Woman Delivered Baby : ಫೋನ್​ ಚಾರ್ಜರ್​ ಬಳಸಿ ಹೆದ್ದಾರಿಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಅಮೆರಿಕ : Woman Delivered Baby : ಮಗುವಿಗೆ ಜನ್ಮ ನೀಡುವುದು ಅಂದರೆ ಸುಲಭದ ಮಾತಂತೂ ಅಲ್ಲವೇ ಅಲ್ಲ. ನುರಿತ ಪ್ರಸೂತಿ ತಜ್ಞರು ನರ್ಸ್​ಗಳು ಸುಸಜ್ಜಿತ ವೈದ್ಯಕೀಯ ಸೌಲಭ್ಯ ಹೀಗೆ ಅನೇಕ ಸೌಕರ್ಯಗಳು ಬೇಕು. ಆದರೆ ಕೆಲವೊಂದು ಪ್ರಕರಣಗಳಲ್ಲಿ ಹೆರಿಗೆ ನೋವು ಸಂಭವಿಸಿದ ಸಂದರ್ಭದಲ್ಲಿ ಈ ಎಲ್ಲಾ ಸೌಕರ್ಯಗಳನ್ನು ಪೂರೈಸಲು ಸಾಧ್ಯವಾಗದ ಪರಿಸ್ಥಿತಿ ಕೂಡ ಎದುರಾಗಬಹುದು. ಅಂತಹ ಸಂದರ್ಭದಲ್ಲಿ ಸಮಯ ಪ್ರಜ್ಞೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ಅಮೆರಿಕದಲ್ಲಿ ದಂಪತಿ ತಮ್ಮ ಮಗುವಿಗೆ ಹೆದ್ದಾರಿಯ ಬದಿಯಲ್ಲಿ ಜನ್ಮ ನೀಡಿದ್ದಾರೆ. ಅಂದಹಾಗೆ ಈ ದಂಪತಿಗೆ ಮಗುವಿಗೆ ಜನ್ಮ ನೀಡಲು ಸಹಾಯ ಮಾಡಿದ್ದು ಫೋನ್​ ಚಾರ್ಜರ್​ ಅಂದರೆ ನೀವು ನಂಬಲೇಬೇಕು..!


ಹೆದ್ದಾರಿಯಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ ಎಮಿಲಿ ವಾಡೆಲ್​ ಫೇಸ್​ಬುಕ್​ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಎಮಿಲಿ ವಾಡೆಲ್​ ಹಾಗೂ ಆಕೆಯ ಪತಿ ಸ್ಟೀಫನ್​​ ವಾಡೆಲ್​​​ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿದ್ದರು. ಆದರೆ ಪರಿಸ್ಥಿತಿ ಹೇಗಿತ್ತು ಅಂದರೆ ಹೆರಿಗೆ ನೋವು ತೀವ್ರವಾಗಿದ್ದರೂ ಸಹ ಅವರಿಗೆ ಸರಿಯಾದ ಸಮಯಕ್ಕೆ ಆಸ್ಪತ್ರೆ ತಲುಪಲು ಸಾಧ್ಯವಾಗಿರಲಿಲ್ಲ.


ತಾನು ಸರಿಯಾದ ಸಮಯಕ್ಕೆ ಆಸ್ಪತ್ರೆ ತಲುಪಲಾರೆ ಎಂಬುದು ಗರ್ಭಿಣಿ ಎಮಿಲಿ ವಾಡೆಲ್​ ಗಮನಕ್ಕೆ ಬರುತ್ತಿದ್ದಂತೆಯೇ ಪತಿ ಸ್ಟೀಫನ್​ ಬಳಿಯಲ್ಲಿ ಕಾರನ್ನು ಅಂತರಾಜ್ಯ ಹೆದ್ದಾರಿ 69ರಲ್ಲಿ ನಿಲ್ಲಿಸುವಂತೆ ಕೇಳಿದ್ದರು. ಇದೇ ಹೆದ್ದಾರಿಯಲ್ಲಿ ಎಮಿಲಿ ವಾಡೆಲ್​ ತಮ್ಮ ಪುತ್ರಿಗೆ ಜನ್ಮ ನೀಡಿದ್ದಾರೆ. ಈ ಮಗುವು 7 ಪೌಂಡ್​ ತೂಕ ಹೊಂದಿತ್ತು ಎಂದು ಎಮಿಲಿ ಮಾಹಿತಿ ಹಂಚಿಕೊಂಡಿದ್ದಾರೆ.


