ಕಲಬುರಗಿ : Pramod Muthalik : ಕಲಬುರಗಿಯಲ್ಲಿ ಪ್ರಮೋದ್ ಮುತಾಲಿಕ್ ಸೇರಿದಂತೆ ನಾಲ್ವರ ಭಾಷಣಕ್ಕೆ ನಿಷೇಧ ಹೇರಿರುವ ವಿಚಾರವಾಗಿ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ. ಮಂಗಳವಾರ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಅದ್ಧೂರಿಯಾಗಿ ಗಣೇಶ ವಿಸರ್ಜನೆ ಕಾರ್ಯಕ್ರಮ ನೆರವೇರಬೇಕಿತ್ತು. ಇದು ಯಾವ ರೀತಿಯ ಸ್ವಾತಂತ್ರ್ಯ ಎಂದು ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ರಾಜ್ಯಾದ್ಯಂತ ಗಣೇಶ ಮೂರ್ತಿಯ ವಿಸರ್ಜನೆಯನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುತ್ತಿದೆ . ವಿಸರ್ಜನೆ ಸಮಾರಂಭದಲ್ಲಿ ಲಕ್ಷಾಂತರ ಜನ ಸೇರಲು ಹಿಂದೂ ಸಮಾಜ ಜಾಗೃತರಾಗಿದ್ದಾರೆ. ಜೇವರ್ಗಿ ಪಟ್ಟಣದಲ್ಲಿ ಮಂಗಳವಾರದಂದು ಗಣೇಶ ವಿಸರ್ಜನೆ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ನಾನು ಭಾಗಿಯಾಗಬೇಕಿತ್ತು. ಆದರೆ ಕಲಬುರಗಿ ಜಿಲ್ಲಾಧಿಕಾರಿಗಳು ನನಗೆ ನಿರ್ಬಂಧ ಹೇರಿದ್ದಾರೆ. ಇದು ಯಾವ ರೀತಿಯ ಸ್ವಾತಂತ್ರ್ಯ..? ಇದು ಡಾ. ಅಂಬೇಡ್ಕರ್ ಸಂವಿಧಾನ. ಗಣೇಶ ಹಬ್ಬ ಬರೋದು ವರ್ಷಕ್ಕೆ ಒಂದು ಬಾರಿ. ಆದರೆ ಕಲಬುರಗಿ ಜಿಲ್ಲಾಧಿಕಾರಿ ನಮ್ಮ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿದ್ದಾರೆ ಇದು ಅಕ್ಷಮ್ಯ ಅಪರಾಧ ಎಂದು ಗುಡುಗಿದ್ದಾರೆ ,
ಇದರ ಹಿಂದೆ ಯಾವ ಶಕ್ತಿ, ಯಾವ ಸಂಘಟನೆ ಇದೆ ಅನ್ನೋದು ಮುಖ್ಯವಲ್ಲ. ಒಬ್ಬ ವ್ಯಕ್ತಿಗೆ ಈ ರೀತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗದಂತೆ ನಿರ್ಬಂಧ ಹೇರುವುದು ಸರಿಯಲ್ಲ. ಪ್ರಮೋದ್ ಮುತಾಲಿಕ್ರನ್ನು ಭೇಟಿಯಾಗಬೇಕು ಎಂದು ಇಂದು ಸಾವಿರಾರು ಜನರು ನನ್ನ ದಾರಿ ನೋಡಿದ್ದಾರೆ. ಮುತಾಲಿಕ್ ಬರ್ತಾರೆ ಎಂದು ಕಾದಿದ್ದ ಜನರಿಗೆ ನಿರಾಶೆಯಾಗಿದೆ. ನಿರ್ಬಂಧ ಹೇರಿದ್ದ ಜನರಿಗೆ ನನ್ನ ಧಿಕ್ಕಾರ, ಕುತಂತ್ರದ ಹಿಂದೆ ಇರುವವರಿಗೆ ಆ ಗಣೇಶನೇ ಶಾಪ ನೀಡಲಿ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಕೋಮು ಸೌಹಾರ್ದವನ್ನು ಕಾಪಾಡುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾಡಳಿತ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ, ಕಾಳಿಸ್ವಾಮಿ ಸೇರಿದಂತೆ ನಾಲ್ವರಿಗೆ ನಿರ್ಬಂಧ ಹೇರಿದೆ.
ಇದನ್ನು ಓದಿ : Comedian Raju Srivastava Passes Away :ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ್ ವಿಧಿವಶ
ಇದನ್ನೂ ಓದಿ : Parents sold their own children :ಮಾಡಿದ ಸಾಲ ತೀರಿಸಲು ಹೆತ್ತ ಕಂದಮ್ಮನನ್ನೇ ಮಾರಿದ ಪೋಷಕರು
Ganesha curses those who impose restrictions on me: Pramod Muthalik’s outrage