deadly nose bleed fever : ವಿಪರೀತ ರಕ್ತಸ್ರಾವ, ಜ್ವರ : ಇರಾಕ್​​ನಲ್ಲಿ ಭಯ ಹೆಚ್ಚಿಸಿದ ಹೊಸ ಕಾಯಿಲೆ

deadly nose bleed fever : ಜಗತ್ತಿನಲ್ಲಿ ಸಾಲು ಸಾಲು ಸಾಂಕ್ರಾಮಿಕ ರೋಗಳು ಹೆಚ್ಚುತ್ತಲೇ ಇದ್ದು ಜನತೆಯಲ್ಲಿ ಆತಂಕ ಹೆಚ್ಚಾಗಿದೆ. ಕೊರೊನಾ ಮಾರಿ ಇನ್ನೂ ಕಡಿಮೆಯೇ ಆಗಿಲ್ಲ. ಅಷ್ಟರಲ್ಲಿ ಇದೀಗ ಮಂಕಿಪಾಕ್ಸ್​ ಭಯ ಶುರುವಾಗಿದೆ. ಇವೆರಡು ಸಾಲದು ಎಂಬಂತೆ ಇರಾಕ್​ನಲ್ಲಿ ಹೊಸದೊಂದು ಭಯಾನಕ ಕಾಯಿಲೆ ಶುರುವಾಗಿದೆ. ರಕ್ತಸ್ರಾವದಿಂದ ಜನರು ಮೃತರಾಗುವ ವಿಚಿತ್ರ ಜ್ವರ ಇದಾಗಿದ್ದು ಈ ಸಾಂಕ್ರಾಮಿಕವು ಇನ್ನಷ್ಟು ಆತಂಕವನ್ನು ಹೆಚ್ಚಿಸಿದೆ.

ಪ್ರಾಣಿಗಳಲ್ಲಿ ರಕ್ತ ಹೀರುವ ಕೀಟಗಳ ಮೂಲಕ ಈ ವೈರಾಣುಗಳು ಮನುಷ್ಯರಿಗೂ ಹರಡುತ್ತಿದೆ. ಜ್ವರದಿಂದ ಬಳಲುವ ಮನುಷ್ಯರು ಬಳಿಕ ರಕ್ತಸ್ರಾವದಿಂದ ಸಾಯುತ್ತಾರೆ. ಇದರಿಂದ ಅಲರ್ಟ್​ ಆಗಿರುವ ಇರಾಕ್​ನ ಆರೋಗ್ಯ ಇಲಾಖೆಯು ಅಲ್ಲಿನ ಹಳ್ಳಿ ಹಳ್ಳಿಗೆ ತೆರಳಿ ಆರೋಗ್ಯ ಕಾರ್ಯಕರ್ತರ ಮೂಲಕ ಪ್ರಾಣಿಗಳಿಗೆ ಕೀಟನಾಶಕಗಳನ್ನು ಸಿಂಪಡಣೆ ಮಾಡಲಾಗುತ್ತಿದೆ.


ಈ ಜ್ವರಕ್ಕೆ ಕ್ರಿಮಿಯನ್​ ಕಾಂಗೋ ಹೆಮೋರೇಜ್​ ಎಂದು ಕರೆಯಲಾಗುತ್ತದೆ. ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಮಾಹಿತಿ ನೀಡಿದೆ. ಈ ಕಾಯಿಲೆ ಶುರುವಾದರೆ ಮನುಷ್ಯನಿಗೆ ಮೂಗಿನಲ್ಲಿ ರಕ್ತ ಸ್ರಾವ ಆರಂಭವಾಗುತ್ತದೆ. ಅತ್ಯಂತ ವೇಗವಾಗಿ ಹರಡುವ ಈ ಕಾಯಿಲೆಯು ದೇಹದ ಬಾಹ್ಯ ಹಾಗೂ ಒಳಗೆ ವಿಪರೀತ ರಕ್ತಸ್ರಾವವನ್ನು ಉಂಟು ಮಾಡುತ್ತದೆ. ಈ ಕಾಯಿಲೆಗೆ ನಿರ್ದಿಷ್ಟವಾದ ಲಸಿಕೆ ಅಥವಾ ಔಷಧಿಗಳು ಲಭ್ಯವಿರದ ಹಿನ್ನೆಲೆಯಲ್ಲಿ ಜನರು ಈ ಕಾಯಿಲೆಗೆ ಸಾಯುತ್ತಾರೆ. ಐವರಲ್ಲಿ ಇಬ್ಬರು ಸೋಂಕಿತರು ಸಾಯುತ್ತಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.


ಸೋಂಕು ತಗುಲಿದ ಉಣ್ಣೆಯು ಪ್ರಾಣಿಗಳಿಗೆ ಕಡಿದಾಗ ವೈರಸ್​ ಪ್ರಾಣಿಗಳಿಗೂ ಹರಡುತ್ತದೆ. ಬಳಿಕ ಈ ಉಣ್ಣೆ ಅಥವಾ ಸೋಂಕು ತಗುಲಿದ ಪ್ರಾಣಿಗಳಿಂದ ಈ ವೈರಾಣು ಮನುಷ್ಯನ ದೇಹವನ್ನು ಪ್ರವೇಶಿಸುತ್ತದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 1979ರಲ್ಲಿ ಇರಾಕ್​ನಲ್ಲಿ ಈ ವೈರಸ್​ ಮೊಟ್ಟ ಮೊದಲ ಬಾರಿಗೆ ಪತ್ತೆಯಾಗಿತ್ತು. ಕಳೆದ ವರ್ಷ ಡಿ ಖಾರ್​ನಲ್ಲಿ 16 ಪ್ರಕರಣಗಳು ಹಾಗೂ 7 ಸಾವುಗಳು ವರದಿಯಾಗಿತ್ತು. ಈ ವರ್ಷ ಎಲ್ಲಕ್ಕಿಂತ ಹೆಚ್ಚು ಅಂದರೆ 43 ಪ್ರಕರಣ ಹಾಗೂ ಎಂಟು ಸಾವು ವರದಿಯಾಗಿದೆ.

ಇದನ್ನು ಓದಿ : temple in the malali mosque : ಮಳಲಿ ಮಸೀದಿಯಲ್ಲಿತ್ತು ಹಿಂದೂ ಧಾರ್ಮಿಕ ಸ್ಥಳ : ತಾಂಬೂಲ ಪ್ರಶ್ನೆಯಲ್ಲಿ ಉತ್ತರ

ಇದನ್ನೂ ಓದಿ : acid attack victim : ಆ್ಯಸಿಡ್​ ಸಂತ್ರಸ್ತೆಗೆ 5ನೇ ಶಸ್ತ್ರಚಿಕಿತ್ಸೆ: ಅನಾರೋಗ್ಯಕ್ಕೊಳಗಾದ ಯುವತಿ ಐಸಿಯುಗೆ ಶಿಫ್ಟ್​

deadly nose bleed fever by blood sucking ticks shocks iraq

Comments are closed.