ಚಿಕ್ಕಮಗಳೂರು : ಯುವಕನಿಗೆ ಮೂತ್ರ ನೆಕ್ಕಿಸಿದ ಪ್ರಕರಣ : ಪಿಎಸ್‌ಐ ಅರ್ಜುನ್‌ಗೆ ಜಾಮೀನು ನಿರಾಕರಣೆ

ಚಿಕ್ಕಮಗಳೂರು : ಪರಿಶಿಷ್ಟ ಜಾತಿಯ ಯುವಕನಿಗೆ ಠಾಣೆಯಲ್ಲಿ ಮೂತ್ರವನ್ನು ಕುಡಿಸಿದ ಆರೋಪ ಎದುರಿಸುತ್ತಿರುವ ಪಿಎಸ್‌ಐ ಅರ್ಜುನ್‌ ಅವರಿಗೆ ಚಿಕ್ಕಮಗಳೂರು ನಗರದ ಒಂದನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.

ಮೂಡಿಗೆರೆ ತಾಲೂಕಿನ ಕಿರಗುಂದದ ನಿವಾಸಿ ಪುನೀತ್‌ ಎಂಬಾತನನ್ನು ಪ್ರಕರಣವೊಂದರ ವಿಚಾರಣೆಯ ನೆಪದಲ್ಲಿ ಪೊಲೀಸ್‌ ಠಾಣೆಗೆ ಕರೆಯಿಸಿಕೊಂಡಿದ್ದರು. ಗೋಣಿಬೀಡು ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ಅರ್ಜುನ್‌ ತನಗೆ ವಿಚಾರಣೆಯ ವೇಳೆಯಲ್ಲಿ ಮೂತ್ರವನ್ನು ಕುಡಿಸಿದ್ದರು ಎಂದು ಪುನಿತ್‌ ಆರೋಪ ಮಾಡಿದ್ದರು. ಈ ಕುರಿತು ಪ್ರಕರಣವೊಂದನ್ನು ದಾಖಲಿಸಿದ್ದರು. ಈ ಕುರಿತು ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನುಕೈಗೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪಿಎಸ್‌ಐ ಅರ್ಜುನ್‌ ಅವರನ್ನು ಬಂಧಿಸಿ ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಇದೀಗ ಪ್ರಕರಣದ ವಿಚಾರಣೆ‌ ಯನ್ನು ನಡೆಸಿ ಚಿಕ್ಕಮಗಳೂರು ಜಿಲಾ ಒಂದೇ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರದಾದ ಬಿ.ಪುಷ್ಪಾಂಜಲಿ ಅವರು ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದ್ದಾರೆ.

ಅರ್ಜುನ್‌ ಈ ಹಿಂದೆ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೂ ಕೂಡ ಹೈಕೋರ್ಟ್‌ ಜಾಮೀನು ನೀಡಲು ನಿರಾಕರಿಸಿತ್ತು. ಅಲ್ಲದೇ ಚಿಕ್ಕಮಗಳೂರು ಒಂದೇ ಸೆಷನ್ಸ್‌ ನ್ಯಾಯಾಲಯ ಕೂಡ ಮದ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ಇದನ್ನೂ ಓದಿ : ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ : ಪಿಎಸ್ಐ ವಿರುದ್ದ ಪ್ರಕರಣದ ದಾಖಲು

ಇದನ್ನೂ ಓದಿ : ದತ್ತಪೀಠ ಪೂಜೆಗೆ ಮೌಲ್ವಿ ನೇಮಕ ರದ್ದು : ಹೈಕೋರ್ಟ್‌ ಮಹತ್ವದ ಆದೇಶ

( PSI Arjun denied Chikkamagalore Court bail, The case of a young man urinating )

Comments are closed.