Malicious Habeas Corpus :ದುರುದ್ದೇಶಪೂರಿತ ಹೇಬಿಯಸ್ ಕಾರ್ಪಸ್: ಶಂಕಿತ ಉಗ್ರ ಮಾಜ್ ತಂದೆಗೆ ಹೈಕೋರ್ಟ್ ದಂಡ

ಶಿವಮೊಗ್ಗ : Malicious Habeas Corpus : ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ. ಆದ್ರೆ ಬಂಧಿತರಲ್ಲಿ ಓರ್ವನಾಗಿರುವ ಮಾಜ್ ಮುನೀರ್ ಅಹ್ಮದ್ ನ ತಂದೆಗೆ ದುರುದ್ದೇಶದ ಹೇಬಿಯಸ್ ಕಾರ್ಪಸ್ ಅರ್ಜಿ‌ ಸಲ್ಲಿಸಿದ್ದ ಕಾರಣಕ್ಕೆ ಹೈಕೋರ್ಟ್ ದಂಡ ವಿಧಿಸಿರುವ ಸಂಗತಿಯು ಈಗ ಬೆಳಕಿಗೆ ಬಂದಿದೆ. ಉಗ್ರ ಸಂಘಟನೆಯ ಜೊತೆ ನಂಟು ಆರೋಪ ಹಾಗೂ ರಾಷ್ಟ್ರಧ್ವಜ ಸುಟ್ಟ ಪ್ರಕರಣ ಸಂಬಂಧ ಶಿವಮೊಗ್ಗ ಪೊಲೀಸರು ಸೆಪ್ಟೆಂಬರ್ 14ರಂದೇ‌‌ ತನ್ನ‌ ಮಗನನ್ನು ಕರೆದೊಯ್ದಿರುವ ವಿಚಾರ ಮಾಜ್ ತಂದೆ ಮುನೀರ್ ಅಹ್ಮದ್ ಗೆ ತಿಳಿದಿತ್ತು. ಹೀಗಿದ್ದರೂ ಸಹ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ.ಬಿ.ವೀರಪ್ಪ ನೇತ್ರತ್ವದ ವಿಭಾಗೀಯ ಪೀಠ ದುರುದ್ದೇಶಪೂರಿತ ಹೇಬಿಯಸ್ ಕಾರಗಪಸ್ ಎಂದು ತಿಳಿದು ಮೊದಲಿಗೆ ಒಂದು ಲಕ್ಷ ದಂಡ ವಿಧಿಸಿತ್ತು. ನಂತರ ಅರ್ಜಿದಾರರ ಮನವಿ ಪರಿಗಣಿಸಿ ದಂಡದ ಮೊತ್ತವನ್ನು 10 ಸಾವಿರಕ್ಕೆ ಇಳಿಕೆ ಮಾಡಿದೆ.

ಈ ದೂರು ಅರ್ಜಿಯಲ್ಲಿ ಸೆ.14ರಿಂದ ಮಗ ನಾಪತ್ತೆಯಾಗಿದ್ದಾನೆಂದು‌ ಮೆನ್ಸನ್ ಮಾಡಲಾಗಿತ್ತು. ಮಧ್ಯಾಹ್ನ 1:30 ಕ್ಕೆ ಕರೆ ಮಾಡಿದ ಅಪರಿಚಿತರು ಮನೆ ಕೆಳಗೆ ಬಂದು ಪಾರ್ಸೆಲ್ ಸಂಗ್ರಹಿಸಿಕೊಳ್ಳುವಂತೆ ತಿಳಿಸಿದ್ದರು ಎಂದು ಮಾಜ್ ತಂದೆ ಹೇಳಿದ್ದಾರೆ. ಪಾರ್ಸೆಲ್ ಪಡೆಯಲು ಮನೆಯಿಂದ ತೆರಳಿದ್ದ ಮಗ ಮಾಜ್ ಹಿಂದುರಿಗಿಲ್ಲ ಎಂದು ಸೆಪ್ಟೆಂಬರ್ 17 ರಂದು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆ ಬಳಿಕ‌ ಅಂದ್ರೆ ಸೆಪ್ಟೆಂಬರ್ 19ರಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ಮಗನನ್ನು ಪತ್ತೆ ಮಾಡಿ ಕೋರ್ಟ್ ಗೆ ಹಾಜರುಪಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಶಂಕಿತ ಉಗ್ರರ ಪೈಕಿ ಮಾಜ್ ಮುನೀರ್ ಅಹ್ಮದ್ ಗೆ ಮಂಗಳೂರಿನ ನಂಟಿರುವುದರಿಂದ ಮಂಗಳೂರಿನಲ್ಲಿ ಆತಂಕ ಹೆಚ್ಚಾಗಿದೆ. ಮಾಜ್ ತಂಗಿದ್ದ ಸಂಬಂಧಿಕರ ಅಪಾರ್ಟ್ಮೆಂಟ್ ಗೆ ಶಿವಮೊಗ್ಗ ಪೊಲೀಸರು ದಾಳಿ ನಡೆಸಿ ಸರ್ಚ್ ಮಾಡಿದ್ದಾರೆ‌.‌ 2020ರಲ್ಲಿ ಗೋಡೆಯಲ್ಲಿ ಉಗ್ರ ಬರಹ ಬರೆದ ಪ್ರಕರಣದಲ್ಲಿ ಬಂಧನ ಆಗುವ ಸಂದರ್ಭ ಮಾಜ್ ಅಂತಿಮ ವರ್ಷದ ಎಂಟೆಕ್ ವಿಧ್ಯಾಭ್ಯಾಸ ಮಾಡುತ್ತಿದ್ದ. ಆ ಸಂದರ್ಭ ಸಂಬಂಧಿಕರ ಮನೆಯಿಂದಲೇ ಕಾಲೇಜಿಗೆ ಹೋಗಿ ಬರುತ್ತಿದ್ದ. ಆ ಬಳಿಕವೂ ಮಂಗಳೂರಿನಲ್ಲೇ ಫುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದ.

