಇದೀಗ ವೈದ್ಯಕೀಯ ಚಮತ್ಕಾರದಿಂದ ನಾವು ಪೋಷಕರಾಗಿದ್ದೇವೆ ಎಂದು ಹೇಳಿದರು.


ಗೋಪಿಚಂದ್​ ದಂಪತಿ ಒಂದೂವರೆ ವರ್ಷಗಳ ಹಿಂದೆ ಈ ಕ್ಲಿನಿಕ್​ಗೆ ಭೇಟಿ ನೀಡಿದ್ದಾರೆ. ಮೂರನೇ ಐವಿಎಫ್​ ಸೈಕಲ್​ನಲ್ಲಿ ಚಂದ್ರಾವತಿ ದೇವಿ ಗರ್ಭಿಣಿಯಾದರು. ಗರ್ಭಿಣಿ ಚಂದ್ರಾವತಿ ವೃದ್ಧೆಯಾಗಿರುವ ಹಿನ್ನೆಲೆಯಲ್ಲಿ ಖುಷಿ ಹಾಗೂ ಆತಂಕ ಜೊತೆ ಜೊತೆಯಲ್ಲಿಯೇ ಇತ್ತು. ಕೊನೆಗೂ ಚಂದ್ರಾವತಿ ಮಗುವಿಗೆ ಜನ್ಮ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನು ಓದಿ : Arjun Tendulkar To Play for Goa: ಮುಂಬೈಗೆ ಅರ್ಜುನ್ ತೆಂಡೂಲ್ಕರ್ ಗುಡ್ ಬೈ, ಗೋವಾ ಪರ ಆಡಲಿದ್ದಾರೆ ಸಚಿನ್ ಪುತ್ರ

ಇದನ್ನೂ ಓದಿ : Aradhana mahotsava in mantralaya : ಮಂತ್ರಾಲಯದಲ್ಲಿ ರಾಯರ ಅದ್ಧೂರಿ 351ನೇ ಆರಾಧನಾ ಮಹೋತ್ಸವ

After 54 Years Of Marriage, An Elderly Couple In Alwar Welcomes Their First Child Via IVF

Comments are closed.