Child thieve: ಮಕ್ಕಳ ಕಳ್ಳರ ವದಂತಿ : ಆತಂಕ ಬೇಡಾ ಎಂದ ಯಾದಗಿರಿ ಎಸ್‌ಪಿ

ಯಾದಗಿರಿ :(child thieve) ರಾಜ್ಯದಲ್ಲೀಗ ಮಕ್ಕಳ ಕಳ್ಳರ ವದಂತಿ ಹೆಚ್ಚುತ್ತಿದೆ. ಬೆಳಗಾವಿ, ಕೊಪ್ಪಳ, ಉಡುಪಿಯ ಬೆನ್ನಲಲೇ ಇದೀಗ ಯಾದಗಿರಿ ಜಿಲ್ಲೆಯಲ್ಲಿಯೂ ಮಕ್ಕಳ ಕಳ್ಳರ ಬಗ್ಗೆ ವಂದತಿಗಳು ಹರಡುತ್ತಿವೆ. ಆದರೆ ಈ ಬಗ್ಗೆ ಯಾದಗಿರಿ ಜಿಲ್ಲಾ ಪೊಲೀಸ್‌ ಇಲಾಖೆ ಅಲರ್ಟ್‌ ಆಗಿದ್ದು, ಮಕ್ಕಳ ಮಕ್ಕಳರ ಬಗ್ಗೆ ಹರಿದಾಡುತ್ತಿರುವುದು ಕೇವಲ ಸುಳ್ಳು ವದಂತಿ. ಪೋಷಕರು ಈ ಬಗ್ಗೆ ಆತಂಕಕ್ಕೆ ಒಳಗಾಗ ಬಾರದು. ಇಂತಹ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಡಾ.ಸಿ.ಬಿ. ವೇದಮೂರ್ತಿ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಎಳು ದಿನಗಳ ಹಿಂದೆ ಬೆಳಗಾವಿ ಹಾಗು ಕೊಪ್ಪಳದಲ್ಲಿ ಮಕ್ಕಳ ಕಳ್ಳರ ವದಂತಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಪೊಲೀಸ್‌ ಇಲಾಖೆ ಮೈಕ್‌ ಮೂಲಕ ಜನರಿಗೆ ಮಾಹಿತಿ ನೀಡುವ ಕಾರ್ಯವನ್ನು ಮಾಡುತ್ತಿದೆ. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಸಂಶಯ ಬಂದ್ರೆ ಕೂಡಲೇ ಪೊಲೀಸ್‌ ಇಲಾಖೆ ಮಾಹಿತಿಯನ್ನು ನೀಡಬೇಕು. ಬದಲಾಗಿ ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಂಡು ಅವರ ಮೇಲೆ ಹಲ್ಲೆ ಮಾಡಬಾರದು ಎಂದು ತಿಳಿಸಿದ್ದಾರೆ. ಜೊತೆಗೆ ಖುದ್ದಿ ಎಸ್.ಪಿ. ವೇದಮೂರ್ತಿ ಅವರು ಆಟೋದಲ್ಲಿ ಕುಳಿತು ಮೈಕ್‌ ಮೂಲಕ ಅನೌನ್ಸ್‌ ಮಾಡುತ್ತಿದ್ದಾರೆ.

ಬೆಳಗಾವಿಯಲ್ಲಿ ಮಕ್ಕಳು ಕಳ್ಳರು ಬಂದಿದ್ದಾರೆ ಅವರ ದೇಹದ ಭಾಗಗಳನ್ನು ತೆಗೆದು ಮಾರಾಟಮಾಡುತ್ತಾರೆ ಎಂಬ ಸುಳ್ಳು ವದಂತಿಯಿಂದ ರಗ್ಗು ಮಾರುವವನು ಮತ್ತು ಮಾನಸಿಕ ಅಸ್ವಸ್ಥ ರೋಗಿಯನ್ನ ತಳಿಸಿದ ಘಟನೆ ನಡೆದಿತ್ತು.ಇನ್ನು ಕೊಪ್ಪಳದಲ್ಲಿ ವಿಡಿಯೋಗಳನ್ನು ಶೆರ್‌ ಮಾಡುವ ಮೂಲಕ ಜನರನ್ನು ಆತಂತಕ್ಕೆ ಇಡು ಮಾಡುವ ಕೆಲಸ ನಡೆದಿತ್ತು.ಈ ಘಟನೆ ನಡೆದ ನಂತರ ಪೋಲಿಸರು ಯಾವುದೆ ವ್ಯಕ್ತಿಯನ್ನು ತಳಿಸುವಂತಿಲ್ಲ. ಅನುಮಾನಸ್ಪದವಾಗಿ ಒಡಾಡುತ್ತಿದ್ದರೆ 112 ಕ್ಕೆ ಕರೆ ಮಾಡಿ ಎಂದು ಮಾಹಿತಿ ನೀಡಿದ್ದರು.

ಇದನ್ನೂ ಓದಿ:ಮೊಬೈಲ್‌ನಲ್ಲೇ ಆಧಾರ್‌ ಜೊತೆ ಓಟರ್‌ ಐಡಿ ಲಿಂಕ್‌ ಮಾಡಬೇಕಾ : ಹಾಗಾದ್ರೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ:ಅಯೋಧ್ಯೆಯಲ್ಲಿ ನಿರ್ಮಾಣವಾಗಿದೆ ಯೋಗಿ ಆದಿತ್ಯನಾಥ್​ ಮಂದಿರ : ಥೇಟ್​ ರಾಮನಂತೆ ಬಿಲ್ಲು-ಬಾಣ ಹಿಡಿದ ಯುಪಿ ಸಿಎಂ

ಯಾದಗಿರಿಯಲ್ಲೂ ಕೂಡ ಯಾವುದೆ ಅಹಿತಕರ ಘಟನೆ ನಡೆಯಬಾರದು ಎಂದು ಮುಂಚಿತವಾಗಿ ಜನರಿಗೆ ಮಕ್ಕಳ ಕಳ್ಳರ ವದಂತಿಯ ಬಗ್ಗೆಆತಂಕ ಬೇಡ ಎಂಬ ಮಾಹಿತಿ ನೀಡಲಾಗುತ್ತಿದೆ. ರಾಜ್ಯದಾದ್ಯಂತ ಮಕ್ಕಳ ಕಳ್ಳರ ಕುರಿತು ವದಂತಿ ಹಬ್ಬಿಸುವವರ ಸಂಖ್ಯೆ ಹೆಚ್ಚುತ್ತಿದ್ದು, ಪೊಲೀಸ್‌ ಇಲಾಖೆ ಕೂಡ ಅಲರ್ಟ್‌ ಆಗಿದೆ. ಸಾರ್ವಜನಿಕರು ಅಂತಹ ಯಾವುದೇ ಅನುಮಾನಗಳು ಇದ್ದರೂ ಕೂಡ ಸ್ಥಳೀಯರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬಹುದಾಗಿದೆ.

Rumor of child thieves: Don’t worry, said SP

Comments are closed.