ನಾವು ಅಂತಾರಾಜ್ಯ ಹೆದ್ದಾರಿ 69ರಲ್ಲಿ ತೆರಳುತ್ತಿದ್ದಾಗಲೇ ನನಗೆ ವಾಹನದಲ್ಲಿಯೇ ಮಗು ಜನಿಸಬಹುದು ಎಂಬ ಭಯ ಕೂಡ ಶುರುವಾಯ್ತು. ನಾನು ಈ ಭಯವನ್ನು ನನ್ನ ಪತಿಯಲ್ಲಿಯೂ ಹೇಳಿಕೊಂಡೆ. ಆದರೆ ಅವರು ಚಿಂತಿಸಬೇಡ ಎಂದು ನನಗೆ ಧೈರ್ಯ ತುಂಬಿದರು. ಇದೇ ಧೈರ್ಯದಲ್ಲಿಯೇ ನಾನು ಎಲ್ಲಾ ಪರಿಸ್ಥಿತಿಯನ್ನು ಎದುರಿಸಿದೆ ಎಂದು ಎಮಿಲಿ ಹೇಳಿದ್ದಾರೆ.

ಆದರೆ ಮಗುವಿನ ತಲೆಯು ಹೊರ ಬರುತ್ತಿದೆ ಎಂಬುದು ಎಮಿಲಿ ಗಮನಕ್ಕೆ ಬಂದಿದೆ. ಕೂಡಲೇ ಕಿರುಚಲು ಆರಂಭಿಸಿದರು. ಕೂಡಲೇ ಸ್ಟೀಫನ್​ ತಮ್ಮ ಕಾರನ್ನು ನಿಲ್ಲಿಸಿದೆ. ಗರ್ಭಜಲ ಹೊರ ಬರಲು ಆರಂಭಿಸಿದ ಬಳಿಕ ಮಗು ಹೊರ ಬರಲು ಆರಂಭಗೊಂಡಿತ್ತು. ಸ್ಟೀಫನ್​​ ಹೊಕ್ಕಳು ಬಳ್ಳಿಯನ್ನು ಫೋನ್​ ಚಾರ್ಜರ್​​​ನಿಂದ ಕಟ್ಟಿದನು. ಎಮಿಲಿ ಸಾಕಷ್ಟು ಹೋರಾಟದ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಸ್ಟೀಫನ್​ ಹೊಕ್ಕಳು ಬಳ್ಳಿಯನ್ನು 2 ಫೋನ್​ ಚಾರ್ಜರ್​ಗಳಿಂದ ಕಟ್ಟಿದ್ದನು. ಏನೇ ಆಗಲಿ ರಸ್ತೆ ಬದಿಯಲ್ಲಿ ಮಗುವಿಗೆ ಜನ್ಮ ನೀಡುವುದು ತುಂಬಾನೇ ಕಷ್ಟ ಎಂದು ಎಮಿಲಿ ಹೇಳಿದ್ದಾರೆ.

ಇದನ್ನು ಓದಿ : Parents sold their own children :ಮಾಡಿದ ಸಾಲ ತೀರಿಸಲು ಹೆತ್ತ ಕಂದಮ್ಮನನ್ನೇ ಮಾರಿದ ಪೋಷಕರು

ಇದನ್ನೂ ಓದಿ :Comedian Raju Srivastava Passes Away :ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ್​ ವಿಧಿವಶ

Woman Delivered Baby On Roadside With Help From Husband Who Tied Off Umbilical Cord With Phone Chargers

Comments are closed.