ಇನ್ನು ಮಾಜ್ ಮನೆಯಲ್ಲಿ ಅತೀ ಹೆಚ್ಚು ಲ್ಯಾಪ್ ಟಾಪ್, ಮೊಬೈಲ್ ನಲ್ಲೇ ಕಾಲ ಕಳೆಯುತ್ತಿದ್ದ ಎಂದು ಗೊತ್ತಾಗಿದೆ. ಇಸ್ಲಾಂ ಮೂಲಭೂತವಾದದ ಬಗ್ಗೆ ಪ್ರೇರಿಪಿತನಾಗಿದ್ದ ಎಂದು ಗೊತ್ತಾಗಿದೆ‌. 2020 ರಲ್ಲಿ ಮಂಗಳೂರಿನ ಎರಡು ಕಡೆ ಗೋಡೆಗಳಲ್ಲಿ ಲಷ್ಕರ್ ಎ ತೊಯ್ಬಾ ಜಿಂದಾಬಾದ್ ಎಂದು ಬರೆದಿದ್ದ. ಇನ್ನು ಪೊಲೀಸರಿಗೆ ಸಿಕ್ಕಿ‌ಬಿದ್ದ ವೇಳೆ ಪ್ರಚಾರಕ್ಕಾಗಿ ಮಾಡಿದೆ ಅಂತಾ ಹೇಳಿದ್ದ. ಆ ಸಂಧರ್ಭದಿಂದಲೇ ಉಗ್ರರ ಜೊತೆ ಮಾಜ್ ಗೆ ಸಂಪರ್ಕವಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

ಈ ಡ್ರಗ್ಸ್ ಜಾಲದ ಹಿಂದೆ‌ ಮತ್ತಷ್ಟು ಮಂದಿ ಇರುವ ಶಂಕೆ ಇದೆ. ಹೀಗಾಗಿ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳಿಗೆ ಗಾಂಜಾ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ನಡುವೆಯೇ ಗಾಂಜಾ ಸಪ್ಲೈ ಮಾಡುವುದಕ್ಕೆ ವಿದ್ಯಾರ್ಥಿಗಳನ್ನು ರೆಡಿ ಮಾಡಿದ್ದ. ಸದ್ಯ ಈತ ಗಾಂಜಾ ಮಾತ್ರವಲ್ಲದೇ ಇನ್ನಿತರ ಮಾದಕ ದ್ರವ್ಯ ಸಪ್ಲೈ ಮತ್ತು‌ ಮಾರಾಟ ಮಾಡುತ್ತಿದ್ದ ಎಂಬ ಸಂಶಯವೂ ಪೊಲೀಸರಿಗಿದೆ. ಈತ ಕೇವಲ ಕೊಡಗು ಮಾತ್ರವಲ್ಲದೆ ಪಕ್ಕದ ಕೇರಳ ರಾಜ್ಯಕ್ಕೂ ನಿರಂತರವಾಗಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ.

ಇದನ್ನು ಓದಿ : Temple For Yogi Adityanath : ಅಯೋಧ್ಯೆಯಲ್ಲಿ ನಿರ್ಮಾಣವಾಗಿದೆ ಯೋಗಿ ಆದಿತ್ಯನಾಥ್​ ಮಂದಿರ : ಥೇಟ್​ ರಾಮನಂತೆ ಬಿಲ್ಲು-ಬಾಣ ಹಿಡಿದ ಯುಪಿ ಸಿಎಂ

ಇದನ್ನೂ ಓದಿ : Virat Kohli New Hair Style: ಹೊಸ ಹೇರ್ ಸ್ಟೈಲ್‌ಗೆ ವಿರಾಟ್ ಕೊಹ್ಲಿ ಖರ್ಚು ಮಾಡಿದ ಮೊತ್ತ ₹80,000

Malicious Habeas Corpus: High Court fines father of suspected militant Maz

Comments are closed.