ಮಂಗಳೂರು : hijab controversy : ಮಂಗಳೂರು ವಿಶ್ವವಿದ್ಯಾಲಯದಲ್ಲಿ ಹಿಜಾಬ್ ವಿವಾದ ಜಿಲ್ಲಾಧಿಕಾರಿಗಳ ಕಚೇರಿಯ ಮೆಟ್ಟಿಲೇರಿದೆ. ಇಂದು 12 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜು ಪ್ರವೇಶಕ್ಕೆ ಯತ್ನಿಸಿದ್ದರು. ಇವರನ್ನು ತಡೆದ ಕಾಲೇಜು ಪ್ರಾಂಶುಪಾಲರಾದ ಅನಸೂಯ ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶಿಸದಂತೆ ತಾಕೀತು ಮಾಡಿದ್ದರು. ಇದಾದ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ 15 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂಧ್ರ ಕೆ.ವಿ ಎದುರು ತಮಗೆ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು.
ಮುಸ್ಲಿಂ ವಿದ್ಯಾರ್ಥಿನಿಯರ ಜೊತೆ ಸಮಾಲೋಚನೆ ನಡೆಸಿ ಬಳಿಕ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ವಿದ್ಯಾರ್ಥಿಗಳಿಗೆ ಕೋರ್ಟ್ ನಿಯಮ ಪಾಲನೆ ಮಾಡುವಂತೆ ಮನವರಿಕೆ ಮಾಡಿದ್ದೇವೆ. ಸಿಂಡಿಕೇಟ್ ನಿರ್ಧಾರದಂತೆ ವಿದ್ಯಾರ್ಥಿಗಳು ನಡೆದುಕೊಳ್ಳಬೇಕು. ಕಾಲೇಜಿನ ಒಳಗೆ ಶಾಂತಿ ಭಂಗ ಮಾಡಬಾರದು. ಸಿಂಡಿಕೇಟ್ ನಿರ್ಧಾರದ ಬಗ್ಗೆ ವಿದ್ಯಾರ್ಥಿನಿಯರು ದಾಖಲೆ ಬೇಕು ಎಂದು ಕೇಳಿದ್ದಾರೆ. ಸಿಂಡಿಕೇಟ್ ನಿರ್ಧಾರವನ್ನು ಜಿಲ್ಲಾ ಮಟ್ಟದಲ್ಲಿ ಬಗೆಹರಿಸುವುದು ಅಸಾಧ್ಯ. ಆದರೆ ನೀವು ಕಾನೂನಿನ ಮೂಲಕ ನೀವು ಹಿಜಾಬ್ ವಿವಾದವನ್ನು ಬಗೆಹರಿಸಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗಿದೆ. ಕೋರ್ಟ್ ಆದೇಶದ ಬಗ್ಗೆ ಕಾಲೇಜು ತೀರ್ಮಾನಿಸಬೇಕು. ಕ್ಯಾಂಪಸ್ನಲ್ಲಿ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಕಾಲೇಜಿನಲ್ಲಿ ನಿಯಮ ಉಲ್ಲಂಘನೆ ಮಾಡಬಾರದು ಎಂದು ಹೇಳಿದ್ದಾರೆ.
ಮಂಗಳೂರು ವಿವಿಯಲ್ಲಿ ನಡೆಸಲಾದ ಸಭೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುವಂತಿಲ್ಲ. ವಿಶ್ರಾಂತಿ ಕೊಠಡಿಯಲ್ಲಿ ಹಿಜಾಬ್ನ್ನು ಬದಲಾಯಿಸಿ ಕ್ಯಾಂಪಸ್ನ ಒಳಗೆ ವಿದ್ಯಾರ್ಥಿನಿಯರು ಪ್ರವೇಶಿಸಬಹುದು ಎಂದು ಹೇಳಲಾಗಿತ್ತು .
ಇದನ್ನು ಓದಿ : acid attack victim : ಆ್ಯಸಿಡ್ ಸಂತ್ರಸ್ತೆಗೆ 5ನೇ ಶಸ್ತ್ರಚಿಕಿತ್ಸೆ: ಅನಾರೋಗ್ಯಕ್ಕೊಳಗಾದ ಯುವತಿ ಐಸಿಯುಗೆ ಶಿಫ್ಟ್
ಇದನ್ನೂ ಓದಿ : ಕುಂದಾಪುರ ಶಿಲ್ಪಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಸಾವಿನ ಹಿಂದೆ ಲವ್ ಜಿಹಾದ್ ಆರೋಪ
Dakshina Kannada District Collector Rajendra KV’s statement on the hijab controversy